Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 22.10.2021
Share:

By Village Missionary Movement

Friday, 22-Oct-2021

ಧೈನಂದಿನ ಧ್ಯಾನ(Kannada) – 22.10.2021

 

ಅಡ್ಡಿಯಾಗಿರುವುದು ವಯಸ್ಸಲ್ಲ

 

"...ಆತ್ಮಗಳನ್ನು ಗೆಲ್ಲು ವವನು ಜ್ಞಾನಿಯಾಗಿದ್ದಾನೆ" - ಜ್ಞಾನೋಕ್ತಿ. 11:30

 

ವಯಸ್ಸಾದ ತಾಯಿಯೊಬ್ಬರು ತನ್ನನ್ನು ಕ್ಯಾನ್ಸರ್ ನಿಂದ ಗುಣಪಡಿಸಿದ ಕರ್ತನಿಗೆ ಏನಾದರೂ ಮಾಡಬೇಕೆಂದು ಯೋಚಿಸುತ್ತಿದ್ದರು. ಆಗ ಸಭೆಯಲ್ಲಿ ಸೇವಕರು ಆತ್ಮ ಆದಾಯದ ಮುಖ್ಯತ್ವದ ಬಗ್ಗೆ ಸಂದೇಶ ನೀಡಿದರು. ಇದನ್ನು ಕೇಳಿದ ಆ ತಾಯಿ ತನ್ನ ಮನಸ್ಸಿನಲ್ಲಿ ನನ್ನಿಂದ ಕರ್ತನಿಗಾಗಿ ಎಷ್ಟು ಸಾಧ್ಯವೋ ಅಷ್ಟು ಆತ್ಮಗಳನ್ನು ಆದಾಯ ಮಾಡಲು ಪ್ರಯತ್ನಿಸಬೇಕೆಂದು ನಿರ್ಧರಿಸಿದರು. ಅವರು ಮನೆಗೆ ಹೋಗಿ ಒಂದು ಮರದ ತುಂಡನ್ನು ತೆಗೆದುಕೊಂಡು ಅದರ ಮೇಲೆ "ಸಮಾಧಾನವಿಲ್ಲದವರು ಮತ್ತು ರೋಗಿಗಳು ಇಲ್ಲಿಗೆ ಬರಬಹುದು ನಿಮಗಾಗಿ ಪ್ರಾರ್ಥಿಸಲ್ಪಡುತ್ತದೆ" ಎಂದು ಬರೆದರು. ಅದನ್ನು ತನ್ನ ಮನೆಯ ಮುಂದಿರುವ ಮರದ ಮೇಲೆ ನೇತುಹಾಕಿದರು. ಅವರ ಮನೆಯ ಹತ್ತಿರ ಒಂದು ಕಾಲೇಜು ಮತ್ತು ಆಸ್ಪತ್ರೆ ಇತ್ತು. ಅನೇಕ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸಕ್ಕಾಗಿ, ಮನಶ್ಶಾಂತಿಗಾಗಿ ಆ ತಾಯಿಯವರ ಬಳಿಗೆ ಬಂದು ಪ್ರಾರ್ಥನೆ ಮಾಡಿಸಿಕೊಂಡು ಹೋಗುತ್ತಿದ್ದರು. ವೈದ್ಯರು ಕೈಬಿಟ್ಟವರು ಸಹ ಬಂದು ಆ ತಾಯಿಯವರ ಬಳಿ ಪ್ರಾರ್ಥಿಸಿಕೊಂಡು ಅದ್ಭುತವಾದ ಸ್ವಸ್ಥತೆಯನ್ನು ಹೊಂದಿಕೊಂಡು ಹೋಗುತ್ತಿದ್ದರು. ಇದರಿಂದಾಗಿ ಅನೇಕ ಯೌವನಸ್ಥರು ಮತ್ತು ರೋಗಿಗಳು ರಕ್ಷಣೆ ಹೊಂದಿ ಸಭೆಗೆ ಸೇರಿಸಲ್ಪಟ್ಟರು.

 

ನಾಮಾನನೆಂಬ ಸೇನಾಪತಿಯು ಕುಷ್ಠರೋಗದಿಂದ ಬಳಲುತ್ತಿದ್ದಾಗ, ಆತ ಇಸ್ರಾಯೇಲ್ ದೇಶದಿಂದ ಅಪಹರಿಸಿಕೊಂಡು ಬಂದಿದ್ದ ಒಂದು ಚಿಕ್ಕ ಹುಡುಗಿ ಆತನ ಬಿಡುಗಡೆಗೆ ಮಾರ್ಗವನ್ನು ಹೇಳಿದಳು. ಅವನೂ ಕೂಡ ಆ ಹುಡುಗಿ ಹೇಳಿದಂತೆಯೇ ದೇವರ ಮನುಷ್ಯನಾದ ಎಲೀಷನ ಬಳಿಗೆ ಬಂದು ಯೊರ್ದಾನಿನಲ್ಲಿ 7 ಬಾರಿ ಮುಳುಗಿ ಸ್ವಸ್ಥತೆ ಮತ್ತು ರಕ್ಷಣೆಯನ್ನು ಹೊಂದಿಕೊಂಡು ಹೊರಟುಹೋದನು. ಆ ಚಿಕ್ಕ ಹುಡುಗಿ ತನ್ನನ್ನು ಕೆಲಸದವಳಾಗಿ ಅಪಹರಿಸಿಕೊಂಡು ಬಂದವನ ಪರಿಸ್ಥಿತಿಯನ್ನು ನೋಡಿ ಸಂತೋಷಪಡದೇ, ಅವನ ಸಂಕಟದಿಂದ ಬಿಡುಗಡೆಯಾಗುವಂತಹ ಮಾರ್ಗವನ್ನು ಹೇಳಿದಳು. ಅವನನ್ನು ಕರ್ತನಿಗಾಗಿ ಆದಾಯ ಮಾಡಿದಳು. ಅವನ ಮೂಲಕ ದೇವರು ಸಿರಿಯಾ ದೇಶದಾದ್ಯಂತ ರಕ್ಷಣೆಯನ್ನು ದಯಪಾಲಿಸಿದರು.

 

ಮೇಲಿನ ಎರಡು ಘಟನೆಗಳ ಮೂಲಕ ಕರ್ತನಿಗಾಗಿ ಆತ್ಮಗಳನ್ನು ಆದಾಯ ಮಾಡಲು ವಯಸ್ಸು ಅಡ್ಡಿಯಲ್ಲ ಎಂಬುದನ್ನು ಅರಿತುಕೊಳ್ಳಬಹುದು. ಹೌದು! ಕಿರಿಯರು ಮತ್ತು ಹಿರಿಯರು ಯಾರು ಬೇಕಾದರೂ ಆತ್ಮ ಆದಾಯ ಮಾಡಬಹುದು. ಜ್ಞಾನದ ಕೊರತೆ, ಆರ್ಥಿಕ ಸಂಕಷ್ಟ, ಅನಾರೋಗ್ಯ, ಅಥವಾ ವೈಯಕ್ತಿಕ ಸಮಸ್ಯೆಗಳು, ಇವುಗಳಲ್ಲಿ ಯಾವುದೂ ಕೂಡ ಆತ್ಮ ಆದಾಯ ಮಾಡಲು ಅಡ್ಡಿಯಾಗಿರುವುದಿಲ್ಲ. ಆದರೆ ಒಂದೇ ಒಂದು ಅಡಚಣೆ ಇದೆ, ಅದೇ ಸಾಕ್ಷಿಯಿಲ್ಲದ ಜೀವನ ಕೆಲಸದವಳಾಗಿದ್ದ ಆ ಚಿಕ್ಕ ಹುಡುಗಿಯ ಮಾತನ್ನು ಸೇನಾಪತಿಯಾಗಿದ್ದ ನಾಮಾನನೇ ಕೇಳಿದನು. ಆ ಮಟ್ಟಕ್ಕೆ ಆಕೆಯ ಜೀವನವು ಸಾಕ್ಷಿಯಾಗಿತ್ತು. ಇಂದು ನಿಮ್ಮ ಬಗ್ಗೆ ಏನು? ಯೇಸುವಿನ ಹಾಗೆ ಸರಿಯಾದ ಸಾಕ್ಷಿ ಜೀವನವು ಇರುವುದಾದರೆ ನೀವು ಕೂಡ ಆತ್ಮಗಳನ್ನು ಆದಾಯ ಮಾಡಬಹುದು.

- S. ಮನೋಜಕುಮಾರ್

 

ಪ್ರಾರ್ಥನಾ ಅಂಶ:

ಎರಡು ಮತ್ತು ನಾಲ್ಕನೇ ವಾರಗಳಲ್ಲಿ, ಸುವಾರ್ತೆ ಸಾರಬೇಕೆಂದು ಯೋಜಿಸಿರುವಂತೆ ಸೇವೆಯು ಮುಂದುವರಿಯಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking meritking giriş perabet perabet giriş casibom casibom giriş holiganbet holiganbet giriş galabet casibom casibom giriş grandpashabet perabet perabet giriş padişahbet padişahbet giriş meritking meritking giriş grandpashabet grandpashabet giriş kalitebet kalitebet giris betsmove betsmove giris gonebet gonebet giris betnano betnano giriş jojobet jojobet jojobet jojobet esbet sonbahis tambet grandpashabet betgit mercurecasino