By Village Missionary Movement
Monday, 25-Oct-2021ಧೈನಂದಿನ ಧ್ಯಾನ(Kannada) – 26.10.2021
ಪ್ರಾರ್ಥಿಸಿದ ಹುಡುಗ
“ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಹುಡುಗನನ್ನು ಶಿಕ್ಷಿಸು; ಮುಪ್ಪಿನಲ್ಲಿಯೂ ಓರೆಯಾಗನು." - ಜ್ಞಾನೋಕ್ತಿ 22: 6
ಹನ್ನಳೆಂಬ ತಾಯಿ ತನಗೆ ಒಬ್ಬ ಮಗ ಬೇಕೆಂದು ಪ್ರಾರ್ಥಿಸಿದ ನಂತರ ಆ ಪ್ರಾರ್ಥನೆಯ ಫಲವಾಗಿ, ಸಮುವೇಲನು ಜನಿಸಿದನು. ಗರ್ಭದಲ್ಲಿ ರೂಪಿಸಲ್ಪಟ್ಟ ಮೊದಲ ದಿನದಿಂದಲೇ ಪ್ರಾರ್ಥನೆಯು ಅವನನ್ನು ಆವರಿಸಿತ್ತು. ಅವನು ಹುಟ್ಟಿದಾಗಿನಿಂದಲೂ ಪ್ರಾರ್ಥನೆಯ ಸ್ಥಿತಿಯಲ್ಲೇ ಇದ್ದನು. ಪ್ರಾರ್ಥನೆಯಿಂದ ಗರ್ಭಧರಿಸಿದ್ದ ತಾಯಿಯ ಆರೈಕೆಯಲ್ಲೇ ಸಮುವೇಲನು ಬೆಳೆದನು. ಅವನು ದೊಡ್ಡವನಾದಂತೆ, ಹರಕೆ ಮಾಡಿದ್ದ ಪ್ರಕಾರವೇ ಕರ್ತನ ಸೇವೆಮಾಡಲು ದೇವಾಲಯದ ಯಾಜಕನಾದ ಏಲಿಯ ವಶಕ್ಕೆ ಕೊಡಲ್ಪಟ್ಟನು.
ಆರಂಭದಿಂದಲೂ ಸಮುವೇಲನು ಕರ್ತನ ಧ್ವನಿಯನ್ನು ಕೇಳುವ ಸ್ಥಳದಲ್ಲೇ ಇದ್ದನು. ಮೊದಲು ದೇವರ ಸ್ವರವನ್ನು ಅರಿತುಕೊಳ್ಳಲಿಲ್ಲ ಎಂಬುದು ನಿಜವಾದರೂ ಅರಿವಾದ ನಂತರ, “ಯೆಹೋವನೇ, ಅಪ್ಪಣೆಯಾಗಲಿ, ನಿನ್ನ ದಾಸನು ಕಾದಿದ್ದಾನೆ" ಎಂದು ಹೇಳಿದ್ದರಿಂದಲೇ
ಚಿಕ್ಕಂದಿನಿಂದಲೇ ಕರ್ತನಿಗೆ ವಿಧೇಯನಾಗಿದ್ದು, ಪ್ರಾರ್ಥಿಸುವ ಅಭ್ಯಾಸವನ್ನು ಹೊಂದಿದ್ದನೆಂಬುದು ಸ್ಪಷ್ಟವಾಗಿ ತಿಳಿಯುತ್ತಿದೆ.
ಸಮುವೇಲನು ಚಿಕ್ಕಂದಿನಿಂದಲೇ ದೇವರನ್ನು ಸೇವಿಸಲು, ಅವರಿಗೆ ವಿಧೇಯನಾಗಲು ಅಭ್ಯಾಸ ಮಾಡಿಕೊಂಡದ್ದರಿಂದ, ದೊಡ್ಡವನಾದ ಮೇಲೂ "ತೊಟ್ಟಿಲು ಅಭ್ಯಾಸವು ಸುಡುಗಾಡು ವರೆಗೂ" ಎಂಬಂತೆ ಸತತವಾಗಿ ಅವನನ್ನು ಪ್ರಾರ್ಥನಾ ಯೋಧನನ್ನಾಗಿ ಮಾರ್ಪಡಿಸಿತು. ಪ್ರಾರ್ಥಿಸುವ ಅಭ್ಯಾಸವುಳ್ಳ ತಾಯಿಗೆ ಜನಿಸಿದ ಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ದೇವರಿಗೆ ವಿಧೇಯರಾಗಲು ಮತ್ತು ಅವರ ಸೇವೆ ಮಾಡಲು ಕಲಿಯುತ್ತಾರೆಂಬುದು ನಿಜ. ಸಭೆಯಲ್ಲಿ ಪೌಳಿಯ ಒಡಕಿನಲ್ಲಿ ನಿಂತುಕೊಳ್ಳುವ ಪ್ರಾರ್ಥನಾ ವೀರರು ಅಗತ್ಯಗಳಲ್ಲಿ ಅದಕ್ಕಾಗಿ ವಿಜ್ಞಾಪನೆ ಮಾಡುವ ತಾಯಂದಿರು ಮತ್ತು ಬೇಡಿಕೊಳ್ಳುವ ಕುಟುಂಬಗಳು ಬೇಕಾಗಿದೆ. ಪ್ರಾರ್ಥಿಸುವ ಅಭ್ಯಾಸವುಳ್ಳ ಮಕ್ಕಳು ಬಹುಶಃ ಸಮುವೇಲನ ಹಾಗೆ ಪ್ರಾರ್ಥನಾಶೀಲ ತಾಯಂದಿರಿಗೆ ಜನಿಸಿರುತ್ತಾರೆ. ಪ್ರಾರ್ಥಿಸುವ ನಾಯಕರು ರೂಪುಗೊಳ್ಳುವುದು ಪ್ರಾರ್ಥಿಸುವ ಮನೆಗಳಲ್ಲಿಯೇ!
ಪ್ರಿಯರೇ! ದೇವರಿಗೆ ಸ್ಥಳ ಕೊಡದ ಒಂದು ಲೋಕಾನುಸಾರವಾದ ತಾಯಿಂದ ಲೋಕವನ್ನು ಸೇವಿಸುವ ಕುಟುಂಬದಲ್ಲಿ ಸಮುವೇಲನು ಬೆಳೆದಿದ್ದರೆ ಅವನು ಹೇಗಿದ್ದಿರುತ್ತಾನೆ? ಹನ್ನಳು ಸಮುವೇಲನ ಬಗ್ಗೆ ಅವನ ಬಾಲ್ಯದಲ್ಲಿ ಮಾಡಿದ ಪ್ರಯತ್ನವು ನಂತರ ಅವನು ಪ್ರಾರ್ಥನಾ ಯೋಧನಾಗಿ ಮಾರ್ಪಡಲು ಕಾರಣವಾಯಿತು. ನಿಮ್ಮ ಮಕ್ಕಳು ಚಿಕ್ಕ ವಯಸ್ಸಿನಲ್ಲೇ ದೇವರಿಗೆ ವಿಧೇಯರಾಗಬೇಕೆಂದು ನೀವು ಬಯಸುವುದಾದರೆ, ಹನ್ನಳು ಮಾಡಿದಂತೆ ಅವರಿಗಾಗಿ ಪ್ರಾರ್ಥಿಸಿರಿ. ಮಗುವಿನ ಯಶಸ್ವಿ ಜೀವನಕ್ಕೆ ಕುಟುಂಬವೇ ಮೊದಲ ಹೆಜ್ಜೆಯಾಗಬಹುದು. ಕುಟುಂಬ ಪ್ರಾರ್ಥನೆ ಇಲ್ಲದ ಮನೆ ಛಾವಣಿಯಿಲ್ಲದ ಮನೆಯಲ್ಲವೇ? ತಪ್ಪದೇ ಮಕ್ಕಳನ್ನು ಚರ್ಚ್ ಮತ್ತು ಸಂಡೇ ಸ್ಕೂಲ್ ಗೆ ಕಳುಹಿಸಿರಿ ನಿಮ್ಮ ಮನೆಯಲ್ಲೂ ಉಜ್ಜೀವನದ ಮಗನಾದ ಸಮುವೇಲನು ರೂಪುಗೊಳ್ಳುತ್ತಾನೆ ಎಂಬುದರಲ್ಲಿ ಸಂದೇಹವೇ ಇಲ್ಲ.
- E.M. ಬೆಲಂಟ್ಸ್
ಪ್ರಾರ್ಥನಾ ಅಂಶ:
ಸುವಾರ್ತಾ ಸೇವೆಗೆ ಬೇಕಾದ ಹಸ್ತಪ್ರತಿಗಳು, ಹೊಸ ಒಡಂಬಡಿಕೆ ಗಳು, ಸುವಾರ್ತಾ ಪುಸ್ತಕಗಳು ಸಂಪೂರ್ಣ ಬೈಬಲ್‌ಗಳ ಲಭ್ಯತೆಗಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482