Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 04.09.2021
Share:

By Village Missionary Movement

Saturday, 04-Sep-2021

ಧೈನಂದಿನ ಧ್ಯಾನ(Kannada) – 04.09.2021

 

ಗುರೂಜಿಯ ಬಳಿ ಕಲಿತುಕೊಳ್ಳೋಣ

 

 "....ನನ್ನಲ್ಲಿ ಕಲಿತುಕೊಳ್ಳಿರಿ ...." - ಮತ್ತಾಯ 11:29

 

ಶಿಕ್ಷಕರೊಬ್ಬರು ತಮ್ಮ ಜೀವನದಲ್ಲಿ ತಾವು ಅನುಭವಿಸಿದ ಕಷ್ಟಗಳನ್ನೆಲ್ಲಾ ತನ್ನ ವಿದ್ಯಾರ್ಥಿಗಳು ಅನುಭವಿಸಬಾರದು ಎಂದು ಭಾವಿಸಿದ್ದರು. ಹಾಗಾಗಿ ಅವರು ಅವರಿಗೆ ಸಾಧ್ಯವಾದಷ್ಟು ಮಟ್ಟಿಗೆ ಪಾಠಗಳನ್ನು ಚೆನ್ನಾಗಿ ಕಲಿಸಿಕೊಟ್ಟರು. ಅವರು ತನ್ನ ವಿದ್ಯಾರ್ಥಿಗಳಿಗಾಗಿ ಅನೇಕ ವಿಷಯಗಳನ್ನು ತ್ಯಾಗ ಮಾಡಿದರು. ವಿದ್ಯಾರ್ಥಿಗಳು ಆತನ ಬಿಡದ ಪ್ರಯತ್ನ, ಕಠಿಣ ಪರಿಶ್ರಮ, ತ್ಯಾಗ ಎಲ್ಲವನ್ನೂ ಕಲಿತುಕೊಂಡರು. ಅವರೆಲ್ಲರೂ ಜೀವನದಲ್ಲಿ ಉತ್ತಮರಾಗಿ ಕಾಣಿಸಿಕೊಂಡರು. ಪ್ರತಿ ವಿದ್ಯಾರ್ಥಿಯು ಪ್ರತಿಯೊಂದು ದಿಕ್ಕಿನಲ್ಲಿಯೂ ಮಿಂಚಲು ಆರಂಭಿಸಿದರು. ಅವರ ಜೀವನವು ಆಶೀರ್ವಾದಕರವಾಗಿ ಬದಲಾಯಿತು.

 

ಪವಿತ್ರ ಬೈಬಲ್ ನಲ್ಲಿ ನಾವು ನೋಡುವುದಾದರೆ, ಕರ್ತನಾದ ಯೇಸು ಕ್ರಿಸ್ತನು ಒಬ್ಬ ಶ್ರೇಷ್ಠವಾದ ಗುರೂಜಿ ಯಾಗಿದ್ದರು. ಅವರು ತನ್ನ 3 ½ ವರ್ಷಗಳ ಭೂಲೋಕದ ಜೀವನದಲ್ಲಿ ಆತನು ಶಿಷ್ಯರನ್ನು ರೂಪಿಸಿದರು, ಅವರಿಗೆ ಪ್ರಾರ್ಥಿಸಲು ಕಲಿಸಿಕೊಟ್ಟರು, ಸತ್ಯವೇದವನ್ನು ಅಧ್ಯಯನ ಮಾಡಲು ಕಲಿಸಿಕೊಟ್ಟರು, ಸೇವೆ ಮಾಡಲು ಕಲಿಸಿಕೊಟ್ಟರು. ತಾಳ್ಮೆಯಿಂದಿರಲು ಕಲಿಸಿಕೊಟ್ಟರು. ನಮ್ರತೆಯಿಂದಿರಲು ಕಲಿಸಿಕೊಟ್ಟರು. ಹೀಗೆ ಯೇಸು ಕ್ರಿಸ್ತನು ಜೀವಕರವಾದ ನೀರನ್ನುಕೊಡುವವನು ನಾನೇ ಎಂದು ಸಮಾರ್ಯದ ಸ್ತ್ರೀ ಗೂ (ಯೋಹಾನ 4 ನೇ ಅಧ್ಯಾಯ), ಹೊಸದಾಗಿ ಹುಟ್ಟುವ ಅನುಭವದ ಬಗ್ಗೆ ನಿಕೊದೇಮನಿಗೂ (ಯೋಹಾನ 3 ನೇ ಅಧ್ಯಾಯ) ಕಲಿಸಿಕೊಟ್ಟರು. ಹೀಗೆ ಯೇಸುಕ್ರಿಸ್ತನ ಬಳಿ ಕಲಿತುಕೊಂಡ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಮಿಂಚಿದರು.

 

 ಸ್ನೇಹಿತರೇ! ಶಿಕ್ಷಕರು ನಮಗೆ ಬಹಳ ಮುಖ್ಯ! ಈ ಭೂಮಿಯಲ್ಲಿ ನಾವು ಒಂದು ಉತ್ತಮ ಜೀವನವನ್ನು ನಡೆಸಲು ಯೇಸುವಿನಿಂದ ಕಲಿಯುವುದು ಬಹಳ ಮುಖ್ಯ! ಅವರು ನಮಗೆ ಜೀವನದ ತತ್ವಗಳು ಮತ್ತು ವಿಧಾನಗಳನ್ನು ಸತ್ಯವೇದದ ಮೂಲಕ ಕಲಿಸಿಕೊಡುತ್ತಾರೆ. ಹೊಸ ಒಡಂಬಡಿಕೆಯಲ್ಲಿ ಮತ್ತಾಯ 5,6,7 ನೇ ಅಧ್ಯಾಯಗಳನ್ನು ಓದಿ, ಇಂದು ಅನೇಕ ನಾಯಕರು ಅದರ ಮೂಲಕ ಅನೇಕ ವಿಷಯಗಳನ್ನು ಕಲಿತುಕೊಳ್ಳುತ್ತಿದ್ದಾರೆ! ತಮ್ಮ ಜೀವನದಲ್ಲಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತಿದ್ದಾರೆ. ಯೇಸು ಕ್ರಿಸ್ತನೆಂಬ ಗುರೂಜಿಯ ಬಳಿ ಕಲಿತುಕೊಳ್ಳೋಣ! ಒಂದು ಒಳ್ಳೆಯ ಜೀವನವನ್ನು ಜೀವಿಸೋಣ!

- T. ಶಂಕರ್ ರಾಜ್

 

ಪ್ರಾರ್ಥನಾ ಅಂಶ:

ಇಂಗ್ಲೀಷ್ ಗೆ ದೈನಂದಿನ ಧ್ಯಾನ ಸಂದೇಶವನ್ನು ಭಾಷಾಂತರಿಸುವ ಹೆಟ್ಜಿ ತಾಯಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಅವರು ತ್ವರಿತವಾಗಿ ಗುಣಮುಖರಾಗಿ ಸತತವಾಗಿ ಅನುವಾದವನ್ನು ಮುಂದುವರೆಸುತ್ತಾ ಸಹಾಯ ಮಾಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş matbet giriş sahabet onwin bets10 bets10 giriş bets10 güncel giriş betcio atlasbet casibom meritking perabet casibom holiganbet galabet casibom padişahbet padişahbet giriş grandpashabet jojobet cashwin grandpashabet radissonbet palacebet amgbahis cratosroyalbet grandpashabet betpuan betsalvador matbet meritking perabet perabet giriş instagram ban service betsilin betsilin giris pashagaming pashagaming giris gorabet gorabet giris kralbet holiganbet