Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 02.09.2021
Share:

By Village Missionary Movement

Thursday, 02-Sep-2021

ಧೈನಂದಿನ ಧ್ಯಾನ(Kannada) – 02.09.2021

 

ಘನತೆ ಹೊಂದಿದವರು

 

“ಜ್ಞಾನಿಯ ಬೋಧೆ ಜೀವದ ಬುಗ್ಗೆ; ಅದನ್ನಾಲಿಸುವವನು ಮೃತ್ಯುಪಾಶದಿಂದ ತಪ್ಪಿಸಿಕೊಳ್ಳುವನು." - ಜ್ಞಾನೋಕ್ತಿ. 13:14

 

ರಷ್ಯಾದಲ್ಲಿ ನಡೆದ ಒಂದು ಪತ್ರಿಕಾಗೋಷ್ಠಿಯಲ್ಲಿ, ಒಬ್ಬ ವ್ಯಕ್ತಿ ಅಧ್ಯಕ್ಷ ಪುಟಿನ್ ಅವರನ್ನು ನೋಡಿ, " ಏಕೆ ಮೊದಲು ವೈದ್ಯರು ಮತ್ತು ಶಿಕ್ಷಕರಿಗೆ ಲಸಿಕೆ ಹಾಕುವಂತೆ ಹೇಳುತ್ತೀರ. ಉಳಿದ 30 ಕೋಟಿ ನಾಗರಿಕರ ಬಗ್ಗೆ ನಿಮಗೆ ಕಾಳಜಿ ಇಲ್ಲವೇ? " ಎಂಬ ಪ್ರಶ್ನೆಯನ್ನು ಕೇಳಿದರು. ತಕ್ಷಣವೇ ಪುಟಿನ್ ಹೇಳಿದರು, "ಒಬ್ಬ ವೈದ್ಯನು ಸತ್ತರೆ ಇನ್ನೊಬ್ಬ ವೈದ್ಯನನ್ನು ರೂಪಿಸಲು 30 ವರ್ಷಗಳು ಬೇಕಾಗುತ್ತದೆ. ಅಷ್ಟೇ ಅಲ್ಲದೆ ಕೋಟ್ಯಾಂತರ ಸಾರ್ವಜನಿಕ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಈ ಅವಧಿಯಲ್ಲಿ ವೈದ್ಯರ ಸೇವೆಗಳು ಹೆಚ್ಚು ಅಗತ್ಯವಿದೆ. ಇದರಂತೆಯೇ ಶಿಕ್ಷಕರಿಗೂ! ಶಿಕ್ಷಕರು ಸತ್ತರೆ ವೈದ್ಯರನ್ನು ರೂಪಿಸುವುದು ಹೇಗೆ? ವೈದ್ಯರು ಮತ್ತು ಶಿಕ್ಷಕರು ದೇಶದ ದೊಡ್ಡ ಆಸ್ತಿ. ಅವರನ್ನು ಕಾಪಾಡಿಕೊಂಡರೆ ಮಾತ್ರವೇ ದೇಶ ಮತ್ತು ಸಾರ್ವಜನಿಕರು ಸಂತೋಷವಾಗಿರಲು ಸಾಧ್ಯ" ಎಂದರು.

 

ಶಿಕ್ಷಕರೇ! ನಿಮ್ಮ ಮೇಲೆ ಪುಟಿನ್ ರವರು ಎಷ್ಟು ಗೌರವವಿಟ್ಟಿದ್ದಾರೆ. ಪುಟಿನ್ ಮಾತ್ರವಲ್ಲ, ಈ ಸಮಾಜವೇ ಶಿಕ್ಷಕರ ಮೇಲೆ ಗೌರವ ಮತ್ತು ಮರ್ಯಾದೆಯನ್ನು ಹೊಂದಿದೆ. "ಪ್ರತಿಯೊಂದು ಶಿಕ್ಷಕರು ವಿದ್ಯಾರ್ಥಿಗಳಿಗೆ ಎರಡನೇ ತಾಯಿ" ಎಂದು ಹೇಳುತ್ತಾರೆ. ಶಿಕ್ಷಕರು ದೇಶದ ಹಣೆಬರಹವನ್ನು ಬದಲಾಯಿಸುವವರು. ಏಕೆಂದರೆ ಅವರು ಹೊಸ ಪೀಳಿಗೆಯನ್ನು ಬಲಿಷ್ಠರನ್ನಾಗಿ ರೂಪಿಸುವವರು. ಅವರು ವಿದ್ಯಾರ್ಥಿಗಳನ್ನು ಬೀಜದಂತೆ, ಹೊಟ್ಟಿನಂತೆ ವಿಭಜಿಸುವವರಲ್ಲ; ಹೊಟ್ಟನ್ನು ಹಾರಲು ಬಿಡದಂತೆ ಭದ್ರವಾಗಿ ಕಾಪಾಡಿ ಜ್ಞಾನೋದಯವನ್ನು ಮೂಡಿಸಿ ದೃಢಪಡಿಸುವವರು. ವಿದ್ಯಾಭ್ಯಾಸದಲ್ಲಿ ಸೋತು ಹೋದರೂ ಜೀವನದಲ್ಲಿ ಸಾಧಿಸಿ ತೋರಿಸಬಹುದು ಎಂದು ಸ್ಫೂರ್ತಿ ಹೇಳುವವರು. ಶಿಕ್ಷಕರ ಬೋಧನೆಯು ಅನೇಕ ವಿದ್ಯಾರ್ಥಿಗಳ ಜೀವನವನ್ನು ಪ್ರೋತ್ಸಾಹಿಸಿ, ನಿರ್ಮಿಸುವಾಗ ಸಮಾಜಕ್ಕೇ ಆಶೀರ್ವಾದಕರವಾಗಿರುತ್ತಾರೆ. ಈ ಶಿಕ್ಷಕರ ಕೆಲಸ ಪರಲೋಕದಿಂದ ದೇವರು ಕೊಟ್ಟಿದ್ದು. ಅದನ್ನು ಆತನಿಗಾಗಿ ನಿಷ್ಠೆಯಿಂದ, ಕರ್ತನಿಗೆ ಭಯಪಡುವ ಭಯದಿಂದ ಮಾಡುವಾಗ ವಿದ್ಯಾರ್ಥಿಗಳ ಜೀವನ ಪುನಶ್ಚೇತನ ಗೊಳ್ಳುತ್ತದೆ ಮತ್ತು ನಕ್ಷತ್ರಗಳಂತೆ ಹೊಳೆಯುತ್ತಾರೆ. ನೀವು ನಿಮ್ಮ ಶಾಲೆ ಅಥವಾ ಕಾಲೇಜಿನ ಉದ್ಯೋಗಿ ಮಾತ್ರವಲ್ಲ, ನೀವು ಪರಲೋಕದ ಉದ್ಯೋಗಿಗಳು. ದೇವರು ನಿಮ್ಮ ಮೂಲಕ ಪ್ರತಿಯೊಂದು ಮಗುವಿನ ಜೀವನವನ್ನು ರೂಪಿಸುತ್ತಾರೆ. ನೀವು ಕರ್ತವ್ಯದಲ್ಲಿ ವಿಫಲರಾದರೆ ಒಂದು ಪೀಳಿಗೆಗೆ ತೊಂದರೆಯಾಗುತ್ತದೆ ಮತ್ತು ದೇಶದ ಸ್ಥಿತಿ ಹದಗೆಡುತ್ತದೆ. ಈ ದೊಡ್ಡ ಸೋಂಕಿನ ಸಮಯದಲ್ಲೂ ಮತ್ತು ತುಂಬಾ ಕಷ್ಟದ ನಡುವೆಯೂ ನೀವು ಮಾಡುತ್ತಿರುವ ಕೆಲಸ ಮೆಚ್ಚುವಂತದ್ದೇ!

 

ಪ್ರಿಯರೇ! ಏನೋ ಅಲ್ಪ ಸಂಬಳಕ್ಕೆ ಒಂದು ಸಣ್ಣ ಕಂಪನಿಯಲ್ಲಿ ಗುಲಾಮನಂತೆ ಇದ್ದೇನೆ ಎಂದು ನೀವು ಭಾವಿಸುತ್ತಿದ್ದೀರ? ದೇವರು ಉಪಯೋಗಿಸುವ ಪಾತ್ರೆ ನೀವೇ ಎಂಬುದನ್ನು ಅರಿತುಕೊಂಡು ನಿಮ್ಮನ್ನು ದೇವರಿಗೆ ಸಮರ್ಪಿಸಿಕೊಂಡು, ಪೂರ್ಣ ಹೃದಯದಿಂದ, ಸಂತೋಷದಿಂದ ನಿಮ್ಮ ಕೆಲಸವನ್ನು ಮಾಡಿರಿ. ದೇವರು ನಿಮ್ಮನ್ನು ಆಶೀರ್ವದಿಸುತ್ತಾರೆ. ನಿಮ್ಮ ಕೆಲಸದ ಮಹತ್ವವನ್ನು ತಿಳಿದು ಕರ್ತನಿಗೆ ಸಮರ್ಪಣೆಯಿಂದ ಕಾರ್ಯಮಾಡಿರಿ. ದೇವರು ನಿಮ್ಮನ್ನು ಆಶೀರ್ವದಿಸಲಿ.

- Mrs. ಅನ್ಬುಜ್ಯೋತಿ ಸ್ಟಾಲಿನ್

 

ಪ್ರಾರ್ಥನಾ ಅಂಶ:

ಈ ತಿಂಗಳ ಎರಡನೇ ಮತ್ತು ನಾಲ್ಕನೇ ಬುಧವಾರದಿಂದ ಭಾನುವಾರದವರೆಗೆ ಐದು ದಿನಗಳವರೆಗೆ ನಡೆಯುವ ಸುವಾರ್ತೆ ಸೇವೆಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking meritking giriş perabet perabet giriş casibom casibom giriş holiganbet holiganbet giriş galabet casibom casibom giriş grandpashabet perabet perabet giriş padişahbet padişahbet giriş meritking meritking giriş grandpashabet grandpashabet giriş kalitebet kalitebet giris betsmove betsmove giris gonebet gonebet giris betnano betnano giriş jojobet jojobet jojobet jojobet jojobet holiganbet holiganbet grandpashabet betgit radissonbet