By Village Missionary Movement
Wednesday, 22-Sep-2021ಧೈನಂದಿನ ಧ್ಯಾನ(Kannada) – 22.09.2021
ಎದ್ದೇಳು
"ಆಗ ಫೀನೆಹಾಸನು ನಿಂತು ಕೊಂಡು ನ್ಯಾಯತೀರಿಸಿದ್ದರಿಂದ ವ್ಯಾಧಿಯು ನಿಂತು ಹೋಯಿತು." - ಕೀರ್ತನೆ 106:30
ದೇವಾದಿ ದೇವನು ತನ್ನ ಸ್ನೇಹಿತನಾದ ಅಬ್ರಹಾಮನ ಸಂತತಿಯನ್ನು ಬಹಳ ಕಠಿಣವಾದ ಸೆರೆಯಾಗಿದ್ದ ಐಗುಪ್ತದಿಂದ ಹಾಲು ಜೇನೂ ಹರಿಯುವ ದೇಶಕ್ಕೆ ಕರೆತರುವ ಮಾರ್ಗದಲ್ಲಿ, ಬಾಲಾಕನೆಂಬ ಮೋವಾಬ್ಯರ ಅರಸನು ಕೂಲಿಗಾಗಿ ವಂಚನೆ ಮಾಡುವ ಬಿಳಾಮನೆಂಬವನು ಸೇರಿ ಮಾಡಿದ ಕೆಟ್ಟ ಯೋಚನೆಯಿಂದ ಇಸ್ರಾಯೇಲ್ಯರು ಬಾಳ್‌ಪೆಗೊಯೋರಿಗೆ ಕೂಡಿಕೊಂಡು ಸತ್ತವರಿಗೆ ಅರ್ಪಿಸಿದ ಬಲಿಗಳನ್ನು ತಿಂದು ತಮ್ಮ ಕ್ರಿಯೆಗಳಿಂದ ಆತನಿಗೆ ಕೋಪವನ್ನು ಎಬ್ಬಿಸಿದರು; ಆದದರಿಂದ ವ್ಯಾಧಿಯು ಅವರಲ್ಲಿ ಹೊಕ್ಕಿತು. ಇಸ್ರಾಯೇಲ್ಯರಿಗೆ ವ್ಯಾಧಿ ಉಂಟಾಗಲು ಕಾರಣವಾಗಿದ್ದ ವ್ಯಭಿಚಾರ ಪಾಪವನ್ನು ನಿಲ್ಲಿಸಲು ಫೀನೆಹಾಸನು ನಿಂತು ನ್ಯಾಯತೀರಿಸಿದನೆಂದು ಕೀರ್ತನೆ 106- ರಲ್ಲಿ ಓದುತ್ತೇವೆ. ನಮ್ಮ ದೇವರಿಗೆ ಬಹಳವಾಗಿ ಕೋಪವನ್ನುಂಟು ಮಾಡಿದ ಆ ಘಟನೆ ನಡೆದಾಗ ಫೀನೆಹಾಸನು ಪಾಪ ಮಾಡುವವರ ಗುಂಪಿನೊಂದಿಗೆ ಸಹವಾಸ ಮಾಡುತ್ತಿರಲಿಲ್ಲ. ಅದರಂತೆ ಅವನು ಮೋಜನ್ನು ನೋಡುವ ಗುಂಪಿನಲ್ಲಿಯೂ ಇರಲಿಲ್ಲ. ಬದಲಾಗಿ, ದೇವದರ್ಶನದ ಗುಡಾರದ ಬಾಗಲಿನ ಸಭೆಯ ಮಧ್ಯದಲ್ಲಿ ಮೋಶೆಯೊಂದಿಗೆ ಅಳುತ್ತಿದ್ದನು. ಆದ್ದರಿಂದಲೇ ಅವನು ಜಿಮ್ರಿ ಮತ್ತು ಕೊಜ್ಬೀಯನ್ನು ಕೊಲ್ಲಲು ವೈರಾಗ್ಯವನ್ನು, ಶಕ್ತಿಯನ್ನು ಹೊಂದಿಕೊಂಡನು. ನಾವು ಕೂಡ ಇದರಂತೆ ದೇವರಿಗಾಗಿ ಅದೇ ಹುಮ್ಮಸ್ಸನ್ನು ಹೊಂದಬೇಕಾದರೆ, ದೆಲೀಲಳ ಮಡಿಲಲ್ಲಿ ನಿದ್ರಿಸುವ ಸಂಸೋನನ ಹಾಗಲ್ಲ, ಕಣ್ಣುಗಳಿಗೆ ಕಾಡಿಗೆಯನ್ನು ಹಚ್ಚಿಕೊಂಡ ಈಜೆಬೆಲಳಿಗೆ ಬಿದ್ದುಹೋಗದಂತೆ, ಅವಳನ್ನು ನಿರ್ಮೂಲ ಮಾಡಿದ ಯೇಹುವಿನ ಹಾಗೆ ಬಾಳಲು ನಮ್ಮನ್ನು ಸಮರ್ಪಿಸಿಕೊಳ್ಳೋಣ.
ಹೀಗೆ ಫೀನೆಹಾಸನು ಎದ್ದುನಿಂತು ದೇವರಿಗಾಗಿ ಭಕ್ತಿ ವೈರಾಗ್ಯವನ್ನು ತೋರಿಸಿದ್ದರಿಂದ ಅವನಿಗೆ ಸಿಕ್ಕಿದ ಅನೇಕ ಒಳ್ಳೆಯ ಕಾರ್ಯಗಳಲ್ಲಿ ಒಂದು ಯಾವುದೆಂದರೆ ಅರಣ್ಯ ಕಾಂಡ 25:13-ರ ಪ್ರಕಾರ ಅವನಿಗೂ ಅವನ ಹಿಂದೆ ಬರುವ ಅವನ ಸಂತತಿಗೂ ನಿತ್ಯ ಯಾಜಕತ್ವದ ಒಡಂಬಡಿಕೆಯಾಗಿರುವದು ಎಂದು ಕರ್ತನು ಹೇಳಿದರು. ಅಷ್ಟು ಮಾತ್ರವಲ್ಲ 1 ಪೂರ್ವಕಾಲ ವೃತ್ತಾಂತ 9:20 ನೇ ವಾಕ್ಯದ ಪ್ರಕಾರ, ಫೀನೆಹಾಸನು ಪೂರ್ವದಲ್ಲಿ ಅವರ ಮೇಲೆ ಅಧಿಕಾರಿಯಾಗಿರಲು ಅಧಿಕಾರವನ್ನೂ ಕೊಟ್ಟಿದ್ದಾರೆಂದು ನಾವು ನೋಡುತ್ತೇವೆ. ಆದ್ದರಿಂದ ನಾವು ಕೂಡ ಎದ್ದು ನಿಂತು ಯೇಸುವಿಗಾಗಿ ಈ ರೀತಿಯ ಕೆಲಸಗಳನ್ನು ಮಾಡುವಾಗ ನಮ್ಮ ಮೂಲಕ ದೇವರು ತನ್ನ ಜನರ ಬಾಧೆಗಳನ್ನು ತೆಗೆದುಹಾಕುತ್ತಾರೆ. ನಮ್ಮನ್ನು ಮತ್ತು ನಮ್ಮ ವಂಶಸ್ಥರನ್ನು ಆಶೀರ್ವದಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳಬಹುದು. ಆದುದರಿಂದ ಫೀನೆಹಾಸನ ಬಳಿಯಿದ್ದ ಇಂತಹ ವೈರಾಗ್ಯವನ್ನು ದೇವರ ಬಳಿ ಕೇಳಿ ಪಡೆದು ಅವರ ನಾಮ ಮಹಿಮೆಗಾಗಿಯೂ ನಮಗೂ ನಮ್ಮ ಸಂತತಿಗೂ ಆಶೀರ್ವಾದಕರವಾಗಿಯೂ ಜೀವಿಸೋಣ.
- K. ಬೆಂಜಮಿನ್
ಪ್ರಾರ್ಥನಾ ಅಂಶ:
ನಂಬಿಕೈ TV ಮತ್ತು ಸತ್ತಿಯಂ TVಯಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳ ಮೂಲಕ ಅನೇಕರು ದೇವರನ್ನು ತಿಳಿದುಕೊಳ್ಳಲು ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482