Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 28.06.2026
Share:

By Village Missionary Movement

Sunday, 28-Jun-2026

ಧೈನಂದಿನ ಧ್ಯಾನ(Kannada) – 28.06.2026

 

ಯೇಸುವನ್ನು ಸಂತೋಷಪಡಿಸು

 

"ಮಗನೇ, ಜ್ಞಾನವನ್ನು ಪಡೆದುಕೊಂಡು ನನ್ನ ಮನಸ್ಸನ್ನು ಸಂತೋಷಪಡಿಸು; ಹಾಗಾದರೆ, ನನ್ನನ್ನು ದೂರುವವನಿಗೆ ನಾನು ಉತ್ತರ ಕೊಡಲಾಗುವದು." - ಜ್ಞಾನೋಕ್ತಿ 27:11

 

ಗಡ... ಗಡ...ಎಂದು ಕುದುರೆಗಳು ಓಡುವ ಸದ್ದು, ಜನರ ಗದ್ದಲ, ಸ್ತೋತ್ರಗಳ ಮಧುರ ಸಂಗೀತ, ವರ್ಣರಂಜಿತ ಹೂಮಾಲೆಗಳು, ದ್ವಾರಗಳನ್ನು ಕಾಯುವ ಕಾವಲುಗಾರರು, ಅರಮನೆಯೇ ಜಿಗ ಜಿಗ ಎಂದು ಮಿಂಚುತ್ತಿತ್ತು. ಅದು ಎಲ್ಲಿ ಅಂತ ತಾನೇ ಕೇಳ್ತಾ ಇದೀರ, ಅದುವೇ ಅರಸನಾದ ಹೆರೋದನ ಅರಮನೆ.

 

ಅಂದು ಅರಸನಾದ ಹೆರೋದನಿಗೆ ಹುಟ್ಟುಹಬ್ಬವಾಗಿದ್ದರಿಂದ, ಅನೇಕ ಗಣ್ಯರು ಮತ್ತು ಪ್ರಮುಖ ವಿಐಪಿಗಳು ಅವರೊಂದಿಗೆ ಔತಣಕೂಟದಲ್ಲಿ ಕುಳಿತಿದ್ದರು, ಒಬ್ಬ ಪುಟ್ಟ ಹುಡುಗಿ ಪ್ರಕಾಶಮಾನವಾದ ಬಟ್ಟೆ ಮತ್ತು ಆಭರಣಗಳೊಂದಿಗೆ ಅಲಂಕರಿಸಿಕೊಂಡು ಕಾಲುಗೆಜ್ಜೆ ಹಾಕಿಕೊಂಡು ಸುಂದರವಾಗಿ ನೃತ್ಯ ಮಾಡಲು ಬಂದಳು. ಆ ಪುಟ್ಟ ಹುಡುಗಿಯ ನೃತ್ಯವು ಎಲ್ಲರನ್ನೂ ಆಕರ್ಷಿಸಿತು. ಎಲ್ಲರೂ ಅವಳ ನೃತ್ಯದಿಂದ ಆಶ್ಚರ್ಯಚಕಿತರಾದರು ಮತ್ತು ಅವಳನ್ನು ಹೊಗಳಿದರು. ಅರಸನು ಸಂತೋಷಗೊಂಡು ಅವಳ ಬಳಿ ನಿನಗೆ ಏನು ಉಡುಗೊರೆ ಬೇಕು ಎಂದು ಕೇಳಿದರು. ನೀನು ನನ್ನಿಂದ ಏನು ಕೇಳಿದರೂ, ನಾನು ನಿನಗೆ ಕೊಡುತ್ತೇನೆ. ನನ್ನ ರಾಜ್ಯದಲ್ಲಿ ಅರ್ಧ ಬೇಕಾದರೂ ಕೊಡುತ್ತೇನೆ ಎಂದರು.

 

ಅದನ್ನು ಕೇಳಿದ ಪುಟ್ಟ ಹುಡುಗಿ ತನ್ನ ತಾಯಿಯ ಬಳಿಗೆ ಓಡಿ ಹೋಗಿ ಏನು ಉಡುಗೊರೆ ಕೇಳಬೇಕೆಂದು ಕೇಳಿದಳು. ತಕ್ಷಣ ಅವಳ ತಾಯಿ, "ಸ್ನಾನಿಕನಾದ ಯೋಹಾನನ ತಲೆಯನ್ನು ಕೇಳಿಕೋ" ಎಂದಳು. ಆ ಪುಟ್ಟ ಹುಡುಗಿ ಕೂಡ ತನ್ನ ತಾಯಿಯ ಬಳಿ ಇಂತಹ ವಿಶೇಷ ದಿನದಂದು ಯಾಕೆ ಕೊಲೆ ಮಾಡಲು ಹೇಳುತ್ತಿದ್ದೀರ. ಅದು ದೇವರಿಗೆ ಇಷ್ಟವಿಲ್ಲವಲ್ಲಾ ಎಂದೆಲ್ಲಾ ಏನೂ ಹೇಳದೆ, ತನ್ನ ತಾಯಿ ಹೇಳಿದಂತೆಯೇ ರಾಜನ ಬಳಿಗೆ ಹೋಗಿ ಆ ಸೇವಕನ ತಲೆಯನ್ನು ಕೇಳಿದಳು. ರಾಜನು ಸಹ ಬೇರೆ ದಾರಿಯಿಲ್ಲದೇ ಅವಳು ಕೇಳಿದಂತೆಯೇ ತಲೆಯನ್ನು ಕತ್ತರಿಸಿ ತರುವಂತೆ ಹೇಳಿ ಅವಳಿಗೆ ಕೊಟ್ಟರು. ಸಂತೋಷವಾಗಿದ್ದ ರಾಜನ ಹೃದಯವು ದುಃಖಗೊಂಡಿತು. ಅಲ್ಲಿ ಬಂದಿದ್ದ ಎಲ್ಲರನ್ನೂ ಸಂತೋಷಪಡಿಸಿದ ಹುಡುಗಿಗೆ ದೇವರನ್ನು ಹೇಗೆ ಮೆಚ್ಚಿಸಬೇಕೆಂದು ಗೊತ್ತಾಗಲಿಲ್ಲ.

 

ತಮ್ಮ ತಂಗಿ, ನಿನಗಿರುವ ಪ್ರತಿಭೆ ಮತ್ತು ಸಾಮರ್ಥ್ಯಗಳಿಂದ ನೀವು ಯಾರನ್ನು ಸಂತೋಷಪಡಿಸುತ್ತಿದ್ದೀರ? ಯೇಸುವನ್ನಾ? ಅಥವಾ ಲೋಕವನ್ನಾ? ಯೋಚಿಸಿ ನೋಡಿ.

- Mrs. ಸಾರಾಳ್ ಸುಭಾಷ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş matbet giriş sahabet onwin bets10 bets10 giriş bets10 güncel giriş betcio atlasbet casibom meritking perabet casibom holiganbet galabet casibom padişahbet padişahbet giriş grandpashabet jojobet jojobet cratosroyalbet grandpashabet palacebet sonbahis jojobet grandpashabet betpuan betsalvador matbet meritking perabet perabet giriş instagram ban service betsilin betsilin giris pashagaming pashagaming giris gorabet gorabet giris kralbet holiganbet