Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 01.08.2021 (Kids Special)
Share:

By Village Missionary Movement

Sunday, 01-Aug-2021

ಧೈನಂದಿನ ಧ್ಯಾನ(Kannada) – 01.08.2021 (Kids Special)

 

ಸತ್ಯವೇ

"ನಿನಗೆ... ಪಾಪಮಾಡದಂತೆ ನಿನ್ನ ನುಡಿಗಳನ್ನು ನನ್ನ ಹೃದಯದಲ್ಲಿಟ್ಟುಕೊಂಡಿದ್ದೇನೆ." - ಕೀರ್ತನೆಗಳು 119:11

 

ಹಲೋ ಪುಟಾಣಿಗಳೇ! ಚೆನ್ನಾಗಿದ್ದೀರಾ? ಸಾಮಾನ್ಯವಾಗಿ ಪ್ರತಿವರ್ಷವೂ ಮೇ ತಿಂಗಳು VBS- ಗೆ ಹೋಗಿ ಜಾಲಿಯಾಗಿ Enjoy ಮಾಡ್ತಿದ್ರಿ. ಆದರೆ ಈಗ Online VBS! ಅದರಲ್ಲೂ ಬಹಳ ಕಾರ್ಯಗಳನ್ನು ಕಲಿತುಕೊಂಡಿರುತ್ತೀರ, ಹೌದು ತಾನೆ. ಕಲಿತುಕೊಂಡದ್ದನ್ನು ಪ್ರತಿದಿನವೂ ನಿಮ್ಮ ಜೀವನದಲ್ಲಿ ಪಾಲಿಸಬೇಕು ಸರೀನಾ

 

ತಾತ, ಅಜ್ಜಿ, ಅಪ್ಪ, ಅಮ್ಮ, ಮಕ್ಕಳು ಇರುವ ದೊಡ್ಡ ಕುಟುಂಬದಲ್ಲಿ ಜೋ ಎಂಬ ಪುಟ್ಟ ತಮ್ಮ ಇದ್ದನು. ಯಾವಾಗ್ಲೂ ಚುರು-ಚುರುಕಾಗಿ ಆಟವಾಡುತ್ತಿದ್ದ. ಅಲ್ಲಿಗೂ ಇಲ್ಲಿಗೂ,  ಓಡುತ್ತಲೇ ಇರುತ್ತಾನೆ. ಅವರ ಮನೆಯಲ್ಲಿರುವ ತಾತ ಸತ್ಯವೇದವೊಂದನ್ನು ಓದುತ್ತಲೇ ಇರುತ್ತಾರೆ. ಇದನ್ನು ನೋಡಿದ ಜೋ, "ಏನು ತಾತ ತುಂಬಾ ಹೊತ್ತಿನಿಂದ ಈ ಪುಸ್ತಕವನ್ನು ಓದುತ್ತಲೇ ಇದ್ದೀರಾ, ನಿಮಗೆ bore ಆಗ್ತಾ ಇಲ್ವಾ? Exam ಬರೆಯಲು ಹೋಗ್ತಿದ್ದೀರಾ? ಎಂದು ಪ್ರಶ್ನೆ ಮೇಲೆ ಪ್ರಶ್ನೆ ಕೇಳಿದ. "ಇಲ್ಲಪ್ಪಾ, ಈ Bible ಯೇಸಪ್ಪ ನಮಗೆ ಕೊಟ್ಟಿರುವ ನಿಧಿ. ಇದನ್ನು ಓದುವಾಗ ಯೇಸಪ್ಪ ನಮ್ಮ ಜೊತೆ ಮಾತಾಡುತ್ತಾರೆ. ತುಂಬಾ ಕಾರ್ಯಗಳನ್ನು ಕಲಿಸಿಕೊಡುತ್ತಾರೆ" ಎಂದು ಹೇಳಿದರು ತಾತ. ಹಾಗಾದ್ರೆ ನಾನು ಇದನ್ನು ಓದುತ್ತೇನೆ ಎಂದು ಜೋ ಕೇಳಿದ ಕೂಡಲೇ ತಾತ ಚಿಕ್ಕ ಬೈಬಲ್ ಒಂದನ್ನು ಕೊಟ್ಟ

 

ಜೋ ಪುಟಾಣಿ ಚೇರ್ ನಲ್ಲಿ ಕುಳಿತುಕೊಂಡು ಬೈಬಲ್ ಓದಲು ಪ್ರಾರಂಭಿಸಿದ. ಏನೂ ಅರ್ಥವಾಗಲಿಲ್ಲ. "ತಾತ, ತಾತ ನೀವು ತುಂಬಾ ವರ್ಷದಿಂದ ಈ ಬೈಬಲ್ ನ್ನು ಓದುತ್ತಿದ್ದೀರೋ ಬಾಯಿಪಾಠ ಆಗೋಯ್ತೋ" ಎಂದು ಕೇಳಿದ. "ಬಾಯಿಪಾಠ ಆಗಿಲ್ಲ ಅಂದ್ರೂ, ಯೇಸಪ್ಪ ನನ್ ಜೊತೆ ಮಾತಾಡೋದನ್ನು ಗ್ರಹಿಸಲು ಸಾಧ್ಯ. ಸರಿಯಾದ ಹಾದಿಯಲ್ಲಿ ನಡೆಯಲು, ತಪ್ಪು ಮಾಡದಂತೆ ನಮ್ಮನ್ನು ಕಾಪಾಡಿಕೊಳ್ಳಲು ಈ ಸತ್ಯವೇದ ಪುಸ್ತಕವು ತುಂಬಾ ಸಹಾಯಕಾರಿ ಯಾಗಿರುತ್ತದೆ" ಎಂದು ಹೇಳಿದರು ತಾತ. "ನನಗೇನು ಅರ್ಥಾನೇ ಆಗ್ತಿಲ್ಲ ತಾತ" ಎಂದು ಜೋ ಹೇಳಿದ. "ಒಲೆಯ ಇದ್ದಿಲನ್ನು ಹಾಕಿಡುವ ಬಿದಿರಿನ ಬುಟ್ಟಿಯನ್ನು ತೆಗೆದುಕೊಂಡುಹೋಗಿ ನಮ್ಮ ಮನೆಯ ಪಕ್ಕದಲ್ಲಿರುವ ಕೊಳದಲ್ಲಿ ನೀರು ತಂದು ಗಿಡಗಳಿಗೆಲ್ಲಾ ನೀರು ಹಾಕು ಜೋ" ಎಂದು ಹೇಳಿದರು ತಾತ. ಜೋ-ಕೂಡ ಬಿದಿರಿನ ಬುಟ್ಟಿಯನ್ನು ತೆಗೆದುಕೊಂಡು ಹೋದನು. ಅದು ಕೊಳೆಯಾಗಿ ಕಪ್ಪು ಬಣ್ಣದಲ್ಲಿತ್ತು. ನದಿಯಲ್ಲಿ ಹೋಗಿ ನೀರು ತುಂಬಿಸಿಕೊಂಡು ಒಂದು ಹೆಜ್ಜೆ ಹಾಕುವುದರಲ್ಲೇ, ಎಲ್ಲಾ ನೀರು ಪುಸ್ ಅಂತ ಕೆಳಗೆ ಹೊರಟೋಗ್ತಿತ್ತು. ಹೀಗೆ ನಾಲ್ಕು, ಐದು ಬಾರಿ ಪ್ರಯತ್ನ ಮಾಡಿದನು. ಬುಟ್ಟಿಯಲ್ಲಿ ನೀರು ನಿಲ್ಲಲಿಲ್ಲ. ತುಂಬಾ ಬೇಸರದಿಂದ ಬಂದು ತಾತನ ಬಳಿ ಹೇಳಿದನು. "ಜೋ, ಆ ಬುಟ್ಟಿಯನ್ನು ನೋಡು, ನೀರು ಅದರೊಳಗೆ ನಿಂತಿಲ್ಲ ಅಂದರು ಎಷ್ಟು ಶುದ್ಧವಾಗಿದೆ."  "ಹೌದು, ತಾತ ಕೊಳೆಯೆಲ್ಲಾ ಹೊರಟೋಯ್ತೆ!" ಹೀಗೆಯೇ ಸತ್ಯವೇದವನ್ನು ಓದುತ್ತಾ, ಓದುತ್ತಾ ಇದ್ದರೆ ನಮ್ಮ ಹೃದಯದಲ್ಲಿರುವ ಪಾಪದ ಕೊಳೆಯನ್ನು ತೊಳೆದು ಶುದ್ಧಿ ಮಾಡುತ್ತದೆ" ಎಂದು ತಾತ ಹೇಳಿದ್ದನ್ನು ಅರ್ಥಮಾಡಿಕೊಂಡು, ನಾನೂ ಇನ್ನುಮೇಲೆ ದಿನವೂ ಸತ್ಯವೇದವನ್ನು ಓದುತ್ತೇನೆ ಎಂದು ತೀರ್ಮನಿಸಿದನು ಜೋ

 

ಪ್ರೀತಿಯ ತಮ್ಮ, ತಂಗಿ. ಜೋ-ನ ಹಾಗೆ ನೀವು ಕೂಡ ಅರ್ಥಮಾಡಿಕೊಂಡಿದ್ದೀರ ಎಂದು ನೆನೆಸುತ್ತೇನೆ. ದಿನವೂ ಸತ್ಯವೇದವನ್ನು ಓದಿರಿ, ಪರಿಶುದ್ಧವಾಗಿ ಜೀವಿಸಿರಿ. Ok 

- sis.ದೆಬೋರಾಳ್ನಾ

 

*What

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ

 

www.vmm.org.

ಈಮೈಲ್:- reachvmm@gmail.co

Android App: https://play.google.com/store/apps/details?id=com.infobells.vmmorgi

       

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-62600

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482u1 nmin.sapp*..ರು.?

 ದಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking perabet casibom holiganbet galabet casibom perabet perabet giriş padişahbet padişahbet giriş grandpashabet kalitebet kalitebet giris betsmove betsmove giris gonebet gonebet giris betnano betnano giriş jojobet jojobet casinomilyon jojobet palacebet sonbahis tambet grandpashabet betgit mercurecasino matbet