Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 09.10.2021
Share:

By Village Missionary Movement

Saturday, 09-Oct-2021

ಧೈನಂದಿನ ಧ್ಯಾನ(Kannada) – 09.10.2021

 

ಹೆಜ್ಜೆಗುರುತುಗಳು

 

“ಸದ್ಧರ್ಮಿಯು ನಿರ್ದೋಷವಾಗಿ ನಡೆಯುವನು; ಅವನು ಗತಿಸಿದ ಮೇಲೆಯೂ ಅವನ ಮಕ್ಕಳು ಭಾಗ್ಯವಂತರು." - ಜ್ಞಾನೋಕ್ತಿಗಳು 20:7

 

ನ್ಯೂಯಾರ್ಕ್ ನಗರದಲ್ಲಿ, ಮ್ಯಾಕ್ಸ್ ಗೀಕ್ಸ್ ಎಂಬವರು ದೈವಭಕ್ತಿಯಿಲ್ಲದವರಾಗಿ, ಒಂದು ಕೆಟ್ಟ ಮಾರ್ಗದಲ್ಲಿ ಜೀವಿಸುತ್ತಿದ್ದರು. ಅವರು ಮದುವೆಯಾದ ಮಹಿಳೆ ಕೂಡ ದೇವರ ಭಕ್ತಿಯಿಲ್ಲದವರಾಗಿದ್ದರು. ಇವರ ತಲೆಮಾರುಗಳಲ್ಲಿ 1200 ಜನರಿಂದ ಈ ಲೆಕ್ಕವನ್ನು ತೆಗೆದುಕೊಳ್ಳಲಾಯಿತು. ಈ ಪೈಕಿ 310 ಮಂದಿ ಬಹಳ ಬಡ ಸ್ಥಿತಿಯಲ್ಲಿ ಅಂದರೆ ಒಂದು ಮನೆ ಮತ್ತು ಉದ್ಯೋಗವೂ ಇಲ್ಲದೆ ತೀವ್ರ ಸಂಕಷ್ಟದಲ್ಲಿದ್ದರು ಎಂದು ಹೇಳಲಾಗಿದೆ. ಇವರಲ್ಲಿ ಕೆಲವರು ತಮ್ಮ ಕ್ರಮಶಿಕ್ಷಣವಿಲ್ಲದ ಜೀವನದಿಂದಾಗಿ ತಮ್ಮ ದೇಹದ ಮೇಲೆ ರೋಗಗಳನ್ನು ಬರಮಾಡಿಕೊಂಡರು. ಇವರಲ್ಲಿ ಕೆಲವರನ್ನು ಕಳ್ಳರಂತೆ ಜೈಲಿಗೆ ಕಳುಹಿಸಲಾಯಿತು. ಇವರ ಇಂಥಾ ಪರಿಸ್ಥಿತಿಯಿಂದ ಸರ್ಕಾರಕ್ಕೆ 15,00,000 ಡಾಲರ್ ಗಳು ನಷ್ಟವಾಗಿದೆ.

 

ಅದೇ ನಗರದಲ್ಲಿ ಜೋನಾಥಾನ್ ಎಡ್ವರ್ಡ್ ಕುಟುಂಬವಿತ್ತು. ಅವರು ನಿಜವಾಗಿಯೂ ದೇವರ ಸೇವೆ ಮಾಡಿದ ದೇವರ ಮನುಷ್ಯ. ಅವರು ಮದುವೆಯಾದ ಮಹಿಳೆ ಕೂಡ ಕರ್ತನಿಗೆ ಭಯಪಡುವವರು, ಸೇವೆಯ ಕರೆಯುವಿಕೆಯನ್ನು ಹೊಂದಿದವರು. ಅವರ ಕುಟುಂಬದಿಂದ ಬಂದ ಪೀಳಿಗೆಯಲ್ಲಿ 300 ಜನ ಬೋಧಕರಾಗಿಯು, ಕೆಲವರು ಮಿಷಿನರಿಗಳಾಗಿಯು ಮತ್ತು ಕೆಲವರು ಬೈಬಲ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿಯು ಇದ್ದರು. ಕೆಲವರು ವಕೀಲರು ಮತ್ತು ನ್ಯಾಯಾಧೀಶರಾಗಿದ್ದರು. ಮತ್ತು ಇವರಲ್ಲಿ ಇನ್ನೂ ಕೆಲವರು ಮುಖಂಡರು ಮತ್ತು ಅಧ್ಯಕ್ಷರಾಗಿದ್ದರು. ಇವರ ಕುಟುಂಬದಲ್ಲಿ ಅನೇಕರು ಒಳ್ಳೆಯ ಪ್ರಭಾವವನ್ನು ಹೊಂದಿದವರಾಗಿಯು, ದೇಶದಲ್ಲಿ ಅತ್ಯುನ್ನತ ಸ್ಥಾನಮಾನವನ್ನು ಹೊಂದಿದ್ದರೆಂದು ಸಮೀಕ್ಷೆಗಳು ಹೇಳುತ್ತಿವೆ.

 

ಪ್ರಿಯರೇ! ನೀವು ನೀತಿವಂತರಾಗಿದ್ದರೆ, ನಿಮ್ಮ ನಂತರ ಬರುವ ಪೀಳಿಗೆಯು ಕೂಡ ಆಶೀರ್ವದಿಸಲ್ಪಟ್ಟಿರುತ್ತದೆ. ಇದು ನೀವು ತೆಗೆದುಕೊಳ್ಳುವ ನಿರ್ಧಾರವನ್ನು ಅವಲಂಬಿಸಿರುತ್ತದೆ. ನೀವು ಕರ್ತನಿಗೆ ಭಯಪಟ್ಟು ಆತನ ಮಾರ್ಗಗಳಲ್ಲಿ ನಡೆದರೆ ಸತ್ಯವೇದದಲ್ಲಿ ಹೇಳಲ್ಪಟ್ಟಿರುವ ಎಲ್ಲಾ ಆಶೀರ್ವಾದಗಳನ್ನು ಪಡೆದುಕೊಳ್ಳಬಹುದು. ಆ ಆಶೀರ್ವಾದಗಳು ನಮ್ಮ ಮತ್ತು ನಮ್ಮ ವಂಶಸ್ಥರ ಮೇಲೆ ಅವಲಂಬಿತವಾಗಿರುತ್ತದೆ. ದುಷ್ಟರ ಸಂತತಿಯು ದುಷ್ಟವಾಗಿರುತ್ತದೆ ಎಂಬುದಕ್ಕೆ ಮೇಲೆ ನಾವು ಮೊದಲು ಓದಿದಂತಹ ಕುಟುಂಬವೇ ಸಾಕ್ಷಿಯಾಗಿದೆ. ನಮ್ಮ ಜೀವನ ಮತ್ತು ನಾವು ಅನುಸರಿಸುವ ನಮ್ಮ ಹೆಜ್ಜೆ ಗುರುತುಗಳು ನಮ್ಮ ವಂಶಸ್ಥರಿಗೆ ಆಶೀರ್ವಾದವಾ ಅಥವಾ ಶಾಪವಾ ಎಂಬುದನ್ನು ನಿರ್ಧರಿಸುತ್ತದೆ. ಆದ್ದರಿಂದ ಕರ್ತನಿಗಾಗಿ ಜೀವಿಸೋಣ. ನಂಬಿಕೆಯುಳ್ಳ ಸಂತತಿಯನ್ನು ಈ ಲೋಕಕ್ಕೆ ನೀಡೋಣ! ನಾವು ಮತ್ತು ನಮ್ಮ ಕುಟುಂಬ ಅನೇಕರಿಗೆ ಆಶೀರ್ವಾದಕರವಾಗಿರೋಣ.

- Mrs. ಶಕ್ತಿ ಶಂಕರರಾಜ್

 

ಪ್ರಾರ್ಥನಾ ಅಂಶ:

ಸಹ ಸೇವಕರು ಸೇವೆಗಾಗಿ ಹೋಗುವ ಸ್ಥಳಗಳಲ್ಲಿ ದೇವರು ಅವರಿಗೆ ಒಳ್ಳೆಯ ಸಂರಕ್ಷಣೆಯನ್ನು ದಯಪಾಲಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al deneme bonusu deneme bonusu veren siteler online casino online casino perabet perabet giriş perabet güncel giriş jojobet jojobet giriş jojobet güncel giriş Holiganbet Holiganbet Giriş Holiganbet Güncel Giriş Superbetin Superbetin Giriş Superbetin Güncel Giriş pashagaming pashagaming giriş pashagaming güncel giriş betcio Betcio Giriş betcio güncel giriş atlasbet atlasbet giriş atlasbet güncel giriş Piabet Piabet Giriş Ngsbahis Ngsbahis Giriş İnterbahis İnterbahis Giriş Klasbahis Klasbahis Giriş Coinbar Coinbar Giriş Limanbet Limanbet Giriş İmajbet İmajbet Giriş Restbet Restbet Giriş Matbet Matbet Giriş Jasminbet Jasminbet Giriş Belugabahis Belugabahis Giriş Online casino nz Best payout online casino nz matbet jojobet jojobet giriş jojobet güncel giriş matbet romabet lunabet meritking meritking giriş meritking güncel giriş perabet perabet giriş perabet güncel giriş holiganbet holiganbet giriş holiganbet güncel giriş Meritking Perabet Holiganbet jojobet jojobet giriş jojobet güncel giriş bahsegel bahsegel bahsegel bahsegel bahsegel perabet perabet giriş perabet perabet giriş holiganbet holiganbet giriş holiganbet holiganbet giriş