Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 04.12.2021
Share:

By Village Missionary Movement

Saturday, 04-Dec-2021

ಧೈನಂದಿನ ಧ್ಯಾನ(Kannada) – 04.12.2021

 

ಪ್ರೀತಿಯ ಕ್ರಾಂತಿ

 

"ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು..." - ಯೋಹಾನ 3:16

 

ಸುಂದರ ಸಂಜೆಯ ಸಮಯ. ಹಂಸದಂತೆ ಈಜುತ್ತಾ ಒಂದು ದೋಣಿ ಸವಾರಿ! ಅದರಲ್ಲಿ ರಾಜ, ಅವರ ಏಕೈಕ ಪುತ್ರ ರಾಜಕುಮಾರ, ಮಂತ್ರಿ ಮತ್ತು ಇತರ ಕೆಲವು ಸೇವಕರು ಒಟ್ಟಾಗಿ ನದಿಯ ಸೌಂದರ್ಯವನ್ನು ನೋಡುತ್ತಾ ಒಟ್ಟಿಗೆ ಪ್ರಯಾಣಿಸಿದರು. ತಣ್ಣನೆಯ ಗಾಳಿಯು ಅವರ ಕೂದಲನ್ನು ಕೆರಳಿಸಲು, ರಾಜ ಮತ್ತು ಮಂತ್ರಿಯ ನಡುವೆ ಈ ರೀತಿಯ ಸಂಭಾಷಣೆ ಪ್ರಾರಂಭವಾಯಿತು. ಮಂತ್ರಿಯ ಬಳಿ ರಾಜನು ಕೇಳಿದರು, "ದೇವರು ಪಾಪಿಗಳನ್ನು ನೋಡಲು ಏಕೆ ಭೂಮಿಗೆ ಬರಬೇಕು, ತನ್ನ ದೂತರಲ್ಲಿ ಯಾರಾದರೂ ಒಬ್ಬರನ್ನು ಕಳುಹಿಸಿರುವುದು ತಾನೇ?" ಮಂತ್ರಿ ನಿಧಾನವಾಗಿ ಯೋಚಿಸುತ್ತಾ ಬಂದರು. ರಾಜನಿಗೋ ಮನದೊಳಗೆ ಒಂದೇ ನಗು. ಮಂತ್ರಿಯ ಬಳಿ ಇದಕ್ಕೆ ಉತ್ತರವಿಲ್ಲ ಎಂದು. ರಾಜಕುಮಾರ ಏನನ್ನೂ ಕಿವಿಗೆ ಹಾಕಿಕೊಳ್ಳದೆ ದೋಣಿಯಲ್ಲಿದ್ದಂತೆ ನೀರಿನಲ್ಲಿ ಆಟವಾಡುತ್ತಿದ್ದನು. ದಿಢೀರೆಂದು ನದಿಗೆ ಬಿದ್ದು ಹೋದನು. ರಾಜನು ಗಾಬರಿಯಿಂದ ನದಿಗೆ ಹಾರಿ ತನ್ನ ಮಗನನ್ನು ರಕ್ಷಿಸಿದರು. ಒದ್ದೆ ಬಟ್ಟೆಯಲ್ಲಿದ್ದ ರಾಜನನ್ನು ನೋಡಿ ಮಂತ್ರಿ ಕೇಳಿದರು, “ಬಹು ಘನತೆಯುಳ್ಳ ರಾಜನೇ! ತಾವು ಯಾಕೆ ಜಿಗಿದಿರಿ? ರಾಜಕುಮಾರನನ್ನು ಉಳಿಸಲು ನಿಮ್ಮ ಸೇವಕರಲ್ಲಿ ಒಬ್ಬರಿಗೆ ಆದೇಶ ನೀಡಿರಬಹುದೇ” ಎಂದರು. ರಾಜನು ಕೋಪಗೊಂಡು, "ನೀರಿನಲ್ಲಿ ಎಡವಿ ಬಿದ್ದದ್ದು ನನ್ನ ಮಗನಲ್ಲವೇ?" ಎಂದರು. ಅವನು, "ಹೌದು, ರಾಜನೇ ಇದುವೇ ದೇವಾಧಿ ದೇವನು ಸ್ವರ್ಗದಿಂದ ಭೂಮಿಗೆ ಬರಲು ಕಾರಣವಾಯಿತು."

 

ಹೌದು, ದೇವರಿಗೆ ನಮ್ಮ ಮೇಲೆ ಎಷ್ಟು ಪ್ರೀತಿ ಇದೆ! ನಾವು ನಿತ್ಯಜೀವವನ್ನು ಪಡೆಯುವಂತೆ ಆತನು ಪಾಪಿಗಳಾದ ನಮ್ಮನ್ನು ವಿಮೋಚಿಸಿದನು. ಬಹುಶಃ ಒಬ್ಬರು ಒಳ್ಳೆಯದಕ್ಕಾಗಿ ಸಾಯಲು ಧೈರ್ಯ ಮಾಡುತ್ತಾರೆ. ಆದರೆ ನಾವು ಪಾಪಿಗಳಾಗಿದ್ದರೂ ಕ್ರಿಸ್ತನು ನಮಗೋಸ್ಕರ ಮರಣಹೊಂದಿದ್ದರಿಂದಲೇ, ದೇವರು ನಮ್ಮ ಮೇಲೆ ಇಟ್ಟಿದ್ದ ಪ್ರೀತಿಯನ್ನು ತೋರ್ಪಡಿಸಿದರು!

 

ಪ್ರಿಯರೇ! ಪ್ರೀತಿಯ ಪ್ರಕಟಣೆಯೇ ಕ್ರಿಸ್ಮಸ್. ಅಷ್ಟೇ ಅಲ್ಲ, ವಿಶ್ವ ಇತಿಹಾಸ ನಿರ್ಮಿಸಲು ಭೂಮಿಗೆ ಬಂದಿದ್ದು ಕ್ರಿ.ಪೂ. (ಕ್ರಿಸ್ತನ ಮೊದಲು) ಕ್ರಿ.ಶ. (ಕ್ರಿಸ್ತನ ನಂತರ). ಅವರ ಜನನಕ್ಕೆ ಸ್ವರ್ಗವಷ್ಟೇ ಅಲ್ಲ ಭೂಮಿಯೂ ಸಂಭ್ರಮಿಸಿತು. ಭುವಿಯಲ್ಲಿ ಸಮಾಧಾನ ಮನುಷ್ಯರ ಮೇಲೆ ಪ್ರೀತಿಯು ಉಂಟಾಯಿತು. ಹೌದು, ದೇವರ ಪ್ರೀತಿಯನ್ನು ಅನುಭವಿಸೋಣ ಮತ್ತು ಆ ಪ್ರೀತಿಯಿಂದ ತುಂಬಿದವರಾಗಿ ಜೀವಿಸೋಣ. ಅದನ್ನು ಮತ್ತೊಬ್ಬರಿಗೆ ತಿಳಿಸೋಣ.

- Mrs. ಮಂಜುಳಾ

 

ಪ್ರಾರ್ಥನಾ ಅಂಶ:

ಆಶ್ರಮದಲ್ಲಿರುವ ಚಿಕ್ಕ ಮಕ್ಕಳು ವಿದ್ಯಾಭ್ಯಾಸ ಮತ್ತು ಎಲ್ಲಾ ಕಾರ್ಯಗಳಲ್ಲೂ ಸದ್ಗುಣಶೀಲರಾಗಿ ಬೆಳೆಯುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet matbet giriş holiganbet holiganbet güncel holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking meritking giriş perabet perabet giriş casibom casibom giriş holiganbet holiganbet giriş galabet casibom casibom giriş grandpashabet grandpashabet holiganbet grandpashabet grandpashabet grandpashabet perabet perabet giriş padişahbet padişahbet giriş grandpashabet grandpashabet grandpashabet casinolevant grandpashabet meritking meritking giriş grandpashabet grandpashabet giriş kalitebet kalitebet giris betsmove betsmove giris gonebet gonebet giris betnano betnano giriş