Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 30.08.2021
Share:

By Village Missionary Movement

Monday, 30-Aug-2021

ಧೈನಂದಿನ ಧ್ಯಾನ(Kannada) – 30.08.2021

 

Horlicks ಕ್ರೈಸ್ತರು

 

 "...ಅಂತಿಯೋಕ್ಯದಲ್ಲಿಯೇ ಶಿಷ್ಯರಿಗೆ ಕ್ರೈಸ್ತರೆಂಬ ಹೆಸರು ಮೊದಲು ಬಂತು." - ಅಪೊಸ್ತಲ. 11:26

 

ಬೋಧಕರೊಬ್ಬರು ವಿಶ್ವಾಸಿಯೊಬ್ಬರ ಮನೆಯ ಪ್ರತಿಷ್ಠಾಪನೆಗೆ ಹೋಗಿದ್ದರು. ಪ್ರತಿಷ್ಠಾಪನಾ ಪ್ರಾರ್ಥನೆ ಮುಗಿದ ನಂತರ ಅವರು ಮನೆಯ ಎಲ್ಲಾ ಕೋಣೆಗಳನ್ನು ಸುತ್ತಿ ತೋರಿಸಿದರು. ಬೋಧಕರು ಅಡಿಗೆ ಮನೆಗೆ ಹೋದಾಗ ಅಲ್ಲಿದ್ದ Horlicks Bottle ಗಳನ್ನು ನೋಡಿ ಆಶ್ಚರ್ಯದಿಂದ ಆ ಮನೆಯ ಮುಖ್ಯಸ್ಥರ ಬಳಿ ನಿಮ್ಮ ಮನೆಯವರೆಲ್ಲರಿಗೂ Horlicks ಎಂದರೆ ಅಷ್ಟೊಂದು ಇಷ್ಟಾನಾ? ಎಂದು ಕೇಳಿದರು. ಅದಕ್ಕವರು ನಗುತ್ತಾ, ಇದರಲ್ಲಿ ಒಂದರಲ್ಲಿ ಮಾತ್ರವೇ Horlicks ಇದೆ. ಉಳಿದ ಎಲ್ಲಾ ಬಾಟಲಿಗಳಲ್ಲೂ ಬೇಳೆ, ಕಾಳು ಕಡ್ಡಿಗಳೇ ಹಾಕಿಟ್ಟಿದೆ ಎಂದರು. ಇದನ್ನು ಕೇಳಿದ ಬೋಧಕರು ಮುಗುಳ್ನಕ್ಕರು.

 

ಅಂತಿಯೋಕ್ಯದಲ್ಲಿಯೇ ಶಿಷ್ಯರನ್ನು ಮೊದಲು ಕ್ರೈಸ್ತರು ಎಂದು ಕರೆದರು. ಶಿಷ್ಯರು ಎಂದರೆ ಕ್ರಿಸ್ತನನ್ನು ಅನುಸರಿಸುವವರು ಎಂದರ್ಥ. ಕ್ರಿಸ್ತನನ್ನು ಅನುಸರಿಸುವವರು ಎಂದರೆ ಕ್ರಿಸ್ತನೊಂದಿಗೆ ಇರುವವರು! ಇವರೇ ಕ್ರೈಸ್ತರು ಎಂದು ಕರೆಯಲ್ಪಟ್ಟವರು. ಆದರೆ ಈಗ ಆ ಮನೆಯಲ್ಲಿರುವ Horlicks Bottle ನಂತೆ ಹೊರಗೆ ಕ್ರೈಸ್ತರೆಂಬ ಹೆಸರುಗಳು, ಕ್ರೈಸ್ತ ಆಲಯಗಳಿಗೆ ಹೋದರೆ ಕ್ರೈಸ್ತರು ಎಂದು ಕರೆದುಕೊಳ್ಳುತ್ತಾ ಪರಲೋಕಕ್ಕೆ ಹೋಗಿಬಿಡಬಹುದು ಎಂದು ನೆನೆಸುತ್ತಿದ್ದಾರೆ. ಆದರೆ ಆಂತರಿಕವಾಗಿ, ನೀವು ಪ್ರತಿದಿನ ಕ್ರಿಸ್ತನನ್ನು ದೃಷ್ಟಿಸಿ ನೋಡಿ ಆತನನ್ನು ಅನುಸರಿಸದಿದ್ದರೆ ನೀವೂ ಕೂಡಾ Horlicks ಕ್ರೈಸ್ತರೇ. ಆದರೆ ದೇವರು ಈ ನಕಲಿ ಜೀವನವನ್ನು ಬಯಸುವುದಿಲ್ಲ. ಆತನು ನಮ್ಮನ್ನು ಪರಲೋಕಕ್ಕೆ ಕರೆದೊಯ್ಯುವುದಿಲ್ಲ. ಕ್ರಿಸ್ತನನ್ನು ತಂದೆಯಾಗಿ ಹೊಂದಿರುವ ಮಕ್ಕಳೇ ಕ್ರೈಸ್ತರು! ಕ್ರಿಸ್ತನಿಲ್ಲದ ಕ್ರೈಸ್ತರು ತಂದೆಯನ್ನು ತಿರಸ್ಕರಿಸಿದ ಮಕ್ಕಳು. ಇಂದು ನೀವು ತಂದೆಯನ್ನು ತಿರಸ್ಕರಿಸಿದರೆ ಪರಲೋಕದಲ್ಲಿರುವ ತಂದೆ ನಿಮ್ಮನ್ನು ತಿರಸ್ಕರಿಸುತ್ತಾರೆ ಎಂಬುದನ್ನು ಮರೆಯಬೇಡಿರಿ.

 

ಪ್ರಿಯರೇ! ಕ್ರೈಸ್ತರು ಎಂದು ಕರೆಯಲ್ಪಡುತ್ತಿರುವ ನೀವು ಹೇಗಿದ್ದೀರ? ನೀವು ತಂದೆಯೊಂದಿಗೆ ಇದ್ದೀರಾ, ಅಥವಾ Horlicks ಕ್ರೈಸ್ತರಾಗಿದ್ದೀರ? ಯೋಚಿಸಿ. ಪರಲೋಕದಲ್ಲಿ ನೀವು ಅನುಮತಿಸಲ್ಪಡುವದು, ತಿರಸ್ಕರಿಸಲ್ಪಡುವದು ಈಗ ನೀವು ಜೀವಿಸುತ್ತಿರುವ ಜೀವನದ ಮೇಲೆಯೇ ಆಧಾರವಾಗಿದೆ ಮರೆತು ಹೋಗಬೇಡಿರಿ. ಇಂದೇ ಕ್ರಿಸ್ತನೊಂದಿಗೆ ಒಂದಾಗೋಣ. ಆತನನ್ನೇ ಅನುಸರಿಸಿ ಪರಲೋಕ ಜೀವನವನ್ನು ಸ್ವತಂತ್ರಿಸಿಕೊಳ್ಳೋಣ.

- Mrs. ಅನ್ಬು ಜ್ಯೋತಿ ಸ್ಟಾಲಿನ್

 

ಪ್ರಾರ್ಥನಾ ಅಂಶ:

ಎಲ್ಲಾ ರಾಜ್ಯಗಳಿಂದ 12 ಮಿಷನರಿಗಳನ್ನು ದೇವರು ಕರೆತರುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking perabet casibom holiganbet galabet casibom perabet perabet giriş padişahbet padişahbet giriş grandpashabet kalitebet kalitebet giris betsmove betsmove giris gonebet gonebet giris betnano betnano giriş jojobet jojobet casinomilyon jojobet palacebet sonbahis tambet grandpashabet betgit mercurecasino matbet