Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 12.10.2021
Share:

By Village Missionary Movement

Monday, 11-Oct-2021

ಧೈನಂದಿನ ಧ್ಯಾನ(Kannada) – 12.10.2021

 

ಸ್ವತ್ತುಗಳ ಸಂಗ್ರಹಣೆ

 

"ಕರ್ತನ ಭಯವೇ ಬಲವಾದ ಭರವಸವು; ಆತನ ಮಕ್ಕಳಿಗೆ ಆಶ್ರಯ ಸ್ಥಳವು ಇರುವದು” - ಜ್ಞಾನೋಕ್ತಿ 14:26

 

ನಮ್ಮ ಜೀವನದಲ್ಲಿ ನಮಗೆ ಮಕ್ಕಳು ಬಹಳ ಮುಖ್ಯ. ಪೋಷಕರು ತಮ್ಮ ಮಕ್ಕಳಿಗಾಗಿ ಆಸ್ತಿಯನ್ನು ಸೇರಿಸಿಡಬೇಕು ಎಂಬುದು ನಿಜವೇ. ಆದರೆ ಅದಕ್ಕಿಂತ ಒಂದು ಮುಖ್ಯವಾದ ಕಾರ್ಯ ಕುಟುಂಬದಲ್ಲಿ ಕಾಣಲ್ಪಡಬೇಕು. ಅದು ಏನೆಂದರೆ, ಕರ್ತನಿಗೆ ಭಯಪಡುವ ಭಯ! ನಾವು ಕರ್ತನಿಗೆ ಭಯಪಟ್ಟು, ಆತನ ಮಾರ್ಗದಲ್ಲಿ ನಡೆದು, ಒಳ್ಳೆಯ ಜೀವನವನ್ನು ನಡೆಸಿದರೆ, ಅದುವೇ ನಮ್ಮ ಮಕ್ಕಳಿಗೆ ಆಶ್ರಯವಾಗಿ ಮಾರ್ಪಡುತ್ತದೆ. ಕೋಟಿಗಟ್ಟಲೆ ಹಣ, ಅಪಾರ್ಟ್ಮೆಂಟ್ ಮತ್ತು ದುಬಾರಿ ಬಂದೂಕುಗಳು ಕೊಡಲಾಗದ ಸಂರಕ್ಷಣೆಯನ್ನು ದೇವರು ನೀಡುವ ಆಶ್ರಯವು ಕೊಟ್ಟು ಬಿಡುತ್ತದೆ. ಈ ಸಂರಕ್ಷಣೆ ಸಾವಿರಾರು ತಲೆಮಾರುಗಳವರೆಗೆ ಮುಂದುವರೆಯುತ್ತದೆ. ದೇವರ ಆಶ್ರಯದಿಂದ ನಮ್ಮ ಮಕ್ಕಳು ಆಶೀರ್ವದಿಸಲ್ಪಡುತ್ತಾರೆ. ಅವರಿಗೆ ದೈನಂದಿನ ಆಹಾರ, ಉಡುಗೆ, ಅಗತ್ಯ ಶಿಕ್ಷಣ, ರೋಗರಹಿತ ಜೀವನ, ಮತ್ತು ಉತ್ತಮ ಸಂತೋಷದ ಕೌಟುಂಬಿಕ ಜೀವನ ಹೀಗೆ ಅವರು ಆಶೀರ್ವಾದಕರವಾಗಿರುತ್ತಾರೆ.

 

ಸತ್ಯವೇದದಲ್ಲಿ ರೂತಳ ಬಗ್ಗೆ ನಾವು ಓದುವಾಗ ಅವಳು ತನ್ನ ಅತ್ತೆಯನ್ನು ಗೌರವಿಸುತ್ತಾ ಜೀವಿಸುತ್ತಿದ್ದಳು ಎಂದು ನಾವು ನೋಡುತ್ತೇವೆ. ಅವಳು ಕರ್ತನನ್ನು ತಿಳಿಯದ ಕುಟುಂಬದಲ್ಲಿ ಜನಿಸಿದರೂ, ಅವಳು ತನ್ನ ಕಾರ್ಯಗಳಿಂದ ಕರ್ತನಿಗೆ ಮೆಚ್ಚುಗೆಯಾಗಿ ನಡೆದು, ವಿಧವೆಯಾದ ತನ್ನ ಅತ್ತೆಯನ್ನು ಆದರಿಸಿ, ಅವರೊಂದಿಗೆ ಜೀವಿಸುತ್ತಾ, ಅವಳನ್ನೂ ಪರಾಮರ್ಶಿಸುತ್ತಿದ್ದಳು. ಈ ಒಳ್ಳೇತನವು ಬೋವಜನಿಗೆ ತಿಳಿಯಿತು. ಆದ್ದರಿಂದ ಬೋವಜನು, "ನೀನು ಮಾಡಿದ ಉಪಕಾರಕ್ಕೆ ಪ್ರತಿಯಾಗಿ ಯೆಹೋವನು ನಿನಗೆ ಉಪಕಾರಮಾಡಲಿ" ಎಂದು ಆಶೀರ್ವದಿಸಿದನು. ರೂತಳಿಗೂ ಬೋವಜನಿಗೂ ಹುಟ್ಟಿದ ಓಬೇದನ ವಂಶದಲ್ಲೇ ದಾವೀದನು, ಯೇಸುಕ್ರಿಸ್ತನು ಜನಿಸಿದರು. ಎಂಥಾ ಸುಂದರವಾದ ಜೀವನ! ಇದರಿಂದ ರೂತಳಿಗೆ ಬಹು ದೊಡ್ಡ ಗೌರವ ಲಭಿಸಿತು!

 

ಸ್ನೇಹಿತರೇ! ಇಂದು ನಾವು ಕರ್ತನ ಆಜ್ಞೆಗಳಿಗೆ ವಾಕ್ಯಗಳಿಗೆ ಭಯಪಟ್ಟು ನಮ್ಮ ಮನೆಯಲ್ಲಿರುವ ಹಿರಿಯರನ್ನು ಆರೈಕೆ ಮಾಡುತ್ತಿದ್ದೇವಾ? "ತಂದೆ, ತಾಯಿಯನ್ನು ಸನ್ಮಾನಿಸು" ಎಂಬ ಆಜ್ಞೆಯನ್ನು ಅನುಸರಿಸುತ್ತಿದ್ದೇವಾ? ಅವರನ್ನು ಹೇಗೆ ನಡೆಸಿಕೊಳ್ಳುತ್ತಿದ್ದೇವೆ. ನಾವು ಹೇಗೆ ಮಾಡುತ್ತೇವೊ ಹಾಗೆಯೇ ನಮಗೂ ಆಗುತ್ತದೆ. ನಮ್ಮ ಮಕ್ಕಳಿಗೆ ಆಶ್ರಯ ಸಿಗುವುದು ಯಾರಿಂದ? ಭಕ್ತಿಯುಳ್ಳ ಪೋಷಕರಿಂದಲೇ ಎಂದು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ನಾವೂ ಕೂಡ ದೇವರಿಗೆ ವಿಧೇಯರಾಗಿ ಜೀವಿಸಿ ನಮ್ಮ ಹಿಂದೆ ಬರುವ ಪೀಳಿಗೆಗೆ ಆಶೀರ್ವಾದವನ್ನು ಇಟ್ಟು ಹೋಗೋಣ! ಆಮೆನ್!

- Mrs. ಭುವನಾ ಧನಪಾಲನ್

 

ಪ್ರಾರ್ಥನಾ ಅಂಶ:

7000 ಸೇವಕರ ಮೂಲಕ 1 ಲಕ್ಷ ಗ್ರಾಮಗಳನ್ನು ತಲುಪುವ ಯೋಜನೆಯಲ್ಲಿ ಎಲ್ಲಾ ರಾಜ್ಯಗಳಿಂದಲೂ 12 ಜನರು ಮೊದಲ ಹಂತದಲ್ಲಿ ನಮ್ಮೊಂದಿಗೆ ಸೇರುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al deneme bonusu deneme bonusu veren siteler online casino online casino perabet perabet giriş perabet perabet giriş perabet perabet giriş perabet güncel giriş jojobet jojobet giriş jojobet güncel giriş Holiganbet Holiganbet Giriş Holiganbet Güncel Giriş Superbetin Superbetin Giriş Superbetin Güncel Giriş pashagaming pashagaming giriş pashagaming güncel giriş betcio Betcio Giriş betcio güncel giriş atlasbet atlasbet giriş atlasbet güncel giriş Piabet Piabet Giriş Ngsbahis Ngsbahis Giriş İnterbahis İnterbahis Giriş Klasbahis Klasbahis Giriş Coinbar Coinbar Giriş Limanbet Limanbet Giriş İmajbet İmajbet Giriş Restbet Restbet Giriş Matbet Matbet Giriş Jasminbet Jasminbet Giriş Belugabahis Belugabahis Giriş Online casino nz Best payout online casino nz matbet jojobet jojobet giriş jojobet güncel giriş bahsegel bahsegel bahsegel matbet romabet lunabet