Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 20.05.2026
Share:

By Village Missionary Movement

Wednesday, 20-May-2026

ಧೈನಂದಿನ ಧ್ಯಾನ(Kannada) – 20.05.2026

 

ಕಲಿತುಕೊಳ್ಳಿರಿ

 

"ಕಷ್ಟಾನುಭವವು ಹಿತಕರವಾಯಿತು; ಅದರಿಂದಲೇ ನಿನ್ನ ನಿಬಂಧನೆಗಳನ್ನು ಕಲಿತೆನು." - ಕೀರ್ತನೆ 119:71

 

ಕ್ರೈಸ್ತ ಸುಧಾರಕ ಮಾರ್ಟಿನ್ ಲೂಥರ್ ಕಿಂಗ್ ಅವರ ಪತ್ನಿ ಹೀಗೆ ಹೇಳಿದರು, 'ದೇವರು ನನ್ನ ಜೀವನದಲ್ಲಿ ಕೆಲವು ವೇದನೆಗಳನ್ನು ತರದೇ ಇದ್ದಿದ್ದರೆ, ಕೀರ್ತನೆಗಳ ಪುಸ್ತಕದಲ್ಲಿ ಬರೆಯಲಾದ ಕೆಲವು ಸಾಲುಗಳ ಅರ್ಥ ನನಗೆ ತಿಳಿಯುತ್ತಿರಲಿಲ್ಲ'! ಕಷ್ಟ ಮತ್ತು ದುಃಖ ಬಂದಾಗ, ಇದೆಲ್ಲ ನಮಗೆ ಏಕೆ ಸಂಭವಿಸುತ್ತಿದೆ ಎಂದು ನಾವು ಚಿಂತಿಸುತ್ತೇವೆ ಮತ್ತು ಇತರರ ಬಳಿ ಪ್ರಲಾಪಿಸುತ್ತೇವೆ. ಆದರೆ ಅವುಗಳು ದೇವರ ಚಿತ್ತ ನಮ್ಮಲ್ಲಿ ನೆರವೇರಿಸಲು, ನಮ್ಮನ್ನು ರೂಪಿಸಲು ಅನುಕೂಲವಾಗಿವೆ. ನಾವು ದುಃಖದ ಹಾದಿಯ ಮೂಲಕ ಹಾದುಹೋದಾಗ ಮಾತ್ರ, ನಾವು ದೇವರ ಶಕ್ತಿಯನ್ನು ನೋಡಬಹುದು. ದುಃಖದ ಹಾದಿಯಲ್ಲಿ ಮಾತ್ರ ನಾವು ಕೆಲವು ಪಾಠಗಳನ್ನು ಕಲಿಯಬಹುದು. ದುಃಖ, ಕಷ್ಟ ಮತ್ತು ಉಪದ್ರವ ಬರದಿದ್ದರೆ, ನಾವು ನಮ್ಮ ಸ್ವಂತ ಬಲವನ್ನು ನಂಬುತ್ತೇವೆ. ಯೋಸೇಫನನ್ನು ಒಬ್ಬ ಮಹಾನ್ ಆಡಳಿತಗಾರನಾಗಿ ಬೆಳೆಸುವುದು ದೇವರ ಯೋಜನೆಯಾಗಿತ್ತು. ಅವನು ಅದಕ್ಕೆ ಗುಲಾಮನಾಗಿ ಹೋಗಬೇಕಾಗಿತ್ತು. ಪೋಟೀಫರನ ಮನೆಯ ಎಲ್ಲಾ ವ್ಯವಹಾರಗಳನ್ನು ನೋಡಿಕೊಳ್ಳಬೇಕಾಗಿತ್ತು. ನಂತರ ಸೆರೆಮನೆಗೆ ಹಾಕಬೇಕಾಯಿತು. ಆಗ ಮಾತ್ರ ಕನಸಿನ ಅರ್ಥ ಹೇಳುವ ಕೃಪೆ ತನಗೆ ನೀಡಲಾಗಿದೆ ಎಂಬುದನ್ನು ಅರಿತುಕೊಂಡರು.

 

ಅದೇ ರೀತಿ, ಪ್ರಿಯರೇ, ದೇವರು ನಮ್ಮನ್ನೂ ಒಂದು ದೊಡ್ಡ ಯೋಜನೆಯೊಂದಿಗೆ ಸೃಷ್ಟಿಸಿದ್ದಾರೆ. ಆ ಯೋಜನೆಯನ್ನು ಪೂರೈಸಲು ದೇವರು ನಮ್ಮನ್ನು ಅಂತಹ ಹಾದಿಯಲ್ಲಿ ಕರೆದುಕೊಂಡು ಹೋಗುತ್ತಾರೆ. ಹಾಗೆ ನಾವು ಹಾದುಹೋಗುವಾಗ, ನಾನು ಕಲಿಯಬೇಕಾದದ್ದನ್ನು ಕಲಿಯಲು ಮತ್ತು ನೀವು ಬಯಸುವ ರೀತಿಯಲ್ಲಿ ಆಗಲು ದೇವರೇ ನನಗೆ ಸಹಾಯ ಮಾಡಿ ಎಂದು ಪ್ರಾರ್ಥಿಸೋಣ. ದೇವರು ಸ್ವತಃ ನಮ್ಮನ್ನು ಬಲಪಡಿಸಲಿ. ಆಮೆನ್.

- Mrs. ಜ್ಯೋತಿ ಆನಂದ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al betpas bahiscasino imajbet imajbet imajbet casibom casibom giriş jojobet jojobet giriş