By Village Missionary Movement
Thursday, 05-Aug-2021ಧೈನಂದಿನ ಧ್ಯಾನ(Kannada) – 05.08.2021
ಕಾಪಾಡಿಕೋ
"ನಿನ್ನ ಹೃದಯವನ್ನು ಬಹು ಜಾಗರೂಕತೆಯಿಂದ ಕಾಪಾಡಿಕೋ; ಅದರೊಳಗಿಂದ ಜೀವಧಾರೆಗಳು ಹೊರಡುವವು." - ಜ್ಞಾನೋಕ್ತಿಗಳು 4:23
ಅನೇಕ ವರ್ಷಗಳ ಮುಂಚೆ ಒಂದು ಕಿರುತೆರೆಯ ನಟ ಅಮೆರಿಕಾ ದೇಶಕ್ಕೆ ಹೋದರು. ಕೆಲ ತಿಂಗಳು ಅಲ್ಲೇ ಉಳಿದು ತನ್ನ ನಟನೆಯ ಪ್ರತಿಭೆಯನ್ನು ಹೊರಪಡಿಸಿದರು. ಬಹುಬೇಗನೆ ಅವರಿಗೆ ಹೆಸರು, ಹೊಗಳಿಕೆ, ಸಂಪಾದನೆ ಸಿಕ್ಕಿತು. ಹೆಚ್ಚುಕಡಿಮೆ ಒಂದು ಕೋಟಿ ರೂಪಾಯಿವರೆಗೂ ಸಂಪಾದಿಸಿ ಬಿಟ್ಟರು. ಈ ಹಣವನ್ನು ಭದ್ರವಾಗಿಡಬೇಕೆಂದು ನೆನೆಸಿ ಒಂದು ವಜ್ರವನ್ನು ತೆಗೆದುಕೊಂಡರು. ಆ ವಜ್ರವನ್ನು ತನ್ನ ಚೀಲದಲ್ಲಿ ಜಾಗರೂಕತೆಯಿಂದ ಇಟ್ಟುಕೊಂಡು ಹೋದರು . ವಿಮಾನವಿಲ್ಲದ ಆ ಕಾಲದಲ್ಲಿ ಹಡಗಿನಲ್ಲಿಯೇ ಪ್ರಯಾಣ ಮಾಡಲು ಸಾಧ್ಯ. ಭಾರತಕ್ಕೆ ಬರಲು ಹೆಚ್ಚು ಕಡಿಮೆ ಎರಡು ತಿಂಗಳಾದರೂ ಆಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಅವರು ಹಡಗಿನಲ್ಲಿ ಪ್ರಯಾಣ ಮಾಡುತ್ತಿರುವಾಗ ಅವರಿಗೆ ಒಂದು ಯೋಚನೆ ಬಂತು. ಈ ಹಡಗಿನಲ್ಲಿ 250 ಜನ ಪ್ರಯಾಣ ಮಾಡುತ್ತಿದ್ದಾರೆ. ಈಗ ಇವರ ಮಧ್ಯದಲ್ಲಿಯೂ ನಮ್ಮ ನಟನೆಯ ವಿದ್ಯೆಯನ್ನು ತೋರಿಸಿ ಹಣ ಸಂಪಾದಿಸಬಹುದು ಎಂದು ನೆನೆಸಿದರು.
ಪ್ರತಿದಿನವೂ ಸಂಜೆ ವೇಳೆಯಲ್ಲಿ ಜನರು ಟೈಮ್ ಪಾಸ್ ಗಾಗಿ ಹಡಗಿನ ಮೇಲ್ಭಾಗದಲ್ಲಿ ಕುಳಿತುಕೊಳ್ಳುತ್ತಿದ್ದರು. ಅವರ ಬಳಿ, " ನಾನು ನಿಮ್ಮ ಬಳಿ ನನ್ನ ನಟನೆಯ ಪ್ರತಿಭೆಯನ್ನು ತೋರಿಸಲಿದ್ದೇನೆ" ಎಂದು ಹೇಳಿ, ತನ್ನ ಬಳಿ ಇರುವ ವಜ್ರವನ್ನು ಕೈಗೆ ತೆಗೆದುಕೊಂಡರು. ಅದನ್ನು ಎಸೆದು ವಿದ್ಯೆಗಳನ್ನು ತೋರಿಸಲು ಪ್ರಾರಂಭಿಸಿದರು, ಈ ವಜ್ರವನ್ನು ನೋಡಿದವರು, "ಇದು ಸುಂದರವಾಗಿದೆ, ಚೆನ್ನಾಗಿ ಪ್ರಕಾಶಿಸುತ್ತಿದೆ" ಎಂದು ಹೇಳಿ ಹೊಗಳುತ್ತಿದ್ದರು. ಆಗ ಅವನು ಅದನ್ನು ಬಹಳ ಎತ್ತರಕ್ಕೆ ಎತ್ತಿ ಎಸೆದನು. ದಿಢೀರೆಂದು ಒಂದು ದೊಡ್ಡ ಗಾಳಿ ಬೀಸಿ, ಹಡಗು ಅಲುಗಾಡಲು ಪ್ರಾರಂಭಿಸಿತು. ವಜ್ರವನ್ನು ಹಿಡಿಯಲು ಪ್ರಯತ್ನಿಸಿದಾಗ ಆ ವಜ್ರವು ಹಡಗಿನಲ್ಲಿ ಬಿದ್ದುಹೋಯಿತು. ಚೆನ್ನಾಗಿ ನಗುತ್ತಿದ್ದ ಆ ನಟ ತನ್ನ ಕೋಣೆಗೆ ಹೋಗಿ ಸುರುಳಿ ಮಲಗಿದರು. ಏನು ಮಾಡುವುದೆಂದು ತಿಳಿಯಲಿಲ್ಲ, ಎಷ್ಟೋ ತಿಂಗಳ ದುಡಿಮೆಯ ಪ್ರಯೋಜನವನ್ನು ಕಳೆದುಕೊಂಡರು. ಸಂಸೋನನಿಗೆ ದೇವರು ಬಲವನ್ನು ಕೊಟ್ಟಿದ್ದರು. ಇಸ್ರಾಯೇಲ್ ಜನರನ್ನು ಆಳುವಂತಹ ಅಧಿಕಾರವನ್ನು ಕೊಟ್ಟಿದ್ದರು. ಅವನೋ ವ್ಯಭಿಚಾರಿಯ ಮಡಿಲಲ್ಲಿ ದೇವರು ಕೊಟ್ಟ ಬಲವನ್ನೆಲ್ಲಾ ಕಳೆದುಕೊಂಡನು. ಸತ್ಯವೇದವು ಹೀಗೆ ಹೇಳುತ್ತಿದೆ, "ಫಿಲಿಷ್ಟಿಯರು ಅವನನ್ನು ಹಿಡಿದು, ಅವನ ಕಣ್ಣುಗಳನ್ನು ಕಿತ್ತುಹಾಕಿ, ಅವನನ್ನು ಗಾಜಕ್ಕೆ ಒಯ್ದು, ಅವನಿಗೆ ಎರಡು ಕಬ್ಬಿಣದ ಬೇಡಿಗಳನ್ನು ಹಾಕಿ ಸೆರೆಮನೆಯಲ್ಲಿ ಬೀಸುವುದಕ್ಕೆ ಹಚ್ಚಿದರು ಎಂದು!
ಇಂದು ಅನೇಕರು ದೇವರು ಕೊಟ್ಟಿರುವ ಬಹು ಬೆಲೆಯುಳ್ಳ ರಕ್ಷಣೆಯನ್ನು ಅಲಕ್ಷ್ಯವಾಗಿ ನೆನೆಸಿ ಪಾಪದಲ್ಲಿ ಬಿದ್ದು ಹೋಗುತ್ತಿದ್ದಾರೆ. ರಕ್ಷಣೆ ನಮಗೆ ಹೇಗೆ ಸಿಕ್ಕಿತು? ಕರ್ತನಾದ ಯೇಸು ಕ್ರಿಸ್ತನು ನಮಗಾಗಿ ರಕ್ತ ಸುರಿಸಿ ಮರಣಹೊಂದಿದರ ನಿಮಿತ್ತವಾಗಿಯೇ! ರಕ್ಷಣೆ ಎಂಬುದು ಒಂದು ಬಹು ಬೆಲೆಯುಳ್ಳ ನಿಧಿ. ರಕ್ಷಣೆಯನ್ನು ಕಳೆದುಕೊಂಡರೆ ಪರಲೋಕವನ್ನೂ ಕಳೆದುಕೊಳ್ಳುತ್ತೇವೆ. ಸತ್ಯವೇದವು ಹೀಗೆ ಹೇಳುತ್ತಿದೆ, "ಅದಲ್ಲದೆ ಪರಲೋಕ ರಾಜ್ಯವು ಹೊಲದಲ್ಲಿ ಹೂಳಿಟ್ಟ ದ್ರವ್ಯಕ್ಕೆ ಹೋಲಿಕೆಯಾಗಿದೆ. ಒಬ್ಬನು ಅದನ್ನು ಕಂಡುಕೊಂಡು ಮುಚ್ಚಿಬಿಟ್ಟು ಅದರಿಂದಾದ ಸಂತೋಷದಿಂದ ತನ್ನ ಬದುಕನ್ನೆಲ್ಲಾ ಮಾರಿ ಆ ಹೊಲವನ್ನು ಕೊಂಡುಕೊಂಡನು." ಇಂದು ನಮ್ಮ ರಕ್ಷಣೆಯನ್ನು ಕಳೆದುಕೊಂಡು ನರಕಕ್ಕೆ ಹೋಗಿ ಬಿಡದಂತೆ ಎಚ್ಚರವಾಗಿರೋಣ. ಪರಲೋಕ ರಾಜ್ಯವನ್ನು ಸ್ವತಂತ್ರಿಸಿಕೊಳ್ಳೋಣ.
- P. V. ವಿಲಿಯಮ್ಸ್
ಪ್ರಾರ್ಥನಾ ಅಂಶ:-
ನಮ್ಮ ಸೇವೆಯನ್ನು ಪ್ರಾರ್ಥನೆಯಿಂದಲೂ, ಕಾಣಿಕೆಗಳಿಂದಲೂ ಪ್ರೋತ್ಸಾಹಿಸುತ್ತಿರುವ ಪಾಲುದಾರರ ಕುಟುಂಬಗಳನ್ನು ದೇವರು ಆಶೀರ್ವದಿಸುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482