Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 17.11.2021
Share:

By Village Missionary Movement

Wednesday, 17-Nov-2021

ಧೈನಂದಿನ ಧ್ಯಾನ(Kannada) – 17.11.2021

 

ಶ್ರೀಮಂತ

 

 "...ನಿನ್ನ ಧರ್ಮಶಾಸ್ತ್ರವೇ ನನ್ನ ಆನಂದವಾಗಿದೆ." - ಕೀರ್ತನೆ 119:77

 

ಸ್ಟೀವ್ ಜಾಬ್ಸ್ ಅವರನ್ನು ಮಾಹಿತಿ ಕ್ರಾಂತಿಯ ವ್ಯಕ್ತಿ ಎಂದು ಪ್ರಶಂಸಿಸಲಾಗುತ್ತದೆ. ಇವರು ವಿಶ್ವದ ಪ್ರಮುಖ ಸೆಲ್ ಫೋನ್ ತಯಾರಕರು, ಆ್ಯಪಲ್ ನ ಸ್ಥಾಪಕರು. ಇವರು ಹೊಸ ತಂತ್ರಜ್ಞಾನದಲ್ಲಿ ಕಂಪ್ಯೂಟರ್ ಮತ್ತು ಸೆಲ್ ಫೋನ್‌ಗಳಂತಹ ವಸ್ತುಗಳನ್ನು ಅತ್ಯುತ್ತಮವಾಗಿ ಪರಿವರ್ತಿಸಿದರು. ಸಣ್ಣ ಕಂಪನಿಯಾಗಿ ಆರಂಭವಾದ ಆ್ಯಪಲ್ ಕ್ರಮೇಣ ಜಗತ್ಪ್ರಸಿದ್ಧ ಕಂಪನಿಯಾಗಿ ರೂಪುಗೊಂಡಿತು. ಸ್ಟೀವ್ ತನ್ನ ಹೊಸ ಆವಿಷ್ಕಾರಗಳೊಂದಿಗೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಮಾರ್ಪಟ್ಟರು. ಇವರ ಆಸ್ತಿ ಮೌಲ್ಯವು ರಷ್ಯಾದ ಷೇರು ಮಾರುಕಟ್ಟೆಗಿಂತ ಹೆಚ್ಚಾಗಿತ್ತು. ಹೀಗೆ ಲಕ್ಷಾಂತರ ಡಾಲರ್ ಗಳಿಸಿದ ಸ್ಟೀವ್ ಜಾಬ್ಸ್ ಏಳು ವರ್ಷಗಳಿಗಿಂತ ಹೆಚ್ಚು ಕಾಲ ಕ್ಯಾನ್ಸರ್ ನಿಂದ ಬಳಲುತ್ತಾ ಇದ್ದರು. ಅವರಿಗೆ ಸಾಯುವ ಸಮಯದಲ್ಲಿ ತಾನು ಪಡೆದ ಹೆಸರು, ಖ್ಯಾತಿ ಮತ್ತು ಹಣವು ಅರ್ಥಹೀನವೆಂದು ತೋಚಿತು. ಸಾಯುವ ಸಮಯದಲ್ಲಿ ಅವರು ಹೇಳಿದ ಮಾತುಗಳೇನು ಗೊತ್ತಾ? ಹಣವನ್ನು, ಖ್ಯಾತಿಯನ್ನು ಹುಡುಕಿ ನಿಮ್ಮ ಜೀವನವನ್ನು ವ್ಯರ್ಥ ಮಾಡಬೇಡಿರಿ. ನಿಮಗೆ ನೀವು ಸಂತೋಷವಾಗಿರಿ ಮತ್ತು ಮತ್ತೊಬ್ಬರನ್ನು ಪ್ರೀತಿಸಿರಿ ಎಂದು ಹೇಳಿ ಪ್ರಾಣ ಬಿಟ್ಟರು.

 

ಅರಸನಾದ ಸೊಲೊಮೋನನ ಹಾಗೆ ಶ್ರೀಮಂತನಾಗಿ ಬದುಕಿದವರು ಈ ಭೂಮಿಯ ಮೇಲೆ ಯಾರೂ ಇರಲು ಸಾಧ್ಯವಿಲ್ಲ. ಅವರು ಹಣ, ಒಳ್ಳೆಯ ಸ್ಥಾನಮಾನ, ಬುದ್ಧಿವಂತಿಕೆ, ರುಚಿಕರವಾದ ಆಹಾರ, ಆಸ್ತಿ, ಅರಮನೆಗಳು, ಹೆಂಡತಿಯರು, ಗಾಯಕರು, ಸೇವಕರು ಹೀಗೆ ತನಗೆ ಯಾವುದು ಸಂತೋಷ ತರಬಹುದು ಎಂದು ಅನ್ವೇಷಿಸಿ ಅವುಗಳನ್ನು ಬೇಸರವಾಗುವಷ್ಟು ಮಟ್ಟಿಗೆ ಅನುಭವಿಸಿದರು. ಇಷ್ಟೆಲ್ಲಾ ಸಂತೋಷಗಳನ್ನು ಅನುಭವಿಸಿದರೂ ಅವರು ಕೊನೆಗೆ ಹೇಳಿದ ಮಾತುಗಳು, ವ್ಯರ್ಥವೇ ವ್ಯರ್ಥ ಸಮಸ್ತವೂ ವ್ಯರ್ಥ! ಆದರೆ ಅವರು ಎಲ್ಲಿ ಸಂತೋಷವಿದೆ ಎಂದು ಕಂಡುಹಿಡಿದರು, ಅದು ದಿನವೂ ಒಂದು ಮನುಷ್ಯ ತನ್ನ ಕೈಯಿಂದ ದುಡಿದು ಸಂತೋಷದಿಂದ ಊಟ ಮಾಡಲು ಸಹ ದೇವರ ದಯೆ ಅಗತ್ಯ ಎಂಬುದನ್ನು ತಿಳಿದುಕೊಂಡರು.

 

ಪ್ರಿಯರೇ! ಇಂದು ನಾವು ಉದಾಹರಣೆಯಾಗಿ ನೋಡಿದ ಸ್ಟೀವ್ ಮತ್ತು ಸೊಲೊಮೋನ ಇಬ್ಬರೂ ಹಣ, ಖ್ಯಾತಿ ಮತ್ತು ಜ್ಞಾನವನ್ನು ಪಡೆದವರು. ಶ್ರೀಮಂತರು. ಆದರೆ ಅವರು ಇವುಗಳಲ್ಲಿ ನಮಗೆ ಸಂತೋಷವೇ ಇಲ್ಲ ಎನ್ನುತ್ತಿದ್ದಾರೆ. ನೀವು ಕೂಡ ಇವುಗಳನ್ನು ಹುಡುಕಿ ಸಂತೋಷವನ್ನು, ಆನಂದವನ್ನು ಹೊಂದಿಕೊಳ್ಳ ಬಹುದೆಂದು ಭಾವಿಸುತ್ತಿದ್ದೀರ? ಇವೆಲ್ಲವೂ ಕೆಲವು ದಿನ ಅರಳಿ ಉದುರುವ ಹೂವಿಗೆ ಸಮವಾಗಿದೆ. ಆದರೆ ಶಾಶ್ವತವಾದ ಆನಂದ ಮತ್ತು ಅಮರ ಸಂತೋಷವು ದೇವರ ಸಮ್ಮುಖದಲ್ಲಿ ಸಮಯ ಕಳೆಯುವುದರಲ್ಲಿ ಮತ್ತು ಆತನ ಸತ್ಯವೇದವನ್ನು ಓದುವುದರಲ್ಲಿ ಮತ್ತು ಆತನ ಮಾರ್ಗದಲ್ಲಿ ನಡೆಯುವುದರಲ್ಲೇ ಅಡಗಿದೆ. ಬೇಕಾದರೆ ನೀವು ಒಮ್ಮೆ ಪ್ರಯತ್ನಿಸಿ ನೋಡಿರಿ.

- Bro.ಮರುದುಪಾಂಡಿಯನ್

 

ಪ್ರಾರ್ಥನಾ ಅಂಶ: ಆಶ್ರಮದಲ್ಲಿರುವ ಚಿಕ್ಕ ಮಕ್ಕಳ ಶೈಕ್ಷಣಿಕ ಅಗತ್ಯಗಳು ಪೂರೈಸಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking meritking giriş perabet perabet giriş casibom casibom giriş holiganbet holiganbet giriş galabet casibom casibom giriş grandpashabet perabet perabet giriş padişahbet padişahbet giriş meritking meritking giriş grandpashabet grandpashabet giriş kalitebet kalitebet giris betsmove betsmove giris gonebet gonebet giris betnano betnano giriş jojobet jojobet betplay jojobet esbet sonbahis tambet grandpashabet betgit mercurecasino