By Village Missionary Movement
Monday, 11-May-2026ಧೈನಂದಿನ ಧ್ಯಾನ(Kannada) – 11.05.2026
ಪ್ರಾರ್ಥನೆಯ ಫಲಿತಾಂಶ
"ಕಿವಿಗೊಡು; ಯೆಹೋವನೇ, ಕಿವಿಗೊಡು..." - 1 ಅರಸುಗಳು 18:37
ಎಲೀಯನ ಪ್ರಾರ್ಥನೆಯು ಬಾಳನ ಪ್ರವಾದಿಗಳನ್ನು ನಾಶ ಮಾಡಬೇಕು ಎಂಬುದಲ್ಲ, ಪರಲೋಕದಿಂದ ಗುಡುಗು ಬರುವಂತೆಯೂ ಅಲ್ಲ! ಬದಲಾಗಿ, ಇಸ್ರಾಯೇಲ್ ಜನರು ಕರ್ತನ ಶಕ್ತಿಯ ಅಭಿವ್ಯಕ್ತಿಯ ಮೂಲಕ ತಮ್ಮ ಹೃದಯಗಳನ್ನು ದೇವರ ಕಡೆಗೆ ತಿರುಗಿಸಿಕೊಳ್ಳಬೇಕು ಎಂಬುದೇ ಆಗಿತ್ತು! ಆ ಸಮಯದಲ್ಲಿ ಎಲೀಯನು ಮಾಡಿದ ಮೂರು ವಿಷಯಗಳನ್ನು ನಾವು ಯೋಚಿಸಿ ನೋಡೋಣ.
ಸರಿ ಮಾಡುವುದು: ಎಲೀಯನು ಎಲ್ಲಾ ಜನರಿಗೆ, “ನನ್ನ ಹತ್ತಿರ ಬನ್ನಿ” ಎಂದು ಹೇಳಿದರು. ಎಲ್ಲಾ ಜನರು ಅವರ ಬಳಿಗೆ ಬಂದಾಗ, ಕೆಡವಲ್ಪಟ್ಟಿದ್ದ ಕರ್ತನ ಬಲಿಪೀಠವನ್ನು ಅವರು ಸರಿ ಮಾಡಿದರು. ಹೌದು, ಪ್ರಿಯರೇ, ನಾವು ನಮ್ಮ ಹೃದಯಗಳನ್ನು ಸರಿಪಡಿಸಬೇಕಾಗಿದೆ. ನಮ್ಮೆಲ್ಲರ ಹೃದಯಗಳಲ್ಲಿ ದುರಸ್ತಿ ಮಾಡಲು ನಮಗೆಲ್ಲರಿಗೂ ಅನೇಕ ವಿಷಯಗಳಿವೆಯಲ್ಲಾ? ಅದರ ಬಗ್ಗೆ ಯೋಚಿಸಿ ನೋಡಿ. ಮಾರ್ಕ 7:21-23 ರಲ್ಲಿ, ಯೇಸು ಕ್ರಿಸ್ತನು ನಮ್ಮ ಹೃದಯಗಳನ್ನು ಸರಿಪಡಿಸಲು ನಮ್ಮನ್ನು ಆಹ್ವಾನಿಸುತ್ತಿದ್ದಾರೆ. ನಿಮ್ಮ ಹೃದಯಗಳನ್ನು ಸರಿಪಡಿಸಲು ನೀವು ಸಿದ್ಧರಿದ್ದೀರಾ?
ಪುನರಾರಂಭಿಸಿ: ಎಲೀಯನು ಮಾಡಿದ ಎರಡನೆಯ ಕೆಲಸವೆಂದರೆ ನಂಬಿಕೆಯಿಂದ ಕೆಲಸವನ್ನು ಪ್ರಾರಂಭಿಸಿದರು. ಒಂದು ಬಲಿಪೀಠವನ್ನು ಕಟ್ಟಿ, ಕಟ್ಟಿಗೆಯನ್ನು ವೇದಿಯ ಮೇಲೆ ಕ್ರಮಪಡಿಸಿ ಹೋರಿಯನ್ನು ವಧಿಸಿ ತುಂಡುಮಾಡಿ ಅದರ ಮೇಲೆ ನೀರು ಸುರಿದರು. ನಾವು ಕೂಡ ನಮ್ಮ ಹೃದಯಗಳನ್ನು ಸರಿಮಾಡಿ ಮುಗಿಸಿದ್ದೇವೆ. ಮುಂದೆ, ನಾವು ನಮ್ಮ ನಂಬಿಕೆಯ ಜೀವನವನ್ನು ಪ್ರಾರಂಭಿಸಬೇಕು. ದುರಸ್ತಿ ಮಾಡುವುದು ಸುಲಭ. ಆದರೆ ಅದು ಹಳೆಯ ಸ್ಥಿತಿಗೆ ಮರಳದಂತೆ ನಾವು ಪ್ರತಿದಿನ ದೇವರೊಂದಿಗೆ ಜೀವಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.
ಫಲಿತಾಂಶ:
ಕರ್ತನಿಂದ ಬೆಂಕಿ ಇಳಿದು ಯಜ್ಞಮಾಂಸವನ್ನೂ ಕಟ್ಟಿಗೆಕಲ್ಲು ಮಣ್ಣುಗಳನ್ನೂ ದಹಿಸಿಬಿಟ್ಟು ಕಾಲುವೆಯಲ್ಲಿದ್ದ ನೀರನ್ನೆಲ್ಲಾ ಹೀರಿಬಿಟ್ಟಿತು. ಜನರೆಲ್ಲರೂ ಅದನ್ನು ಕಂಡು ಬೋರ್ಲಬಿದ್ದು - ಯೆಹೋವನೇ ದೇವರು, ಯೆಹೋವನೇ ದೇವರು ಎಂದು ಕೂಗಿದರು. ಎಷ್ಟು ದೊಡ್ಡ ಅದ್ಬುತ ನೋಡಿ! ಇದು ನಾವು ಊಹಿಸಲೂ ಸಾಧ್ಯವಿಲ್ಲದ ವಿಷಯ. ಹೌದು, ಕರ್ತನಿಂದ ಪ್ರಯೋಜನಗಳನ್ನು ಪಡೆಯಲು, ನಾವು ನಮ್ಮನ್ನು ಸರಿಪಡಿಸಿಕೊಳ್ಳಬೇಕು ಮತ್ತು ವಿಭಿನ್ನ ಜೀವನವನ್ನು ನಡೆಸಬೇಕು. ಎಲೀಯನಂತೆ ನಮ್ಮ ನಂಬಿಕೆಯಲ್ಲಿ ದೃಢವಾಗಿರಲು ನಮಗೆ ಸಹಾಯ ಮಾಡಿ ಎಂದು ನಾವು ದೇವರನ್ನು ಬೇಡಿಕೊಳ್ಳೋಣ.
ಸರಿಪಡಿಸಿಕೊಳ್ಳುವಿಕೆ + ಮರುಪ್ರಾರಂಭ + ಫಲಿತಾಂಶ = ಸಿದ್ಧತೆ
ನಾವು ಸಹ ಸಿದ್ಧರಾಗೋಣ. ಇತರರನ್ನು ಸಿದ್ಧಪಡಿಸೋಣ.
- S. ವಿನೋಜ್
ಪ್ರಾರ್ಥನಾ ಅಂಶ:
VBS ಗೆ ಹಾಜರಾಗುವ ಮಕ್ಕಳು ದೇವರಿಗೆ ಉಡುಗೊರೆ ನೀಡುವವರಾಗಿ ಬದಲಾಗುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482