Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 07.11.2021 (Kids Special)
Share:

By Village Missionary Movement

Sunday, 07-Nov-2021

ಧೈನಂದಿನ ಧ್ಯಾನ(Kannada) – 07.11.2021 (Kids Special)

 

ಕಿರು ಬೆರಳು

 

"...ಬಲಹೀನವಾದವುಗಳೆಂದು ಕಂಡರೂ ಹೆಚ್ಚಾಗಿ ಅವಶ್ಯ ವಾಗಿವೆ. " — 1 ಕೊರಿಂಥ 12:22

 

ಪ್ರೀತಿಯ ಮುದ್ದು ಪುಟಾಣಿಗಳೇ! ನೀವು Bible story, Animal story ಎಲ್ಲವನ್ನೂ ಕೇಳಿರುತ್ತೀರ. ನಿಮ್ಮ ಕೈಯಲ್ಲಿರುವ ಬೆರಳುಗಳು ಮಾತನಾಡಿಕೊಂಡ ಕಥೆಯನ್ನು ನೀವು ಎಂದಾದರೂ ಕೇಳಿದ್ದೀರಾ? ಇಲ್ಲವೇ ಇಲ್ಲ ತಾನೇ! ಇಂದು ಬೆರಳುಗಳು ಏನು ಮಾತಾಡಿಕೊಂಡವೆಂಬ ಕಥೆಯನ್ನು ಕೇಳೋಣವಾ?

 

ಒಂದು ಕೈಯಲ್ಲಿ ಎಷ್ಟು ಬೆರಳುಗಳಿರುತ್ತವೆ? ಐದು ಬೆರಳುಗಳು. Very good. ಪ್ರತಿ ಬೆರಳಿಗೂ ಒಂದು ಹೆಸರಿದೆ ಗೊತ್ತಾ? ಗೊತ್ತಿಲ್ವಾ, Ok ನಾನು ಹೇಳುತ್ತೇನೆ ಕೇಳಿ. ಹೆಬ್ಬೆರಳು ಹೇಳಿತು, “ನನ್ನನ್ನು ನೋಡಿ, ಕುಳ್ಳಗಿದ್ದರೂ, ಎಷ್ಟು Strong ಆಗಿ ಇದ್ದೇನೆ. ನಾನು ಇಲ್ಲದೆ ನೀವು ಒಂದು ಲೋಟ ಕೂಡ ನಿಮ್ಮಿಂದ ಎತ್ತಲು ಸಾಧ್ಯವಿಲ್ಲವೆಂದು ಹೇಳಿತಂತೆ. ” ಹೌದೆಂದು ಎಲ್ಲಾ ಬೆರಳುಗಳು ಒಪ್ಪಿಕೊಂಡವಂತೆ. ಮುಂದಿನದು ತೋರುಬೆರಳು ಹೇಳಿತು, “ಎಲ್ಲರಿಗೂ ನಾನೇ ದಾರಿ ತೋರಿಸುತ್ತೇನೆ. ಇವರೇ, ಅಲ್ಲೇ ಎಂಬ ಗುರುತನ್ನು ತೋರಿಸುತ್ತೇನೆ. ಹಾಗಾದರೆ ನಾನು ಎಷ್ಟು ಮುಖ್ಯ ” ಎಂದು ಹೇಳಿತಂತೆ. ಮೂರನೇ ಬೆರಳು ನಾನು ಏನು ಹೇಳುವುದೆಂದು ಯೋಚಿಸಿತು. ತನ್ನ ರೂಪವನ್ನು ನೋಡಿ, “ಬೆರಳುಗಳಲ್ಲಿ ನಾನೇ ಅತಿ ಎತ್ತರ ಮತ್ತು ದಪ್ಪವಾಗಿ ಇದ್ದೇನೆ. ನಾನೇ ದೊಡ್ಡ ವ್ಯಕ್ತಿ ” ಎಂದು ಹೇಳಿತಂತೆ. ನಾಲ್ಕನೇ ಬೆರಳಿಗೆ ದಿಢೀರೆಂದು ನೆನಪಾಯಿತು ಏನಂತಾ ಗೊತ್ತಾ? "ಮದುವೆ ಎಂದಾಗ ನನಗೇನೆ ಉಂಗುರ ಹಾಕೋದು. ಚಿನ್ನ, ಬೆಳ್ಳಿ ಮತ್ತು ವಜ್ರಗಳನ್ನು ನನ್ನ ಬೆರಳಿಗೆ ತಾನೇ ಹಾಕ್ತಾರೆ" ಎಂದು ಹೆಮ್ಮೆಯಿಂದ ಕೊಚ್ಚಿಕೊಂಡಿತಂತೆ.

 

ಕೊನೆಯ ಕಿರುಬೆರಳಿಗೆ ಏನು ಹೇಳಬೇಕೆಂದೇ ಗೊತ್ತಾಗಲಿಲ್ಲವಂತೆ. ಯೇಸಪ್ಪಾ ನನಗೆ ಹೇಳಲು ಏನೂ ಇಲ್ಲವೇ ಎಂದು ಚಿಂತಿಸಿತಂತೆ. ಪ್ರತಿಯೊಬ್ಬರೂ ತನ್ನ ತನ್ನ ಪ್ರತಿಭೆಯನ್ನು ಹೇಳಿಬಿಟ್ಟರೆಂದು ನೆನೆಸುವಾಗ, ಯೇಸಪ್ಪಾ ಮಾತನಾಡಿದರಂತೆ, "ಕೈ ಜೋಡಿಸಿ ಪ್ರಾರ್ಥಿಸುವಾಗ ನೀನೇ ನನ್ನ ಪಕ್ಕದಲ್ಲಿದ್ದೀಯ" ಎಂದು ಯೇಸಪ್ಪ ಹೇಳಿದ ಕೂಡಲೇ ತುಂಬಾ ಸಂತೋಷಪಟ್ಟಿತಂತೆ. “ಹೌದು, ನೀವು ಹೇಳಿದ್ದು ಸರಿ ಲೌಕಿಕ ಕೆಲಸಗಳನ್ನು ಮಾಡಲು ನೀವೆಲ್ಲರೂ ಉಪಯೋಗವಾಗುತ್ತೀರ. ಪ್ರಾರ್ಥಿಸುವಾಗ ದೇವರ ಪಕ್ಕದಲ್ಲಿ ನಾನೇ ಇದ್ದೇನೆ ಪ್ರಾರ್ಥಿಸಿದರೇನೆ ತಾನೇ ಎಲ್ಲಾ ಕಾರ್ಯಗಳು ನಡೆಯೋದು ಎಂದಾಗ ಕಿರುಬೆರಳು ಹೇಳಿದ್ದು ನಿಜವೇ ಎಂದು ಎಲ್ಲಾ ಬೆರಳುಗಳು ಒಪ್ಪಿಕೊಂಡವು.

 

ಪ್ರೀತಿಯ ಪುಟಾಣಿಗಳೇ! ಬೆರಳುಗಳು ಮಾತನಾಡುವುದನ್ನು ನೀವು ಕೇಳುದ್ರಿ ಅಲ್ವಾ. ಕಿರುಬೆರಳಿನಂತೆ, ಪ್ರತಿಭೆ ಎಂದು ಹೇಳಿಕೊಳ್ಳಲು ನನ್ನ ಬಗ್ಗೆ ಏನೂ ಇಲ್ಲವೇ! ಯಾವುದೇ ಸೌಲಭ್ಯಗಳಿಲ್ಲ, ವಿದ್ಯೆ ಇಲ್ಲ, ಕುಟುಂಬದ ಹಿನ್ನೆಲೆ ಇಲ್ಲ ಎಂದೆಲ್ಲಾ ನೆನೆಸಬಹುದು. ಆದರೆ ನೀವು ಎದೆಗುಂದಿ ಪ್ರಾರ್ಥಿಸುವಾಗ, ಯೇಸಪ್ಪ ನಿಮ್ಮ ಪಕ್ಕದಲ್ಲಿ ಬಂದು ಬಿಡುತ್ತಾರೆ. ಯಾವುದಕ್ಕೂ ಪ್ರಯೋಜನವಿಲ್ಲ ಎಂದು ಹೇಳಿದರೂ ಯೇಸಪ್ಪನ ಪಕ್ಕದಲ್ಲಿ ನೀವು ಇರುವಾಗ, Little Star - ಗಳಾಗಿ ನಿಮ್ಮನ್ನು ಮಾರ್ಪಡಿಸುತ್ತಾರೆ. ಏನು ಪುಟಾಣಿಗಳೇ ಸಂತೋಷತಾನೇ!

- Sis. ದೆಬೋರಾಳ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking perabet casibom holiganbet galabet casibom perabet perabet giriş padişahbet padişahbet giriş grandpashabet kalitebet kalitebet giris betsmove betsmove giris gonebet gonebet giris betnano betnano giriş jojobet jojobet casinomilyon jojobet palacebet sonbahis tambet grandpashabet betgit mercurecasino matbet