By Village Missionary Movement
Wednesday, 01-Sep-2021ಧೈನಂದಿನ ಧ್ಯಾನ(Kannada) – 01.09.2021
ಹಣ - ಅಸಂತೃಪ್ತಿ
ಮನಸ್ಸು- ಸಂತೃಪ್ತಿ
"ಸಂತುಷ್ಟಿಸಹಿತವಾದ ಭಕ್ತಿಯು ದೊಡ್ಡ ಲಾಭವೇ ಸರಿ" - 1 ತಿಮೊಥೆ 6:6
ಹಣದ ಕೊರತೆ, ಹಣದ ಅವಶ್ಯಕತೆ ಇಂದು ಇವೆರಡೂ ಪ್ರಪಂಚದ ದೊಡ್ಡ ಸವಾಲುಗಳಾಗಿವೆ. ಇದು ಪ್ರತಿಯೊಬ್ಬ ಮನುಷ್ಯನಿಗಿರುವ ಅತಿದೊಡ್ಡ ಚಿಂತೆಯಾಗಿ ಕಾಣಲ್ಪಡುತ್ತಿದೆ . ವಿಶೇಷವಾಗಿ ಈ ಕರೋನಾ ದಿನಗಳಲ್ಲಿ ಅನೇಕರಿಗೆ ಸರಿಯಾದ ಕೆಲಸವಿಲ್ಲ, ಆದಾಯವಿಲ್ಲ, ಬೆಲೆ ಏರಿಕೆ, ಹೆಚ್ಚುತ್ತಿರುವ ಬೇಡಿಕೆಯಂತಹ ಅನೇಕ ಕಾರಣಗಳಿಂದಾಗಿ ಬೇಸರ ಉಂಟಾಗುತ್ತಿದೆ. ಏಕೆ? ಅನೇಕ ದೇಶಗಳಲ್ಲಿ ದೇಶವನ್ನು ನಡೆಸುತ್ತಿರುವ ಸರ್ಕಾರವೇ ಈ ದಿನಗಳಲ್ಲಿ ಹಣದ ಕೊರತೆಯ ಸವಾಲನ್ನು ಎದುರಿಸುತ್ತಿದೆ.
ಸತ್ಯವೇದದಲ್ಲಿ, ಎಲೀಯ ಎಂಬ ಪ್ರವಾದಿಯನ್ನು, ಅವರನ್ನು ಒರಗಿಕೊಂಡಿದ್ದ ಕುಟುಂಬಗಳನ್ನು ದೇಶವನ್ನು ದೇವರು ಪೋಷಿಸಿ ಮುನ್ನಡೆಸಿದ ವಿಧಾನ ಬಹಳ ಆಶ್ಚರ್ಯಕರವಾಗಿದೆ. ಬರಗಾಲದಲ್ಲಿ ದೇವರು ಎಲೀಯನನ್ನು ನೀನೆದ್ದು ಚೀದೋನಿಗೆ ಸೇರಿದ ಚಾರೆಪ್ತಾಕ್ಕೆ ಹೋಗಿ ಅಲ್ಲಿ ವಾಸವಾಗಿರು; ಇಗೋ, ನಿನ್ನನ್ನು ಸಂರಕ್ಷಣೆ ಮಾಡಲು ಅಲ್ಲಿರುವ ಒಬ್ಬ ವಿಧವೆಗೆ ಆಜ್ಞಾಪಿಸಿದ್ದೇನೆ ಅಂದನು. 1 ಅರಸು 17:16 ರ ಪ್ರಕಾರ ಎಲೀಯನು, ಆ ವಿಧವೆಯ ಕುಟುಂಬದವರು ಅನೇಕ ದಿನಗಳವರೆಗೆ ತಿನ್ನುತ್ತಿದ್ದರು ಎಂದು ನೋಡುತ್ತೇವೆ. ಅಷ್ಟೇ ಅಲ್ಲದೆ ಎಲೀಯನ ಪ್ರಾರ್ಥನೆಯನ್ನು ಕೇಳಿ ದೇವರು ಭೂಮಿಯ ಮೇಲೆ ಮಳೆ ಬರುವಂತೆ ಮಾಡಿದರು. ಒಂದು ಕೊರತೆಯೂ ಇಲ್ಲದಂತೆ ಸುಂದರವಾಗಿ ನಡೆಸಿದರು. ಇದರಂತೆ ಸತ್ಯವೇದದಲ್ಲಿ ಈ ರೀತಿಯ ಘಟನೆಗಳು ಇನ್ನೂ ಅನೇಕವಿದೆ.
ದೇವರ ಮಕ್ಕಳೇ! ಹಣದ ಕೊರತೆಯಾಗಬಹುದು, ಮನಸ್ಸಿಗೆ ಕೊರತೆಯಾಗಬಾರದು! ಈ ಕರೋನಾ ದಿನಗಳಲ್ಲಿ ದೇವರು ನಮ್ಮ VMM ಸೇವೆಯ ಆವರಣದಲ್ಲಿ ಉಳಿದಿರುವ ಸೇವಕರನ್ನು ಪೋಷಿಸಿ, ಪರಾಮರ್ಶಿಸಿ, ಈ ಘೋರ ವ್ಯಾಧಿಗೆ ತಪ್ಪಿಸಿ ಕಾಪಾಡುತ್ತಿರುವುದನ್ನು ಇಲ್ಲಿ ನಾನು ಬರೆಯಲೇ ಬೇಕು. ಸ್ನೇಹಿತರೇ! ನಿಮಗೆ ಹಣದ ಕೊರತೆಯು ದೊಡ್ಡ ಸವಾಲಾಗಿದ್ದು ನಿಭಾಯಿಸಲು ಸಾಧ್ಯವಾಗದೆ ಇದ್ದೀರ? ನಿಮಗಿಂತ ದರಿದ್ರದಲ್ಲಿ ಇರುವವರ ಬಗ್ಗೆ ನೆನೆಸಿ ನೋಡಿ. ದೇವರು ನಿಮ್ಮನ್ನು ಇಲ್ಲಿಯವರೆಗೆ ನಡೆಸಿದ್ದಕ್ಕಾಗಿ ನಿಮ್ಮ ಪೂರ್ಣ ಹೃದಯದಿಂದ ಕೃತಜ್ಞತೆ ಸಲ್ಲಿಸಿರಿ. ಇದರ ಮಧ್ಯದಲ್ಲೂ ದರಿದ್ರದಲ್ಲಿರುವವರಿಗೆ ಸಹಾಯ ಮಾಡಿರಿ. ದೇವರು ನೀಡುವ ಮನ ಸಂತೃಪ್ತಿಯನ್ನು ಅಂತರಂಗದಲ್ಲಿ ನೀವು ಅನುಭವಿಸುವಿರಿ. ದೇವರ ಕೃಪೆಯಿಂದ ಈ ಘೋರ ವ್ಯಾಧಿಯ ಸಮಯದಲ್ಲೂ ಒಂದು ಮನ ಸಂತೃಪ್ತಿಯಾದ ಮತ್ತು ಸಾಕು ಎಂಬ ಆಲೋಚನೆ ಯೊಂದಿಗಿನ ಜೀವನವನ್ನು ನಡೆಸಲು ಪ್ರಯಾಸಪಡೋಣ!
- T. ಶಂಕರ್ ರಾಜ್
ಪ್ರಾರ್ಥನಾ ಅಂಶ:
ಈ ತಿಂಗಳು ಪೂರ್ತಿಯಾಗಿ ನಡೆಯುವಂತಹ ಸೇವೆಗಳಲ್ಲಿ ದೇವರ ಹಸ್ತವು ಜೊತೆಯಿದ್ದು ನಡೆಸುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482