Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 11.10.2021
Share:

By Village Missionary Movement

Monday, 11-Oct-2021

ಧೈನಂದಿನ ಧ್ಯಾನ(Kannada) – 11.10.2021

 

ಮನಸ್ಸಿನಲ್ಲಿ ನಿರ್ಧಾರ ಮಾಡಿಕೋ

 

"ಮನುಷ್ಯದೃಷ್ಟಿಗೆ ಸರಳವಾಗಿ ತೋರುವ ಒಂದು ದಾರಿಯುಂಟು. ಅದು ಕಟ್ಟಕಡೆಗೆ ಮರಣಮಾರ್ಗವೇ” - ಜ್ಞಾನೋಕ್ತಿ 14:12

 

ರೈತನೊಬ್ಬ ತನ್ನ ಸಂಬಂಧಿಕರ ಮನೆಗೆ ಹೋಗಿ ಹಿಂದಿರುಗಿ ಬರುವ ಮಾರ್ಗದಲ್ಲಿ ಒಂದು ಜಲಪಾತವನ್ನು ನೋಡಿದರು. ಆ ಜಲಪಾತದ ಬಳಿ ಇದ್ದ ಒಂದು ಮರದ ಕೊಂಬೆಯಲ್ಲಿದ್ದ ಜೇನುಗೂಡು ಅವರ ಕಣ್ಣಿಗೆ ಬಿತ್ತು. ತಕ್ಷಣವೇ ಅವರು ಮರದ ಮೇಲೆ ಹತ್ತಿ ಅದನ್ನು ಎತ್ತಿಕೊಳ್ಳಲು ಪ್ರಯತ್ನಿಸಿದರು. ಆಗ ದಾರಿಹೋಕನೊಬ್ಬ ಅವರಿಗೆ, "ನಿನಗೆ ಜೀವ ಬೇಕಾದರೆ ಕೆಳಗೆ ಇಳಿದು ಬಿಡು ಕೊಂಬೆ ಮುರಿದು ಬೀಳಲಿದೆ" ಎಂದರು. ಆದರೆ ರೈತ ಆ ಮಾತನ್ನು ಕಿವಿಗೆ ಹಾಕಿಕೊಳ್ಳದೆ ಹತ್ತಿ ಜೇನುತುಪ್ಪವನ್ನು ತೆಗೆದುಕೊಳ್ಳಲು ಸತತವಾಗಿ ಪ್ರಯತ್ನಿಸಿದರು. ನಂತರ ಅವರು ಜೇನುಗೂಡನ್ನು ತೆಗೆದುಕೊಂಡು ಕೆಳಗೆ ಇಳಿಯುವಾಗ, ಕೊಂಬೆ ಮುರಿದು ನದಿಗೆ ಬಿದ್ದರು. ನದಿಯಲ್ಲಿ ಅವರಿಗಾಗಿ ಕಾಯುತ್ತಿದ್ದ ಮೊಸಳೆ ಆತನನ್ನು ಜೇನುತುಪ್ಪದೊಂದಿಗೆ ಹಿಡಿದುಕೊಂಡಿತು. ಅಯ್ಯೋ! ಸಾವು!

 

ಸತ್ಯವೇದದಲ್ಲಿ, ಸೌಲನೆಂಬ ಅರಸನ ಬಳಿ ಸಮುವೇಲ ಪ್ರವಾದಿಯು, "ನೀನು ಹೋಗಿ ಅವರನ್ನು ಸೋಲಿಸಿ ಅವರಿಗಿರುವದನ್ನೆಲ್ಲಾ ಸಂಪೂರ್ಣವಾಗಿ ಹಾಳುಮಾಡು" ಎಂದರು. ಸೌಲನು ಅಮಾಲೇಕ್ಯರೊಂದಿಗೆ ಯುದ್ಧಮಾಡಿ ಅಮಾಲೇಕ್ಯರ ಅರಸನು, ಮೇಲ್ತರದ ಕುರಿ ದನಗಳನ್ನೂ ಶ್ರೇಷ್ಠವಾದ ಎಲ್ಲಾ ಪದಾರ್ಥಗಳನ್ನೂ ಜೀವಂತವಾಗಿ ಉಳಿಸಿದನು. ಸೌಲನಿಗೆ ಮೇಲ್ತರದವುಗಳನ್ನು ನಾಶಮಾಡದೇ ಹೋದದ್ದು ಒಳ್ಳೇದಾಗಿ ತೋಚಿತು. ಆದರೆ ಕರ್ತನು ಸೌಲನು ತನ್ನ ಸ್ವಂತ ಇಚ್ಛೆಯಂತೆ ಮಾಡಿದ್ದರಿಂದ ಅರಸನಾಗಿರದಂತೆ ಅವನನ್ನು ತಳ್ಳಿಬಿಟ್ಟರು. ಸಮುವೇಲನು ಸೌಲನ ಬಳಿ, "ನೀನು ಯೆಹೋವನ ಮಾತನ್ನು ತಳ್ಳಿಬಿಟ್ಟದ್ದರಿಂದ ಆತನು ನಿನ್ನನ್ನು ಅರಸುತನದಿಂದ ತಳ್ಳಿಬಿಟ್ಟಿದ್ದಾನೆ" ಎಂದರು. ಸೌಲನ ಅಂತ್ಯವು ಬಹಳ ಭೀಕರವಾಗಿತ್ತು. ಏಕೆಂದರೆ ಕರ್ತನು ಸೌಲನನ್ನು ಬಿಟ್ಟು ದೂರಹೋದರು.

 

ಕರ್ತನಲ್ಲಿ ಪ್ರಿಯರೇ! ನಮಗೂ ಕೂಡ ಸೌಲನಂತೆ, ಕೆಲವು ಆಸೆಗಳ ನಿಮಿತ್ತವಾಗಿ ಕರ್ತನ ಮಾತನ್ನು ನಿರ್ಲಕ್ಷಿಸಿ ನಮಗೆ ಒಳ್ಳೆಯದೆಂದು ತೋಚುವ ಮಾರ್ಗದಲ್ಲಿ ಹೋಗುತ್ತಿದ್ದೇವಾ? ಸೈತಾನನು ಗರ್ಜಿಸುವ ಸಿಂಹದೋಪಾದಿಯಲ್ಲಿ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ. ಸಿಕ್ಕಿಕೊಂಡರೆ ನಿತ್ಯ ನಾಶನವೆಂದು ಮರೆತು ಹೋಗಬೇಡಿರಿ. ಆದರೆ ನಾವು ದೇವರ ವಾಕ್ಯಕ್ಕೆ ವಿಧೇಯರಾದರೆ ನಮಗೆ ನಿತ್ಯಜೀವವುಂಟು. ಆತನನ್ನು ಆಶ್ರಯಿಸೋಣ ಆತನ ಧ್ವನಿಯನ್ನು ಕೇಳೋಣ ಮತ್ತು ಆತನ ಮಾರ್ಗದಲ್ಲಿ ನಡೆದು ನಿತ್ಯಜೀವವನ್ನು ಪಡೆಯೋಣ! ಹಲ್ಲೆಲೂಯಾ!

- A. ಬ್ಯೂಲ

 

ಪ್ರಾರ್ಥನಾ ಅಂಶ:

7000 ಸೇವಕರ ಮೂಲಕ 1 ಲಕ್ಷ ಗ್ರಾಮಗಳನ್ನು ಭೇಟಿ ಮಾಡುವ ಯೋಜನೆಯಲ್ಲಿ ಸಮರ್ಪಣೆಯುಳ್ಳ ಸೇವಕರು ನಮ್ಮೊಂದಿಗೆ ಸೇರುವಂತೆ ಪ್ರಾರ್ಥಿಸಿರಿ.

 

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.

ವಾಟ್ಸಾಪ್.  

ತಮಿಳಿಗಾಗಿ +919444011864  

ಇಂಗ್ಲಿಷ್ ಗಾಗಿ +919444011769

ಹಿಂದಿಗಾಗಿ +91 93858 10496

ತೆಲುಗುಗಾಗಿ +919442493250

 

www.vmm.org.in

ಈಮೈಲ್:- reachvmm@gmail.com

Androidapp: https://play.google.com/store/apps/details?id=com.vmmorg.template.msmapp&showAllReviews=true

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş matbet giriş sahabet onwin bets10 bets10 giriş bets10 güncel giriş betcio atlasbet casibom meritking perabet casibom holiganbet galabet casibom padişahbet padişahbet giriş grandpashabet jojobet cashwin grandpashabet radissonbet palacebet amgbahis cratosroyalbet grandpashabet betpuan betsalvador matbet meritking perabet perabet giriş instagram ban service betsilin betsilin giris pashagaming pashagaming giris gorabet gorabet giris kralbet holiganbet