Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 08.10.2021
Share:

By Village Missionary Movement

Friday, 08-Oct-2021

ಧೈನಂದಿನ ಧ್ಯಾನ(Kannada) – 08.10.2021

 

ಹೆಬ್ಬೆರಳು

 

"ಜ್ಞಾನವೇ ಮುಖ್ಯವಾದದ್ದು; ಆದದರಿಂದ ಜ್ಞಾನವನ್ನು ಸಂಪಾ ದಿಸು, ನಿನ್ನ ಎಲ್ಲಾ ಸಂಪತ್ತಿನಿಂದ ವಿವೇಕವನ್ನು ಪಡೆ ದುಕೋ." - ಜ್ಞಾನೋಕ್ತಿಗಳು 4:7

 

ರಿಚರ್ಡ್ ಉಂಬ್ರಾಂಡ್ ರವರು ದೇವರು ಇಲ್ಲ ಎಂದು ಸಾಧಿಸುವ ರಷ್ಯಾ ಜನರ ಮಧ್ಯದಲ್ಲಿ ಸೇವೆ ಮಾಡುವಾಗ ವಿಗ್ರಹವನ್ನು ತಯಾರಿಸುವ ದಂಪತಿಗಳನ್ನು ಭೇಟಿಯಾದರು. ಅವರು ದೇವರನ್ನು ಯಾವ ರೀತಿ ಸ್ವೀಕರಿಸಿದರೆಂದು ತಿಳಿಸಿದ್ದು ಕೆಳಗೆ ಹೇಳಲ್ಪಟ್ಟಂತೆ: ಒಂದು ವಿಗ್ರಹವನ್ನು ತಯಾರಿಸುವಾಗ ಅವರ ಹೆಂಡತಿ ಆತನನ್ನು ನೋಡಿ ನಮ್ಮ ಕೈಯಲ್ಲಿರುವ ಹೆಬ್ಬೆರಳಿನ ಬಗ್ಗೆ ನಿಮಗೆ ಏನನಿಸುತ್ತದೆ? ಈ ದೊಡ್ಡ ಬೆರಳು ಇತರ ಬೆರಳುಗಳಿಗೆ ವಿರುದ್ಧವಾಗಿ ಹೊಂದಿಸದೆ, ಕಾಲ್ಬೆರಳುಗಳಂತೆಯೇ ಒಂದೇ ಸಮನಾಗಿ ಮಾಡಿದ್ದರೆ ಸುತ್ತಿಗೆಯನ್ನು ಅಥವಾ ಯಾವುದೊಂದು ವಸ್ತುವನ್ನು, ಪುಸ್ತಕವನ್ನು, ರೊಟ್ಟಿಯ ತುಂಡನ್ನು ನಾನು ಕೈಯಿಂದ ತೆಗೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲವೇ!

 

ಸಾಮಾನ್ಯ ಮಾನವನ ಜೀವನ ಈ ಚಿಕ್ಕ ಹೆಬ್ಬೆರಳು ಇಲ್ಲದಿದ್ದರೆ ಸಾಧ್ಯವಿಲ್ಲ. ಹೀಗಿರಲು, ಈ ಹೆಬ್ಬೆರಳನ್ನು ಬುದ್ಧಿವಂತಿಕೆಯಿಂದ ಮಾಡಿದವರು ಯಾರು? ಆಕಾಶ ಮತ್ತು ಭೂಮಿಯು ತಾವಾಗಿಯೇ ಅಸ್ತಿತ್ವಕ್ಕೆ ಬಂದವು ಎಂದು ನಾವು ಶಾಲೆಯಲ್ಲಿ ಕಲಿತಿದ್ದೇವೆ. ಅವು ದೇವರಿಂದ ಉಂಟಾದವುಗಳು ಅಲ್ಲವೆಂದು ಕಲಿತು ನಾನು ಇಂದಿನವರೆಗೂ ಸ್ವಲ್ಪ ಮಟ್ಟಿಗೆ ಅದನ್ನೇ ನಂಬುತ್ತಾ ಬಂದಿದ್ದೇನೆ. ಅದೇ ರೀತಿಯಲ್ಲಿ ದೇವರು ಆಕಾಶ ಮತ್ತು ಭೂಮಿಯನ್ನು ಸೃಷ್ಟಿಸದವರಾಗಿದ್ದರೂ ಈ ಹೆಬ್ಬೆರಳನ್ನು ಮಾತ್ರ ಸೃಷ್ಟಿ ಮಾಡಿದವರಾಗಿದ್ದರೂ ಅವರು ಹೊಗಳಿಕೆ ಯೋಗ್ಯರೇ. ವಿದ್ಯುತ್ ಬಲ್ಬ್, ಟೆಲಿಫೋನ್ ಮತ್ತು ರೈಲು ಸಂಶೋಧಕರಾದ ಎಡಿಸನ್ ಮತ್ತು ಬೆಲ್ ಸ್ಟೀಫನ್ಸನ್ ಇವರನ್ನೇ ನಾವು ಹೊಗಳುವಾಗ, ಹೆಬ್ಬೆರಳು ಕಂಡುಹಿಡಿದವರನ್ನು ಏಕೆ ನಾವು ಮೆಚ್ಚಿಕೊಳ್ಳಬಾರದು? ಎಡಿಸನ್ ಗೆ ಹೆಬ್ಬೆರಳು ಇಲ್ಲದೇ ಹೋಗಿದ್ದರೆ ಆತ ಏನನ್ನೂ ಕಂಡುಹಿಡಿಯಲು ಸಾಧ್ಯವಾಗುತ್ತಿರಲಿಲ್ಲ? ಆದ್ದರಿಂದ ಹೆಬ್ಬೆರಳನ್ನು ಸೃಷ್ಟಿಸಿದ ದೇವರನ್ನು ಪೂಜಿಸುವುದೇ ಸರಿ ಎಂದು ಹೆಂಡತಿ ಹೇಳಿದಳು. ಅನೇಕ ಸಮಯಗಳಲ್ಲಿ ಹೆಂಡತಿಯರು ಬುದ್ಧಿವಂತಿಕೆಯಿಂದ ಮಾತನಾಡುವಾಗ ಗಂಡಂದಿರಿಗೆ ಕೋಪ ಬರುವಂತೆ ಇದನ್ನು ಕೇಳಿದ ಆತನಿಗೂ ಬಹು ಕೋಪ ಬಂದು ಹೀಗೆ ಮೂರ್ಖಳ ಹಾಗೆ ಮಾತನಾಡಬೇಡ" ಎಂದು ಹೇಳಿದನು. ಆದರೂ ಹೆಂಡತಿಯ ಬುದ್ಧಿವಂತ ಪ್ರಶ್ನೆಯು ಆತನನ್ನು ನೇರವಾಗಿ ದೇವರ ಕಡೆಗೆ ತಿರುಗಿಸಿತು.

 

ಪರಿಶುದ್ಧ ಗ್ರಂಥದಲ್ಲಿ ನೋಡುವಾಗ ಕರ್ತನು ಸೊಲೊಮೋನನಿಗೆ ಕನಸಿನಲ್ಲಿ ದರ್ಶನ ನೀಡಿ ನೀನು ಬಯಸುವುದನ್ನು ನನ್ನ ಬಳಿ ಕೇಳು ಎಂದು ಹೇಳಿದಾಗ ನನಗೆ ವಿವೇಕವನ್ನು ದಯಪಾಲಿಸು ಎಂದು ಸೊಲೊಮೋನನು ಕೇಳಿದರು. ಅದು ದೇವರ ದೃಷ್ಟಿಯಲ್ಲಿ ಬಹಳ ಮೆಚ್ಚುಗೆಯಾಗಿತ್ತು.

 

ಕರ್ತನಲ್ಲಿ ಪ್ರಿಯರೇ! ನಾವು ಜ್ಞಾನವಿಲ್ಲದೆ ಮಾಡುವ ಕ್ರಿಯೆಗಳ ನಿಮಿತ್ತವಾಗಿ ಅನೇಕ ಸಮಸ್ಯೆಗಳಲ್ಲಿ ಸಿಕ್ಕಿಕೊಳ್ಳುತ್ತೇವೆ. ಸೊಲೊಮೋನನನ್ನು ನೋಡುವಾಗ ಅವರು ಕರ್ತನ ಬಳಿ ಜ್ಞಾನವನ್ನು ಕೇಳುತ್ತಾರೆ. ನಾವು ನಮ್ಮ ಪ್ರಾರ್ಥನೆಯಲ್ಲಿ ಏನನ್ನು ಕೇಳುತ್ತಿದ್ದೇವೆ? ಅದರ ಬಗ್ಗೆ ಸ್ವಲ್ಪ ಯೋಚಿಸೋಣ. ಜ್ಞಾನವು ಬಹಳ ಪ್ರಾಮುಖ್ಯ. ಪ್ರತಿದಿನವೂ ದೇವರ ಬಳಿ ಜ್ಞಾನವನ್ನು ಕೇಳಿ ಪಡೆದು ಅದರಂತೆ ಮಾಡಲು ನಮ್ಮನ್ನು ಸಮರ್ಪಿಸೋಣ.

- P. ಶಿವ

 

ಪ್ರಾರ್ಥನಾ ಅಂಶ:

ಮೀಡಿಯಾ ಸೇವೆಗಳಿಗೆ ಅಗತ್ಯವಾದ ಸಾಧನಗಳನ್ನು ತೆಗೆದುಕೊಳ್ಳಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al deneme bonusu deneme bonusu veren siteler online casino online casino perabet perabet giriş perabet perabet giriş perabet perabet giriş perabet güncel giriş jojobet jojobet giriş jojobet güncel giriş Holiganbet Holiganbet Giriş Holiganbet Güncel Giriş Superbetin Superbetin Giriş Superbetin Güncel Giriş pashagaming pashagaming giriş pashagaming güncel giriş betcio Betcio Giriş betcio güncel giriş atlasbet atlasbet giriş atlasbet güncel giriş Piabet Piabet Giriş Ngsbahis Ngsbahis Giriş İnterbahis İnterbahis Giriş Klasbahis Klasbahis Giriş Coinbar Coinbar Giriş Limanbet Limanbet Giriş İmajbet İmajbet Giriş Restbet Restbet Giriş Matbet Matbet Giriş Jasminbet Jasminbet Giriş Belugabahis Belugabahis Giriş Online casino nz Best payout online casino nz matbet jojobet jojobet giriş jojobet güncel giriş bahsegel bahsegel bahsegel matbet romabet lunabet