Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 08.01.2021
Share:

By Village Missionary Movement

Friday, 08-Jan-2021

ಧೈನಂದಿನ ಧ್ಯಾನ(Kannada) – 08.01.2021

ನಾನೇ..

“ತನ್ನ ತಪ್ಪುಗಳನ್ನೆಲ್ಲಾ ತಿಳಿದುಕೊಳ್ಳುವವನು ಯಾವನು? ಮರೆಯಾದವುಗಳಿಂದ ನನ್ನನ್ನು ನಿರ್ಮಲಮಾಡು” - ಕೀರ್ತನೆಗಳು 19:12

ಚಾರ್ಲ್ಸ್ ಸ್ಪರ್ಜನ್ ಒಂದು ಬಾರಿ ಸೆರೆಹಿಡಿಯಲ್ಪಟ್ಟ ಕೈದಿಗಳು ಪ್ರಯಾಣಿಸುತ್ತಿದ್ದ ಹಡಗಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಅಲ್ಲಿದ್ದ ಎಲ್ಲರ ಬಳಿಯಲ್ಲೂ ಸಹಜವಾಗಿ ಮಾತಾಡುತ್ತಾ, ಒಂದು ಸಾಮಾನ್ಯವಾದ ಪ್ರಶ್ನೆ ಕೇಳಿದರು.  "ನೀವು ಏಕೆ ಬಂಧಿಸಲ್ಪಟ್ಟಿರಿ?"  ಎಂದು. ಅನೇಕರು ತಮ್ಮ ಈ ಪರಿಸ್ಥಿತಿಗೆ ಕಾರಣ ಮತ್ತೊಬ್ಬರು ಎಂದರು. ಕೆಲವರು ಪರಿಸ್ಥಿತಿಯನ್ನೇ ಕಾರಣವಾಗಿ ತೋರಿಸಿದರು. ಒಬ್ಬರು ಮಾತ್ರ, "ನನ್ನ ಹಣದ ಆಸೆ  ನನ್ನನ್ನು ಕದಿಯುವಂತೆ ಮಾಡಿತು. ನನ್ನ ಸ್ಥಿತಿಗೆ ನಾನೇ ಕಾರಣ" ಎಂದು ಹೇಳಿದರು. ಕೂಡಲೇ ಸ್ಪರ್ಜನ್ ಅವರ ತೋಳನ್ನು ತಟ್ಟಿ ದೇವರು ನಿನ್ನನ್ನು ಅಧಿಕವಾಗಿ ಪ್ರೀತಿಸುತ್ತಾರೆ. ನೀನು ಅವರಿಗೆ ದೂರವಾದವನಲ್ಲ ಎಂದು ಹೇಳಿ ಉತ್ಸಾಹ ಪಡಿಸಿದರು. ಇದನ್ನು ಗಮನಿಸುತ್ತಿದ್ದ ಪೊಲೀಸ್ ಅಧಿಕಾರಿ ಸ್ಪರ್ಜನ್ ಇಳಿಯುತ್ತಿದ್ದ ಸ್ಥಳದಲ್ಲೇ ಆ ವ್ಯಕ್ತಿಯನ್ನು ಇಳಿಸಿದರು. ಕೆಲವು ದಿನಗಳಲ್ಲಿ ಅವರು ದೇವರನ್ನು ಅಂಗೀಕರಿಸಿ ತೀವ್ರವಾಗಿ ಆತ್ಮಗಳನ್ನು ಆದಾಯ ಮಾಡುವವರಾಗಿ ಮಾರ್ಪಟ್ಟರು.

ಸಾಮಾನ್ಯವಾಗಿ ನಾವೆಲ್ಲರೂ ನಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವುದಿಲ್ಲ. ಏನೇನೋ ಕಾರಣಗಳನ್ನು ಹೇಳಿ ನಮ್ಮನ್ನು ನಿರಪರಾಧಿಗಳಾಗಿ ನಿರೂಪಿಸುತ್ತೇವೆ. ಇದು ಆದಾಮ-ಹವ್ವಳಿಂದ ಪ್ರಾರಂಭವಾಗಿ ಇಂದಿನವರೆಗೂ ಮುಂದುವರೆಯುತ್ತಲೇ ಇದೆ. ಆದರೆ ಯಾವನು ತನ್ನ ತಪ್ಪುಗಳನ್ನು ಗ್ರಹಿಸುತ್ತಾನೋ ಅವನನ್ನು ದೇವರು ಖಂಡಿತವಾಗಿ ಅಂಗೀಕರಿಸುತ್ತಾರೆ. ದಾವೀದನ ಜೀವನವು ಇದಕ್ಕೆ ಉತ್ತಮವಾದ ಉದಾಹರಣೆ. ದಾವೀದನು ಊರೀಯನ ಹೆಂಡತಿಯ ಬಳಿ ಪಾಪದಲ್ಲಿ ಬಿದ್ದದ್ದು, ಊರೀಯನನ್ನು ಕೊಲೆ ಮಾಡಿದ್ದು ಎಲ್ಲಾ ನಿಜವೇ. ಆದರೆ ದೇವರು ಪ್ರವಾದಿಯನ್ನು ಕಳುಹಿಸಿ, ಅಪರಾಧವನ್ನು ತೋರಿಸಿದ ಕೂಡಲೇ ದಾವೀದನು ತನ್ನ ಅರಸನ ಸ್ಥಾನವನ್ನು ಮುಂದಿಟ್ಟು ಅಪರಾಧವನ್ನು ಮುಚ್ಚಿಡದೇ, ಊರೀಯನ ಸಾವಿಗೆ ಬೇರೆ ಕೆಲವು ಕಾರಣಗಳನ್ನು ತೋರಿಸದೇ ತಪ್ಪನ್ನು ಒಪ್ಪಿಕೊಂಡು 51 ನೆಯ ಕೀರ್ತನೆಯನ್ನು ಬರೆದರು. ಈ ಕೀರ್ತನೆಯನ್ನು ಓದುವಾಗ ಅವರ ಮೇಲೆ ನಮಗೆ ಮರ್ಯಾದೆ ಹೆಚ್ಚಾಗುತ್ತದೆ ಹೊರತು ಕಡಿಮೆಯಾಗುವುದಿಲ್ಲ. ದಾವೀದನು ಬರೆದ ಕೀರ್ತನೆಗಳೆಲ್ಲಾ  "ಪರಿಶುದ್ಧ"ಗ್ರಂಥದಲ್ಲಿ ಸೇರಿಸಬೇಕಾ ಎಂದು ದೇವರು ಯೋಚಿಸಲಿಲ್ಲ. ಹೌದು, ತನ್ನ ತಪ್ಪುಗಳನ್ನು ಗ್ರಹಿಸುವ ಮನುಷ್ಯನ ಜೀವನದಲ್ಲಿ ಬದಲಾವಣೆಯನ್ನು ತಂದು ಅವನನ್ನು ಉಪಯೋಗಿಸುವುದು ದೇವರಿಗೆ ಬಹಳ ಬಹಳ ಸುಲಭ.

ಪ್ರಿಯರೇ! ದೇವರು ನಿಮ್ಮೊಂದಿಗೆ ಮಾತನಾಡುತ್ತಿದ್ದಾರೆ. ನಿಮ್ಮ ತಪ್ಪುಗಳಿಗೆ  ಪರಿಸ್ಥಿತಿಗಳನ್ನು ಕಾರಣವಾಗಿ ತೋರಿಸಿ, ಕೊರತೆಗಳನ್ನು ಸರಿಮಾಡಲು ಮನಸ್ಸಿಲ್ಲದೆ ಜೀವಿಸುತ್ತಿದ್ದೀರಾ? ದೇವರ ವಾಕ್ಯಗಳ ಮೂಲಕವೋ ಸಂದೇಶಗಳ ಮೂಲಕವೋ ದೇವರು ಮಾತಾಡುವಾಗ ವಿಧೇಯರಾಗಿ ಕಾರ್ಯಗಳನ್ನು ಸರಿ ಮಾಡಿಕೊಳ್ಳೋಣ. ತನ್ನ ತಪ್ಪುಗಳನ್ನು ಗ್ರಹಿಸುವವನನ್ನು ದೇವರು ಆಶೀರ್ವದಿಸಿ ಅಂಗೀಕರಿಸಲು ಮರೆತುಹೋಗುವುದಿಲ್ಲ. ಹೌದು, ಆತ್ಮಿಕ ಜೀವನವು  ಅಭಿವೃದ್ಧಿಯಾಗಬೇಕಾದರೆ, ಸ್ವಾರ್ಥವನ್ನು ತೊಲಗಿಸಿ ನಮ್ಮ ಸ್ಥಿತಿಯನ್ನು ಗ್ರಹಿಸಿ, ಆಶೀರ್ವದಿಸಲ್ಪಡೋಣ.
-    L.ಅಲಗರಸಾಮಿ

ಪ್ರಾರ್ಥನಾ ಅಂಶ:-
ಜನವರಿ 2021 ರಲ್ಲಿ ರಾಕ್ಲ್ಯಾಂಡ್ ಬೈಬಲ್ ಕಾಲೇಜ್ 6 ನೇ ಬ್ಯಾಚ್ ಪ್ರಾರಂಭವಾಗಲಿದೆ. ಅನೇಕ ಹೊಸ ವಿದ್ಯಾರ್ಥಿಗಳು ಇಷ್ಟ ಪೂರ್ವಕವಾಗಿ ಬಂದು ಸೇರಲು ಪ್ರಾರ್ಥಿಸಿರಿ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Androidapp: https://play.google.com/store/apps/details?id=com.vmmorg.template.msmapp&showAllReviews=true
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş holiganbet matbet matbet giriş sahabet onwin betcio atlasbet casibom giriş casibom vaycasino vaycasino giriş meritking meritking giriş realbahis realbahis giriş casibom casibom giriş casibom casibom giriş imajbet imajbet giriş imajbetapp grandpashabet grandpashabet giriş grandpashabet güncel casibom giriş casibom matbet matbet giriş alobet betmartin pashagaming ultrabet lunabet betzula meritking jojobet marsbahis grandpashabet casibom jojobet jojobet casibom superbetin superbetin giriş marsbahis marsbahis giriş almanbahis almanbahis giriş amgbahis amgbahis giriş betasus betasus giriş betmartin betmartin giriş betoffice betoffice giriş jojobet jojobet giriş betpas betpas giriş betsat betsat giriş betsmove betsmove giriş egebet egebet giriş galabet galabet giriş grandpashabet grandpashabet giriş hiltonbet hiltonbet giriş holiganbet holiganbet giriş jasminbet jasminbet giriş kareasbet kareasbet giriş kargabet kargabet giriş kavbet kavbet giriş matbet matbet giriş mavibet mavibet giriş nakitbahis nakitbahis giriş norabahis norabahis giriş pashagaming pashagaming giriş perabet perabet giriş piabellacasino piabellacasino giriş tarafbet tarafbet giriş winxbet winxbet giriş supertotobet supertotobet giriş atlasbet atlasbet giriş jojobet jojobet grandpashabet holiganbet holiganbet cratosroyalbet gameofbet casinolevant casibom grandpashabet casibom casibom giriş