Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 06.11.2021
Share:

By Village Missionary Movement

Saturday, 06-Nov-2021

ಧೈನಂದಿನ ಧ್ಯಾನ(Kannada) – 06.11.2021

 

ಅದು ಬೆಳೆಯಲು! ಇದು ಕಡಿಮೆಯಾಗುತ್ತದೆ! !

 

 "...ಆದದರಿಂದ ಹೆದರಬೇಡಿರಿ; ಬಹಳ ಗುಬ್ಬಿಗಳಿಗಿಂತ ನೀವು ಹೆಚ್ಚಿನವರು." —ಮತ್ತಾಯ 10:31

 

"ಏಯ್ ಕಲಾ, ನೀನು ಯಾಕಾದ್ರೂ ಹೀಗೆ ಕೆಳಗೆ ಬಿದ್ದಿರುವ ಕೂದಲನ್ನೆಲ್ಲಾ ಎತ್ತಿಡುತ್ತಿದ್ದೀಯೋ ಗೊತ್ತಿಲ್ಲ" ಎಂದು ಹೇಳುತ್ತಲೇ ತನ್ನ ಸ್ನೇಹಿತೆಯ ಬಳಿ ಬಂದಳು ಸಂಧ್ಯಾ. ಇಬ್ಬರೂ ಬಾಲ್ಯದಿಂದಲೂ ಒಳ್ಳೆಯ ಸ್ನೇಹಿತರು. ಒಂದೇ ಶಾಲಾ ಕಾಲೇಜಿನಲ್ಲಿ ಓದಿದವರು. ಇತ್ತೀಚೆಗೆ ಕಲಾಗೆ ಕೂದಲು ಉದುರುವುದು ದೊಡ್ಡ ಸಮಸ್ಯೆಯಾಗಿತ್ತು. ತಲೆಯಲ್ಲಿ ಅಲ್ಲಲ್ಲಿ ಬೋಳು ಕೂಡ ಕಾಣುತ್ತಿತ್ತು. ಕಲಾಳ ದೇಹದ ತೂಕವೂ ಕೂಡ ಕಡಿಮೆಯಾಗುತ್ತಲೇ ಇತ್ತು. ಆಗಾಗ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಳು. ಸಂಧ್ಯಾ - ನೀನು ಸರಿಯಾಗಿ ಊಟ ಮಾಡದಿರುವುದೇ ಇದಕ್ಕೆ ಕಾರಣ ಎಂದು ಹೇಳುತ್ತಿದ್ದಳು. ಆದರೆ ಗರ್ಭಕೋಶದ ಕ್ಯಾನ್ಸರ್ ನಿಂದ ಬಾಧಿಸಲ್ಪಟ್ಟು ಚಿಕಿತ್ಸೆ ಪಡೆಯುತ್ತಿದ್ದದ್ದು ಅವರ ಕುಟುಂಬವನ್ನು ಹೊರತುಪಡಿಸಿ ತನ್ನ ಪ್ರಾಣ ಸ್ನೇಹಿತೆಗೂ ಕೂಡ ತಿಳಿದಿರಲಿಲ್ಲ. ಕಲಾ ತನ್ನ ಸ್ಥಿತಿಯನ್ನು ಕಂಡು ಪ್ರತಿದಿನ ಕಣ್ಣೀರು ಸುರಿಸುತ್ತಿದ್ದಳು. ಕ್ಯಾನ್ಸರ್ ನ ವೇದನೆಯನ್ನು, ಅದರ ಚಿಕಿತ್ಸೆಯ ಮೂಲಕ ತನ್ನ ಶರೀರದಲ್ಲಿ ಏರ್ಪಡುವ ಬದಲಾವಣೆಗಳನ್ನು ನೋಡಿ ಬದುಕುವುದಕ್ಕೆ ಪ್ರಯತ್ನಿಸುವ ಬದಲು, ಸಾಯುವುದೇ ಮೇಲು ಎಂದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದಳು. ರಾತ್ರಿ ಎಲ್ಲರೂ ಮಲಗಿದ ನಂತರ ನಿಧಾನವಾಗಿ ಮನೆಯ ಮೇಲಿನ ಮಹಡಿಗೆ ಹೋದಳು. ರಾತ್ರಿ ಎಲ್ಲರೂ ಮಲಗಿದ್ದ ಸಮಯ ತುಂಬಾ ನಿಶ್ಯಬ್ದವಾಗಿತ್ತು. ಆದರೆ ಪಕ್ಕದ ಮನೆಯಲ್ಲಿ ಮಾತ್ರ ಹಾಡು ಹಾಡುವ ಸದ್ದು ಕೇಳಿ ಮಹಡಿಯ ಒಂದು ಮೂಲೆಯಲ್ಲಿ ಹೋಗಿ ಬಹಳ ಆಸಕ್ತಿಯಿಂದ ಗಮನಿಸಿದಳು. ಅವರು ಒಂದು ಪುಸ್ತಕವನ್ನು ತೆಗೆದುಕೊಂಡು ಓದಲು ಪ್ರಾರಂಭಿಸಿದರು. ಕಲಾ ಅದನ್ನು ಕೇಳುತ್ತಾ ನಿಂತಿದ್ದಳು.

 

ಕೆಲವು ಸೆಕೆಂಡುಗಳ ಕಾಲ ಆಲಿಸಿ ತನ್ನ ಸಾಯುವ ತೀರ್ಮಾನವನ್ನು ಮುಂದುವರೆಸಲು ಹೋಗುವ ಸಮಯದಲ್ಲಿ "ನಿಮ್ಮ ತಲೇಕೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ.

ಆದದರಿಂದ ಹೆದರಬೇಡಿರಿ; ಬಹಳ ಗುಬ್ಬಿಗಳಿಗಿಂತ ನೀವು ಹೆಚ್ಚಿನವರು" ಎಂಬ ಮಾತುಗಳು ಅವಳನ್ನು ಮುಟ್ಟಿತು. ಗುಡು ಗುಡು ಎಂದು ಕೆಳಕ್ಕೆ ಓಡಿದಳು, ಪಕ್ಕದ ಮನೆಯವರ ಬಳಿ ಹೋಗಿ ವಿಷಯ ಕೇಳಿದಳು, ಯೇಸುವಿನ ಪ್ರೀತಿಯನ್ನು ತಿಳಿದು ನಂಬಿಕೆಯನ್ನು ಪಡೆದುಕೊಂಡಳು. ಕ್ಯಾನ್ಸರ್ ನಿಂದ ಬಳಲುತ್ತಾ ತಮ್ಮ ಜೀವನದ ಕುರಿತಾದ ಚಿಂತೆ ಅನೇಕರ‌ ಬಳಿ ಕಾಣುತ್ತಿದೆ. ಅವರನ್ನು ಬೆಂಬಲಿಸಲು ಮತ್ತು ಪ್ರೋತ್ಸಾಹಿಸಲು - ಭಾರತದಲ್ಲಿ (National Cancer Awareness Day) ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನವನ್ನು ಆಚರಿಸಲಾಗುತ್ತಿದೆ.

 

ಇದನ್ನು ಓದುತ್ತಿರುವ ಸ್ನೇಹಿತರೇ! ನೀವು ಒಂದು ವೇಳೆ ಈ ಮಾರಣಾಂತಿಕ ಕಾಯಿಲೆಯಿಂದ ಬಾಧಿಸಲ್ಪಟ್ಟವರಾಗಿಯೂ ಅಥವಾ ಅವರ ಸಂಬಂಧಿಕರಾಗಿಯೂ ಇರುವುದಾದರೆ ಕರ್ತನಲ್ಲಿ ನಂಬಿಕೆ ಇಡಿರಿ, ಎದೆಗುಂದಬೇಡಿರಿ. ಭರವಸೆಯನ್ನು ಬಿಟ್ಟುಬಿಡಬೇಡಿರಿ. Dollie Freeman ಎಂಬ ಆಧ್ಯಾತ್ಮಿಕ ಸಹೋದರ ತನ್ನ ಒಂದು ಪುಸ್ತಕದಲ್ಲಿ ಈ ರೀತಿಯಾಗಿ ಬರೆದಿದ್ದಾರೆ, "Tumor shrinks as our faith grows". ನಮ್ಮ ನಂಬಿಕೆ ಹೆಚ್ಚುತ್ತಾ, ಹೆಚ್ಚುತ್ತಾ ಕ್ಯಾನ್ಸರ್ ಗಡ್ಡೆಗಳು ಕಡಿಮೆಯಾಗುತ್ತವೆ. ಪ್ರಾರ್ಥಿಸೋಣ, ಜಯ ಹೊಂದೋಣ.

- A. ರೋಸ್ಲಿನ್

 

ಪ್ರಾರ್ಥನಾ ಅಂಶ: 

ಮೋಕ್ಷ ಪ್ರಯಾಣ ಪತ್ರಿಕೆಯ ಪೂರ್ವಸಿದ್ಧತಾ ಕಾರ್ಯದಲ್ಲಿ ನಿರತರಾಗಿರುವ ವ್ಯಕ್ತಿಗಳು ದೇವರ ಚಿತ್ತದಂತೆ ನಡೆಯಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking meritking giriş perabet perabet giriş casibom casibom giriş holiganbet holiganbet giriş galabet casibom casibom giriş grandpashabet perabet perabet giriş padişahbet padişahbet giriş meritking meritking giriş grandpashabet grandpashabet giriş kalitebet kalitebet giris betsmove betsmove giris gonebet gonebet giris betnano betnano giriş jojobet jojobet jojobet jojobet jojobet holiganbet holiganbet grandpashabet betgit radissonbet