Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 14.06.2026 (Kids Special)
Share:

By Village Missionary Movement

Sunday, 14-Jun-2026

ಧೈನಂದಿನ ಧ್ಯಾನ(Kannada) – 14.06.2026 (Kids Special)

 

ಕರುಣೆಯುಳ್ಳವನಾಗಿರು

 

“ಕರುಣೆಯುಳ್ಳವರು ಧನ್ಯರು; ಅವರು ಕರುಣೆಹೊಂದುವರು" - ಮತ್ತಾಯ 5:7

 

Hai ಪುಟಾಣಿಗಳೇ, ಹೇಗಿದ್ದೀರ? ಚೆನ್ನಾಗಿದ್ದೀರಾ? ನಿಶ್ಚಯವಾಗಿ ಚೆನ್ನಾಗಿರುತ್ತೀರ. Leave ಅನ್ನು ಚೆನ್ನಾಗಿ Enjoy ಮಾಡಿರುತ್ತೀರ ಹೌದಲ್ವಾ. ಈಗ ಮತ್ತೆ ಪಾಠ ಓದಲು ಪ್ರಾರಂಭಿಸಿ ಬಿಟ್ರಾ. ಚೆನ್ನಾಗಿ ಓದಬೇಕು ಸರೀನಾ ಪುಟಾಣಿಗಳೇ. 

 

ಈಗ, ಒಂದು ತಮಾಷೆಯ ಮತ್ತು ಅದೇ ಸಮಯದಲ್ಲಿ ಒಳ್ಳೆಯ ಅರ್ಥಪೂರ್ಣ ಕಥೆಯನ್ನು ನೋಡೋಣ್ವಾ? ಅಮೇರಿಕನ್ ಅಧ್ಯಕ್ಷ ಅಬ್ರಹಾಂ ಲಿಂಕನ್ ಬಗ್ಗೆ ಕೇಳಿದ್ದೀರಾ ಪುಟಾಣಿಗಳೇ. ಅವರು ಈ ಮಹಾ ಪದವಿಗೆ ಬರುವ ಮೊದಲು, ವಕೀಲರಾಗಿದ್ದರು. ಆಗ ಅವರಿಗೊಂದು ಪ್ರಕರಣ ಬಂದಿತು. ಅದರಲ್ಲಿ, ಒಬ್ಬ ಶ್ರೀಮಂತ ವ್ಯಕ್ತಿ ಒಬ್ಬ ವ್ಯಕ್ತಿಯನ್ನು ಅವರ ಬಳಿಗೆ ಕರೆತಂದು ಇವರು ನನ್ನಿಂದ 5 ಡಾಲರ್ ಸಾಲ ಪಡೆದು ಮತ್ತೆ ಕೊಡಲಿಲ್ಲ. ಆದ್ದರಿಂದ ನಾನು ಇವರ ಮೇಲೆ ಮೊಕದ್ದಮೆ ಹೂಡುತ್ತೇನೆ ಎಂದು ಹೇಳಿದರು. ಅದನ್ನು ಕೇಳಿದ ಅಬ್ರಹಾಂ ಲಿಂಕನ್ ಗೆ ಅವರ ಮೇಲೆ ಕರುಣೆ ಉಂಟಾಯಿತು. ಇವರೋ ಬಡ ಮನುಷ್ಯ, ಕೇವಲ 5 ಡಾಲರ್ ತಾನೇ, ನಿಮ್ಮಿಂದ ಅದನ್ನು ಕ್ಷಮಿಸಲು ಸಾಧ್ಯವಿಲ್ಲವೇ? ಎಂದು ಆ ಶ್ರೀಮಂತನನ್ನು ಕೇಳಿದರು. ಆದರೆ ಆ ಶ್ರೀಮಂತನು ಇಲ್ಲ ನನ್ನಿಂದ ಕ್ಷಮಿಸಲು ಸಾಧ್ಯವಿಲ್ಲ. ಸರಿ ಈ, ಮೊಕದ್ದಮೆ ಹೂಡಲು ಎಷ್ಟು ವೆಚ್ಚವಾಗುತ್ತದೆ? ಎಂದು ಕೇಳಿದರು. 10 ಡಾಲರ್ ಎಂದರು ಲಿಂಕನ್. ಶ್ರೀಮಂತ ತನ್ನ ಜೇಬಿನಿಂದ 10 ಡಾಲರ್ ಎತ್ತಿಕೊಟ್ಟರು. ಲಿಂಕನ್ ಅದರಿಂದ 5 ಡಾಲರ್ ತೆಗೆದು ಬಡವನಿಗೆ ಕೊಟ್ಟು, "ಈ ಹಣವನ್ನು ಅವರಿಗೆ ಹಿಂತಿರುಗಿ ಕೊಟ್ಟುಬಿಡಿ" ಎಂದರು. ಆ ಕ್ಷಣದಲ್ಲೇ ಸಮಸ್ಯೆ ಬಗೆಹರಿಯಿತು! ಆ ಬಡ ಮನುಷ್ಯನಿಗೆ ಹೇಗೆ ಧನ್ಯವಾದ ಹೇಳಬೇಕೆಂದೇ ಗೊತ್ತಾಗಲಿಲ್ಲ. ನೋಡಿ ಪುಟಾಣಿಗಳೇ, ಒಂದು ನಿಮಿಷದಲ್ಲಿ ಅವರು ಸಮಸ್ಯೆಯನ್ನು ಎಷ್ಟು ಸುಂದರವಾಗಿ ಪರಿಹರಿಸಿದ್ರು ಅಂತ. 

 

ಅದರಂತೆಯೇ, ನಾವು ಸಹ ಇತರರನ್ನು ಕ್ಷಮಿಸಬೇಕು. "ನಮಗೆ ತಪ್ಪು ಮಾಡಿದವರನ್ನು ನಾವು ಕ್ಷವಿುಸಿದಂತೆ ನಮ್ಮ ತಪ್ಪುಗಳನ್ನು ಕ್ಷವಿುಸು" ಎಂದು ನಾವು ಪ್ರಾರ್ಥಿಸುತ್ತೇವೆ ಅಲ್ವಾ. ಸತ್ಯವೇದವು ಹೇಳುತ್ತದೆ, "ಬಡವರಿಗೆ ದಯೆತೋರಿಸುವವನು ಯೆಹೋವನಿಗೆ ಸಾಲಕೊಡುವವನನು." ನಾವು ಬಡವರಿಗೆ ಕೊಡುವಾಗ, ಕರ್ತನು ಅದನ್ನು ನಮಗೆ ಹಿಂದಿರುಗಿಸಿ ನಮ್ಮನ್ನು ಆಶೀರ್ವದಿಸುತ್ತಾರೆ. ಆದ್ದರಿಂದ ನಾವು ಅಗತ್ಯವಿರುವವರಿಗೆ ಸಹಾಯ ಮಾಡಬೇಕು ಮತ್ತು ಅವರಿಗೆ ಕರ್ತನ ಪ್ರೀತಿಯನ್ನು ತೋರಿಸಬೇಕು. ಅಬ್ರಹಾಂ ಲಿಂಕನ್ ಆ ಬಡವನಿಗೆ ಕರುಣೆ ತೋರಿಸಿದಂತೆಯೇ, ನಾವು ಸಹ ಇತರರಿಗೆ ಸಹಾಯ ಮಾಡಿ ಅದರ ಮೂಲಕ ಇತರರಿಗೆ ಯೇಸುವಿನ ಪ್ರೀತಿಯನ್ನು ತಿಳಿಸಬಹುದು.

 

ಸರಿ, ಪುಟಾಣಿಗಳೇರೇ, ನೀವು ಏನಾಗಲಿದ್ದೀರ? ವೈದ್ಯನಾ? ಶಿಕ್ಷಕನಾ? ಪಾಸ್ಟರಾ? ಏನೇ ಆಗಿದ್ದರೂ, ದೇವರಿಗೆ ಭಯಪಟ್ಟು ಅವರಿಗೆ ವಿಧೇಯರಾಗಿ ಬದುಕಬೇಕು. ನೀವೆಲ್ಲರೂ ಭವಿಷ್ಯದಲ್ಲಿ ಉತ್ತಮ ಮಿಷನರಿಗಳಾಗಬೇಕು. O.k ನಾ.

- Sis. ದೆಬೋರಾಳ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş matbet giriş sahabet onwin bets10 bets10 giriş bets10 güncel giriş betcio atlasbet casibom meritking perabet casibom holiganbet galabet casibom padişahbet padişahbet giriş grandpashabet jojobet jojobet grandpashabet grandpashabet palacebet sonbahis jojobet grandpashabet betpuan betsalvador matbet meritking perabet perabet giriş instagram ban service betsilin betsilin giris pashagaming pashagaming giris gorabet gorabet giris kralbet holiganbet