Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 18.11.2021
Share:

By Village Missionary Movement

Thursday, 18-Nov-2021

ಧೈನಂದಿನ ಧ್ಯಾನ(Kannada) – 18.11.2021

 

ಕಿವುಡನ ಗೆಲುವು

 

 "...ಈ ನಿನ್ನ ಶಕ್ತಿಯಿಂದ ಹೋಗು;..." - ನ್ಯಾಯ 6:14

 

ಅದೊಂದು ಮಳೆಗಾಲ. ಎಲ್ಲೆಂದರಲ್ಲಿ ನೀರು ನಿಂತಿತ್ತು. ಒಂದು ಆಳವಾದ ಕೊಚ್ಚೆಗುಂಡಿಯಲ್ಲಿ ಬಹಳಷ್ಟು ಕಪ್ಪೆಗಳು ಇದ್ದವು. ಆ ಕಪ್ಪೆಗಳು ತಮ್ಮೊಳಗೆ ಒಂದು ಪಂದ್ಯವನ್ನು ಇಟ್ಟುಕೊಂಡವು. ಈ ಕೊಚ್ಚೆಯಿಂದ ಯಾರು ಮೊದಲು ಮೇಲಕ್ಕೆ ಹತ್ತುತ್ತಾರೆ ಎಂದು! ಸ್ಪರ್ಧೆ ಈಗಷ್ಟೇ ಪ್ರಾರಂಭವಾಯಿತು. ಕಪ್ಪೆಗಳು ಮೇಲಕ್ಕೆ ಏರುತ್ತಿವೆ. ಆದರೆ ಸ್ವಲ್ಪ ದೂರ ಹತ್ತಿದ ಕೂಡಲೇ ಜಾರಿ ಕೆಳಗೆ ಬಿದ್ದವು. ಮತ್ತೆ ಪ್ರಯತ್ನಿಸಿ ಜಾರಿ ಬಿದ್ದವು. ಸುತ್ತಲೂ ನಿಂತು ತಮಾಷೆ ನೋಡುತ್ತಿದ್ದ ಕಪ್ಪೆಗಳು ನೀವ್ಯಾರೂ ಕೂಡ ಇದರ ಮೇಲೆ ಹತ್ತಲು ಸಾಧ್ಯವಿಲ್ಲ ಎಂದು ಗೇಲಿ ಮಾಡುತ್ತಿದವು. ಈ ಶಬ್ದದಿಂದಾಗಿ ಮೇಲೆ ಹತ್ತಲು ಪ್ರಯತ್ನಿಸುತ್ತಿದ್ದ ಕಪ್ಪೆಗಳಿಗೆ ಮೇಲೆ ಏರಲು ಸಾಧ್ಯವಾಗಲಿಲ್ಲ. ಆದರೆ ಒಂದೇ ಒಂದು ಕಪ್ಪೆ ಮಾತ್ರ ತುಂಬಾ ನಿರಾಳವಾಗಿ ಮೇಲಕ್ಕೆ ಏರಿ ಬಂದು ಮ್ಯಾಚ್ ಗೆದ್ದಿತು. ಇದು ಮಾತ್ರ ಹೇಗೆ ಗೆದ್ದಿತು ಎಂದು ಕೇಳಿದಾಗ, ಇದಕ್ಕೆ ಕಿವಿ ಕೇಳುವುದಿಲ್ಲ ಎಂದು ಹೇಳಿತು. ಹೌದು, ಇತರರು ಕೀಟಲೆ ಮಾಡಿದ ಮಾತುಗಳನ್ನು ಗಮನಿಸಿದಾಗ ಕಪ್ಪೆಗಳು ನಿರುತ್ಸಾಹದಿಂದ ಸೋತುಹೋದವು. ‘‘ಇತಿಹಾಸದಲ್ಲಿ ಗೆದ್ದವರಿಗೂ ಮತ್ತು ಸೋತವರಿಗೂ ಇಬ್ಬರಿಗೂ ಸ್ಥಾನವಿದೆ. ಆದರೆ ವಿಮರ್ಶೆ ಮಾಡಿದವರಿಗೆ ಏನೂ ಇಲ್ಲ. ” ಹೌದು, ನಾವು ಗೆಲ್ಲುತ್ತೇವೋ, ಸೋಲುತ್ತೇವೋ ಎಂಬುದು ಮುಖ್ಯವಲ್ಲ. ನಾವು ಪ್ರಯತ್ನಿಸುತ್ತಿದ್ದೇವಾ? ಎಂಬುದೇ ಮುಖ್ಯವಾದದ್ದು. ಇಂದು ನಾವು ಪ್ರಯತ್ನಿಸುವ ಮೊದಲೇ ಅನೇಕರ ಮಾತುಗಳನ್ನು ಕೇಳಿ ಸಾಧ್ಯವಿಲ್ಲ ಎಂದು ಭಾವಿಸಿ ಪ್ರಯತ್ನವನ್ನು ಬಿಟ್ಟು ಬಿಡುತ್ತಿದ್ದೇವೆ.

 

ಸತ್ಯವೇದದಲ್ಲಿ ಸಮುವೇಲನಿಂದ ಅಭಿಷೇಕಿಸಲ್ಪಟ್ಟು ಆಳ್ವಿಕೆ ಮಾಡಲು ದೇವರಿಂದ ಆರಿಸಲ್ಪಟ್ಟವನೇ ಸೌಲನು. ಸಕಲ ಜನರು ಇವನು ಹೇಗೆ ನಮ್ಮನ್ನು ರಕ್ಷಿಸುವನು ಎಂದು ಅವನನ್ನು ತಿರಸ್ಕರಿಸಿ ದರು; ಅಣಕಿಸಿದರು. ಅವನು ಕಿವಿ ಕೇಳದ ಕಿವುಡನಂತೆ ಇದ್ದನು (1 ಸಮು. 10:27). ಇದನ್ನು ಓದುತ್ತಿರುವ ಪ್ರಿಯರೇ, ನೀವು ಹೇಗಿದ್ದೀರ? ನಾವು ಏನಾದರೂ ಒಂದು ಕಾರ್ಯ ಮಾಡಲು ಆರಂಭಿಸಿದ ತಕ್ಷಣ ಅನೇಕರು ನಮ್ಮನ್ನು ಗೇಲಿ ಮಾಡಲು ಕೆಳಕ್ಕೆ ತಳ್ಳಿ ಬಿಡಲು ಬರುತ್ತಾರೆ. ಹೊಗಳಿಕೆ ಎಂಬುದು ಯಾರಿಂದಲೂ ಬರುವುದಿಲ್ಲ. ಸೇವೆಯಾಗಿರ ಬಹುದು ಅಥವಾ ಕೆಲಸದ ಸ್ಥಳವಾಗಿರಬಹುದು, ಕುಟುಂಬದೊಳಗೂ ಸಹ ಈ ರೀತಿ ಕಾಣಲ್ಪಡಬಹುದು. ನೀನು ಎಲ್ಲವನ್ನೂ ಮಾಡಿ ಮುಗಿಸಲು ಸಾಧ್ಯವಿಲ್ಲ, ಬೇರೆ ಕೆಲಸ ನೋಡು ಎಂದು ಹೇಳಬಹುದು. "ಅವನೋ ಕಿವಿ ಕೇಳದ ಕಿವುಡನ ಹಾಗಿದ್ದನು" ಈ ಮಾತು ನಿಮಗಾಗಿಯೇ. ನಾನೇ ಹೆದರಿಕೊಂಡು ಇದನ್ನು ಪ್ರಾರಂಭಿಸುತ್ತಿದ್ದೇನೆ. ಇವರು ಬೇರೆ ಇದನ್ನು ಹೇಳಿ ಸ್ವಲ್ಪವೂ ಮುಂದುವರೆಯದಂತೆ ಮಾಡುತ್ತಿದ್ದಾರೆ ಎಂದು ಕೊರಗುತ್ತಿರುವ ಪ್ರೀತಿಯ ಸಹೋದರ-ಸಹೋದರಿಯೇ! ಚಿಂತಿಸಬೇಡಿರಿ, ಕರ್ತನು ನಿಮ್ಮೊಂದಿಗಿದ್ದಾರೆ. ಯಾರು ಏನು ಹೇಳಿದರೂ ಕಿವಿಗೆ ಹಾಕಿಕೊಳ್ಳದೆ ಪೂರ್ಣ ಮನಸ್ಸಿನಿಂದ ಮುನ್ನಡೆಯಿರಿ. ಗೆಲುವು ಖಚಿತ!

 

ನಿನ್ನನ್ನು ಕಳುಹಿಸುವವರು ನಾನಲ್ಲವೇ ಎಂದು ಕರ್ತನು ಹೇಳುತ್ತಿದ್ದಾರೆ ಕರ್ತನು ನಮ್ಮೊಂದಿಗಿದ್ದು ನಮ್ಮನ್ನು ಮುನ್ನಡೆಸಿ ನಮಗೆ ಜಯವನ್ನು ನೀಡುತ್ತಾರೆ. ಅನೇಕರಿಗೆ ನಮ್ಮನ್ನು ಆಶೀರ್ವಾದಕರವಾಗಿ ಮಾರ್ಪಡಿಸುತ್ತಾರೆ. ಹಲ್ಲೇಲೂಯ!

- Mrs. ತವಮಣಿ ವೈರವೇಲ್

 

ಪ್ರಾರ್ಥನಾ ಅಂಶ:

ಹಾಸ್ಟೆಲ್ ನಲ್ಲಿರುವ ಚಿಕ್ಕಮಕ್ಕಳಿಗೆ ಆಶ್ರಯಕ್ಕೆ ಬೇಕಾದ ಹೊದಿಕೆ ಮತ್ತು ಚಾಪೆಗಳನ್ನು ತೆಗೆದುಕೊಡುವ ಜನರು ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking meritking giriş perabet perabet giriş casibom casibom giriş holiganbet holiganbet giriş galabet casibom casibom giriş grandpashabet perabet perabet giriş padişahbet padişahbet giriş meritking meritking giriş grandpashabet grandpashabet giriş kalitebet kalitebet giris betsmove betsmove giris gonebet gonebet giris betnano betnano giriş jojobet jojobet betplay jojobet esbet sonbahis tambet grandpashabet betgit mercurecasino