Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 13.11.2021
Share:

By Village Missionary Movement

Saturday, 13-Nov-2021

ಧೈನಂದಿನ ಧ್ಯಾನ(Kannada) – 13.11.2021

 

ಪರಿಶುದ್ದತೆ ಮತ್ತು ಪರವಶ

 

"ನನ್ನ ಪಾಪವನ್ನು ಸಂಪೂರ್ಣವಾಗಿ ತೊಳೆದುಬಿಡು; ನನ್ನ ದೋಷವನ್ನು ಪರಿಹರಿಸಿ ನನ್ನನ್ನು ಶುದ್ಧಗೊಳಿಸು." - ಕೀರ್ತನೆ 51: 2

 

ಇತ್ತೀಚಿನ ದಿನಗಳಲ್ಲಿ ಯೌವನಸ್ಥರಿಗೆ ಎಲ್ಲೆಡೆ ಸಾಕಷ್ಟು ಹೋರಾಟ. ಸಿಗರೇಟ್, ಮದ್ಯ, ಡ್ರಗ್ಸ್ ಎಂದು ಸ್ನೇಹಿತರಿಂದ ಬರುವ ಹೋರಾಟ. ಸೆಲ್ ಫೋನ್ , ಇಂಟರ್ ನೆಟ್ , ಟಿವಿ ಎಂದು ಮನೆಯೊಳಗೇ ಇರುವ ಹೋರಾಟ! ಇಂತಹ ಹೋರಾಟಗಳ ಮಧ್ಯೆ, ಕರ್ತನು ಬಯಸುವ ಪರಿಶುದ್ಧತೆಯಿಂದ ಬದುಕಲು ಸಾಧ್ಯವೇ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಇದರಿಂದ ಹೊರಬರಲು ದಾರಿ ಇದೆಯೇ? ಎಂಬ ಚಿಂತೆಯು ಕ್ರಿಸ್ತನನ್ನು ಅರಿತಿರುವ ಯೌವನಸ್ಥರ ಕಣ್ಣುಗಳಲ್ಲಿ ಕಾಣುತ್ತಲೇ ಇದೆ.

 

ಕರ್ತನನ್ನು ರಕ್ಷಕನಾಗಿ ಸ್ವೀಕರಿಸಿದ ನಂತರ, ಒಂದು ಸಣ್ಣ ಪಾಪಕ್ಕೋ ಅಥವಾ ಆಸೆಗೋ ಸ್ಥಳವನ್ನು ಕೊಡಲು ಧೈರ್ಯ ಮಾಡಬಾರದು. ಅದು ನಮ್ಮನ್ನು ಸಂಪೂರ್ಣವಾಗಿ ನಾಶಮಾಡಿಬಿಡುತ್ತದೆ. ಒಂದು ಸತ್ತ ನೊಣವು, ಸುಗಂಧ ದ್ರವ್ಯವನ್ನು ಸಂಪೂರ್ಣವಾಗಿ ದುರ್ವಾಸನೆ ಬೀರುವ ಹಾಗೆ ಮಾಡುತ್ತದಲ್ಲವೇ? ಅದಕ್ಕಾಗಿಯೇ ಯೋಸೇಫನೆಂಬ ಯುವಕನು ತುಂಬಾ ಜಾಗರೂಕನಾಗಿದ್ದನು. ಪೋಟೀಫರನ ಹೆಂಡತಿಯ ಮೂಲಕ ತನ್ನ ಒಳ್ಳೆಯ ಹೆಸರನ್ನು ಹಾಳುಮಾಡುವಂತಹ ದೊಡ್ಡ ಶೋಧನೆ ಬಂದಾಗ, ತನಗೆ ವಿರುದ್ಧವಾಗಿ ತನ್ನ ವಸ್ತ್ರವು ಸಾಕ್ಷಿ ಹೇಳಿದರೂ ಪರವಾಗಿಲ್ಲ, ನಾನು ನನ್ನ ದೇಹದಿಂದ ದೇವರಿಗೆ ವಿರುದ್ಧವಾಗಿ ಪಾಪ ಮಾಡುವುದು ಹೇಗೆ ಎಂದು ವಸ್ತ್ರವನ್ನು ಬಿಟ್ಟು ಬಿಟ್ಟು ಓಡಿದನು. ಈ ಓಟವು ಮೊದಲು ಸೆರೆಯಲ್ಲಿ ಬಂಧಿಸಿದರೂ, ಅಂತಿಮವಾಗಿ ಐಗುಪ್ತ ದೇಶಕ್ಕೆ ಅಧಿಕಾರಿಯನ್ನಾಗಿ ಮಾಡಿತು.

 

ಒಬ್ಬರು ತನ್ನ ಮನೆಯನ್ನು ಬಾಡಿಗೆಗೆ ಬಿಟ್ಟಿದ್ದರು. ಮನೆಯ ಗೋಡೆಯಲ್ಲಿರುವ ಒಂದು ಮೊಳೆ ಮಾತ್ರ ತನಗೆ ಬೇಕು ಎಂದು ಹೇಳಿದ್ದರು. ಮೊದಲ ದಿನ ಆ ಮೊಳೆಯ ಮೇಲೆ ಚೀಲವನ್ನು ನೇತು ಹಾಕಿದ್ದರು. ಮರುದಿನ ಕೊಡೆ, ಮರುದಿನ ಕೊಳಕು ಅಂಗಿ, ಕೊನೆಗೆ ದುರ್ವಾಸನೆ ಬೀರುತ್ತಿದ್ದ ಒಣ ಮೀನನ್ನು ಚೀಲದಲ್ಲಿಟ್ಟು ನೇತಾಕಿ ಹೋದರು. ಅಲ್ಲಿ ಯಾರೂ ವಾಸಿಸಲು ಸಾಧ್ಯವಾಗದಂತಹ ದುರ್ವಾಸನೆ! ಕೊನೆಗೆ ಅಲ್ಲಿ ವಾಸವಾಗಿದ್ದವರು ಮನೆಯನ್ನೇ ಖಾಲಿ ಮಾಡಿಬಿಟ್ಟರು.

 

ಪ್ರಿಯರೇ! ನಮ್ಮ ಹೃದಯದಲ್ಲಿ ದೇವರಿಗೆ ಸ್ಥಳ ಕೊಟ್ಟು ಅವರನ್ನು ಸ್ವೀಕರಿಸಿದ ನಂತರ, ಸಣ್ಣ ಪಾಪ ತಾನೇ, ಒಂದು ಸಿಗರೇಟ್ ತಾನೇ, ಸ್ವಲ್ಪ ಮದ್ಯಪಾನ ತಾನೇ, ಒಂದು ದಿನ ವೇ ತಾನೇ ಎಂದು ನೆನೆಸಿ ಇವುಗಳಿಗೆ ಸ್ಥಳ ಕೊಟ್ಟರೆ ದಿನಕ್ಕೊಂದರಂತೆ ಕಾಲಕ್ರಮೇಣ ಅದು ನಿಮ್ಮನ್ನು ಸಂಪೂರ್ಣವಾಗಿ ಅಶುದ್ಧಗೊಳಿಸಿ, ದೇವರನ್ನೇ ಹೊರಗೆ ತಳ್ಳಿಬಿಡುತ್ತದೆ. ಜೀವನವೆಂಬ ಅಣೆಕಟ್ಟಿನಲ್ಲಿ ಸಣ್ಣದಾಗಿ ಬಿರುಕು ಬಿಟ್ಟರೇನೆ, ಮುಂದೊಂದು ದಿನ ಅದು ಒಡೆದು ಹೋಗುವ ಅಪಾಯವಿದೆ. ಆದ್ದರಿಂದ ಸಣ್ಣ ಪಾಪವೂ ಕೂಡ ನಿಮ್ಮ ಹೃದಯವನ್ನು ಅಶುದ್ಧಗೊಳಿಸದಂತೆ ಎಚ್ಚರವಹಿಸಿರಿ. ನೀವು ಪಾಪದಲ್ಲಿ ಬೀಳುವಾಗ ತಕ್ಷಣವೇ ದೇವರ ಬಳಿ ಹರಕೆ ಮಾಡಿ, ಅವರ ರಕ್ತದಿಂದ ಬಿರುಕನ್ನು ಸರಿಪಡಿಸಿರಿ. ದೋಷವಿಲ್ಲದ ಪರಿಶುದ್ಧ ಜೀವನವನ್ನು ನಡೆಸಲು ಯೇಸು ಕ್ರಿಸ್ತನು ನಮಗೆ ಸಹಾಯ ಮಾಡುತ್ತಾರೆ. ನಾವು ಯಾವಾಗಲೂ ಆತನೊಂದಿಗೆ ಐಕ್ಯವಾಗಿದ್ದರೆ ಸುಲಭವಾಗಿ ಪರಿಶುದ್ಧವಾದ ಜೀವನವನ್ನು ಜೀವಿಸಬಹುದು.

- Mrs. ಭುವನಾ ಧನಪಾಲನ್

 

ಪ್ರಾರ್ಥನಾ ಅಂಶ:

"ಕತ್ತೆಗಳ ಮಾರ್ಗದರ್ಶಿ" ಎಂಬ ಪತ್ರಿಕೆಯನ್ನು ಕಳುಹಿಸಲು Postal Permit ಸಿಗುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking meritking giriş perabet perabet giriş casibom casibom giriş holiganbet holiganbet giriş galabet casibom casibom giriş grandpashabet perabet perabet giriş padişahbet padişahbet giriş meritking meritking giriş grandpashabet grandpashabet giriş kalitebet kalitebet giris betsmove betsmove giris gonebet gonebet giris betnano betnano giriş jojobet jojobet betplay jojobet esbet sonbahis tambet grandpashabet betgit mercurecasino