Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 23.06.2021
Share:

By Village Missionary Movement

Wednesday, 23-Jun-2021

ಧೈನಂದಿನ ಧ್ಯಾನ(Kannada) – 23.06.2021

 

“ಹದ್ದು ತನ್ನ ಮರಿಗಳನ್ನು ಗೂಡಿನೊಳಗಿಂದ ಹೊರಡಿಸಿ ಅವುಗಳ ಬಳಿಯಲ್ಲಿ ಹಾರಾಡುವಂತೆ ಯೆಹೋವನು ತನ್ನ ರೆಕ್ಕೆಗಳನ್ನು ಚಾಚಿ ಇಸ್ರಾಯೇಲ್ಯರನ್ನು ಆತುಕೊಂಡದ್ದೂ” - ಧರ್ಮೋಪದೇಶ ಕಾಂಡ 32:11

 

ಬಹಳ ಕಠಿಣವಾದ ಉನ್ನತವಾದ ಶಿಖರದ ಮೇಲೆ ಹದ್ದಿನ ಗೂಡಿನಲ್ಲಿ ಎರಡು ಹದ್ದಿನ ಮರಿಗಳು ತಮ್ಮ ಶರೀರಗಳನ್ನು ಮುದುರಿಕೊಂಡು ಮಲಗಿವೆ. ತಾಯಿ ಹದ್ದು ತನ್ನ ಮಕ್ಕಳಿಗೆ ಅಗತ್ಯವಾದ ಮಾಂಸದ ಆಹಾರವನ್ನು ಹುಡುಕುತ್ತಾ ತಂದು ಅವುಗಳಿಗೆ ಕೊಡುತ್ತಿತ್ತು. ತಣ್ಣನೆಯ ರಾತ್ರಿ ಸಮಯದಲ್ಲಿ ತಾಯಿ ಹದ್ದು ತನ್ನ ಮಕ್ಕಳ ಮೇಲೆ ರೆಕ್ಕೆಗಳನ್ನು ಚಾಚಿ ತಬ್ಬಿಕೊಳ್ಳುತ್ತಿತ್ತು. ತಾಯಿಯ ಶರೀರದ ಬಿಸಿ, ಮೃದುವಾದ ರೆಕ್ಕೆಗಳು ಮಕ್ಕಳಿಗೆ ಒಳ್ಳೆಯ ನಿದ್ರೆಯನ್ನು ಕೊಡುತ್ತಿತ್ತು. ಹದ್ದುವಿನ ಮಕ್ಕಳ ಹಾಗೆ ಹೊಸದಾಗಿ ದೇವರಲ್ಲಿ ಹುಟ್ಟಿದ ಮಕ್ಕಳು ಕೂಡ ಹೀಗೆಯೇ ಇರುತ್ತಿದ್ದಾರೆ. ಕ್ರೈಸ್ತರಾಗಿದ್ದರೆ ಇನ್ನು ಯಾವ ಸಮಸ್ಯೆಯೂ ಬರುವುದಿಲ್ಲ ಎಂದು ನೆನೆಸುತ್ತಿದ್ದಾರೆ.

 

ಒಂದು ದಿನ ತಾಯಿ ಹದ್ದು ತನ್ನ ಬಲವಾದ ರೆಕ್ಕೆಗಳಿಂದ ಹಾರುತ್ತಾ ಬಂದು ವತ್ಯಾಸವಾಗಿ ಪ್ರವರ್ತಿಸಲು ಪ್ರಾರಂಭಿಸಿತು. ಯಾವಾಗಲೂ ಶಾಂತವಾಗಿ ಗೂಡಿನಲ್ಲಿ ಕೂತುಕೊಳ್ಳುತ್ತಿದ್ದ ಪಕ್ಷಿ ಈ ದಿನ ತನ್ನ ಗೂಡನ್ನು ಬಾಯಿಂದ ಚುಚ್ಚುತ್ತಾ ಕಿತ್ತು ಹಾಕಲು ಪ್ರಾರಂಭಿಸಿತು. ಮತ್ತೆ ಮತ್ತೆ ಅದೇ ಕೆಲಸ ಮಾಡುತ್ತಿದೆ. ತಾನು ಇಲ್ಲಿಯವರೆಗೂ ಸುರಕ್ಷಿತವಾಗಿದ್ದ ಆ ಗೂಡು ಇನ್ನು ಸ್ವಲ್ಪ ಮಾತ್ರವೇ ಮಿಕ್ಕಿದೆ. ಅದರಲ್ಲಿ ಕುಳಿತಿದ್ದ ಹದ್ದಿನ ಮರಿಗಳು ಅಗಾಧವಾದ ಸ್ಥಳವನ್ನು ನೋಡಿ ನಡುಗುವುದಕ್ಕೆ ಪ್ರಾರಂಭಿಸಿದವು. ತಾಯಿ ಹದ್ದು ತನ್ನ ಮರಿಗಳಲ್ಲಿ ಒಂದನ್ನು ತೆಗೆದುಕೊಂಡು ಅಗಾಧವಾದ ಸ್ಥಳಕ್ಕೆ ಹಾಕಿಬಿಟ್ಟಿತು. ಇದನ್ನು ಎದುರುನೋಡದ ಮರಿಗಳು ಈ ದಿನ ನಾವು ಮುಗಿದು ಹೋದೆವು ಅಂದುಕೊಳ್ಳುತ್ತಾ ಬಿದ್ದು ಹೋಗುತ್ತಿರುವಾಗ, ಕ್ಷಣಾರ್ಥದಲ್ಲಿ ತಾಯಿ ಹದ್ದು ಹಾರುತ್ತಾ ಬಂದು ಅದನ್ನು ಹಿಡಿದು ಬೆನ್ನಿನಮೇಲೆ ಹೊತ್ತುಕೊಂಡು ಹೋಯಿತು. ಮತ್ತೆ ಬೆಟ್ಟದ ಶಿಖರದ ಮೇಲಕ್ಕೆ ತೆಗೆದುಕೊಂಡು ಹೋಗಿ ಮತ್ತೆ ಕೆಳಗೆ ಬೀಳಿಸಿತು. ಏಕೆಂದರೆ ಅವು ಮೇಘಗಳಿಗೂ ಮೇಲೆ ಹಾರುವ ಹದ್ದುಗಳ ಹಾಗೆ ಹಾರುವುದಕ್ಕಾಗಿ ಅವುಗಳಿಗೆ ತರಬೇತಿ ಕೊಡುತ್ತಿತ್ತು.

 

ಪ್ರಿಯರೇ!! ನಮ್ಮನ್ನು ಕೂಡ ಬೆಳೆದವರಾಗಿ ನಿಲ್ಲಿಸುವುದಕ್ಕಾಗಿ ದೇವರು ಕೈಗೊಳ್ಳುತ್ತಿರುವ ವಿಧಾನವು ಇದೆ. ಜೀವನದಲ್ಲಿ ನಮ್ಮನ್ನು ತೊಂದರೆ ಪಡಿಸುತ್ತಿರುವ ಸಮಸ್ಯೆಗಳನ್ನು ನೋಡಿ ಹದ್ದಿನ ಮರಿಗಳು ಕಿರುಚುತ್ತಿರುವ ಹಾಗೆ ನಾವು ಕೂಡ ಕೂಗಿಕೊಳ್ಳುತ್ತಿದ್ದೇವೆ. ಆದರೆ ನಿಮ್ಮನ್ನು ಅತ್ಯಧಿಕವಾಗಿ ಪ್ರೀತಿಸುತ್ತಿರುವ ದೇವರೇ ನಿಮ್ಮ ಗೂಡುಗಳನ್ನು ಚದುರಿಸುತ್ತಿದ್ದಾರೆ ಎಂಬುದನ್ನು ಗ್ರಹಿಸಿರಿ. ಆತ್ಮೀಕವಾದ ಉನ್ನತ ಅನುಭವಗಳನ್ನು ನಾವು ಕಲಿತುಕೊಂಡು ಉನ್ನತ ಶಿಖರಗಳ ಕಡೆಗೆ ರೆಕ್ಕೆಗಳನ್ನು ಚಾಚಿ ಹಾರುವುದನ್ನು ಕಲಿಸುವುದಕ್ಕಾಗಿ ದೇವರು ಆಶಿಸುತ್ತಿದ್ದಾರೆ.

 

ದೇವರು ಈಗ ನಿಮಗೆ ತರಬೇತಿ ಕೊಡುತ್ತಿದ್ದಾರ?? ಇನ್ನು ಸ್ವಲ್ಪಕಾಲದಲ್ಲಿ ಬೆಳೆದವರಾಗಿ ಎಂಥಹ ಕಾರ್ಯಗಳನ್ನಾದರೂ, ಮಾಡುವುದಕ್ಕೆ ಅರ್ಹತೆಯುಳ್ಳ ಪಾತ್ರೆಯಾಗಿ ಬದಲಾಗುತ್ತೀರ. ಹಲ್ಲೆಲೂಯ!

- ಥವಮಣಿ ವೈರವೇಲ್

 

ಪ್ರಾರ್ಥನ ಅಂಶ:-

ಈ ಸೇವೆಯನ್ನು ಪ್ರಾರ್ಥನೆಯಿಂದ ಪ್ರೋತ್ಸಾಹಿಸುತ್ತಿರುವ ಪಾಲುದಾರರನ್ನು ದೇವರು ಇನ್ನೂ ಹೆಚ್ಚಾಗಿ ಪ್ರಾರ್ಥನೆಯ ಆತ್ಮ ದಿಂದಲೂ, ವಿಜ್ಞಾಪನೆಯ ಆತ್ಮ ದಿಂದಲೂ ತುಂಬಿಸಲ್ಪಡುವಂತೆ ಪ್ರಾರ್ಥಿಸೋಣ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking perabet casibom holiganbet galabet casibom grandpashabet perabet perabet giriş padişahbet padişahbet giriş grandpashabet kalitebet kalitebet giris betsmove betsmove giris gonebet gonebet giris betnano betnano giriş jojobet jojobet betplay jojobet esbet sonbahis tambet grandpashabet betgit mercurecasino matbet