By Village Missionary Movement
Sunday, 22-Aug-2021ಧೈನಂದಿನ ಧ್ಯಾನ(Kannada) – 22.08.2021 (Kids Special)
ಪ್ರೀತಿಯ ಆಲಿಸ್
"ಪ್ರೀತಿಯಿಲ್ಲದವನು ದೇವರನ್ನು ಬಲ್ಲವನಲ್ಲ; ಯಾಕಂದರೆ ದೇವರು ಪ್ರೀತಿಸ್ವರೂಪಿಯು. ” - 1 ಯೋಹಾನ 4: 8
ಚುಕ್ಕು ಬುಕ್ಕು, ಚುಕ್ಕು ಬುಕ್ಕು, ಕುಕ್ಕೂ .... ಎಂದು ಕೂಗುತ್ತಾ Train ವೇಗವಾಗಿ ಹೊರಟಿತು. ಏನು ಪುಟಾಣಿಗಳೇ Train ನಲ್ಲಿ ಜಾಲಿಯಾಗಿ ಹೋಗಲು ಆಸೆ ಬಂದು ಬಿಟ್ತಾ! ಹೌದು, ನಿಮ್ಮಂತೆಯೇ ಆಲಿಸ್-ಗೂ ತುಂಬಾ ಆಸೆಯಾಗಿತ್ತು. ತನ್ನ ಆಸೆಯನ್ನು ತಾಯಿಗೆ ಹೇಳಿದಳು. ಒಂದು ದಿನ ಆಲಿಸ್ ಮತ್ತು ಅವಳ ತಾಯಿ Train-ನಲ್ಲಿ ಅಜ್ಜಿಯ ಮನೆಗೆ ಹೋದರು. ಆಲಿಸ್‌ಗೆ ತುಂಬಾ ಖುಷಿಯಾಯಿತು. ಅವಳು ಕಿಟಕಿಯ ಪಕ್ಕದಲ್ಲಿ ಕುಳಿತು ಪ್ರಕೃತಿಯನ್ನು ನೋಡುತ್ತಾ ಆನಂದಿಸುತ್ತಾ ಹೋದಳು. ಅವರು ಇಳಿಯಬೇಕಾದ ಸ್ಥಳವೂ ಬಂತು. Train - ನನ್ನು ಬಿಟ್ಟು ಇಳಿದು, ಚಳಿಗಾಲವಾಗಿದ್ದದರಿಂದ ಸ್ವೆಟರ್ ಹಾಕಿಕೊಂಡು, ಅಮ್ಮನ ಕೈ ಹಿಡಿದು ಹೊರಗೆ ಹೋಗಲು ಬಾಗಿಲಿನ ಕಡೆಗೆ ನಡೆಯುತ್ತಿದ್ದಳು. ಆಗ ಒಬ್ಬ ವಯಸ್ಸಾದವರು, "ಹಸಿವಾಗುತ್ತಿದೆ ಏನಾದರೂ ತಿನ್ನಲು ಕೊಡಿ" ಎಂದು ಇಳಿಯುತ್ತಿದ್ದ ಎಲ್ಲರ ಬಳಿ ಕೇಳುತ್ತಿದ್ದರು. ಆ ಮುದುಕನನ್ನು ನೋಡಿದ ಕೂಡಲೇ ಆಲಿಸ್ ಹೃದಯ ಕಲಕಿತು. ತನ್ನ ತಾತನ ಜ್ಞಾಪಕ ಬಂತು. ಇವರೂ ಕೂಡ ನಮ್ಮ ತಾತನಂತೆ ತಾನೆ ಎಂದು ಭಾವಿಸಿ ತನ್ನ ತಾಯಿಯ ಬಳಿ ಹಣ ತೆಗೆದುಕೊಂಡು ಆ ಮುದುಕನ ಬಳಿಗೆ ಹೋಗಿ ಮುಗ್ಧ ಮಾತಿನಲ್ಲಿ ತಾತ ತಗೊಳ್ಳಿ ಎಂದು ಹೇಳಿ ಕೊಟ್ಟುಬಿಟ್ಟು ಅವರನ್ನು ಪ್ರೀತಿಯಿಂದ ನೋಡಿ ನಗುತ್ತಾ ಬಂದಳು.
ನಂತರ ಆಲಿಸ್ ಮತ್ತು ಆಕೆಯ ತಾಯಿ ಆ ಸ್ಥಳವನ್ನು ಬಿಟ್ಟು ಹೊರಟು ಹೋದರು. ನಂತರ ಯಾರೋ ತಮ್ಮನ್ನು ಹಿಂಬಾಲಿಸುತ್ತಿದ್ದಾರೆಂದು ಅವರು ಗ್ರಹಿಸಿ ಇಬ್ಬರೂ ತಿರುಗಿ ನೋಡಿದರೆ ಆ ವಯಸ್ಸಾದವರು. ತಕ್ಷಣವೇ ಆಲಿಸ್-ನ ತಾಯಿ, "ನಿನಗೇನು ಬೇಕು, ನೀನು ನಮ್ಮನ್ನು ಏಕೆ ಹಿಂಬಾಲಿಸುತ್ತಾ ಬಂದೆ?" ಎಂದರು. ಅದಕ್ಕೆ ಆ ಮುದುಕ ಹೇಳಿದ, "ಅಮ್ಮಾ, ಯಾರೂ ನನ್ನನ್ನು ಇದುವರೆಗೂ ತಾತ ಎಂದು ಕರೆದೇ ಇಲ್ಲ. ನಿಮ್ಮ ಪುಟ್ಟ ಮಗಳು ನನ್ನನ್ನು ತಾತ ಎಂದು ಕರೆದ ಕೂಡಲೇ ಪ್ರೀತಿಗಾಗಿ ಹಂಬಲಿಸುತ್ತಿದ್ದ ನನ್ನೊಳಗೆ ಒಂದು ಹೊಸ ಸಂಬಂಧ ಚಿಗುರಿದ ಹಾಗಿತ್ತು. ಆದ್ದರಿಂದ ನನ್ನನ್ನು ಮತ್ತೊಮ್ಮೆ ತಾತ ಎಂದು ಕರೆಯಲು ದಯವಿಟ್ಟು ಹೇಳಿ" ಎಂದು. ಕಣ್ಣೀರಿನಿಂದ ಹೇಳಿದರು. ಅವರ ಕಣ್ಣೀರನ್ನು ನೋಡಿದ ಆಲಿಸ್, ಪ್ರೀತಿಯಿಂದ ತಾತ ... ತಾತ ಎಂದು ಪ್ರೀತಿಯಿಂದ ಕರೆದಳು. ನಂತರ ಅವಳ ಅಜ್ಜಿಯ ಮನೆಗೆ ಕರೆದುಕೊಂಡು ಹೋಗಿ ಅವರಿಗೆ ಆಹಾರವನ್ನೂ ಕೊಟ್ಟು ಯೇಸುವಿನ ಪ್ರೀತಿಯನ್ನು ಎತ್ತಿ ಹೇಳಿದಳು.
ಪುಟ್ಟ ತಮ್ಮ, ತಂಗಿ, ಆಲಿಸ್-ನ ಪ್ರೀತಿಯ ಸ್ವಭಾವವನ್ನು ನೋಡುದ್ರಾ? ಒಬ್ಬ ಭಿಕ್ಷುಕ ತಾನೇ ಎಂದು ಕೀಳಾಗಿ ನೆನೆಸದೇ ಪ್ರೀತಿಯಿಂದ ತಾತ ಎಂದು ಮಾತಾಡಿದಳು. ಅವಳಂತೆ, ನೀನು ಕೂಡ ದೊಡ್ಡವರು, ಬಡವರು, ನಿರ್ಗತಿಕರು, ಕಷ್ಟಪಡುವವರನ್ನು ಕೀಳಾಗಿ ನೋಡಬಾರದು. ಅವರನ್ನು ಪ್ರೀತಿಯಿಂದ ವಿಚಾರಿಸಬೇಕು. ನೀವು ಹಾಗೆ ಮಾಡಿದರೆ, ಯೇಸಪ್ಪ ನಿಮ್ಮನ್ನು ನೋಡಿ ತುಂಬಾ ಸಂತೋಷಪಡುತ್ತಾರೆ. Ok.
- Mrs. ಸಾರಾಳ್ ಸುಭಾಷ್
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482