Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 20.07.2021 (Bible Characters Special)
Share:

By Village Missionary Movement

Tuesday, 20-Jul-2021

ಧೈನಂದಿನ ಧ್ಯಾನ(Kannada) – 20.07.2021 (Bible Characters Special)

 

"...ನಿಂಷಿಯ ಮಗನಾದ ಯೇಹುವು....(ರಥವನ್ನು) ... ಹುಚ್ಚುತನವಾಗಿ ಓಡಿಸುತ್ತಾನೆ..." - 2 ಅರಸು 9:20

 

ದೇವರು ತನ್ನ ಹೃದಯದ ವೈರಾಗ್ಯವನ್ನು ನೆರವೇರಿಸಲು ಕೆಲ ನಿರ್ದಿಷ್ಟ ಮನುಷ್ಯರನ್ನು ತಮ್ಮ ಎಣ್ಣೆ ಪಾತ್ರೆಯಿಂದ ಅಭಿಷೇಕಿಸಿ ಅವರನ್ನು ವಿಶೇಷಪಡಿಸಿ ತಮ್ಮ ಚಿತ್ತವನ್ನು ಅವರ ಮುಖಾಂತರ ನೆರವೇರಿಸುತ್ತಿದ್ದಾರೆ. ಆ ಸಾಲಿನಲ್ಲಿ ಯೇಹುವನ್ನು ದೇವರು ಅಹಾಬನ ಮನೆಯನ್ನು ನಾಶಮಾಡಲು ಆರಿಸಿಕೊಳ್ಳುತ್ತಾರೆ. ಯೇಹುವನ್ನು ಆರಿಸಿಕೊಂಡು ಅವರ ಮುಖಾಂತರ ಅಹಾಬನನ್ನು ನಾಶಮಾಡಬೇಕಾದ ಕಾರಣವೇನು? .....ಎಲೀಷ ಪ್ರವಾದಿಯ ದಿನಗಳಲ್ಲಿದ್ದ ಅಹಾಬನೆಂಬ ಅರಸನು ನಾಬೋತನ ದ್ರಾಕ್ಷೇ ತೋಟವನ್ನು ತೆಗೆದುಕೊಂಡದ್ದರ ನಿಮಿತ್ತವಾಗಿ ಪ್ರವಾದಿಯು ಅಹಾಬನ ಮನೆಯವರ ಮೇಲೆ ಶಾಪ ಹಾಕಿದರು. ಆಗ ಯೇಹುವು ಅರಸನಾದ ಯೋರಾಮನ ಕೆಳಗೆ ಒಬ್ಬ ಸೇನಾಪತಿಯಾಗಿ ಇದ್ದನು.

 

ದೇವರು ಅಹಾಬನ ಮನೆಯವರ ರಕ್ತಾಪರಾಧವನ್ನು ಅವರ ಹೆಂಡತಿಯಾದ ಈಜೆಬೆಲಳ ಕೈಯಲ್ಲಿ ತೆಗೆದುಕೊಳ್ಳುವಂತೆ ಯೇಹುವನ್ನು ಆರಿಸಿಕೊಂಡರು. ಯೇಹುವು ಕರ್ತನ ಮೇಲಿಟ್ಟಿದ್ದ ವೈರಾಗ್ಯದಿಂದ ತನಗೆ ಕೊಡಲ್ಪಟ್ಟ ಕಾರ್ಯವನ್ನು ಶೀಘ್ರವಾಗಿ ಮಾಡಿ ಮುಗಿಸಿದರು. ಈಜೆಬೆಲಳನ್ನು, ಅಹಾಬನ ಪೂರ್ತಿ ಕುಟುಂಬವನ್ನು ನಾಶಮಾಡಲು ರಥವನ್ನು "ಹುಚ್ಚುತನವಾಗಿ ಓಡಿಸಿದನು" ಎಂದು ಸತ್ಯವೇದವು ಹೇಳುತ್ತದೆ. ನಾವು ಕೂಡ ಯೇಹುವಿನ ಹಾಗೆ ಕರ್ತನು ನಮಗೆ ನೇಮಿಸಿರುವ ಕೆಲಸವನ್ನು ಶೀಘ್ರವಾಗಿ ನೆರವೇರಿಸಲು ನಮ್ಮ ಆತ್ಮೀಯ ರಥವನ್ನು ಹುಚ್ಚುತನವಾಗಿ ಓಡಿಸಬೇಕು.

 

ಹೇರಳವಾದ ವ್ಯಭಿಚಾರ ಮಾಂತ್ರಿಕ ಕ್ರಿಯೆಗಳು ತುಂಬಿಕೊಂಡಿದ್ದ ಈಜೆಬೆಲಳ ಶೃಂಗಾರದಲ್ಲಿ ತಾನು ಸಿಕ್ಕಿಕೊಳ್ಳದೆ ಕರ್ತನ ಆಜ್ಞೆಯ ಪ್ರಕಾರವೇ, ಈಜೆಬೆಲಳನ್ನು ಹೊಲದ ಮೇಲೆ ಹಾಕುವ ಗೊಬ್ಬರದ ಹಾಗೆ ಮಾಡಿಬಿಟ್ಟನು. ಸಾಯಲಿದ್ದೇವೆ ಎಂದು ತಿಳಿದೂ ತನ್ನ ಮುಖಕ್ಕೆ ಬಣ್ಣ ಹಚ್ಚಿ ಕೊಂಡ ಈಜೆಬೆಲಳ ಹಾಗೆ ಲೋಕದಲ್ಲಿ ಮುಳುಗಿಹೋದವರಾಗಿ ನಾವಿರುವುದು ಬೇಡ.(2 ಅರಸು. 9:30) ಹೌದು, ಯೇಹುವು ಲೋಕದ ಕಾರ್ಯಗಳಲ್ಲಿ ಮೂರ್ಛೆ ಹೋಗದೆ ದೇವರ ಕಾರ್ಯವನ್ನು ತೀವ್ರವಾಗಿ ನೆರವೇರಿಸಿದರು.

 

ಪ್ರಿಯರೇ! ಅಂದು ಸೌಲನ ಬಳಿ ದೇವರು ಅಮಾಲೇಕ್ಯರ ಎಲ್ಲಾ ವಸ್ತುಗಳನ್ನು ನಾಶ ಮಾಡು ಎಂದು ಹೇಳಿದಾಗ ಸೌಲನು ವಿಧೇಯನಾಗದೆ ಉತ್ತಮವಾದದ್ದನ್ನೆಲ್ಲಾ ಹಾಗೇ ಉಳಿಸಿ ಬಿಟ್ಟಿದ್ದು ದೇವರಿಗೆ ಕೋಪವನ್ನುಂಟುಮಾಡಿತು. ಆದರೆ ಯೇಹು-ವೋ ದೇವರು ನಾಶಮಾಡಲು ಆಜ್ಞಾಪಿಸಿದ್ದನ್ನು ಅತಿವೇಗವಾಗಿ ಮಾಡಿ ಮುಗಿಸಿದರು. ನಾವು ಸೌಲನ ಹಾಗಲ್ಲ, ಯೇಹುವಿನ ಹಾಗೆ ದೇವರ ಮಾತಿಗೆ ವಿಧೇಯರಾಗೋಣ. ಕೆಲಸದ ಸ್ಥಳದಲ್ಲಾಗಲಿ, ವೈಯಕ್ತಿಕ ಜೀವನದಲ್ಲಾಗಲಿ ದೇವರು ಬಿಟ್ಟುಬಿಡಬೇಕೆಂದು ಪ್ರೇರೇಪಿಸುವುದನ್ನು ತೀವ್ರವಾಗಿ ಮಾಡಿ ಮುಗಿಸೋಣ. ದೇವರು ಇದನ್ನೇ ನಮ್ಮ ಬಳಿ ಎದುರು ನೋಡುತ್ತಿದ್ದಾರೆ.

- K. ಬೆಂಜಮಿನ್

 

ಪ್ರಾರ್ಥನಾ ಅಂಶ:-

ನಂಬಿಕೈ T.V. ಕಾರ್ಯಕ್ರಮಗಳನ್ನು ನೋಡುವ ಅನ್ಯ ಜನರು ಯೇಸುವಿನ ಪ್ರೀತಿಯನ್ನು ತಿಳಿದುಕೊಳ್ಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking perabet casibom holiganbet galabet casibom perabet perabet giriş padişahbet padişahbet giriş grandpashabet kalitebet kalitebet giris betsmove betsmove giris gonebet gonebet giris betnano betnano giriş jojobet jojobet casinomilyon jojobet palacebet sonbahis tambet grandpashabet betgit mercurecasino matbet