Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 14.11.2021 (Kids Special)
Share:

By Village Missionary Movement

Sunday, 14-Nov-2021

ಧೈನಂದಿನ ಧ್ಯಾನ(Kannada) – 14.11.2021 (Kids Special)

 

ಹಂಬಲ ಮತ್ತು ಉನ್ನತಿ

 

“ಯಥಾರ್ಥರಿಗೆ ಕತ್ತಲಲ್ಲಿ ಬೆಳಕು ಹುಟ್ಟುತ್ತದೆ;..." - ಕೀರ್ತನೆ 112:4

 

ಪ್ರಕೃತಿಯಿಂದ ಸುತ್ತುವರಿದಿದ್ದ, ಹೆಂಚಿನ ಮನೆಯ ಹಿಂಭಾಗದಲ್ಲಿದ್ದ ಹಲಸಿನ ಮರದ ಕೆಳಗೆ ಬಂಡೆಯ ಮೇಲೆ ಕುಳಿತಿದ್ದ, 12 ವರ್ಷದ ಬಾಲಕ ಹಿಲ್ಕಿಯಾ. ಅವನು ತೆಳ್ಳಗಿನ ಕೆಂಪು ದೇಹ ಮತ್ತು ಭವ್ಯವಾದ ಲಕ್ಷಣವಾದ ಮುಖದವನು. ಅವನ ಮಿಂಚುಹುಳದಂತಹ ಜಿನುಗುತ್ತಿದ್ದ ಆ ಹೊಳೆಯುವ ಕಣ್ಣುಗಳಿಂದ ಕಣ್ಣೀರು ಸುರಿಯುತ್ತಿತ್ತು. ಏಕೆ? ಅವನಿಗೆ ಮಂದ ನಾಲಿಗೆಯ ಸಮಸ್ಯೆಯಿತ್ತು. ಅವನ ಜೊತೆಯಲ್ಲಿ ಹುಟ್ಟಿದ ಇಬ್ಬರು ಸಹೋದರರು ಮತ್ತು ಒಬ್ಬ ಸಹೋದರಿ ಚೆನ್ನಾಗಿ ಮಾತನಾಡುತ್ತಿದ್ದರು. ತನಗೆ ಮಾತ್ರ ಏಕೆ ಹೀಗೆ ಎಂದು ದುಃಖಿಸುತ್ತಿದ್ದನು. ಅವನ ಊರಾದ ಪರಪ್ಪುವಿಲೈ ನಲ್ಲಿ ಎಂಟನೇ ತರಗತಿವರೆಗೂ ಮಿಡ್ಲ್ ಸ್ಕೂಲ್ ಇದೆ. ಎಂಟನೇ ತರಗತಿ ಪರೀಕ್ಷೆ ಬರೆದ 40 ಮಂದಿಯಲ್ಲಿ 12 ಮಂದಿ ಮಾತ್ರ ತೇರ್ಗಡೆಯಾಗಿದ್ದಾರೆ. ಅವರಲ್ಲಿ ಒಬ್ಬರು ಹಿಲ್ಕಿಯಾ. ಈತನನ್ನು ಇಲ್ಲಿಯವರೆಗೂ ಪಕ್ಕಕ್ಕಿಟ್ಟಿದ್ದ ಶಿಕ್ಷಕರಿಗೆ ಆತ ಚೆನ್ನಾಗಿ ಓದಿರುವುದನ್ನು ಕಂಡು ಆಶ್ಚರ್ಯವಾಯಿತು. ಯೇಸುವಿನ ಪ್ರೀತಿಯ ಬಗ್ಗೆ ತಿಳಿಸಿ ಸತ್ಯವೇದವನ್ನು ಓದಲು, ಪ್ರಾರ್ಥಿಸಲು, ಸಾಕ್ಷಿಯಾಗಿ ಜೀವಿಸಲು ಪ್ರೋತ್ಸಾಹಿಸಿದರು. ಹಿಲ್ಕಿಯನು ವಿಧೇಯತೆಯುಳ್ಳ ಮಗುವಾಗಿ ಬೆಳೆದನು. ಮನೆಕೆಲಸಗಳಲ್ಲಿ ತಾಯಿಗೆ ಸಹಾಯ ಮಾಡುತ್ತಿದ್ದನು. ಕೃಷಿ ಕೆಲಸದಲ್ಲಿ ತಂದೆಗೆ ಸಹಾಯ ಮಾಡುತ್ತಿದ್ದನು.

 

ಒಂಬತ್ತನೇ ತರಗತಿ ಓದಲು 5 ಕಿ.ಮೀ. ದೂರದಲ್ಲಿರುವ ಕರುಂಗಲ್ ಸಂದೈ ಎಂಬ ಊರಿಗೆ ಹೋಗಬೇಕಿತ್ತು. ಶಾಲೆಗೆ ಶುಲ್ಕವನ್ನು ಪಾವತಿಸಬೇಕು. 70 ವರ್ಷಗಳ ಹಿಂದೆ ಸಾರಿಗೆ ವ್ಯವಸ್ಥೆಯೂ ಇರಲಿಲ್ಲ. ಮನೆಯ ಪರಿಸ್ಥಿತಿಯಿಂದಾಗಿ ಅವರು ಹಿಲ್ಕಿಯಾ ಅವರ ಸಹೋದರನನ್ನು ಮಾತ್ರ ಓದಿಸಲು ನಿರ್ಧರಿಸಿದರು. ಓದಲು ತುಂಬಾ ಆಸೆಯಿದ್ದ ಹಿಲ್ಕಿಯಾ ಅಳುತ್ತಿದ್ದನು. ಮನೆಯ ಹಿಂಬದಿಗೆ ಬಂದ ಹಿಲ್ಕಿಯನ ತಾಯಿ ಗಾಬರಿಯಿಂದ ಅವನನ್ನು ನೋಡಿ ಕಣ್ಣೀರಿಗೆ ಕಾರಣವನ್ನು ಕೇಳಿ ತಿಳಿದುಕೊಂಡಳು. ಓದಬೇಕೆಂಬ ತನ್ನ ಮಗನ ಆಸೆಯನ್ನು ಈಡೇರಿಸಲು ನಿರ್ಧರಿಸಿದಳು. ಅವನು ತನ್ನ ಸಹಪಾಠಿಗಳೊಂದಿಗೆ ಶಾಲೆಗೆ ನಡೆದುಕೊಂಡು ಹೋಗಿ ಬರುತ್ತಲೇ ಓದಿಕೊಳ್ಳುತ್ತಿದ್ದನು. ಅವನಿಗೆ ಒಂದೇ ಒಂದು ಒಳ್ಳೆಯ ಅಂಗಿ ಇತ್ತು. ದಿನವೂ ಒಗೆದುಕೊಂಡು ಒದ್ದೆ ಅಂಗಿಯನ್ನೇ ಹಾಕಿಕೊಂಡು ಶಾಲೆಗೆ ಹೋಗುತ್ತಾ ಓದಿಕೊಳ್ಳುತ್ತಿದ್ದನು. ಕಾಲಿಗೆ ಚಪ್ಪಲಿ ಕೂಡ ಇರಲಿಲ್ಲ, ಓದುವ ಉತ್ಸಾಹ ಮಾತ್ರ ಇತ್ತು. 1956 ರಲ್ಲಿ ಅವನು ಓದುತ್ತಿದ್ದ ಇರಾನಿಯಲ್ಲಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿದ 38 ವಿದ್ಯಾರ್ಥಿಗಳಲ್ಲಿ ಎಸ್. ಎಸ್. ಎಲ್. ಸಿ. ರಾಜ್ಯ ಪರೀಕ್ಷೆಯಲ್ಲಿ ಗೆದ್ದವರು ಕೇವಲ 5 ಜನರು ಮಾತ್ರವೇ. ಅವರಲ್ಲಿ ಹಿಲ್ಕಿಯಾ ಕೂಡ ಒಬ್ಬರು. ಈ ಮಧ್ಯೆ, ಅವನು ತನ್ನ ಮಂದ ನಾಲಿಗೆಯನ್ನು ಸರಿಮಾಡುವಂತೆ ಯೇಸು ಕ್ರಿಸ್ತನನ್ನು ಬೇಡಿಕೊಳ್ಳುತ್ತಿದ್ದನು. ಕರ್ತನು ಅವನ ಪ್ರಾರ್ಥನೆಯನ್ನು ಕೇಳಿದರು. ಸರಳವಾಗಿ ಮಾತನಾಡುವ ಮತ್ತು ಮಧುರವಾಗಿ ಹಾಡುವ ಸಾಮರ್ಥ್ಯವನ್ನು ಕೊಟ್ಟು ಕರ್ತನು ಆಶೀರ್ವಸಿದರು. ಹಿಂದಿಯನ್ನು ಓದುತ್ತಿದ್ದ ಹಿಲ್ಕಿಯಾ ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಮತ್ತು "ಸಕಿತಿಯ ರತ್ನ" ಪದವಿಯನ್ನು ಪಡೆದರು. ಹಿಂದಿ ಪಂಡಿತರಾಗಿ ಸರ್ಕಾರಿ ಶಾಲೆಗಳಲ್ಲಿ ಕೆಲಸ ಮಾಡಿದರು. ತಮಿಳು ಪಂಡಿತರಾಗಿ ಕೆಲಸ ಮಾಡಿದ ಸಹೋ. ಡೈಸಿಯನ್ನು ವಿವಾಹವಾದರು. ಕರ್ತನು ಅವರನ್ನು ಸೇವೆಗೆ ಕರೆದ ಕೂಡಲೇ ಸರ್ಕಾರಿ ಸೇವೆಗೆ ರಾಜೀನಾಮೆ ನೀಡಿ ಉತ್ತರಪ್ರದೇಶಕ್ಕೆ ತೆರಳಿ ಉನ್ನತವಾದ ಸೇವೆಯನ್ನು ಮಾಡಿ ಅನೇಕ ಆತ್ಮಗಳನ್ನು ಕರ್ತನಿಗೆ ಸ್ವಂತ ಮಾಡಿದರು. ಚಿಕ್ಕ ಹುಡುಗನ ಪ್ರಾರ್ಥನೆ, ನಂಬಿಕೆ ಮತ್ತು ಕಠಿಣ ಪರಿಶ್ರಮ ಅವನನ್ನು ಉನ್ನತ ಮಟ್ಟಕ್ಕೆ ಏರಿಸಿತು.

 

ಇಂದು ನಮ್ಮ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಜನ್ಮದಿನವಾಗಿದ್ದು, ಅವರು ಮಕ್ಕಳನ್ನು ತುಂಬಾ ಪ್ರೀತಿಸುವ ಕಾರಣ ಅವರ ಜನ್ಮದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸಬೇಕೆಂದು ಕೇಳಿಕೊಂಡರು. ನಮ್ಮ ಕರ್ತನಾದ ಯೇಸು ಕ್ರಿಸ್ತನು ಮಕ್ಕಳನ್ನು ತುಂಬಾ ಪ್ರೀತಿಸುತ್ತಾರೆ. ನೀನು ಕೂಡ ಆತನ ಬಳಿ ಪ್ರಾರ್ಥಿಸುವಾಗ ಆತನು ನಿನ್ನ ಜೀವನವನ್ನು ಹೆಚ್ಚಿಸಿ ಆಶೀರ್ವದಿಸುತ್ತಾರೆ.

- Mrs. ವನಜಾ ಬಾಲರಾಜ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking meritking giriş perabet perabet giriş casibom casibom giriş holiganbet holiganbet giriş galabet casibom casibom giriş grandpashabet perabet perabet giriş padişahbet padişahbet giriş meritking meritking giriş grandpashabet grandpashabet giriş kalitebet kalitebet giris betsmove betsmove giris gonebet gonebet giris betnano betnano giriş jojobet jojobet betplay jojobet esbet sonbahis tambet grandpashabet betgit mercurecasino