Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 14.08.2021
Share:

By Village Missionary Movement

Saturday, 14-Aug-2021

ಧೈನಂದಿನ ಧ್ಯಾನ(Kannada) – 14.08.2021

 

ನೀವು ಆರಿಸಲ್ಪಟ್ಟವರು

 

"ನೀವು ನನ್ನನ್ನು ಆರಿಸಿ ತೆಗೆದುಕೊಂಡಿಲ್ಲ; ನಾನು ನಿಮ್ಮನ್ನು ಆರಿಸಿ ತೆಗೆದುಕೊಂಡೆನು..." - ಯೋಹಾನ 15:16

 

ದಮಸ್ಕುವಿಗೆ ಹೋಗುವ ದಾರಿಯಲ್ಲಿ ದೇವರು ಪೌಲನಿಗೆ ಕಾಣಿಸಿಕೊಂಡಾಗ, ಪೌಲನು ದೇವರ ಬಳಿ, "ನಾನು ಏನು ಮಾಡುವುದು ನಿಮ್ಮ ಚಿತ್ತವಾಗಿದೆ?" ಎಂದು ಕೇಳಿದರು. ದೇವರು ಅನನೀಯನ ಮೂಲಕ ತನ್ನ ಚಿತ್ತವನ್ನು ತಿಳಿಯಪಡಿಸಿದರು. ಇದರಿಂದ ನಾವು ಒಂದು ವಿಷಯವನ್ನು ತಿಳಿದುಕೊಳ್ಳಬಹುದು. ದೇವರು ತನ್ನ ಚಿತ್ತವನ್ನು ನಮ್ಮ ಮೂಲಕ ನೆರವೇರಿಸಬೇಕೆಂದೇ ನಮ್ಮನ್ನು ಆರಿಸಿಕೊಳ್ಳುತ್ತಾರೆ ಎಂಬುದನ್ನು ತಿಳಿದಿದ್ದೇವೆ ಹೀಗೆ ಆತನ ಚಿತ್ತವನ್ನು ನೆರವೇರಿಸಲು ದೇವರನ್ನು ತಿಳಿದುಕೊಂಡವರು ಈ ಕೆಳಗಿನ ಅನುಭವಗಳನ್ನು ಪಾಲಿಸಬೇಕಾಗಿದೆ.

 

1. ಪಾಡುಗಳು, ಹಿಂಸೆಗಳು, ಅವಮಾನಗಳು: ಬರಗಾಲದ ಸಮಯದಲ್ಲಿ ಇಸ್ರಾಯೇಲ್ಯರನ್ನು ಬಹು ಜನರೊಂದಿಗೆ ಕಾಪಾಡುವಂತಹ ದೇವರ ಚಿತ್ತವನ್ನು ನೆರವೇರಿಸುವುದಕ್ಕಾಗಿ ಆರಿಸಲ್ಪಟ್ಟ ಯೋಸೇಫನಿಗೆ ಸಹೋದರರ ಮೂಲಕ, ಪೋತಿಫರನ ಹೆಂಡತಿಯ ಮೂಲಕ ಬಂದ ಅವಮಾನಗಳು, ಪಾಡುಗಳು ಅನೇಕ! ಯೇಸುವನ್ನು ಈ ಲೋಕಕ್ಕೆ ಮನುಷ್ಯಕುಮಾರನಾಗಿ ಕಳುಹಿಸಲು ಆರಿಸಿಕೊಳ್ಳಲ್ಪಟ್ಟ ಮರಿಯಳು ಕೂಡ ಅನೇಕ ಅವಮಾನಗಳನ್ನು ಎದುರಿಸಿದಳು!

 

2. ಸುಮ್ಮನಿರಬೇಕಾದಂತಹ ಪರಿಸ್ಥಿತಿ: ಯೆಹೂದ್ಯ ಜನರನ್ನು ನಾಶನದಿಂದ ಬಿಡಿಸಲು ಆರಿಸಲ್ಪಟ್ಟ ಎಸ್ತೇರಳು, ರಾಣಿಯಾಗಿದ್ದರೂ ತನ್ನ ಸಾಕು ತಂದೆಯಾದ ಮೊರ್ದೆಕೈಗೆ ವಿಧೇಯಳಾಗಿರಬೇಕಾದಂತಹ ಪರಿಸ್ಥಿತಿಯಿತ್ತು.

 

3. ತ್ಯಾಗ ಮಾಡಬೇಕಾದ ಸ್ಥಿತಿ: ಅನ್ಯಜನರಿಗೂ, ರಾಜರಿಗೂ, ಮತ್ತು ಇಸ್ರಾಯೆಲ್ಯರಿಗೂ ಸುವಾರ್ತೆಯನ್ನು ಸಾರಲು ಆರಿಸಲ್ಪಟ್ಟ ಪೌಲನು, ತನ್ನ ಸ್ಥಾನಮಾನ, ಪ್ರಭಾವ ಮತ್ತು ಯೋಗಕ್ಷೇಮ ಎಲ್ಲವನ್ನೂ ತ್ಯಾಗ ಮಾಡಬೇಕಾಗಿತ್ತು.

 

ಪ್ರಿಯರೇ! ನೀವು ಮೇಲಿನ ಅನುಭವಗಳನ್ನು ಹೊಂದಿದ್ದರೆ, ನೀವು ಒಂದು ವಿಶೇಷ ಉದ್ದೇಶಕ್ಕಾಗಿ ದೇವರಿಂದ ಆರಿಸಲ್ಪಟ್ಟವರಾಗಿದ್ದೀರ. ಆದ್ದರಿಂದ ನಿಮಗೆ ನೇಮಿಸಲ್ಪಟ್ಟ ಓಟ ಪಂದ್ಯದಲ್ಲಿ ತಾಳ್ಮೆಯಿಂದ, ನಂಬಿಕೆಯೊಂದಿಗೆ, ಉತ್ಸಾಹದಿಂದ ಓಡಿ, ದೇವರು ನಿಮ್ಮನ್ನು ಆರಿಸಿಕೊಂಡ ಉದ್ದೇಶವನ್ನು ನೆರವೇರಿಸಿರಿ.

- Mrs. ಗೀತಾ ರಿಚರ್ಡ್

 

ಪ್ರಾರ್ಥನಾ ಅಂಶ:

ಪ್ರತಿ ಜಿಲ್ಲೆಯಲ್ಲೂ ಯೌವನಸ್ಥರಿಗಾಗಿ ವಿಶೇಷ ಶಿಬಿರಗಳನ್ನು ನಡೆಸಲು ದೇವರು ಕೃಪೆ ತೋರಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al superbetin pashagaming jojobet jojobet giriş holiganbet instagram unban service instagram unban service