Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 17.10.2021 (Kids Special)
Share:

By Village Missionary Movement

Sunday, 17-Oct-2021

ಧೈನಂದಿನ ಧ್ಯಾನ(Kannada) – 17.10.2021 (Kids Special)

 

ವಿಶ್ರಾಂತಿ ಕೊಡು

 

"ನೀನು ಹೊಟ್ಟೆ ಬಾಕನಾಗಿದ್ದರೆ ನಿನ್ನ ಕುತ್ತಿಗೆಗೆ ಕತ್ತಿಯನ್ನು ಇಟ್ಟುಕೋ" - ಜ್ಞಾನೋಕ್ತಿ 23:2

 

ಹಾಯ್ ಕುಟ್ಟೀಸ್, ಸಂತೋಷವಾಗಿದ್ದೀರಾ? ನೀವು ಸಂತೋಷವಾಗಿ ಇರೋದಕ್ಕೆ ಏನು ಕಾರಣ ಗೊತ್ತಾ? ನಿಮ್ಮ ದೇಹದಲ್ಲಿರುವ ಪ್ರತಿಯೊಂದು parts - ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಮಾತ್ರವೇ ನೀವು happy ಯಾಗಿ ಇರೋದಕ್ಕೆ ಸಾಧ್ಯ. ನಿಮಗೆ ತಲೆನೋವಿದ್ದರೆ ನೀವು happy ಯಾಗಿರಲು ಸಾಧ್ಯವಿಲ್ಲ. ಹೌದು ತಾನೇ! ಹಾಗಾದರೆ Jesus daily ನಮಗೆ ಸೌಖ್ಯವನ್ನು ನೀಡುತ್ತಾ, ಸುಂದರವಾಗಿ ನಮ್ಮನ್ನು ಕಾಪಾಡುತ್ತಿದ್ದಾರೆ. ಅದಕ್ಕಾಗಿ ಕೃತಜ್ಞತೆ ಹೇಳಬೇಕಾ? ಬೇಡ್ವಾ? ಖಂಡಿತವಾಗಿಯೂ Jesus ಗೆ ಕೃತಜ್ಞತೆ ಹೇಳಬೇಕು. ಎಂದಿಗೂ ಮರೆಯಲೇ ಬಾರದು. Ok.

 

ಒಂದು ಮನೆಯಲ್ಲಿ ಒಂದು ವಯಸ್ಸಾದ ಅಜ್ಜಿ ಇದ್ದರು. ಅವರಿಗೆ ಸಹಾಯ ಮಾಡಲು ಒಂದು ಸುಂದರವಾದ ಪುಟ್ಟ ಹುಡುಗಿ ರಮಣಿಯನ್ನು ನೇಮಿಸಲಾಗಿತ್ತು. ಒಂದು ದಿನ ರಮಣಿ ಬೆಳಿಗ್ಗೆ ಬಹಳ ವೇಗವಾಗಿ ಮನೆ ಗುಡಿಸಿ, ಪಾತ್ರೆಗಳನ್ನು ತೊಳೆದು ಬಿಟ್ಟು ಆಟವಾಡಲು ಹೋಗಬೇಕೆಂದು ನೆನೆಸಿದಳು. ಆ ಕೆಲಸಗಳೆಲ್ಲ ಮುಗಿದ ಕೂಡಲೇ ಅಜ್ಜಿ ಅಡುಗೆ ಮಾಡಲು ತರಕಾರಿಗಳನ್ನು ಕತ್ತರಿಸಿ ಕೊಡು ಎಂದು ಹೇಳಿದರು. "ಸರಿಯಮ್ಮ" ಎಂದು ಹೇಳಿ ಆ ಕೆಲಸವನ್ನೂ ಮಾಡಿ ಮುಗಿಸಿದಳು. ಪುನಃ ಆ ಅಜ್ಜಿ ಸ್ವಲ್ಪ ಬಟ್ಟೆ ಒಗೆದುಕೊಡು ಎಂದು ಹೇಳಿದರಂತೆ, ರಮಣಿಯ ಎಳೆ ಕೈಗಳು ನೋಯುತ್ತಿದ್ದವು. ಆದರೂ ಅವಳು ಕಷ್ಟಪಟ್ಟು ಒಗೆದು ಕೊಟ್ಟಳು. ಇನ್ನು ಆಟವಾಡಲು ಸಾಧ್ಯವಿಲ್ಲ, ತುಂಬಾ ಸುಸ್ತಾಗಿದೆ! ಮಲಗಲು ಹೋಗಬೇಕಷ್ಟೆ ಎಂದು ನೆನೆಸುವಾಗಲೇ ಅಜ್ಜಿ ಮಜ್ಜಿಗೆ ತೆಗೆದುಕೊಂಡು ಬಂದು, ಇದನ್ನು ಕಡೆದು ಬೆಣ್ಣೆಯನ್ನು ತೆಗೆಯಬೇಕೆಂದು ಹೇಳಿದರು.

 

ರಮಣಿಗೆ ಕೋಪ ಬರುತ್ತದೆಯೋ ಇಲ್ಲವೋ, ನಮಗೆ ಮಾತ್ರ ಅಜ್ಜಿಯ ಮೇಲೆ ತುಂಬಾ ಕೋಪ ಬರುತ್ತಿದೆ ಅಲ್ವಾ? ಅವರನ್ನು ಖಂಡಿಸಬೇಕು ಎಂದು ಅನಿಸುತ್ತಿದೆ ಅಲ್ವಾ? ನಮ್ಮಲ್ಲಿ ಪ್ರತಿಯೊಬ್ಬರೂ ಆ ಅಜ್ಜಿಯಂತೆಯೇ ಇದ್ದೇವೆ. ನಾವು ತಿಂದ ಆಹಾರವನ್ನು ಜೀರ್ಣಿಸಿಕೊಳ್ಳುವ ಕೆಲಸವನ್ನು ಮುಗಿಸುವ ಮುನ್ನವೇ, ಮುಂದಿನ ಊಟವನ್ನು ಕೊಟ್ಟು ಬಿಡುತ್ತೇವೆ. ಊಟ ತಿಂದ ತಕ್ಷಣ cool drinks, ನಂತರ ತಕ್ಷಣವೇ Snacks, ನಂತರ Tea ಈ ರೀತಿ ಒಂದರ ನಂತರ ಒಂದು ತಿನ್ನುತ್ತಲೇ ಇದ್ದರೆ ದೇಹ ದಪ್ಪವಾಗಿ, Healthy ಯಾಗಿರಲು ಸಾಧ್ಯವಿಲ್ಲ. ನಾವು ತಿನ್ನುವ ಆಹಾರವನ್ನು ಜೀರ್ಣಿಸಿಕೊಳ್ಳುವ ಕೆಲಸವನ್ನು ಮುಗಿಸಿಬಿಟ್ಟು, ವಿಶ್ರಾಂತಿ ತೆಗೆದುಕೊಳ್ಳೋಣ ಎಂದು ಹೊಟ್ಟೆ ನೆನೆಸುವಾಗ, ಮತ್ತೆ ಯಾವುದಾದರೂ ಆಹಾರವನ್ನು ತಿಂದು, ಸೂಕ್ಷ್ಮವಾದ (ಹೊಟ್ಟೆಗೆ) ಅಂಗಕ್ಕೆ ಕೆಲಸವನ್ನು ಕೊಡುತ್ತೇವೆ. ಜೀರ್ಣಕ್ರಿಯೆ ಮಾಡುವ ಅಂಗಗಳು ವಿಶ್ರಾಂತಿಯೇ ಇಲ್ಲದೆ ಕೆಲಸ ಮಾಡುತ್ತಲೇ ಇದ್ದದರಿಂದ ಏನಾಗುತ್ತದೆ? ಎಂದು ಯೋಚಿಸಿ ನೋಡಿರಿ.

 

ಪ್ರೀತಿಯ ತಮ್ಮ-ತಂಗಿ! ಅಳತೆಯಾಗಿ ತಿಂದರೆ ಬಲವಾಗಿ ಆರೋಗ್ಯವಾಗಿರುತ್ತೇವೆ. "ಅಳತೆಗೆ ಮೀರಿ ತಿಂದರೆ ಅಮೃತವೂ ವಿಷ" ಎಂಬ ಗಾದೆ ಹೇಳುತ್ತಾರೆ. ಹಾಗಾಗಿ ಇಂದಿನಿಂದ ಯೇಸಪ್ಪ ನಮಗೆ ಕೊಟ್ಟಿರುವ ಈ ಒಳ್ಳೆಯ ಶರೀರವನ್ನು ಸುಂದರವಾಗಿಟ್ಟುಕೊಳ್ಳಲು ತೀರ್ಮಾನ ಮಾಡೋಣವಾ?

- A. ಬ್ಯೂಲ

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet holiganbet sahabet onwin bets10 bets10 giriş bets10 güncel giriş betcio atlasbet casibom meritking perabet casibom holiganbet galabet casibom padişahbet padişahbet giriş grandpashabet jojobet tambet grandpashabet jojobet nesinecasino betbey betgit grandpashabet betpuan cashwin matbet meritking perabet perabet giriş instagram ban service betsilin betsilin giris pashagaming pashagaming giris gorabet gorabet giris kralbet holiganbet grandpashabet grandpashabet giriş holiganbet giriş çarkbet çarkbet giriş