Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 21.09.2021
Share:

By Village Missionary Movement

Tuesday, 21-Sep-2021

ಧೈನಂದಿನ ಧ್ಯಾನ(Kannada) – 21.09.2021

 

ಮೂರ್ಖ ಪಕ್ಷಿ ಮತ್ತು ಹುಳು ವ್ಯಾಪಾರಿ ...

 

"ನನ್ನ ಪ್ರಿಯ ಸಹೋದರರೇ, ಮೋಸಹೋಗಬೇಡಿರಿ." - ಯಾಕೋಬ 1:16

 

ಬಹಳ ಸುಂದರವಾದ ಬಣ್ಣಬಣ್ಣದ ಹಕ್ಕಿಯೊಂದು ಆಹಾರಕ್ಕಾಗಿ ಅಲ್ಲಲ್ಲಿ ಹಾರಾಡಿ ತಿರುಗಾಡುತ್ತಾ ಆಹಾರವೇನೂ ಸಿಗದೇ ಹೋದದ್ದರಿಂದ ಬಹಳ ಹಸಿವಿನಿಂದ ಒಂದು ಸ್ಥಳದಲ್ಲಿ ಬಂದು ಕುಳಿತುಕೊಂಡಿತು ಅಲ್ಲಿ ಒಬ್ಬ ಹುಳುಗಳ ವ್ಯಾಪಾರಿ ಹಣಕ್ಕಾಗಿ ಹುಳುಗಳನ್ನು ಮಾರುತ್ತಿದ್ದ. ತುಂಬಾ ಹಸಿದಿದ್ದ ಬಣ್ಣದ ಪಕ್ಷಿ ಇದನ್ನು ನೋಡಿದ ತಕ್ಷಣ ವ್ಯಾಪಾರಿಯ ಬಳಿ ಒಂದು ಹುಳುವನ್ನು ಕೊಡುವಂತೆ ಕೇಳಿತು. ಅದಕ್ಕೆ ಆ ವ್ಯಾಪಾರಿ ಹಣ ಕೊಡಬೇಕೆಂದು ಕೇಳಿದನು. ಬಣ್ಣದ ಪಕ್ಷಿ ತನ್ನ ಬಳಿ ಹಣ ಇಲ್ಲದಿರುವುದರಿಂದ, "ಹಲವು ಬಣ್ಣಗಳಿಂದ ಹೊಳೆಯುತ್ತಿರುವ ರೆಕ್ಕೆಗಳಲ್ಲಿ ಒಂದು ಗರಿಯನ್ನು ಕೊಡುತ್ತೇನೆ" ಎಂದಿತು. ಅದನ್ನು ಕೇಳಿದ ವ್ಯಾಪಾರಿ, ಇದು ಸುಂದರವಾಗಿದೆ. ಇದನ್ನು ಮಾರಿದರೆ ಹಣ ಸಿಗಬಹುದು ಎಂದು ನೆನೆಸಿ,ಅದರ ಒಂದು ರೆಕ್ಕೆಯ ಗರಿಯನ್ನು ತೆಗೆದುಕೊಂಡು ಒಂದು ಹುಳುವನ್ನು ಕೊಟ್ಟನು. ತುಂಬಾ ಹಸಿವಿನಿಂದಿದ್ದ ಪಕ್ಷಿ ಆತುರದಿಂದ ಹುಳುವನ್ನು ತೆಗೆದುಕೊಂಡು ತಿಂದಿತು. ಆ ಪಕ್ಷಿ ತುಂಬಾ ಹಸಿವಿನಿಂದ ಇದ್ದದ್ದರಿಂದ ಒಂದು ಹುಳ ಅದಕ್ಕೆ ಸಾಕಾಗಲಿಲ್ಲ. ತಕ್ಷಣ ವ್ಯಾಪಾರಿಯ ಬಳಿ ಇನ್ನೊಂದು ಹುಳುವನ್ನು ನೀಡುವಂತೆ ಕೇಳಿತು. ಅವನೂ ಕೂಡ, ಇನ್ನೊಂದು ರೆಕ್ಕೆಯ ಗರಿಯನ್ನು ತೆಗೆದುಕೊಂಡು ಹುಳುವನ್ನು ಕೊಟ್ಟನು. ಹೀಗೆ ತನ್ನನ್ನು ತಾನು ನಿಯಂತ್ರಿಸಲಾಗದೆ ತನ್ನ ರೆಕ್ಕೆಯ ಗರಿಗಳೆಲ್ಲ ಖಾಲಿಯಾಗುವವರೆಗೂ ಅರಿವಿಲ್ಲದೆ ತನ್ನ ರೆಕ್ಕೆಗಳನ್ನೆಲ್ಲಾ ವ್ಯಾಪಾರಿಗೆ ಕೊಟ್ಟುಬಿಟ್ಟು ಹುಳುಗಳನ್ನು ತೆಗೆದುಕೊಂಡಿತು. ಬಣ್ಣದ ಪಕ್ಷಿ ರೆಕ್ಕೆಗಳಿಲ್ಲದ ಪಕ್ಷಿಯಾಯಿತು. ಸರಿ ಈಗ ತೃಪ್ತಿಯಾಯಿತು ಗೂಡಿಗೆ ಹೊರಡೋಣ ಎಂದು ಹಾರಲು ಪ್ರಯತ್ನಿಸಿದಾಗ ಅದರಿಂದ ಹಾರಲು ಸಾಧ್ಯವಾಗಲಿಲ್ಲ ಅಯ್ಯೋ ಪಾಪ ತುಂಬಾ ಪರಿತಪಿಸಿತು. ವ್ಯಾಪಾರಿಯು ತನ್ನ ದಾರಿಯಲ್ಲಿ ಹೊರಟು ಹೋದನು. ಆಗಲೇ ಆ ಬಣ್ಣದ ಪಕ್ಷಿಗೆ ತನ್ನ ಮೂರ್ಖತನದ ಅರಿವಾಯಿತು. ನಂತರ ಕೆಲವೇ ಗಂಟೆಗಳಲ್ಲಿ ಆ ಪಕ್ಷಿ ಇತರ ಪಕ್ಷಿಗಳಿಗೆ ಆಹಾರವಾಯಿತು. 

 

ಹೌದು, ಇದನ್ನು ಓದುವಾಗ ಬಣ್ಣದ ಹಕ್ಕಿಯ ಮೇಲೆ ಕರುಣೆ ಮತ್ತು ವ್ಯಾಪಾರಿಯ ಮೇಲೆ ಕೋಪ ಉಂಟಾಗಬಹುದು. ಇದನ್ನು ಓದುತ್ತಿರುವ ನೀವು ಬಣ್ಣದ ಹಕ್ಕಿಯಂತೆ ಮೂರ್ಖರಾಗಿ ಯಾವುದೋ ಒಂದು ವಿಷಯದಲ್ಲಿ ನಿಮಗಿರುವ ಉತ್ತಮವಾದದ್ದನ್ನು ಕಳೆದುಕೊಳ್ಳುತ್ತಿದ್ದೀರಾ? ಮೋಸಗಾರನಾದ ಶತ್ರು ಈ ವ್ಯಾಪಾರಿಯಂತೆಯೇ, ಆಸೆ ಇಚ್ಛೆಗಳನ್ನು ಪ್ರೇರೇಪಿಸುವ ಮೂಲಕ, ದೇವರು ನಮಗೆ ನೀಡಿದ ಉತ್ತಮವಾದ ಉಡುಗೊರೆಗಳನ್ನು ಕಿತ್ತುಕೊಳ್ಳಲು ಬಲೆ ಬೀಸುತ್ತಿದ್ದಾನೆ. (1 ಪೇತ್ರ 5: 8) ರಲ್ಲಿ ಬರೆದಿರುವ ಪ್ರಕಾರ ನಿಮ್ಮ ವಿರೋಧಿಯಾಗಿರುವ ಸೈತಾನನು ಗರ್ಜಿಸುವ ಸಿಂಹದೋಪಾದಿಯಲ್ಲಿ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ. ಆದ್ದರಿಂದ ಈ ವಾಕ್ಯ ಭಾಗದಲ್ಲಿ ಹೇಳಿರುವ ಪ್ರಕಾರ ಬುದ್ಧಿಯುಳ್ಳವರಾಗಿರಿ, ಎಚ್ಚರವಾಗಿರಿ. ಅದೇ ಸಮಯದಲ್ಲಿ ನಮ್ಮ ಜೀವನದಲ್ಲಿ ದೇವರು ಕೊಟ್ಟಿರುವ ಉಡುಗೊರೆಗಳನ್ನು ಅಲ್ಪವಾದ ಸುಖಕ್ಕಾಗಿ ಕಳೆದುಕೊಳ್ಳದಂತೆ ಜಾಗರೂಕರಾಗಿರಿ. ದೇವರು ನಿಮಗೆ ಸಹಾಯ ಮಾಡಲಿ!

- Sis. ಜೆಪಿನ್

 

ಪ್ರಾರ್ಥನಾ ಅಂಶ:

ದೇವರು ನಮಗೆ ಕೊಟ್ಟಿರುವ ದರ್ಶನವು ನೆರವೇರಲು ಪ್ರತಿ ರಾಜ್ಯದಿಂದ 12 ಮಿಷನರಿಗಳು ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al Elexbet matbet giriş matbet instagram unban x unban twitter unban holiganbet setrabet marsbahis giriş vaycasino giriş