Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 21.08.2021
Share:

By Village Missionary Movement

Saturday, 21-Aug-2021

ಧೈನಂದಿನ ಧ್ಯಾನ(Kannada) – 21.08.2021

 

ಸ್ವಭಾವ ಬದಲಾಗದಿರಲಿ

 

 "...ಇಹಲೋಕದ ನಡವಳಿಕೆಯನ್ನು ಅನುಸರಿಸದೆ..." - ರೋಮಾ 12:2

 

 ಒಬ್ಬ ಶಿಕ್ಷಕ ತನ್ನ ಕೈಯಲ್ಲಿ 500 ರೂಪಾಯಿ ನೋಟು ಹಿಡಿದು ತರಗತಿಯೊಳಗೆ ಪ್ರವೇಶಿಸಿದರು. ಅದನ್ನು ವಿದ್ಯಾರ್ಥಿಗಳಿಗೆ ತೋರಿಸಿ ಇದು ಏನು? ಎಂದು ಕೇಳಿದರು. ಎಲ್ಲರೂ 500 ರೂ ಎಂದರು. ಶಿಕ್ಷಕರು ಅದನ್ನು ಹಿಸುಕಿ ಬಿಟ್ಟು ಇದೇನು? ಎಂದರು. ವಿದ್ಯಾರ್ಥಿಗಳು 500 ರೂ ಎಂದರು. ಅದನ್ನು ಕಸದ ಬುಟ್ಟಿಗೆ ಹಾಕಿ ಇದೇನು? ಎಂದರು. ವಿದ್ಯಾರ್ಥಿಗಳು 500 ರೂಪಾಯಿ ಎಂದರು. ರಾಜಾ ಓಡಿ ಬಂದು ಕಸದ ಬುಟ್ಟಿಯಿಂದ ರೂಪಾಯಿ ತೆಗೆದುಕೊಂಡು ಶಿಕ್ಷಕರಿಗೆ ಕೊಟ್ಟನು. ಶಿಕ್ಷಕರು ಅದನ್ನು ತೆಗೆದುಕೊಂಡು ಅದನ್ನು ನೇರವಾಗಿ ಹರಡಿ ಸುಕ್ಕುಗಟ್ಟಿದ ಭಾಗಗಳನ್ನು ಕೈಯಿಂದ ಒತ್ತಿ ಸರಿಮಾಡಿ ಈಗಲೂ ಇದು 500 ರೂಪಾಯೇ. ಇದು ಕಸದಲ್ಲಿದ್ದರೂ, ನಮ್ಮ ಚೀಲದಲ್ಲಿದ್ದರೂ ಹೇಗೆ ಅದರ ಬೆಲೆ ಬದಲಾಗಲಿಲ್ಲವೋ ಅದರಂತೆಯೇ ವಿದ್ಯಾರ್ಥಿಗಳಾಗಿರುವ ನೀವು ಯಾವ ಪರಿಸ್ಥಿತಿಯಲ್ಲಿದ್ದರೂ ನಿಮ್ಮ ಸದ್ಗುಣಗಳನ್ನು ಬಿಟ್ಟುಬಿಡಬಾರದು ಎಂದು ಹೇಳಿದರು.

 

ಯೋಸೇಫನು ತನ್ನ ತಂದೆಗೆ ಪ್ರೀತಿಯ ಮಗುವಾಗಿ ತನ್ನ ಕುಟುಂಬದೊಂದಿಗೆ ಇದ್ದಾಗ ಅವರೊಂದಿಗೆ ಪ್ರೀತಿಯಿಂದಿದ್ದನು. ಅವನು ತನ್ನ ಕನಸನ್ನು ಹೇಳಿದಾಗ ಅವನ ಸಹೋದರರು ಅವನನ್ನು ದ್ವೇಷಿಸಿ ಹಳ್ಳಕ್ಕೆ ಹಾಕಿ ಬಿಟ್ಟರೂ, ಇಷ್ಮಾಯೇಲರಿಗೆ ಅವನನ್ನು ದಾಸನಾಗಿ ಮಾರಿಬಿಟ್ಟರೂ ಆದರಿಸುವವನಾಗಿದ್ದನು. ಮತ್ತು ಮಾಡದ ಅಪರಾಧಕ್ಕಾಗಿ ಸೆರೆಮನೆಯಲ್ಲಿ ಬಂಧಿಸಲ್ಪಟ್ಟಾಗಲೂ ಅವನು ತನ್ನ ಸಹ ಕೈದಿಗಳನ್ನು ಪ್ರೀತಿಯಿಂದ ವಿಚಾರಿಸುವವನಾಗಿದ್ದನು. ಅವನು ರಾಜನ ನಂತರದ ಸ್ಥಾನಕ್ಕೆ ಹೆಚ್ಚಿಸಲ್ಪಟ್ಟಾಗಲೂ ತನ್ನ ಸಹೋದರರನ್ನು ಕ್ಷಮಿಸಿ ಪ್ರೀತಿಸುವವನಾಗಿಯೇ ಇದ್ದನು. ತನ್ನ ತಂದೆಯ ಮರಣದ ನಂತರ ಸಹೋದರರು ಹೆದರಿದರೂ ಅವನು ಪ್ರೀತಿಸುತ್ತಲೇ ಇದ್ದನು. ತನ್ನ ಇಕ್ಕಟ್ಟಿನಲ್ಲಿ, ಕಷ್ಟದಲ್ಲೂ ಕೂಡ ತನ್ನ ಸಹೋದರನನ್ನು ದ್ವೇಷಿಸಲೂ ಇಲ್ಲ, ನಿರಾಕರಿಸಿಲೂ ಇಲ್ಲ. ತನ್ನ ಸುತ್ತಮುತ್ತಲಿನವರು ಹೇಗೆ ವರ್ತಿಸಿದರೂ ಆತ ತನ್ನ ಸ್ವಭಾವವನ್ನು ಬದಲಾಯಿಸಿಕೊಳ್ಳದೇ ಪ್ರೀತಿಸುವ ವ್ಯಕ್ತಿಯಾಗಿಯೇ ಇದ್ದನು.

 

ಪ್ರಿಯರೇ, ನಮ್ಮ ಬಗ್ಗೆ ಏನು? ನಾವು ಎದುರಿಸುವ ಎಲ್ಲಾ ಪರಿಸ್ಥಿತಿಗಳೂ, ಶೋಧನೆಗಳಲ್ಲಿ ನಮ್ಮ ಸ್ವಭಾವ ಬದಲಾಗದೆ, ಸದ್ಗುಣಗಳು ಮಾರ್ಪಡದೇ ಇದೆಯೇ? ಅಥವಾ ಇಕ್ಕಟ್ಟಿನಲ್ಲಿ, ಶೋಧನೆಯಲ್ಲಿ ಗೊಣಗುತ್ತಿದ್ದೇವೆಯೇ? ಯೋಚಿಸೋಣ. ಯೋಸೇಫನಂತೆ, ನಮ್ಮ ಸ್ವಭಾವ ಮತ್ತು ಸದ್ಗುಣಗಳನ್ನು ಬದಲಾಯಿಸಿಕೊಳ್ಳದೇ ಎಲ್ಲಾ ಸಂದರ್ಭಗಳಲ್ಲಿ, ಎಲ್ಲಾ ಸ್ಥಳಗಳಲ್ಲಿ ಇರಲು ತೀರ್ಮಾನಿಸೋಣ.

- Bro.ಗೋಪಿ ದಿವಾಕರ್

 

ಪ್ರಾರ್ಥನಾ ಅಂಶ:

ಪ್ರತಿದಿನ ದೈನಂದಿನ ಧ್ಯಾನ ಸಂದೇಶವನ್ನು ಬರೆದು ಕೊಡುವ ದೇವರ ಮಕ್ಕಳನ್ನು ದೇವರು ತನ್ನ ಅಭಿಷೇಕದಿಂದ ತುಂಬಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet matbet giriş holiganbet holiganbet güncel holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking meritking giriş perabet perabet giriş casibom casibom giriş holiganbet holiganbet giriş galabet casibom casibom giriş grandpashabet grandpashabet holiganbet grandpashabet grandpashabet grandpashabet perabet perabet giriş padişahbet padişahbet giriş grandpashabet grandpashabet grandpashabet casinolevant grandpashabet meritking meritking giriş grandpashabet grandpashabet giriş kalitebet kalitebet giris betsmove betsmove giris gonebet gonebet giris betnano betnano giriş