Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 06.10.2021
Share:

By Village Missionary Movement

Wednesday, 06-Oct-2021

ಧೈನಂದಿನ ಧ್ಯಾನ(Kannada) – 06.10.2021

 

Help....Needy

 

"ಉಪಕಾರಮಾಡುವದಕ್ಕೆ ನಿನ್ನ ಕೈಲಾದಾಗ ಹೊಂದತಕ್ಕವರಿಗೆ ಅದನ್ನು ತಪ್ಪಿಸಬೇಡ" - ಜ್ಞಾನೋಕ್ತಿಗಳು 3:

 

ಒಬ್ಬ ಯೌವನಸ್ಥ ತನ್ನ ವಿದ್ಯಾರ್ಹತೆಗೆ ತಕ್ಕ ಕೆಲಸವಿಲ್ಲದೆ, ಬಹಳ ಕಡಿಮೆ ಸಂಬಳವನ್ನು ತೆಗೆದುಕೊಂಡದ್ದರಿಂದ, ಹಳ್ಳಿಯಲ್ಲಿರುವ ಪೋಷಕರಿಗೂ ಹಣವನ್ನು ಕಳುಹಿಸಲು ಸಾಧ್ಯವಾಗದೆ ಬಹಳ ಬೇಸರವಾಗಿದ್ದನು. ನನಗೆ ಒಳ್ಳೆಯ ದಿನಗಳು ಬರುವುದಿಲ್ಲವೇ ಎಂದು ಪ್ರಾರ್ಥಿಸಿಕೊಳ್ಳುತ್ತಲೇ ತಾನು ಹೋಗುವ ಸಭೆಯಲ್ಲಿ ಚಿಕ್ಕಚಿಕ್ಕ ಸೇವೆಯನ್ನು ಮಾಡುತ್ತಾ ಬಂದನು. ಒಂದು ದಿನ ಅವನ ಮಾಲಿಕನು ತನ್ನ ಸಂಬಂಧಿಕರಿಗೆ ಆಹಾರ ಕೊಡಲು, ಸರ್ಕಾರಿ ಆಸ್ಪತ್ರೆಗೆ ಈತನನ್ನು ಕಳುಹಿಸಿದರು. ಅದು ಕೊರೋನ ವಾರ್ಡ್ ಆಗಿದ್ದುದರಿಂದ ಮಾಸ್ಕ್, ಸ್ಯಾನಿಟೈಸರ್ ಎಲ್ಲವನ್ನು ಹಾಕಿಕೊಂಡು ಇವನು ಒಳಗೆ ಹೋದಾಗ, ಎಲ್ಲಿ ತಿರುಗಿದರೂ  ಜನರು ಸ್ಥಳವಿಲ್ಲದೆ ಅನಾರೋಗ್ಯದಿಂದ ಮಲಗಿರುವಾಗ, ಪ್ರತಿಯೊಬ್ಬರ ಕಣ್ಣುಗಳಲ್ಲೂ ಒಂದು ಹುಡುಕಾಟ.  ಯಾರಾದರೂ ಸಹಾಯ ಮಾಡುತ್ತಾರೋ ಎಂದು!  ಅಲ್ಲಿರುವ ಸಿಬ್ಬಂದಿಗಳು ಬಹಳ ಉದ್ರಿಕ್ತವಾಗಿ ತಿರುಗಾಡುತ್ತಾ ಎಲ್ಲರನ್ನೂ ಗಮನಿಸಲು ಸಾಧ್ಯವಾಗದೆ ತುಂಬಾ ಕಷ್ಟ ಪಡುತ್ತಿದ್ದರು.  ಸಂಬಂಧಿಕರಿಗೆ ಆಹಾರ ನೀಡಿ, ಬಾಯಾರಿದವರಿಗೆ ನೀರು ಮೊಗೆದು ಕೊಟ್ಟು, ಅವರ ಅಗತ್ಯಕ್ಕೆ ತಕ್ಕಂತೆ ಸಹಾಯ ಮಾಡಲು ಪ್ರಾರಂಭಿಸಿದನು.  ನೀರು ಮತ್ತು ಆಹಾರವನ್ನು ಪಡೆದವರು ಸಾವಿರಾರು ರೂಪಾಯಿಗಳನ್ನು ಕೊಟ್ಟರು. ಅಷ್ಟು ಮಾತ್ರವಲ್ಲದೆ, "ಅಯ್ಯಾ, ಈ ಕೊರೋನ ವಾರ್ಡ್ ನಲ್ಲಿ ನಾವು ಇರುವಂತಹ ದಿನಗಳಲ್ಲಿ ದಯವಿಟ್ಟು ನಮಗೆ ಸಹಾಯ ಮಾಡಲು ಸಾಧ್ಯವಾ?" ಎಂದು ಹೇಳಿದಾಗ ಆ ಮಾತನ್ನು ನಿರಾಕರಿಸಲು ಮನಸ್ಸಿಲ್ಲದೆ ತನ್ನ ಜೀವವನ್ನು ಅಲ್ಪವಾಗಿ ನೆನೆಸಿ ಸಹಾಯ ಮಾಡಲು ಪ್ರಾರಂಭಿಸಿದನು. ಎರಡು ತಿಂಗಳುಗಳು ಕಳೆದು ಹೋದವು. ಜೀವಂತವಾಗಿ ಬದುಕುಳಿದವರು ಧಾರಾಳವಾಗಿ ಹಣವನ್ನು ಕೊಟ್ಟು ಕೃತಜ್ಞತೆ ಸಲ್ಲಿಸಿದರು. ಎರಡು ತಿಂಗಳೊಳಗೆ ಎರಡು ಲಕ್ಷ ರೂಪಾಯಿಗಳು ಅವನ ಕೈಗೆ ಬಂತು. ತನ್ನ ಸೇವಕರ ಬಳಿ ಬಂದು ಇದನ್ನು ಸಾಕ್ಷಿಯಾಗಿ ಹೇಳಿದನು

 

ಅರಸನಾದ ದಾವೀದನು ಅರಣ್ಯದಲ್ಲಿ ಇರುವಾಗ, ಕುರಿಗಳ ಉಣ್ಣೆಯನ್ನು ಕತ್ತರಿಸುತ್ತಿದ್ದ ನಾಬಾಲನ ಬಳಿಗೆ ತನ್ನ ಸೇವಕರನ್ನು ಕಳುಹಿಸಿ ತನಗಾಗಿಯೂ, ತನ್ನ ಸೇವಕರಿಗಾಗಿಯೂ ಸಹಾಯವನ್ನು ಮತ್ತು ಆಹಾರವನ್ನು ಕೇಳಿದಾಗ ನಾಬಾಲನು ಬಹಳ ಕೋಪಾವೇಶದಿಂದ ಮಾತನಾಡಿ, ಯಾವ ಸಹಾಯವನ್ನೂ ಮಾಡದೆ ಅವರನ್ನು ಸುಮ್ಮನೆ ಕಳುಹಿಸಿ ಅರಸನ ಕೋಪವನ್ನು ಸಂಪಾದಿಸಿಕೊಂಡನು. ಇದನ್ನು ಅರಿತುಕೊಂಡ ನಾಬಾಲನ ಹೆಂಡತಿ ಅಬೀಗೈಲಳು ಹಸಿವಿನಿಂದಿದ್ದ ದಾವೀದನಿಗೂ,  ಅವನ ಸೇವಕರಿಗೂ ಆಹಾರವನ್ನು ತಯಾರಿಸಿ ದಾವೀದನ ಬಳಿಗೆ ತೆಗೆದುಕೊಂಡು ಹೋಗಿ ಕೊಟ್ಟು ರಾಜನ ದಯೆಯನ್ನು ಪಡೆದುಕೊಂಡಳು. ಮತ್ತೊಬ್ಬರಿಗೆ ಉಪಕಾರ ಮಾಡಲು ನಮಗೆ ಶಕ್ತಿ ಇರುವಾಗ, ನಾವು ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು.  ಅಬಿಗೈಲಳು ಬುದ್ಧಿವಂತಿಕೆಯಿಂದ ವರ್ತಿಸಿ ಸಹಾಯ ಮಾಡಿ ಆಶೀರ್ವಾದವನ್ನು ಪಡೆದುಕೊಂಡ

 

ಅನೇಕ ಸಮಯಗಳಲ್ಲಿ ನಾವು  ಕಷ್ಟ ಮತ್ತು ಸಂಕಟಗಳ ಸ್ಥಿತಿಯಲ್ಲಿರುವಾಗ  ಏನು ಮಾಡಬೇಕೆಂದು ತಿಳಿಯದೇ ಪರಿತಪಿಸುತ್ತಿರುವಾಗ ನಮ್ಮ ಬಗ್ಗೆ  ಚಿಂತೆ ಮತ್ತು ಭಾರ ಮಾತ್ರವೇ ನಮ್ಮನ್ನು ಒತ್ತಡಕ್ಕೆ ಗುರಿ ಮಾಡುತ್ತದೆ. ಆದರೆ ಅಂತಹ ಸನ್ನಿವೇಶದಲ್ಲಿಯೂ ನಾವು ಸ್ವಾರ್ಥವನ್ನು ನೋಡದೆ ಇತರರ ಅನುಕೂಲಕ್ಕಾಗಿ ಏನು ಮಾಡಲು ಸಾಧ್ಯ ಎಂಬ ಪ್ರಜ್ಞೆಯೊಂದಿಗೆ ನಾವು ನಮ್ಮಿಂದ ಸಾಧ್ಯವಾದಷ್ಟು ಸಹಾಯ ಮಾಡಿದಾಗ ದೇವರ ಪ್ರೀತಿಯನ್ನು ವ್ಯಕ್ತಪಡಿಸುವವರಾಗಿಯೂ ಮತ್ತು ದೇವರ ಹೆಸರನ್ನು ಮಹಿಮೆ ಪಡಿಸುವವರಾಗಿಯೂ ಕಾಣಲ್ಪಡುತ್ತೇವೆ

- Mrs.  ವಸಂತಿ ರಾಜಮೋಹ

 

ಪ್ರಾರ್ಥನಾ ಅಂ

ಮೀಡಿಯಾ ಸೇವೆಗಳಲ್ಲಿ ಕೆಲಸ ಮಾಡುವ ಸೇವಕರನ್ನು ದೇವರು ವಿಶೇಷವಾದ ಜ್ಞಾನದಿಂದ ತುಂಬಿಸುವಂತೆ   ಪ್ರಾರ್ಥಿಸಿರಿ

 

*Whatsap

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ

 

www.vmm.org.

ಈಮೈಲ್:- reachvmm@gmail.co

Android App: https://play.google.com/store/apps/details?id=com.infobells.vmmorgi

       

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-62600

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482 nmin.p*.ಶ:ನ್.ಳು..27!!19345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking perabet casibom holiganbet galabet casibom perabet perabet giriş padişahbet padişahbet giriş grandpashabet kalitebet kalitebet giris betsmove betsmove giris gonebet gonebet giris betnano betnano giriş jojobet jojobet casinomilyon jojobet palacebet sonbahis tambet grandpashabet betgit mercurecasino matbet