Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 24.05.2026 (Kids Special)
Share:

By Village Missionary Movement

Sunday, 24-May-2026

ಧೈನಂದಿನ ಧ್ಯಾನ(Kannada) – 24.05.2026 (Kids Special)

 

ನವ್ಯ - ಕಾವ್ಯ

 

"ಹೆತ್ತ ತಂದೆಯ ಮಾತಿಗೆ ಕಿವಿಗೊಡು; ಮುಪ್ಪಿನಲ್ಲಿಯೂ ತಾಯಿಯನ್ನು ಅಸಡ್ಡೆಮಾಡಬೇಡ." - ಜ್ಞಾನೋಕ್ತಿ 23:22

 

ಅಮ್ಮಾ... ಕಾವ್ಯಾ ನ ನೋಡಿ. ನನ್ ಹತ್ರ ತೀಟ್ಲೆ ಮಾಡ್ತಾನೆ ಇದಾಳೆ. ಆಮೇಲೆ ನಾನು ಹೊಡ್ದುಬಿಡ್ತೀನಿ. ಆಮೇಲೆ ನೀವು ನನ್ನ ಏನೂ ಕೇಳ್ಬಾರ್ದು ಎಂದು ಕಿರುಚುತ್ತಲೇ ಅಡುಗೆಮನೆಯಲ್ಲಿದ್ದ ಅಮ್ಮನ ಬಳಿಗೆ ಹೋದಳು ನವ್ಯ. ಅಮ್ಮ, ಕೈಯಲ್ಲಿ ಸೌಟು ಹಿಡಿದುಕೊಂಡು ನಿಮ್ಮಿಬ್ಬರಿಗೂ ಏನು ಸಮಸ್ಯೆ. ಯಾವಾಗ್ ನೋಡಿದ್ರೂ ಜಗಳ ಆಡ್ತನೇ ಇರ್ತೀರ. ನೀವಿಬ್ಬರೂ ನಾನು ಕೆಲಸ ಮುಗಿಸಿ ಬರೋವರೆಗೂ ಮೊಣಕಾಲುಗಳ ಮೇಲೆ ನಿಂತಿರಿ ಎಂದು ಹೇಳಿಬಿಟ್ಟು ಕೋಪದಿಂದ ಹೊರಟುಹೋದರು. ನವ್ಯ ಮತ್ತು ಕಾವ್ಯ ಒಬ್ಬರನ್ನೊಬ್ಬರು ದಿಟ್ಟಿಸಿ ನೋಡುತ್ತಾ ಮೊಣಕಾಲುಗಳ ಮೇಲೆ ನಿಂತರು. ಇಬ್ಬರೂ ಅಮ್ಮ ಏನು ಕೆಲಸ ಹೇಳಿದ್ರೂ ಮಾಡಲ್ಲ. ನಿನಗೇ ಹೇಳಿದ್ದು ಎಂದು ತಿರುಗಿಸಿ‌ ತಿರುಗಿಸಿ ಹೇಳಿಕೊಳ್ಳುತ್ತಾ ಇದ್ದರು. ಅಮ್ಮನಿಗೆ ತಲೆನೋವು ತರುತ್ತಿದ್ದರು.

 

ಒಂದು ದಿನ, ಇವರಿಬ್ಬರೂ ಪಕ್ಕದ ಬೀದಿಯಲ್ಲಿರುವ ತಮ್ಮ ಸ್ನೇಹಿತೆಯ ಮನೆಗೆ ಹೋದರು. ಅಲ್ಲಿ ಕೂಡ ಇವರ ಹಾಗೆಯೇ ಇಬ್ಬರು ಮಕ್ಕಳು ಪ್ರೀತಿ ಮತ್ತು ಬೃಂದಾ. ಆ ಮನೆಯಲ್ಲಿ ಅನೇಕ ಜನರು ದುಃಖಿತರಾಗಿ ಕುಳಿತಿದ್ದರು. ಇಬ್ಬರು ಸ್ನೇಹಿತೆಯರು ಕೂಡ ಅಳುತ್ತಿದ್ದರು. ಸ್ನೇಹಿತೆಯ ತಾಯಿ ತುಂಬಾ ಅಸ್ವಸ್ಥಳಾಗಿ ಎದ್ದೇಳಲು ಸಹ ಸಾಧ್ಯವಾಗದೆ ಹಾಸಿಗೆ ಹಿಡಿದಿದ್ದರು. ವೈದ್ಯರು ಅವರನ್ನು ಪರೀಕ್ಷಿಸಿ ಇವರ ದೇಹವು ತೀವ್ರ ಮಾನಸಿಕ ಒತ್ತಡದಿಂದಾಗಿ ತುಂಬಾ ದುರ್ಬಲವಾಗಿದೆ ಎಂದು ಹೇಳಿದರು. ಇವರು ಇನ್ನು ಮುಂದೆ ಎದ್ದೇಳಲು ಅಥವಾ ಯಾವುದೇ ಕೆಲಸ ಮಾಡಲು ಸಾಧ್ಯವಿಲ್ಲ ಎಂದರು. ಪ್ರೀತಿ ಮತ್ತು ಬೃಂದಾಳನ್ನು ನೋಡಿ, ನಿಮ್ಮ ತಾಯಿ ತುಂಬಾ ಒತ್ತಡಕ್ಕೊಳಗಾಗಿ ಹೀಗೆ ದುರ್ಬಲರಾಗಿಬಿಟ್ಟರು. ತಾಯಿಯ ಮಾತನ್ನು ಕೇಳಿ, ಜಗಳವಾಡದೇ ಅವರಿಗೆ ಸಹಾಯವಾಗಿ ಇದ್ದಿದ್ದರೆ, ಈ ಪರಿಸ್ಥಿತಿ ಅವರಿಗೆ ಬರುತ್ತಿರಲಿಲ್ಲ ಎಂದು ಹೇಳಿ ಆ Family Doctor ಹೊರಟುಹೋದರು. ಇದನ್ನೆಲ್ಲ ಕೇಳುತ್ತಿದ್ದ ನವ್ಯ ಮತ್ತು ಕಾವ್ಯ ಭಯಭೀತರಾದರು. ಅಯ್ಯೋ, ನಾವು ನಮ್ಮ ತಾಯಿಗೆ ಜಗಳವಾಡುವ ಮೂಲಕ ಎಷ್ಟು ತೊಂದರೆ ಉಂಟುಮಾಡಿದ್ದೇವೆ. ನಮ್ಮ ತಾಯಿಯೂ ಆ ಆಂಟಿಯಂತೆಯೇ ಆಗಿಬಿಟ್ರೆ ನಾವು ಏನು ಮಾಡೋದು. ನಾವಿಬ್ಬರು ಇನ್ನು ಮುಂದೆ ಜಗಳವಾಡಲೇಬಾರದು. ಅಮ್ಮ ಹೇಳಿದ್ದನ್ನೆಲ್ಲಾ ಕೇಳಿ ಹಂಚಿಕೊಂಡು ಕೆಲಸ ಮಾಡಲು ನಿರ್ಧರಿಸಿದರು.

 

ಏನು ಪುಟಾಣಿಗಳೇ ನೀವು ಹೇಗೆ? ಅಮ್ಮನನ್ನು ನೋಯಿಸುತ್ತೀರಾ ಅಥವಾ ನೀವು ಅವರಿಗೆ ಸಹಾಯ ಮಾಡಿ ಅವರನ್ನು ಸಂತೋಷಪಡಿಸುತ್ತೀರಾ? ಎಲ್ಲರೂ ನಿಮ್ಮ ಹೆತ್ತವರಿಗೆ ಸಹಾಯ ಮಾಡಬೇಕು, O.K ನಾ. 

- Mrs. ಸಾರಾಳ್ ಸುಭಾಷ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al betpas bahiscasino imajbet imajbet imajbet casibom casibom giriş jojobet jojobet giriş