Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 25.10.2021
Share:

By Village Missionary Movement

Monday, 25-Oct-2021

ಧೈನಂದಿನ ಧ್ಯಾನ(Kannada) – 25.10.2021

 

ನಾವು ರೂಪಿಸಲ್ಪಡೋಣ - ಮತ್ತೊಬ್ಬರನ್ನು ರೂಪಿಸೋಣ

 

"ಯೆಹೋವನೇ ಜ್ಞಾನವನ್ನು ಕೊಡುವಾತನು, ಆತನ ಬಾಯಿಂದಲೇ ತಿಳುವಳಿಕೆಯೂ ವಿವೇಕವೂ ಹೊರಟು ಬರುತ್ತವೆ." -ಜ್ಞಾನೋಕ್ತಿ. 2:6

 

ಗವಿನ್ ಎಂಬ ಹುಡುಗ ಹುಟ್ಟಿದಾಗಿನಿಂದಲೂ ಚೇಷ್ಟೆಯವನಾಗಿದ್ದನು. ವಿದ್ಯಾಭ್ಯಾಸದ ಕಡೆ ಗಮನವೂ ಸ್ವಲ್ಪ ಕಡಿಮೆ ಇತ್ತು. ಇದು ಅವನ ತಂದೆಗೆ ಅದು ಬಹಳ ದುಃಖಕರವಾಗಿತ್ತು. ಹಾಗಾಗಿ ತನ್ನ ಮಗ ಮಾಡುವ ಚೇಷ್ಟೆಗಳನ್ನು ನೋಡುವಾಗ ನಿನಗೆ ಜ್ಞಾನವಿಲ್ಲ, ಬುದ್ಧಿ ಇಲ್ಲ ಎಂದು ಬೈಯ್ಯುವುದು ವಾಡಿಕೆ. ಒಂದು ದಿನ ಹಾಗೆ ಬೈಯ್ಯುವಾಗ ಗವಿನ್, “ಜ್ಞಾನ ಮತ್ತು ಬುದ್ಧಿ ಎಂದರೆ ಏನಪ್ಪಾ? ಇವೆರಡಕ್ಕೂ ಏನು ವ್ಯತ್ಯಾಸ?” ಎಂದು ಕೇಳಿದ. ಕೂಡಲೇ ಅಪ್ಪ ಹೇಳಿದರು, "ಒಬ್ಬ ವ್ಯಕ್ತಿ ಕಲಿತ ಜ್ಞಾನ ಮತ್ತು ಅವನ ಅನುಭವದಿಂದ ಅವನು ನೀಡುವ ಸಲಹೆಗಳು ಮನುಷ್ಯನನ್ನು ರೂಪಿಸುತ್ತವೆ." ಎಂದರು. ಗವಿನ್ ಸ್ವಲ್ಪವೂ ಯೋಚಿಸದೆ "ನಿಮಗೆ ಜ್ಞಾನ, ಬುದ್ಧಿ ಇಲ್ಲ, ಇದ್ದಿದ್ದರೆ ನಾನು ರೂಪಿಸಲ್ಪಡುತ್ತಿದ್ದೆ" ಎಂದು ಹೇಳಿದನು.

 

ಯೇಸುಕ್ರಿಸ್ತನು ಈ ಲೋಕದಲ್ಲಿ ಸಂಚರಿಸಿದ ದಿನಗಳಲ್ಲಿ ಅನಾರೋಗ್ಯದಿಂದ, ಬಲಹೀನತೆ ಗಳಿಂದ ಬೇಸತ್ತಿದ್ದ ಹಲವರಿಗೆ ಸ್ವಸ್ಥತೆ ನೀಡಿ ಅವರನ್ನು ಸ್ಥಿರಪಡಿಸುವ, ರೂಪಿಸುವ ಮಾತುಗಳನ್ನು ಹೇಳಿದರು. ಮತ್ತು ಆತನ ಶಿಷ್ಯರಾಗಿ, ಅವಿದ್ಯಾವಂತ ಮೀನುಗಾರರನ್ನು ಮತ್ತು ಪಾಪಿಗಳಾಗಿದ್ದ ಸುಂಕದವರನ್ನು ಆರಿಸಿಕೊಂಡು, ತನ್ನೊಂದಿಗೆ ಇಟ್ಟುಕೊಂಡು ಅವರಿಗೆ ಬೋಧಿಸಿ, ಅವರು ಪರಲೋಕಕ್ಕೆ ಹೋದ ನಂತರವೂ ಪವಿತ್ರಾತ್ಮನನ್ನು ನೀಡಿ ಮತ್ತು ಅವರನ್ನು ಅಪೊಸ್ತಲರನ್ನಾಗಿ ಮಾರ್ಪಡಿಸಿ ಅನೇಕರು ನೋಡಿ ಆಶ್ಚರ್ಯಪಡುವ ರೀತಿಯಲ್ಲಿ ರೂಪಿಸಿದರು. ಪೇತ್ರನು ಸಹ ಯೇಸುವಿನ ಪ್ರೀತಿಯ ಬೋಧನೆಯನ್ನು ಕೇಳಿದ್ದರೂ , ಯೇಸುವನ್ನು ಹಿಡಿದು ಕೊಡಲ್ಪಟ್ಟಾಗ ಒಬ್ಬನ ಬಲ ಕಿವಿಯನ್ನು ಕತ್ತರಿಸಿದನು, ಮೂರು ಬಾರಿ ಆತನನ್ನು ನಿರಾಕರಿಸಿದನು ಮತ್ತು ಕೋಪದಿಂದ ಮೂರ್ಖತನದಿಂದ ವರ್ತಿಸಿದನು. ಆದರೂ ತನ್ನ ತಪ್ಪನ್ನು ಅರಿತು ಮತ್ತೆ ದೇವರಿಗೆ ತನ್ನನ್ನು ಅರ್ಪಿಸಿಕೊಂಡಾಗ, ದೇವರು ಅವನಿಗೆ ತಾಳ್ಮೆ ಮತ್ತು ಪ್ರೀತಿಯನ್ನು ನೀಡಿ ಅವನ ಮೂಲಕ ಸಾವಿರಾರು ಜನರು ದೇವರನ್ನು ತಿಳಿಯುವಂತೆ ಮಾಡಿದರು. ಪೇತ್ರನಿಂದಲೇ ಆದಿ ಅಪೊಸ್ತಲರ ಸಭೆಯು ರೂಪುಗೊಂಡಿತು ಮತ್ತು ವಿಸ್ತರಿಸಿತು ಎಂದು ಹೇಳಬಹುದು. ಮತ್ತು ಅಪೊಸ್ತಲರಿಗೆ ನಾಯಕನಾಗಿದ್ದು ಮುನ್ನಡೆಸುವವರಾಗಿದ್ದರು.

 

ಪ್ರಿಯರೇ! ನೀವೂ ಕೂಡ ನನಗೆ ಜ್ಞಾನವಿಲ್ಲ ಮತ್ತು ಬುದ್ಧಿ ಇಲ್ಲ ಎಂದು ನೆನೆಸುತ್ತಿದ್ದೀರ? ಪೇತ್ರನಂತೆ, ದೇವರು ನಿಮ್ಮನ್ನು ಕೂಡ ಅನೇಕರನ್ನು ಮುನ್ನಡೆಸುವವರಾಗಿ, ಇತರರಿಗೆ ಸಲಹೆಗಾರರಾಗಿ, ನಿಮ್ಮ ನೆರಳು ಹುಡುಕುತ್ತಾ ಅನೇಕರು ಬರುವಂತೆ ಮಾರ್ಪಡಿಸಲು ಸಾಧ್ಯ. ಅವರ ಬಳಿ ಪೇತ್ರನಂತೆ ನಿಮ್ಮ ಎಲ್ಲಾ ವಿಷಯಗಳನ್ನು ಒಪ್ಪಿಸಿಕೊಟ್ಟು ಬುದ್ಧಿವಂತಿಕೆ ಮತ್ತು ತಿಳುವಳಿಕೆಯನ್ನು ಕೇಳಿದರೆ ಸಾಕು. ದೇವರಲ್ಲಿ ಜ್ಞಾನ ಮತ್ತು ಬುದ್ದಿ ಎಂಬ ಎಲ್ಲಾ ಸಂಪತ್ತುಗಳೂ ಇವೆ. ಆತನು ಅವುಗಳಿಂದ ನಿಮ್ಮನ್ನು ರೂಪಿಸಿ, ಅನೇಕರನ್ನು ರೂಪಿಸುವವರನ್ನಾಗಿ ಮಾರ್ಪಡಿಸುತ್ತಾರೆ ಎಂಬುದರಲ್ಲಿ ಸಂದೇಹವೇ ಇಲ್ಲ.

- Sis. ವಿಶಾಲಿ

 

ಪ್ರಾರ್ಥನಾ ಅಂಶ:

ರಾಕ್ಲ್ಯಾಂಡ್ ಬೈಬಲ್ ಕಾಲೇಜಿನ ವಿದ್ಯಾರ್ಥಿಗಳು ವಾಸಮಾಡಲು ನಿರ್ಮಿಸುತ್ತಿರುವ ಕಟ್ಟಡ ಕೆಲಸಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al Elexbet matbet giriş matbet instagram unban x unban twitter unban palacebet setrabet