Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 23.06.2026
Share:

By Village Missionary Movement

Tuesday, 23-Jun-2026

ಧೈನಂದಿನ ಧ್ಯಾನ(Kannada) – 23.06.2026

 

ಸ್ವಂತ ಬುದ್ಧಿಯ ಮೇಲೆ ಒರಗಬೇಡ

 

“...ಈ ಕಾರ್ಯದಲ್ಲಿ ಬುದ್ಧಿಹೀನನಾಗಿ ನಡೆದುಕೊಂಡಿದ್ದೀ;..." - 2 ಪೂರ್ವಕಾಲವೃತ್ತಾಂತ:16:9

 

ಸಂಜೆ ವೇಳೆಯಲ್ಲಿ, ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಒಬ್ಬ ವ್ಯಕ್ತಿ ಸ್ವಲ್ಪ ದೂರದಲ್ಲಿ ಹಾವು ತೆವಳುತ್ತಿರುವುದನ್ನು ನೋಡಿದನು. ಅವನು ಭಯಭೀತನಾಗಿ ಏನು ಮಾಡಬೇಕೆಂದು ತಿಳಿಯದೇ ರಸ್ತೆಯ ಇನ್ನೊಂದು ಬದಿಗೆ ಓಡಿಹೋದನು. ಅಂದು ಪರಿತಾಪ! ವೇಗವಾಗಿ ಬಂದ ಸ್ಕೂಟರ್ ಅವನಿಗೆ ಡಿಕ್ಕಿ ಹೊಡೆದು ಅವನು ಗಂಭೀರವಾಗಿ ಗಾಯಗೊಂಡನು. ಅಲ್ಲಿದ್ದ ಜನರು ಬೇಗನೆ ಕಾರ್ಯನಿರ್ವಹಿಸಿ ಆಸ್ಪತ್ರೆಗೆ ಕರೆದೊಯ್ದು ಅವನನ್ನು ಉಳಿಸಿದರು. 

 

ಜೀವನದಲ್ಲಿ ನಮಗೆ ಸಂಭವಿಸುವ ಕಷ್ಟಗಳಿಗಿಂತ ಅದರ ಕುರಿತಾದ ಯೋಚನೆಗಳ ವೇಗವು ಹಲವು ಪಟ್ಟು ನಮ್ಮನ್ನು ಅಸ್ಥಿರಗೊಳಿಸುತ್ತದೆ. ನಾವು ಎದುರಿಸುವ ಸಮಸ್ಯೆಗಳು ನಾವು ನಿರೀಕ್ಷಿಸಿದ ಕಷ್ಟಗಳನ್ನು ತರುವುದಿಲ್ಲ. ಆದರೆ ನಾವು ತೆಗೆದುಕೊಳ್ಳುವ ನಿರ್ಧಾರಗಳು ಮತ್ತು ಅದರ ಭಯದಿಂದ ಭಯಭೀತವಾದ ನಮ್ಮ ಕ್ರಿಯೆಗಳು ದೊಡ್ಡ ಹಾನಿಯನ್ನುಂಟುಮಾಡುತ್ತವೆ. ಪರಿಸ್ಥಿತಿ ಏನೇ ಇರಲಿ, ದೇವರು ಅದರ ಮಧ್ಯದಲ್ಲಿ ಒಂದು ಮಾರ್ಗವನ್ನು ತೆರೆಯುತ್ತಾರೆ ಎಂದು ನಾವು ನಂಬಿದರೆ, ನಾವು ಖಂಡಿತವಾಗಿಯೂ ಯಶಸ್ವಿಯಾಗುತ್ತೇವೆ.

 

ಐಥಿಯೋಪಿಯಾದ ಜೆರಹ ಹತ್ತು ಲಕ್ಷ ಸೈನಿಕರು ಮತ್ತು ಮುನ್ನೂರು ರಥಗಳ ಸೈನ್ಯದೊಂದಿಗೆ ಹೊರಬಂದು ಮಾರೇಷದಲ್ಲಿ ಪಾಳೆಯ ಹೂಡಿದಾಗ, ಅವನು "ದೇವರಾದ ಕರ್ತನನ್ನು ಪ್ರಾರ್ಥಿಸಿ, 'ಓ ಕರ್ತನೇ, ಬಲವುಳ್ಳವರಿಗೂ ಬಲವಿಲ್ಲದವರಿಗೂ ಸಹಾಯ ಮಾಡುವುದು ನಿಮಗೆ ಸುಲಭವಾದ ಕಾರ್ಯ" ಎಂದು ಕರ್ತನ ಬಳಿ ಮೊರೆಯಿಟ್ಟು ಸಹಾಯ ಪಡೆದು ಐಥಿಯೋಪಿಯಾ ಮಹಾ ಸೈನ್ಯವನ್ನು ಸೋಲಿಸಿದ ಆಸನು, ಬಾಷ ಎಂಬ ಇಸ್ರಾಯೇಲಿನ ರಾಜ ತನಗೆ (ಯೆಹೂದಕ್ಕೆ) ವಿರುದ್ಧವಾಗಿ ಬಂದಾಗ ದೇವರ ಸಲಹೆಯನ್ನು ತಾಳ್ಮೆಯಿಂದ ಕೇಳಿ ಅದರ ಪ್ರಕಾರ ವರ್ತಿಸದೇ, ಬದಲಾಗಿ ಅವನು ಭಯಭೀತನಾಗಿ ಕರ್ತನ ಆಲಯದ ನಿಧಿಯಿಂದ ಚಿನ್ನ ಮತ್ತು ಬೆಳ್ಳಿಯನ್ನು ತೆಗೆದುಕೊಂಡು ಸಿರಿಯಾದ ರಾಜ ಬೆನ್-ಹದದನಿಗೆ ಕೊಟ್ಟು ಅವನ ಸಹಾಯವನ್ನು ಕೇಳಿದನು. ಪರಿಣಾಮವಾಗಿ, ದೇವರು ಅವನನ್ನು ಕೈಬಿಟ್ಟರು. ಅನೇಕ ಕಷ್ಟಗಳನ್ನು ಅನುಭವಿಸಿದನು.

 

"ಈ ವಿಷಯದಲ್ಲಿ ನೀನು ಮೂರ್ಖನಾಗಿದ್ದೀಯ" ಎಂದು ಜ್ಞಾನದರ್ಶಕನಾದ ಹನಾನಿ ಆಸನನ್ನು ಎಚ್ಚರಿಸಿದನು. ಅವನು ಅವಸರಪಡದೆ ದೇವರನ್ನು ಹುಡುಕಿದ್ದರೆ, ಐಥಿಯೋಪಿಯ ಸೈನ್ಯದಿಂದ ಅವನನ್ನು ರಕ್ಷಿಸಿದ ದೇವರು ಅವನನ್ನು ಬಾಷನಿಂದಲೂ ರಕ್ಷಿಸಿ, ದೇವರಿಗೆ ಪ್ರಿಯವಾದ ರಾಜ ಎಂಬ ಉನ್ನತವಾದ ಸ್ಥಾನವನ್ನು ಪಡೆಯುತ್ತಿದ್ದನು. ನಾವು ಸಹ ದೇವರ ಮಗು ಎಂಬ ಉನ್ನತ ಸ್ಥಾನವನ್ನು ಕಳೆದುಕೊಳ್ಳದೆ ಎಚ್ಚರಿಕೆಯಾಗಿರಲು ಕರ್ತನು ನಮಗೆ ಕೃಪೆ ನೀಡಲಿ! 

- Mrs. ಜಾಸ್ಮಿನ್ ಪಾಲ್

 

ಪ್ರಾರ್ಥನಾ ಅಂಶ:

ಎಲ್ಲಾ ಜಿಲ್ಲೆಗಳಲ್ಲಿ ಯುವ ಶಿಬಿರಗಳನ್ನು ನಡೆಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş matbet giriş sahabet onwin bets10 bets10 giriş bets10 güncel giriş betcio atlasbet casibom meritking perabet casibom holiganbet galabet casibom padişahbet padişahbet giriş grandpashabet jojobet jojobet cratosroyalbet grandpashabet palacebet sonbahis jojobet grandpashabet betpuan betsalvador matbet meritking perabet perabet giriş instagram ban service betsilin betsilin giris pashagaming pashagaming giris gorabet gorabet giris kralbet holiganbet