Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 02.10.2021
Share:

By Village Missionary Movement

Saturday, 02-Oct-2021

ಧೈನಂದಿನ ಧ್ಯಾನ(Kannada) – 02.10.2021

 

ಕಸದ ಗಾಡಿ

 

"ಜ್ಞಾನವಿಲ್ಲದವನು ತನ್ನ ನೆರೆಯ ವನನ್ನು ಹೀನೈಸುತ್ತಾನೆ; ವಿವೇಕಿಯು ಮೌನವಾಗಿರು ತ್ತಾನೆ” - ಜ್ಞಾನೋಕ್ತಿಗಳು 11:12

 

ಒಮ್ಮೆ ಫಿಲಿಪ್ ಬಾಡಿಗೆ ಟ್ಯಾಕ್ಸಿಯಲ್ಲಿ ಹತ್ತಿ ಕುಳಿತು, ತನ್ನ ಪ್ರಯಾಣವನ್ನು ಮುಂದುವರಿಸಿದಾಗ, ಕಾರು ಸರಿಯಾದ ದಿಕ್ಕಿನಲ್ಲಿ ಹೋಗುತ್ತಿತ್ತು ಇದ್ದಕ್ಕಿದ್ದಂತೆ ಒಂದು ಕಪ್ಪು ಬಣ್ಣದ ಕಾರೊಂದು ವೇಗವಾಗಿ ಅಡ್ಡ ಬಂದಿತು. ಫಿಲಿಪ್ ನ ಡ್ರೈವರ್ ವಾಹನವನ್ನು ನಿಧಾನವಾಗಿ ಓಡಿಸಿ, ಸ್ವಲ್ಪ ಅಂತರದಲ್ಲಿ ಅಪಘಾತದಿಂದ ತಪ್ಪಿಸಿದರು. ಆದರೆ ಕಪ್ಪು ಬಣ್ಣದ ಕಾರಿನಲ್ಲಿದ್ದ ವ್ಯಕ್ತಿ ಚಾಲಕನ ಮೇಲೆ ಕೂಗಾಡಲಾರಂಭಿಸಿದ. ಆದರೆ ಡ್ರೈವರ್ ಮುಗುಳ್ನಗೆಯೊಂದಿಗೆ, ಕೈ ಬೀಸಿ ತನ್ನ ದಾರಿಯನ್ನು ಮುಂದುವರೆಸಿದರು. ಫಿಲಿಪ್ ಆ ಡ್ರೈವರ್ ಬಳಿ, "ಯಾಕೆ ಆ ವ್ಯಕ್ತಿಯನ್ನು ಸುಮ್ಮನೆ ಬಿಟ್ಟು ಬಿಟ್ಟಿರಿ? ಆ ವ್ಯಕ್ತಿಯೇ ತಾನೇ ತಪ್ಪಾಗಿ ಬಂದಿದ್ದು? ನೀವು ಯಾಕೆ ಅವನ ಮೇಲೆ ಕೂಗಾಡಲಿಲ್ಲ? ನನಗೇ ರಕ್ತ ಕುದಿಯುತ್ತಿದೆ" ಎಂದು ಬಹಳ ಗಟ್ಟಿಯಾಗಿ ಪ್ರಶ್ನೆ ಮಾಡಿದಾಗ ಆ ಡ್ರೈವರ್, "ಅನೇಕ ಜನರು ಕಸ ತುಂಬಿಕೊಂಡು ಹೋಗುವ ಲಾರಿಗಳಂತೆ ಇದ್ದಾರೆ. ಅವರ ಹೃದಯ ಪೂರ್ತಿ ಬಹಳ ಮೋಸ, ಕೋಪ, ಹತಾಶೆಯೇ ಕಾಣುತ್ತಿದೆ. ಕಸದ ಗಾಡಿ ಯಾವುದಾದರೂ ಒಂದು ಸ್ಥಳದಲ್ಲಿ ಆ ಕಸವನ್ನು ಸುರಿಯುವ ಹಾಗೆ ಇವರು ಈ ಕಸಗಳನ್ನು ತಮ್ಮ ಹೃದಯಗಳಲ್ಲಿ ಹೊತ್ತುಕೊಂಡು ಯಾರ ಬಳಿ ಸುರಿಯೋಣ ಎಂದು ನೋಡುತ್ತಿದ್ದಾರೆ. ಕೆಲವು ಸಮಯಗಳಲ್ಲಿ ನಮ್ಮ ಮೇಲೆ ಸುರಿಯುತ್ತಾರೆ ಅದನ್ನೆಲ್ಲಾ ಮನಸ್ಸಿಗೆ ಹಾಕಿಕೊಳ್ಳಬಾರದು. ಆ ಕಸಗಳನ್ನು ಹೊತ್ತುಕೊಂಡು ಹೋಗಿ ಅದನ್ನು ನಿಮ್ಮ ಮನೆ ಅಥವಾ ಆಫೀಸ್ ನಂತಹ ಸ್ಥಳಗಳಲ್ಲಿ ಹರಡಬಾರದು. ಆ ಕಸಗಳನ್ನು ಆ ಸಮಯದಲ್ಲೇ ಮರೆತುಬಿಡುವುದು ಉತ್ತಮ” ಎಂದು ಹೇಳಿದರು.

 

ದಾವೀದನು ತನ್ನ ಜನರು ಮತ್ತು ಅವನ ಅಂಗರಕ್ಷಕರೊಂದಿಗೆ ನಡೆದುಕೊಂಡು ಬರುವಾಗ, ಸೌಲನ ವಂಶಸ್ಥನಾದ ಸಿಮೆಯೋನನು, ದಾವೀದನನ್ನು ರಾಜನಾಗಿ ಸ್ವೀಕರಿಸಲು ಮನಸ್ಸಿಲ್ಲದ್ದರಿಂದ ದೂಷಿಸಿ, ಕಲ್ಲೆಸೆದು, ಮಣ್ಣನ್ನು ಬಾಚಿಕೊಂಡು ಎಸೆಯುತ್ತಾಬಂದನು. ಜೊತೆಗಿದ್ದವರು ಕೋಪಗೊಂಡು ಅವನ ತಲೆಯನ್ನು ಕತ್ತರಿಸಿ ಬರಲಾ ಎಂದು ಕೇಳಿದಾಗ, ಅವನು ದೂಷಣೆ ಮಾಡಿದರೆ ಮಾಡಲಿ, ಕರ್ತನ ಅನುಮತಿಯಿಲ್ಲದೆ ಏನೂ ನಡೆಯುವುದಿಲ್ಲ ಎಂದು ಹೇಳಿ ಯಾವುದನ್ನೂ ಮನದಲ್ಲಿಟ್ಟುಕೊಳ್ಳದೇ ಚಿಂತಿಸದೇ ಹೇಳಿದರು .

 

ಎಷ್ಟೋ ಬಾರಿ ನಾವು ಕೆಲಸ ಮಾಡುವ ಸ್ಥಳಗಳಲ್ಲಿ ಇಂಥಾ ಮಾತುಗಳನ್ನು ಕೇಳಿ ಬಳಲಿಹೋಗಿದ್ದೇವೆ. ನಾನು ಒಂದು ತಪ್ಪೂ ಮಾಡಿಲ್ಲ, ಆದರೆ ನನ್ನನ್ನು ಹೀಗೆ ಹೇಳಿಬಿಟ್ಟರೆ ಎಂದು ರಾತ್ರಿಯಿಡೀ ನಿದ್ರಿಸದೇ ಅದರ ಬಗ್ಗೆಯೇ ಯೋಚಿಸುತ್ತಿರುತ್ತೇವೆ! ಆ ಡ್ರೈವರ್ ಹೇಳಿದ ಹಾಗೆ ತಮ್ಮ ಕಸವನ್ನು ಯಾರ ಮೇಲಾದರೂ ಸುರಿಯಬೇಕೆಂದು ಹುಡುಕುತ್ತಿದ್ದಾಗ ನಾವು ಸಿಕ್ಕಿಹಾಕಿಕೊಂಡಿರುತ್ತೇವೆ. ಚಿಂತೆ ಬಿಡಿ. ಇದು ಕೇವಲ ನಿಮಗೆ ಮಾತ್ರ ಸಂಭವಿಸುವ ವೈಯಕ್ತಿಕ ಅನುಭವವಲ್ಲ! "ಜ್ಞಾನವಿಲ್ಲದವನು ತನ್ನ ನೆರೆಯ ವನನ್ನು ಹೀನೈಸುತ್ತಾನೆ; ವಿವೇಕಿಯು ಮೌನವಾಗಿರು ತ್ತಾನೆ" ಎಂದು ಸತ್ಯವೇದವು ಹೇಳುತ್ತದೆ. ಯಾರಾದರೂ ಕೂಗಾಡಿದರೆ, ದಾವೀದನಂತೆ ಮುಗುಳ್ನಗೆ ಯಿಂದ ಅಂಗೀಕರಿಸಿ ಹಾಗೆಯೇ ಬಿಟ್ಟು ಬಿಡಿ. ಅದನ್ನೇ ನೆನೆಸಿಕೊಂಡು ಕುಗ್ಗಿಹೋಗಬೇಡಿರಿ! ಅವರಿಗಾಗಿ ಪ್ರಾರ್ಥಿಸಿರಿ. ನಿಮ್ಮ ಕುಟುಂಬಕ್ಕೆ ಸೇರಿದವರಾಗಿದ್ದರೆ, ಜಗಳವಾಡಿ ದಿನವನ್ನು ವ್ಯರ್ಥ ಮಾಡದೆ, ಅವರನ್ನು ಕ್ಷಮಿಸಿ, ಪ್ರೀತಿಸಿರಿ! ಕರ್ತನು ನಿಮಗೆ ಕೊಟ್ಟಿರುವ ದಿನವನ್ನು ಆನಂದವಾಗಿ ಅನುಭವಿಸಿರಿ.

- Bro. ಹನೀಶ್ ಸಾಮುವೇಲ್

 

ಪ್ರಾರ್ಥನಾ ಅಂಶ:

ನಂಬಿಕೈ ಟಿವಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳನ್ನು ನೋಡುವ ಅನೇಕರು ದೇವರ ಪ್ರೀತಿಯನ್ನು ತಿಳಿದುಕೊಳ್ಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking meritking giriş perabet perabet giriş casibom casibom giriş holiganbet holiganbet giriş galabet casibom casibom giriş grandpashabet perabet perabet giriş padişahbet padişahbet giriş meritking meritking giriş grandpashabet grandpashabet giriş kalitebet kalitebet giris betsmove betsmove giris gonebet gonebet giris betnano betnano giriş jojobet jojobet jojobet jojobet jojobet holiganbet holiganbet holiganbet grandpashabet grandpashabet