Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 23.05.2026
Share:

By Village Missionary Movement

Saturday, 23-May-2026

ಧೈನಂದಿನ ಧ್ಯಾನ(Kannada) – 23.05.2026

 

ತಾಳ್ಮೆಯನ್ನು ಧರಿಸುವುದು

 

“(ಯೇಸು) ತನ್ನನ್ನು ಬರಿದು ಮಾಡಿಕೊಂಡು ದಾಸನ ರೂಪವನ್ನು ಧರಿಸಿಕೊಂಡು ಮನುಷ್ಯರಿಗೆ ಸದೃಶನಾದನು." - ಫಿಲಿಪ್ಪಿ 2:7

 

ನಾನು ಚಿಕ್ಕವನಿದ್ದಾಗ ಓದಿದ ಒಂದು ಕಥೆಯಲ್ಲಿ, ಒಬ್ಬ ರಾಜನು ನಾಗರಿಕನ ವೇಷ ಧರಿಸಿ ತನ್ನ ದೇಶದ ಜನರನ್ನು ನೋಡಲು ಹೋಗುತ್ತಿದ್ದರು. ಅವರ ಕೃತಕ ಕೂದಲು ಮತ್ತು ಅವರ ಬಟ್ಟೆಗಳು ರಾಜನಾಗಿ ತನ್ನ ಗುರುತನ್ನು ಮರೆಮಾಡಿದವು ಮತ್ತು ಅವರಿಗೆ ಸಾಮಾನ್ಯ ನಾಗರಿಕನ ನೋಟವನ್ನು ನೀಡಿತು. ತನ್ನ ದೇಶದ ನಗರಗಳು ಮತ್ತು ಪಟ್ಟಣಗಳಿಗೆ ಆಗಾಗ್ಗೆ ಭೇಟಿ ನೀಡುವ ಮೂಲಕ, ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಅವರು ತ್ವರಿತವಾಗಿ ಪರಿಹರಿಸಲು ಸಾಧ್ಯವಾಯಿತು. ಅವರ ಅಗತ್ಯಗಳನ್ನೂ ಪೂರೈಸಲು ಸಾಧ್ಯವಾಯಿತು.

 

ನಮ್ಮ ಪಾಪಗಳಿಗ ಪ್ರಾಯಶ್ಚಿತ್ತ ಮಾಡಿಕೊಳ್ಳಲು, ನಮ್ಮನ್ನು ಸೃಷ್ಟಿಸಿದ ದೇವರು ಪರಲೋಕದ ಸಿಂಹಾಸನವನ್ನು ತೊರೆದು, “ಯೇಸು” ಎಂಬ ಹೆಸರಿನಲ್ಲಿ, ತನ್ನನ್ನು ತಾನು ಬರಿದು ಮಾಡಿಕೊಂಡು, ಸೇವಕನ ರೂಪವನ್ನು ಧರಿಸಿಕೊಂಡು, ಮನುಷ್ಯರಿಗೆ ಸದೃಶನಾದನು. ಅಂದರೆ, ದೇವರು ಈ ಭೂಮಿಗೆ ಮನುಷ್ಯನಾಗಿ ಬಂದರು. ಅವರು ಭೂಮಿಯ ಮೇಲೆ ಮನುಷ್ಯನಾಗಿ ಜೀವಿಸಿ ನಾವು ಅನುಭವಿಸುವ ಎಲ್ಲಾ ನೋವುಗಳು ಮತ್ತು ಶೋಧನೆಗಳನ್ನು ಅನುಭವಿಸಿದರು. ಆದಾಗ್ಯೂ, ಅವರು ಪಾಪ ಮಾಡಲಿಲ್ಲ. ಆತನು ನಮಗೆ ಪರಲೋಕ ರಾಜ್ಯದ ಕುರಿತಾದ ಕಾರ್ಯಗಳನ್ನು ನಮಗೆ ಕಲಿಸಿದರು. ಆತನು ಮಾನವ ರೂಪದಲ್ಲಿ ಕಾಣಿಸಿಕೊಂಡು, ಮರಣದವರೆಗೆ, ಅಂದರೆ ಶಿಲುಬೆಯ ಮರಣದವರೆಗೂ ವಿಧೇಯರಾಗಿ ತನ್ನನ್ನು ತಾನು ತಗ್ಗಿಸಿಕೊಂಡು ನಮ್ಮನ್ನು ಪಾಪ ಮತ್ತು ಶಾಪಗಳಿಂದ ಬಿಡಿಸಲು ಶಿಲುಬೆಯಲ್ಲಿ ಮರಣ ಹೊಂದಿದರು. ನಮಗಾಗಿ ಮೂರನೆಯ ದಿನದಲ್ಲಿ ಜೀವಂತವಾಗಿ ಎದ್ದರು. ದೇವರು ಆತನನ್ನು ಉನ್ನತೀಕರಿಸಿ, ಪ್ರತಿಯೊಂದು ಹೆಸರಿಗಿಂತ ಶ್ರೇಷ್ಠವಾದ ಹೆಸರನ್ನು ಆತನಿಗೆ ಕೊಟ್ಟರು. ಯೇಸು ಕ್ರಿಸ್ತನು ನಮ್ಮ ಪಾಪಗಳಿಗಾಗಿ ತನ್ನ ಜೀವವನ್ನು ಯಜ್ಞವಾಗಿ ಕೊಟ್ಟರು. ಕ್ರಿಸ್ತನಲ್ಲಿ ಸಾಂತ್ವನ ಮತ್ತು ಕರುಣೆಯನ್ನು ಪಡೆದಿರುವ ನಾವು ನಮ್ಮ ರಕ್ಷಕನಂತೆ ತಾಳ್ಮೆಯುಳ್ಳವರಾಗಿದ್ದೇವೆಯೇ? ಫಿಲಿಪ್ಪಿ 2:3 ರ ಪ್ರಕಾರ, ಪಕ್ಷಪಾತದಿಂದಾಗಲಿ ಒಣಹೆಮ್ಮೆಯಿಂದಾಗಲಿ ಯಾವದನ್ನೂ ಮಾಡದೆ ಪ್ರತಿಯೊಬ್ಬನು ದೀನಭಾವದಿಂದ ಮತ್ತೊಬ್ಬರನ್ನು ತನಗಿಂತಲೂ ಶ್ರೇಷ್ಠರೆಂದು ಎಣಿಸೋಣವಾ?

 

ಪ್ರಿಯರೇ, ಕ್ರಿಸ್ತನು ಮಾಡಿದಂತೆ ನಾವು ಇತರರನ್ನು ಪ್ರೀತಿಸಲು ಮತ್ತು ಸಹಾಯ ಮಾಡಲು ನಮ್ಮನ್ನು ತಗ್ಗಿಸಿಕೊಳ್ಳೋಣವಾ? ಅಂತಹ ಮನಸ್ಥಿತಿಯನ್ನು ಅಳವಡಿಸಿಕೊಳ್ಳೋಣ. ಆತನ ತ್ಯಾಗಕ್ಕಾಗಿ ಯೇಸು ಕ್ರಿಸ್ತನಿಗೆ ಧನ್ಯವಾದ ಹೇಳುತ್ತೇವಾ? ನಮ್ಮನ್ನು ನಾವೇ ಪರೀಕ್ಷಿಸಿಕೊಂಡು ನೋಡೋಣ. ಯೇಸು ಕ್ರಿಸ್ತನಂತೆಯೇ ನಮಗೂ ಅದೇ ಮನಸ್ಥಿತಿ ಇರಬೇಕೆಂದು ಪ್ರಾರ್ಥಿಸುವುದನ್ನು ಮುಂದುವರಿಸೋಣ. "ಮನುಷ್ಯನೇ, ಒಳ್ಳೆಯದು ಇಂಥದೇ ಎಂದು ಯೆಹೋವನು ನಿನಗೆ ತೋರಿಸಿದ್ದಾನಷ್ಟೆ; ನ್ಯಾಯವನ್ನು ಆಚರಿಸುವದು, ಕರುಣೆಯಲ್ಲಿ ಆಸಕ್ತನಾಗಿರುವದು, ನಿನ್ನ ದೇವರಿಗೆ ನಮ್ರವಾಗಿ ನಡೆದುಕೊಳ್ಳುವದು, ಇಷ್ಟನ್ನೇ ಹೊರತು ಯೆಹೋವನು ನಿನ್ನಿಂದ ಇನ್ನೇನು ಅಪೇಕ್ಷಿಸುವನು?" (ಮೀಕ 6:8)

- A. ಬ್ಯೂಲಾ

 

ಪ್ರಾರ್ಥನಾ ಅಂಶ:

ಜಾರ್ಖಂಡ್‌ನಲ್ಲಿ 10 ಆಲಯಗಳ ನಿರ್ಮಾಣದ ಅಗತ್ಯಗಳು ಪೂರೈಸಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al betpas bahiscasino imajbet imajbet imajbet casibom casibom giriş jojobet jojobet giriş