Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 19.08.2021
Share:

By Village Missionary Movement

Thursday, 19-Aug-2021

ಧೈನಂದಿನ ಧ್ಯಾನ(Kannada) – 19.08.2021

 

ಪರಮ ಕುಂಬಾರನ ಇಚ್ಛೆ

 

"ಯೆಹೋವನನ್ನು ನಿರೀಕ್ಷಿಸುವವರೋ ಹೊಸ ಬಲವನ್ನು ಹೊಂದುವರು; ಹದ್ದುಗಳಂತೆ ರೆಕ್ಕೆಗಳನ್ನುಚಾಚಿಕೊಂಡು [ಏರುವರು];..." - ಯೆಶಾಯ 40:31

 

ಕುಂಬಾರನ ಕಣ್ಣುಗಳ ಮುಂದೆ ಜೇಡಿಮಣ್ಣು ರಾಶಿಯಾಗಿತ್ತು! ಕುಂಬಾರನು ಅದನ್ನು ಪ್ರತಿಬಾರಿಯೂ ದೀರ್ಘವಾಗಿ ನೋಡುವಾಗಲೆಲ್ಲಾ ಅವನಿಗೆ ಒಂದು ಯೋಚನೆ ತೋರುತ್ತಿತ್ತು, "ಈ ಜೇಡಿಮಣ್ಣನ್ನು ತೆಗೆದುಕೊಂಡು ನಾನು ರೂಪಿಸುವ ಪಾತ್ರೆಯು ಇದುವರೆಗೂ ನಾನು ರೂಪಿಸಿದ ಎಲ್ಲಾ ಪಾತ್ರೆಗಳಿಗಿಂತ ಇದಕ್ಕೆ ಹೊಸ ತರದ ಬಣ್ಣಗಳನ್ನು, ಹೊಸ ಆಕಾರವನ್ನು ಕೊಟ್ಟು ಯಾರೂ ನೋಡಿರದ, ಬಳಸದ ವಿಚಿತ್ರ ಗುಣಮಟ್ಟದ ಪಾತ್ರೆಯಾಗಿ ರೂಪಿಸಬೇಕು" ಎಂದು ತನ್ನೊಳಗೆ ನೆನೆಸುತ್ತಿದ್ದನು.

 

ಆದರೆ ಕುಂಬಾರನ ಯೋಚನೆಯನ್ನು ತಿಳಿಯದೆ, ಮತ್ತೊಂದೆಡೆ ಜೇಡಿಮಣ್ಣು ಯೋಚಿಸಿತು, “ನಾನು ತುಂಬಾ ದಿನಗಳಿಂದ ಇಲ್ಲಿ ರಾಶಿಯಾಗಿ ಬಿದ್ದಿದ್ದೇನೆ. ಕುಂಬಾರನು ಹೆಜ್ಜೆ ಹೆಜ್ಜೆಗೂ ನನ್ನನ್ನು ನೋಡಿ ನೋಡದಂತೆ ಹಾಗೆ ಹೋಗುತ್ತಿರುವುದೇಕೆ? ನನ್ನನ್ನು ಒಂದು ಚೊಂಬು ರೂಪದಲ್ಲಿ ಮಾಡಿ ಮತ್ತೊಬ್ಬರ ಬಳಿಯಾದರೂ ಕೊಟ್ಟರೆ ನಾನು ನೀರು ಕುಡಿಯುವುದಕ್ಕಾದರೂ ಉಪಯುಕ್ತವಾಗಿ ಮಾರ್ಪಡುತ್ತೇನೆ.ತುಂಬಾ ದಿನಗಳಿಂದ ಈ ಸ್ಥಳದಲ್ಲೇ ಬಿದ್ದಿರುವುದರಿಂದ ನನಗೆ ಬೇಸರವಾಗಿದೆ. ನಾನು ಈ ಸ್ಥಳಕ್ಕೆ ಬಂದು ಬಹಳ ದಿನಗಳಾದರೂ, ನನ್ನ ನಂತರ ಬಂದ ಅನೇಕ ಹೊಸ ಮಣ್ಣಿನ ರಾಶಿಗಳು ರೂಪಿಸಲ್ಪಟ್ಟು ಬಳಸಲಾಗುತ್ತಿದೆಯೇ! ಈ ಪರಿಸ್ಥಿತಿ ನನಗೆ ಮಾತ್ರ ಏಕೆ! ನನ್ನ ಪರಿಸ್ಥಿತಿ ಯಾವಾಗ ಬದಲಾಗುತ್ತದೆ? ನಾನು ಈ ಸ್ಥಳವನ್ನು ಬಿಟ್ಟು ಬೇರೆ ಕಡೆಗೆ ಯಾವಾಗ ಹೋಗುತ್ತೇನೆ? ನನ್ನ ಭವಿಷ್ಯ ಹೇಗಿರುತ್ತದೆ? ನನ್ನ ಜೀವನ ಇಲ್ಲಿಗೆ ಮುಗಿದು ಹೋಗುತ್ತದೋ? " ಎಂದು ಪ್ರತಿ ಕ್ಷಣವೂ ನೆನೆಸುತ್ತಿತ್ತು.

 

ಹೌದು, ನೀವು ಕೂಡ "ವಿಳಂಬ" ಎಂಬ ಕಾರಣದಿಂದಾಗಿ ಕುಗ್ಗಿಹೋಗಿದ್ದೀರಾ? ಜೇಡಿಮಣ್ಣಿನ ರಾಶಿಯಂತೆ ದೇವರ ಬಳಿ ಬೇಡಿಕೊಳ್ಳುವ ಅನುಭವವನ್ನು ಹೊಂದಿದ್ದೀರಾ? ನಿರೀಕ್ಷಿತ ಅವಧಿ ಮುಗಿದಂತೆ ಕಾಣುತ್ತಿದೆಯೇ? ಜೊತೆಗಿದ್ದ ಅನೇಕರು ಸ್ಥಾನ ಬದಲಾಗಿ ಇನ್ನೊಂದು ಶ್ರೇಷ್ಠತೆಗೆ ಹೋಗಿದ್ದಾರೆಯೇ? ಚಿಂತಿಸಬೇಡಿ, ನಿಮಗೆ ಒಳ್ಳೆಯ ಮಾತು, "ತಡವಾದ ನಿರೀಕ್ಷೆ ಹೃದಯವನ್ನು ಅಸ್ವಸ್ಥತೆ ಮಾಡುತ್ತದೆ; ಆಶೆಯು ಸಫಲವಾದರೆ ಅದು ಜೀವಕರವಾದ ವೃಕ್ಷವು" (ಜ್ಞಾನೋಕ್ತಿ. 13:12). ಜೇಡಿಮಣ್ಣಿನ ರಾಶಿಯು ತನಗೆ ತಾನೇ ಒಂದು ಗೆರೆಯನ್ನು ಹಾಕಿಕೊಂಡು ಅದಕ್ಕೆ ತಕ್ಕಂತೆ ತನ್ನನ್ನು ರೂಪಿಸುವಂತೆ ಬಯಸಿತು, ಇತರ ಜೇಡಿಮಣ್ಣಿನ ರಾಶಿಗಳು ಹಾದುಹೋದ ದಾರಿಯಲ್ಲೇ ತಾನೂ ಕೂಡ ಹೋಗಬೇಕೆಂದು ನೆನೆಸಿ ಬೇಸರಗೊಂಡಿತು. ಆದರೆ ಕುಂಬಾರನ ಉದ್ದೇಶವನ್ನು, ಇಚ್ಛೆಯನ್ನು ನೋಡಿರಿ? ಅದು ಶ್ರೇಷ್ಠವಾಗಿತ್ತು. ಈ ಉನ್ನತವಾದ ಆಲೋಚನೆಗಳನ್ನು ಜೇಡಿಮಣ್ಣು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ.

 

ಅದೇ ರೀತಿ, ನಮ್ಮ ಪರಮ ಕುಂಬಾರನಾದ ದೇವರು ಹತ್ತರಲ್ಲೊಂದು ಹನ್ನೊಂದಾಗಿ ಇರಲು ಅಲ್ಲ, ನನ್ನ ಮಗ, ಮಗಳು ಮತ್ತೊಬ್ಬರಿಗಿಂತ ಶ್ರೇಷ್ಠವಾಗಿ, ವ್ಯತ್ಯಾಸವಾಗಿರಬೇಕೆಂದೇ ಬಯಸುತ್ತಾರೆ, ಬಹುಶಃ ಈ ವಿಳಂಬವು, ಕಾಯುವಿಕೆ ಎಂಬ ಹಾದಿಯು ನಿಮ್ಮನ್ನು ಕಳೆದುಕೊಳ್ಳುವಂತೆ ಮಾಡಿರಬಹುದು. ಆದರೆ ಸತ್ಯವೇದವು ಹೀಗೆ ಹೇಳುತ್ತಿದೆ, "ಯೆಹೋವನನ್ನು ನಿರೀಕ್ಷಿಸುವವರೋ ಹೊಸ ಬಲವನ್ನು ಹೊಂದುವರು; ಹದ್ದುಗಳಂತೆ ರೆಕ್ಕೆಗಳನ್ನುಚಾಚಿಕೊಂಡು [ಏರುವರು];" ಆದ್ದರಿಂದ ನನ್ನ ಇಚ್ಛೆಯಲ್ಲ, ನಿಮ್ಮ ಚಿತ್ತವು ನನ್ನ ಜೀವನದಲ್ಲಿ ನೆರವೇರಲಿ ಎಂದು ಹೇಳಿ ಅವರಿಗಾಗಿ,ಅವರ ಸಮಯಕ್ಕಾಗಿ ಕಾದಿರಿ. ಖಂಡಿತವಾಗಿಯೂ ಮುಕ್ತಾಯವಿದೆ ಶೀಘ್ರದಲ್ಲೇ!

- Bro.ಜೆಪಿನ್

 

ಪ್ರಾರ್ಥನಾ ಅಂಶ:

ನಾವು ಗ್ರಾಮಗಳಲ್ಲಿ ಭೇಟಿಯಾಗಿ ಮುನ್ನಡೆಸಿದ ಚಿಕ್ಕಮಕ್ಕಳು ಮತ್ತು ಯೌವನಸ್ಥರು ಕರ್ತನಲ್ಲಿ ನೆಲೆಗೊಂಡಿರುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet matbet giriş holiganbet holiganbet güncel holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking meritking giriş perabet perabet giriş casibom casibom giriş holiganbet holiganbet giriş galabet casibom casibom giriş grandpashabet grandpashabet holiganbet grandpashabet grandpashabet grandpashabet perabet perabet giriş padişahbet padişahbet giriş grandpashabet grandpashabet grandpashabet casinolevant grandpashabet meritking meritking giriş grandpashabet grandpashabet giriş kalitebet kalitebet giris betsmove betsmove giris gonebet gonebet giris betnano betnano giriş