Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 30.10.2021
Share:

By Village Missionary Movement

Saturday, 30-Oct-2021

ಧೈನಂದಿನ ಧ್ಯಾನ(Kannada) – 30.10.2021

 

ಯಥಾರ್ಥತೆ

 

"ಯಥಾರ್ಥವಾಗಿ ನಡೆಯುತ್ತಿರುವವನು ದೃಢವಾಗಿ ನಡೆಯುತ್ತಾನೆ;” - ಜ್ಞಾನೋ. 10: 9

 

ಒಂದು ದಿನ ಬ್ಯಾಂಕಿನಲ್ಲಿದ್ದ ಎಲ್ಲರ ಮುಖದಲ್ಲೂ ಭಯ ಕಾಣಿಸಿಕೊಂಡಿತು. ಆದರೆ ಬ್ಯಾಂಕ್ ಎಂದಿನಂತೆ ನಡೆಯುತ್ತಿತ್ತು. ಮರುದಿನ 4 ಪೊಲೀಸರು ಬ್ಯಾಂಕಿಗೆ ಬಂದರು. ಈ ಬ್ಯಾಂಕ್ ನಲ್ಲಿ 10 ಲಕ್ಷ ರೂಪಾಯಿ ವಂಚನೆ ನಡೆದಿರುವ ಬಗ್ಗೆ ವಿಚಾರಿಸಿದರು. ರಾಜನ್ ಮಾತ್ರ ನಿರ್ಭೀತನಾಗಿದ್ದ. ಕ್ಯಾಷಿಯರ್ ನನ್ನು ಮತ್ತೆ ಮತ್ತೆ ಪೊಲೀಸರು ಪ್ರಶ್ನೆ ಮಾಡಿದಾಗ ರಾಜನ್ ನಡುಗಿದರು. ನಂತರ ಮ್ಯಾನೇಜರ್ ಬಂದು ಈ ಕಾರ್ಯವು ಇವರು ಮಾಡಿರಲು ಸಾಧ್ಯವೇ ಇಲ್ಲ ಇವರು ಯಥಾರ್ಥವಾಗಿ ಮತ್ತು ಪ್ರಾಮಾಣಿಕವಾಗಿ ಇರುತ್ತಾರೆ ಎಂದು ಹೇಳಿದರು. ಆಮೇಲೆ ಸ್ವಲ್ಪವೂ ಅನುಮಾನಕ್ಕೆ ಸ್ಥಳವೇ ಇಲ್ಲದಂತಿದ್ದ ಪ್ಯೂನ್ ಭರತ್ ಕಡೆಗೆ ಗಮನ ಹರಿದಿತ್ತು. ಅಂತಿಮವಾಗಿ ಅವನೇ ನಕಲಿ ಸಹಿ ಮಾಡಿ ವಂಚನೆ ಮಾಡಿರುವುದು ಬೆಳಕಿಗೆ ಬಂತು. ಎಲ್ಲರಿಗೂ ತಿಳಿದಿದ್ದ ರಾಜನ್ ರವರ ಪ್ರಾಮಾಣಿಕತೆ ಅವರನ್ನು ಉಳಿಸಿತು.

 

ಅರಸನಾದ ಯೆಹೋಷಾಫಾಟನು ಯೆಹೋವನಿಗೆ ಭಯಪಟ್ಟು ಆತನ ಆಜ್ಞೆಗಳಿಗೆ ವಿಧೇಯರಾಗಿ ಜೀವಿಸಿದರು. ಅವನು ತನ್ನ ದೇಶದೊಳಗಿಂದ ಅಶೇರವಿಗ್ರಹಸ್ತಂಭಗಳನ್ನು ತೆಗೆದುಹಾಕಿ ಯೆಹೋವನ ಭಕ್ತಿಯಲ್ಲಿ ಮನಸ್ಸಿಟ್ಟನು ಮತ್ತು ಜನರು ಕರ್ತನನ್ನು ಅನುಸರಿಸುವಂತೆ ಮಾಡಿದನು. ಯೆಹೋಷಾಫಾಟನು ಅರಸನಾಗಿದ್ದನು, ಅವನ ಹೃದಯವು ಕರ್ತನ ಮಾರ್ಗಗಳಲ್ಲಿ ಉತ್ಸಾಹ ಗೊಂಡಿತು. ಅವರು ಏನು ಮಾಡಿದರೂ ಕರ್ತನ ಬಳಿ ವಿಚಾರಿಸಿ ಮಾಡುತ್ತಿದ್ದರು. ಒಂದು ಬಾರಿ ಯುದ್ಧಕ್ಕೆ ಹೋದಾಗ ಕರ್ತನು ಹೋಗಬೇಡ ಎಂದು ಹೇಳಿದರೂ ಅವನು ಇಸ್ರಾಯೇಲ್ಯರ ರಾಜನ ಜೊತೆ ಅವನಿಗೆ ಸಹಾಯಕನಾಗಿ ಹೋದರು. ಯುದ್ಧದಲ್ಲಿ ಇಸ್ರಾಯೇಲಿನ ಅರಸನು ಯುದ್ಧದಲ್ಲಿ ಕೊಲ್ಲಲ್ಪಟ್ಟರು. ಇವರು ತನ್ನ ದೇಶಕ್ಕೆ ಹಿಂದಿರುಗಿದಾಗ, ದೇವರು ತನ್ನ ಪ್ರವಾದಿಯ ಮೂಲಕ “ನೀವು ತಪ್ಪಾದ ರಾಜನೊಂದಿಗೆ ಯುದ್ಧಕ್ಕೆ ಹೋದ ಕಾರಣ ಕರ್ತನ ಕೋಪವು ನಿಮ್ಮ ಮೇಲೆ ಬರುತ್ತಿತ್ತು. ಆದರೆ ನೀವು ಮಾಡಿದ ಒಳ್ಳೆಯ ಕೆಲಸಗಳಿಂದಾಗಿ ಕೋಪವು ನಿಮ್ಮ ಮೇಲೆ ಬರಲಿಲ್ಲ” ಎಂದರು. ತಕ್ಷಣವೇ ತನ್ನ ತಪ್ಪನ್ನು ಅರಿತು ಅರಸನು ನ್ಯಾಯಾಧಿಪತಿಗಳು ಕರ್ತನ ಆಜ್ಞೆಯಂತೆ ನ್ಯಾಯ ವಿಚಾರಿಸಿರಿ ಎಂದು ಹೇಳಿ ಪುನಃ ಕರ್ತನ ಮಾರ್ಗದಲ್ಲಿ ನಡೆದರು. ಈ ಮೂಲಕ ಯಥಾರ್ಥವಾಗಿ ನಡೆಯುವವನಿಗೆ ಕರ್ತನೇ ಸಹಾಯಕನೆಂದು ನಾನು ಕಲಿತುಕೊಂಡಿದ್ದೇನೆ ಎಂದು ಹೇಳುತ್ತಾರೆ.

 

ಪ್ರಿಯರೇ! ನೀವು ಕೂಡ ನಿಮ್ಮ ಕುಟುಂಬ ಮತ್ತು ಕೆಲಸದಲ್ಲಿ ಹೇಗಿದ್ದೀರ? ಇಂದು ಪರೀಕ್ಷಿಸಿಕೊಳ್ಳಿರಿ. ಕರ್ತನಿಗೆ ಭಯಪಟ್ಟು ಯಥಾರ್ಥವಾಗಿ ಮತ್ತು ನಿಷ್ಠೆಯಿಂದ ನಡೆದರೆ, ಅಪಾಯದಲ್ಲಿ ಅವರು ನಮಗೆ ಸಹಾಯವಾಗಿ ನಮ್ಮೊಂದಿಗೆ ನಿಲ್ಲುತ್ತಾರೆ. ನೀವು ಸುರಕ್ಷಿತವಾಗಿರಬಹುದು. ಯಾವುದಾದರೂ ಒಂದು ಕಾರ್ಯದಲ್ಲಿ ಸ್ವಲ್ಪ ತಪ್ಪಿದರೂ ಇದು ತಪ್ಪು ಎಂದು ಕರ್ತನು ಯೆಹೋಷಾಫಾಟನಿಗೆ ತಿಳಿಸಿದ ಹಾಗೆ ತಿಳಿಸುತ್ತಾರೆ. ಆಗ ನೀವು ನಿಮ್ಮನ್ನು ಸರಿಪಡಿಸಿಕೊಳ್ಳಿರಿ. ನೀವು ಪುನಃ ನೀತಿ ಮತ್ತು ಯಥಾರ್ಥತೆಯ ಮಾರ್ಗದಲ್ಲಿ ಹಿಂತಿರುಗುತ್ತೀರಿ. ಶೋಧನೆ ಮತ್ತು ಸಂಕಟ ಬಂದಾಗ, ಸೈತಾನನು, "ಯಥಾರ್ಥವಾಗಿ ನಡೆದು ನೀನು ಏನು ಕಂಡಿದ್ದೀಯ? ಕೆಟ್ಟ ಮಾರ್ಗದಲ್ಲಿ ನಡೆದು ಸಂತೋಷವಾಗಿ ಇರಬಹುದು. ಇದು ಭ್ರಾಂತಿಯ ಲೋಕ ದುಷ್ಟರಿಗೆ ಮಾತ್ರ ಅನುಕೂಲಕರವಾಗಿದೆ. ಸತ್ಯಕ್ಕೆ ಕಾಲವಿಲ್ಲ, ಬದುಕಲು ಸಾಧ್ಯವಿಲ್ಲ ” ಎಂದೆಲ್ಲಾ ಮಾತಾಡುತ್ತಾನೆ. ಆದರೆ ನೀವು ಆ ಮಾತುಗಳಿಗೆ ಕಿವಿಗೊಡದೆ ದೇವರ ಬಳಿ ಪ್ರಾರ್ಥಿಸುತ್ತಾ ಧೈರ್ಯವಾಗಿರಿ. ರಾಜನ್ ಗೆ ಮ್ಯಾನೇಜರ್ ಸಾಕ್ಷಿ ಹೇಳಿದಂತೆ ನಿಮ್ಮ ಬಗ್ಗೆಯೂ ಈ ಲೋಕವು ಸಾಕ್ಷಿ ಹೇಳಲಿ. ನಿಮಗೂ ಕರ್ತನು ಬೆಂಬಲವಾಗಿ ನಿಂತಿದ್ದಾರೆ. ಭಯವಿಲ್ಲದೆ, ಹಿಂಜರಿಕೆಯಿಲ್ಲದೆ ಮುಂದುವರೆಯಿರಿ, ಸುರಕ್ಷಿತವಾಗಿರುತ್ತೀರಿ.

- Mrs. ಅನ್ಬು ಜ್ಯೋತಿ ಸ್ಟಾಲಿನ್ 

 

ಪ್ರಾರ್ಥನಾ ಅಂಶ:

ನಾವು ಗೆತ್ಸೆಮನೆ ಕ್ಯಾಂಪಸ್‌ನಲ್ಲಿ ವೈದ್ಯಕೀಯ ಸೇವೆಯನ್ನು ಪ್ರಾರಂಭಿಸಿದ್ದೇವೆ. ಈ ಮೂಲಕ, ಅನೇಕರು ಆತ್ಮ ಮತ್ತು ದೇಹದಲ್ಲಿ ಸ್ವಸ್ಥತೆಯನ್ನು ಹೊಂದಿಕೊಳ್ಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş holiganbet matbet matbet giriş sahabet onwin betcio atlasbet casibom giriş casibom vaycasino vaycasino giriş meritking meritking giriş realbahis realbahis giriş casibom casibom giriş casibom casibom giriş imajbet imajbet giriş imajbetapp grandpashabet grandpashabet giriş grandpashabet güncel casibom giriş casibom matbet matbet giriş alobet betmartin pashagaming ultrabet lunabet betzula meritking jojobet marsbahis grandpashabet casibom jojobet jojobet casibom superbetin superbetin giriş marsbahis marsbahis giriş almanbahis almanbahis giriş amgbahis amgbahis giriş betasus betasus giriş betmartin betmartin giriş betoffice betoffice giriş jojobet jojobet giriş betpas betpas giriş betsat betsat giriş betsmove betsmove giriş egebet egebet giriş galabet galabet giriş grandpashabet grandpashabet giriş hiltonbet hiltonbet giriş holiganbet holiganbet giriş jasminbet jasminbet giriş kareasbet kareasbet giriş kargabet kargabet giriş kavbet kavbet giriş matbet matbet giriş mavibet mavibet giriş nakitbahis nakitbahis giriş norabahis norabahis giriş pashagaming pashagaming giriş perabet perabet giriş piabellacasino piabellacasino giriş tarafbet tarafbet giriş winxbet winxbet giriş supertotobet supertotobet giriş atlasbet atlasbet giriş jojobet jojobet grandpashabet holiganbet holiganbet cratosroyalbet gameofbet casinolevant casibom grandpashabet casibom casibom giriş