Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 29.06.2026
Share:

By Village Missionary Movement

Monday, 29-Jun-2026

ಧೈನಂದಿನ ಧ್ಯಾನ(Kannada) – 29.06.2026

 

ದೇವರಾ? ಆಶೀರ್ವಾದವಾ?

 

“ಆತನು... ನನ್ನನ್ನು ಶೋಧಿಸಿದಾಗ ನಾನು ಬಂಗಾರದ ಹಾಗೆ ಹೊರಗೆ ಬರುವೆನು" - ಯೋಬ 23:10

 

ಸೇವೆಯಲ್ಲಿ ಬಲವಾಗಿ ಹೊಳೆಯುವ ಒಬ್ಬ ಸಹೋದರಿ ಪುಸ್ತಕದಲ್ಲಿ ತನ್ನ ಸಾಕ್ಷಿಯನ್ನು ಬರೆದಿದ್ದರು. ತನ್ನ ಸೇವೆಯ ಆರಂಭಿಕ ದಿನಗಳಲ್ಲಿ, ಒಂದು ದಿನ ಅವರು ಕರ್ತನ ಧ್ವನಿಯನ್ನು ಸ್ಪಷ್ಟವಾಗಿ ಕೇಳಿದರು, “ನನ್ನ ಮಗಳೇ, ನೀನು ಪ್ರೀತಿಸುವ ವ್ಯಕ್ತಿಯನ್ನು ಬಿಟ್ಟುಬಿಡು. ನಾನು ನಿನ್ನನ್ನು ಬಳಸಲು ಬಯಸುತ್ತೇನೆ” ಎಂದು. ಸಹೋದರಿಯ ಹೃದಯವು ತನ್ನ ಜೀವವನ್ನು ಕೇಳುತ್ತಿರುವಂತೆ ಮುರಿದುಹೋಯಿತು. ಆದಾಗ್ಯೂ, ನನ್ನನ್ನು ಸೃಷ್ಟಿಸಿದ ಮತ್ತು ನನ್ನನ್ನು ಪ್ರೀತಿಸುವ ದೇವರು ನನಗೆ ಎಂದಿಗೂ ಹಾನಿ ಮಾಡುವುದಿಲ್ಲ ಎಂಬ ಪೂರ್ಣ ವಿಶ್ವಾಸದಿಂದ, ಅವರು ಆ ವ್ಯಕ್ತಿಯನ್ನು ಬಿಟ್ಟು ದೂರವಾಗಲು ಪ್ರಾರಂಭಿಸಿದರು. ಕೆಲವೇ ದಿನಗಳಲ್ಲಿ, ಅನೇಕರಿಗೆ ಆಶೀರ್ವಾದವಾಗಿಯೂಬಲವಾಗಿಯೂ ಉಪಯೋಗಿಸಲ್ಪಟ್ಟರು.

 

ಸತ್ಯವೇದದಲ್ಲಿ, ದೇವರು ಅಬ್ರಹಾಮನನ್ನು ಶೋಧಿಸಲು ತನ್ನ ಮಗನೂ, ಏಕಸುತನೂ ಪ್ರೀತಿಯ ಮಗನೂ ಆದ ಇಸಾಕನನ್ನು ದಹನಬಲಿ ಅರ್ಪಿಸಲು ಹೇಳಿದರು. ತನ್ನ ಸಂತೋಷವಾಗಿದ್ದ ಇಸಾಕನನ್ನು ಯಜ್ಞವೇದಿಯ ಮೇಲೆ ದೇವರಿಗೆ ದಹನಬಲಿಯನ್ನು ಅರ್ಪಿಸಲು ಪ್ರಯತ್ನಿಸಿದರು. ಅದರ ಬಗ್ಗೆ ಸಾರಳಿಗೆ ಹೇಳಲಿಲ್ಲ. ಮೋರಿಯಾ ಬೆಟ್ಟಕ್ಕೆ ತನ್ನೊಂದಿಗೆ ಬಂದಿದ್ದ ಇಬ್ಬರು ಸೇವಕರು ಕೂಡ ತನ್ನನ್ನು ತಡೆಯಬಾರದು ಎಂಬುದಕ್ಕಾಗಿ ದಾರಿಯಲ್ಲೇ ಅವರನ್ನು ನಿಲ್ಲಿಸಿ ಬಿಟ್ಟರು. ದೇವರಿಗೂ ತನಗೂ ಇರುವ ಐಕ್ಯತೆಯಲ್ಲಿ ಯಾವ ಸಂಬಂಧವೂ ಅಬ್ರಹಾಮನಿಗೆ ಅಡ್ಡಿಯಾಗಿರಲಿಲ್ಲ. ದೇವರ ಮೇಲಿನ ಪ್ರೀತಿಯಿಂದಲೂ, ನಂಬಿಕೆಯಿಂದಲೂ ಇಸಾಕನನ್ನು ಬಲಿಕೊಡಲು ಪ್ರಯತ್ನಿಸಿದಾಗ, ಕರ್ತನ ದೂತನು, “ನಿನ್ನ ಹುಡುಗನ ಮೇಲೆ ಕೈಹಾಕಬೇಡ, ಅವನಿಗೆ ಏನೂ ಮಾಡಬೇಡ. ನೀನು ನಿನ್ನ ಒಬ್ಬನೇ ಮಗನನ್ನು ಸಮರ್ಪಿಸುವದಕ್ಕೆ ಹಿಂದೆಗೆಯದೆ ಹೋದದ್ದರಿಂದ ನಾನು ನಿನ್ನನ್ನು ಆಶೀರ್ವದಿಸೇ ಆಶೀರ್ವದಿಸುವೆನು; ನಿನ್ನ ಸಂತತಿಯನ್ನು ಹೆಚ್ಚಿಸೇ ಹೆಚ್ಚಿಸುವೆನು; ಅದನ್ನು ಆಕಾಶದ ನಕ್ಷತ್ರಗಳಂತೆಯೂ ಸಮುದ್ರತೀರದಲ್ಲಿರುವ ಉಸುಬಿನಂತೆಯೂ ಅಸಂಖ್ಯವಾಗಿ ಮಾಡುವೆನು ಎಂದರು. ಅಬ್ರಹಾಮನು ದೇವರ ಮಾತಿಗೆ ವಿಧೇಯನಾದದ್ದರಿಂದ "ಭೂವಿುಯ ಎಲ್ಲಾ ಜನಾಂಗಗಳಿಗೂ ನಿನ್ನ ಸಂತತಿಯ ಮೂಲಕ ಆಶೀರ್ವಾದವುಂಟಾಗುವದು" ಎಂಬ ವಾಗ್ದಾನವನ್ನು ಪಡೆದುಕೊಂಡರು.  

 

ಹೌದು, ಪ್ರಿಯರೇ, ದೇವರು ನಮ್ಮನ್ನು ಶೋಧಿಸುವುದು, ನಮ್ಮನ್ನು ವಿಶೇಷ ರೀತಿಯಲ್ಲಿ ಗುರುತಿಸಲು. ಇಂದು ನಮ್ಮ ಹೃದಯವು ಯಾವುದನ್ನು ಹಿಡಿದುಕೊಳ್ಳುತ್ತಿದೆ? ದೇವರನ್ನಾ? ಅಥವಾ ಆತನು ನಮಗೆ ನೀಡಿರುವ ಆಶೀರ್ವಾದವನ್ನಾ? ನಾವು ಯಾವುದರ ಕಡೆಗೆ ಪ್ರಯಾಣಿಸುತ್ತಿದ್ದೇವೆ? ದೇವರ ಮಹಿಮೆಗಾಗಿಯಾ? ಲೌಕಿಕ ಉನ್ನತಿಗಾಗಿಯಾ? ಸಾಮಾನ್ಯ ಮನುಷ್ಯನಾಗಿದ್ದ ಅಬ್ರಹಾಮನು, ನಂಬಿಕೆಯ ತಂದೆಯಾಗಿ ತಲೆಮಾರುಗಳವರೆಗೂ ಮಾತನಾಡಲ್ಪಡುತ್ತಿದ್ದಾರೆ. ದೇವರು ನಮಗೆ ಹೇಳುವ ವಿಷಯಗಳನ್ನು ಬಿಟ್ಟು ದೂರ ಹೋದರೆ, ಆತನು ಖಂಡಿತವಾಗಿಯೂ ನಮ್ಮ ಹೆಸರನ್ನು ಪ್ರಖ್ಯಾತಿಗೆ ತರುತ್ತಾರೆ.

- G. ಎಸ್ತೇರ್ ಸೆಲ್ವಿ

 

ಪ್ರಾರ್ಥನಾ ಅಂಶ:

ನಮ್ಮ ಯುವ ಶಿಬಿರದಲ್ಲಿ ಭಾಗವಹಿಸಿದ ಯೌವನಸ್ಥರು ಪರಿಶುದ್ಧವಾಗಿ ಜೀವಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş matbet giriş sahabet onwin bets10 bets10 giriş bets10 güncel giriş betcio atlasbet casibom meritking perabet casibom holiganbet galabet casibom padişahbet padişahbet giriş grandpashabet jojobet jojobet cratosroyalbet grandpashabet palacebet sonbahis jojobet grandpashabet betpuan betsalvador matbet meritking perabet perabet giriş instagram ban service betsilin betsilin giris pashagaming pashagaming giris gorabet gorabet giris kralbet holiganbet