Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 25.06.2021
Share:

By Village Missionary Movement

Friday, 25-Jun-2021

ಧೈನಂದಿನ ಧ್ಯಾನ(Kannada) – 25.06.2021

 

“ನೆಟ್ಟಗೆ ದೃಷ್ಟಿಸು; ನಿನ್ನ ಕಣ್ಣುಗಳು ನಿನ್ನ ಮುಂದೆಯೇ ಇರಲಿ” - ಜ್ಞಾನೋಕ್ತಿಗಳು 4:25

 

ಕಣ್ಣು ಶರೀರಕ್ಕೆ ಬೆಳಕಾಗಿದೆ ಆದರೆ ನಮ್ಮ ಕಣ್ಣುಗಳು ಬೆಟ್ಟವಾಗಿ ಮಾರ್ಪಟ್ಟಾಗ ಅದು ನಮ್ಮ ಆತ್ಮೀಯ ಜೀವನವನ್ನು ಕತ್ತಲೆಯೊಳಗೆ ತಳ್ಳಿಬಿಡುತ್ತದೆ. ಹೀಗೆ ಕಣ್ಣಿನಿಂದ ಪಾಪ ದೊಳಗೆ ಸಿಕ್ಕಿಕೊಂಡ ಕೆಲವರನ್ನು ಕುರಿತು ಈ ದಿನ ನಾವು ಧ್ಯಾನಿಸೋಣ.

 

ಹವ್ವ:-ಒಳ್ಳೆಯದರ ಮತ್ತು ಕೆಟ್ಟದರ ಅರಿವನ್ನು ಕೊಡುವ ಮರದ ಹಣ್ಣಿನೊಂದಿಗೆ ಏದೆನ್ ತೋಟದಲ್ಲಿ ಎಷ್ಟೋ ವಿಧವಾದ ಫಲದ ಮರಗಳು ಇದ್ದವು. ಆದರೆ ಹವ್ವ ದೇವರ ಮಾತನ್ನು ನಿರ್ಲಕ್ಷ್ಯ ಮಾಡಿ ತನ್ನ ಕಣ್ಣನ್ನು ಒಳ್ಳೆಯ ಮತ್ತು ಕೆಟ್ಟದರ ಅರಿವನ್ನು ಹುಟ್ಟಿಸುವ ಮರದ ಹಣ್ಣಿನ ಮೇಲೆ ದೃಷ್ಟಿ ಇಟ್ಟಳು. ನೋಡುವುದಕ್ಕೆ ರಮ್ಯವಾಗಿದ್ದ ಆ ಹಣ್ಣನ್ನು ಕಿತ್ತುಕೊಂಡು ತಿಂದು ತನ್ನ ಗಂಡನಾದ ಆದಾಮನಿಗೆ ಕೊಟ್ಟಳು.ಆತ್ಮ ಗೌರವವನ್ನು ಕಡಿಮೆಯಾಗಿ ಅಂದಾಜು ಮಾಡಿಕೊಳ್ಳುವ ಪರಿಸ್ಥಿತಿ. ಅದರ ಮೂಲಕ ಬಚ್ಚಿಟ್ಟುಕೊಳ್ಳುವುದು, ಇತರರ ಮೇಲೆ ಅಪರಾಧ ಹೊರಿಸುವುದು ಕೊನೆಗೆ ಶಾಪದೊಂದಿಗೆ ತೋಟದಿಂದ ಹೊರಗೆ ಹೋಗುವುದು. ಎಷ್ಟು ಘೋರವಾದ ಪರಿಸ್ಥಿತಿ. ಈ ದಿನ ಈ ಲೋಕದಲ್ಲಿ ದೇವರಿಂದ ತ್ಯಜಿಸಲ್ಪಟ್ಟ ಅನೇಕ ಕಾರ್ಯಗಳು ಉಂಟು. ಅವುಗಳಮೇಲೆ ನಮ್ಮ ದೃಷ್ಟಿ ಇಟ್ಟಾಗ ಆದಾಮ ಹವ್ವಳನ್ನು ಹಿಂಬಾಲಿಸಿ ಬಂದ ಪಾಪವು ನಮ್ಮನ್ನು ಕೂಡ ದೇವರ ಸನ್ನಿಧಾನದಿಂದ ದೂರ ಮಾಡುತ್ತದೆ. ಆದ್ದರಿಂದ ನೀವು ನೋಡುತ್ತಿರುವ ಕಾರ್ಯಗಳಲ್ಲಿ ಆಸಕ್ತಿಯಿಂದಿರಿ.

 

ದಾವೀದನು:- ಹೃದಯಾನುಸಾರವಾದ ವ್ಯಕ್ತಿ ಆದರೆ ಊರಿಯಾ ಹೆಂಡತಿ ಅಂದದ ಮೇಲೆ ದೃಷ್ಟಿ ಇಟ್ಟದ್ದರಿಂದ ತನ್ನ ಕಣ್ಣಿನ ದೃಷ್ಟಿಯ ಮೂಲಕ ದುರಾಸೆಯು ಬಂತು. ದೇವರಿಗಾಗಿ ತೆರೆದಿರುವ ದಾವೀದನ ಹೃದಯದ ಬಾಗಿಲುಗಳು ಮುಚ್ಚಲ್ಪಟ್ಟು ಧೈರ್ಯವಾಗಿ ಪಾಪ ಮಾಡುವುದಕ್ಕೆ ಪ್ರೇರೇಪಿಸಿತು. ಕೊನೆಯದಾಗಿ ಪ್ರವಾದಿಯಾದ ನಾತಾನನು ಬಂದು ಆತನ ಪಾಪದ ಪರಿಸ್ಥಿತಿಯನ್ನು ಹೇಳುವವರೆಗೂ ಆತನ ಹೃದಯವು ಪಾಪವನ್ನು ಕುರಿತು ಗ್ರಹಿಸಲಿಲ್ಲ. ಹೌದು ನಾವು ಕೂಡ ನಮ್ಮ ಕಣ್ಣಿನಿಂದ ಬೇರೆಯವರಿಗೆ ಉಂಟಾದ ಯಾವುದನ್ನು ಕೂಡ ದುರಾಸೆಯಿಂದ ನೋಡದೆ ನಮ್ಮ ದೃಷ್ಟಿಯು ಪರಿಶುದ್ಧ ದೃಷ್ಟಿಯಾಗಿರಲಿ.

 

ಸಂಸೋನನು:-ತಾಯಿಯ ಗರ್ಭದಲ್ಲಿ ರೂಪಿಸಲ್ಪಟ್ಟವನು ಇಸ್ರಾಯೇಲ್ ಜನರಿಗೆ ರಕ್ಷಕನಾಗಿ ನ್ಯಾಯಾಧಿಪತಿಯಾಗಿ ಕರೆಯಲ್ಪಟ್ಟವನು. ದೇವರ ಯೋಜನೆಯ ಕಡೆಗೆ ಓಡಿದವನು. ಮಧ್ಯದಲ್ಲಿ ತಿಮ್ನಾತಿನಲ್ಲಿ ಒಂದು ಸ್ತ್ರೀಯನ್ನು"ನೋಡಿ" (ನ್ಯಾಯಸ್ಥಾಪಕರು 14:1) ವೇಶ್ಯೆಯನ್ನು "ನೋಡಿ" (16:1) ರಲ್ಲಿ ಪಾಪದಲ್ಲಿ ಬಿದ್ದು ಹೋದನು. ಆ ಕ್ಷಣದಿಂದ ಆತನ ದರ್ಶನವೆಲ್ಲವು ಕೂಡ ಮಾರ್ಪಟ್ಟಿತು. ಕಣ್ಣಿನ ದುರಾಸೆಯಲ್ಲಿ ಬಿದ್ದುಹೋದ ಸಂಸೋನನ ಕಣ್ಣುಗಳು ಕಿತ್ತುಹಾಕಲ್ಪಟ್ಟು, ಹಿಟ್ಟು ರುಬ್ಬವ ಪರಿಸ್ಥಿತಿ ಏರ್ಪಟ್ಟಿತು. ಬಲವುಳ್ಳವನಾಗಿದ್ದರೂ, ಆಟದ ವಸ್ತುವಾಗಿ ಮಾರ್ಪಟ್ಟ ಪರಿಸ್ಥಿತಿಯಲ್ಲಿ ತಳ್ಳಲ್ಪಟ್ಟರು. ಆಳುತ್ತಿದ್ದ ಕೈಗಳು ಈಗ ರುಬ್ಬುವ ಕಲ್ಲನ್ನು ಆಡಿಸುತ್ತಿದೆ. ಕಾರಣ:- ಕಣ್ಣುಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳದೆ ಹೋದದ್ದು.

 

ಇದನ್ನು ಓದುತ್ತಿರುವ ಸ್ನೇಹಿತರೆ! ನಿಮ್ಮ ದೃಷ್ಟಿ ಹೇಗಿದೆ? ನೋಟದಲ್ಲಿ ಪರಿಶುದ್ಧತೆ ಇದೆಯಾ???

- ಶ್ರೀಮತಿ. ರೂತ್ ಅನಿಷ್

 

ಪ್ರಾರ್ಥನಾ ಅಂಶ:-

ಅಂತ್ಯಕಾಲದ ಉಜ್ಜೀವನಕ್ಕಾಗಿ ಆಯುಧಗಳನ್ನು ಸಿದ್ದ ಮಾಡುವ ಕೆಲಸದಲ್ಲಿರುವ ನಮ ಸೇವಕರನ್ನು ದೇವರು ಇನ್ನೂ ರೂಪಿಸಿ ಬಳಸಿಕೊಳ್ಳುವಂತೆ ಪ್ರಾರ್ಥಿಸೋಣ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking meritking giriş perabet perabet giriş casibom casibom giriş holiganbet holiganbet giriş galabet casibom casibom giriş grandpashabet perabet perabet giriş padişahbet padişahbet giriş meritking meritking giriş grandpashabet grandpashabet giriş kalitebet kalitebet giris betsmove betsmove giris gonebet gonebet giris betnano betnano giriş jojobet jojobet jojobet jojobet jojobet holiganbet holiganbet holiganbet grandpashabet grandpashabet