Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 05.12.2021 (Kids Special)
Share:

By Village Missionary Movement

Sunday, 05-Dec-2021

ಧೈನಂದಿನ ಧ್ಯಾನ(Kannada) – 05.12.2021 (Kids Special)

 

ಯೇಸುವಿನೊಂದಿಗೆ ನಡೆದರೆ

 

"ಕ್ರಿಸ್ತ ಯೇಸು ಪಾಪಿಗಳನ್ನು ರಕ್ಷಿಸುವದಕ್ಕೋಸ್ಕರ ಈ ಲೋಕಕ್ಕೆ ಬಂದನು..." - 1 ತಿಮೊಥೆ. 1:15

 

ಡಿಸೆಂಬರ್‌ ತಿಂಗಳು ಬಂದಾಯ್ತು, ನೀವೆಲ್ಲರೂ ಕ್ರಿಸ್‌ಮಸ್‌ಗಾಗಿ ಎದುರು ನೋಡುತ್ತಿದ್ದೀರಾ? ರೇಷ್ಮೆಬಟ್ಟೆ, ಸಿಹಿತಿನಿಸು, ಬಹು ಬಣ್ಣದ ದೀಪಗಳೊಂದಿಗೆ ಕ್ರಿಸ್ಮಸ್ ಅನ್ನು ಸಂತೋಷದಿಂದ ಆಚರಿಸೋಣ. ಆದರೆ Jesus ಬಯಸುವ ಕಾರ್ಯಗಳನ್ನು ಮಾಡಿದರೇನೆ ಅವರು ಸಂತೋಷ ಪಡುತ್ತಾರೆ. ಸರಿ, ಇಂದು ಅಂಕಲ್ ಜೆರೋಮ್ ದನದ ಕೊಟ್ಟಿಗೆಯನ್ನು ಹೇಗೆ ಧ್ಯಾನಿಸಿದರು ಎಂದು ಕೇಳೋಣವಾ?

 

ಈ ಜೆರೋಮ್ Uncle ಯಾರು? ಅವರು ಅನೇಕ ಶತಮಾನಗಳ ಹಿಂದೆ ಲ್ಯಾಟಿನ್ ಭಾಷೆಗೆ ಬೈಬಲ್ ಅನ್ನು ಭಾಷಾಂತರಿಸಿದ ಮೊಟ್ಟ ಮೊದಲ ವ್ಯಕ್ತಿ. ಅವರು ಯೇಸು ಜನಿಸಿದ ಬೇತ್ಲೆಹೇಮ್ ದನದ ಕೊಟ್ಟಿಗೆಯನ್ನು ಧ್ಯಾನಿಸುತ್ತಲೇ ಅನುವಾದಿಸುವಾಗ, Uncle ಜೆರೋಮ್ ನೊಂದಿಗೆ ಯೇಸುಕ್ರಿಸ್ತನು ಬಾಲಕನಾಗಿ ನಡೆದು ಬರುತ್ತಿರುವಂತೆ ಗ್ರಹಿಸಿದರು. ಅವರ ಅಂತರಾತ್ಮವೆಲ್ಲಾ ಆನಂದದಿಂದ, ಹರ್ಷದಿಂದ ಭಾವಪರವಶವಾಗಿತ್ತು. ಪುಟಾಣಿಗಳೇ Jesus ನಿಮ್ಮೊಂದಿಗಿದ್ದಾರೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? Very good. ಯೇಸಪ್ಪ ಕೂಡ ಜೆರೋಮ್ ಜೊತೆ ಮಾತನಾಡಿದರು, “ನನ್ನ ಪ್ರೀತಿಯ ಯೇಸು ಬಾಲಕನೇ, ನಾನು ನಿಮಗೆ ಪೂರ್ಣ ಹೃದಯದಿಂದ ಒಂದು ಕಾಣಿಕೆಯನ್ನು ನೀಡಲು ಬಯಸುತ್ತೇನೆ. ಏನು ಬೇಕು?" ಎಂದು ಕೇಳಿದರು.

 

“ಎಲ್ಲವೂ ನನ್ನಲ್ಲಿರುವುದೇ! ಆಕಾಶ ಮತ್ತು ಭೂಮಿ ನನ್ನದು, ನನಗೆ ಏನೂ ಬೇಡ” ಎಂದು ಬಾಲಕನಾದ ಯೇಸು ಹೇಳಿದರು. “ಇಲ್ಲ ಹಾಗೆ ಹೇಳಬೇಡಿ. ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ. ನನ್ನ ಪ್ರೀತಿಯನ್ನು ವ್ಯಕ್ತಪಡಿಸಲು ನನ್ನ ಕೈಯಿಂದ ಏನನ್ನಾದರೂ ಪಡೆಯಿರಿ” ಎಂದು ಜೆರೋಮ್ ಬೇಡಿಕೊಂಡರು. ಬಾಲಕನಾದ ಯೇಸುವೋ ಅವರನ್ನು ದೃಷ್ಟಿಸಿ ನೋಡಿ, “ನೀನು ನನ್ನನ್ನು ಪ್ರೀತಿಸುವುದಾದರೆ ನಿನ್ನ ಪಾಪಗಳನ್ನು ನನಗೆ ಕೊಡು. ನಿನ್ನ ಎಲ್ಲಾ ತಪ್ಪು ಆಲೋಚನೆಗಳು ಮತ್ತು ಅಸಹ್ಯಕರ ಪಾಪಗಳನ್ನು ನನಗೆ ಕೊಡು, ಮತ್ತು ನಾನು ಅವೆಲ್ಲವನ್ನೂ ಶಿಲುಬೆಯಲ್ಲಿ ಹೊರುತ್ತೇನೆ. ನಾನು ನಿನಗಾಗಿ ನನ್ನ ರಕ್ತವನ್ನು ಸುರಿಸಿ ಸಾಯುತ್ತೇನೆ” ಎಂದರು. ಈ ಮಾತುಗಳು ಜೆರೋಮ್ Uncle ಹೃದಯವನ್ನು ಮುರಿಯಿತು. ಅತ್ತು ಗೋಳಾಡಿದರು. ತಾನು ಯೇಸುವಿಗೆ ಕೊಡುವ ಉಡುಗೊರೆ ಎಂಥದ್ದೆಂದು ಅರಿತುಕೊಂಡರು. ಅವರಿಂದ ಕಣ್ಣೀರು ತಡೆದುಕೊಳ್ಳಲಾಗಲಿಲ್ಲ. ತನ್ನ ಪಾಪಗಳೆಲ್ಲಾ ಕ್ಷಮಿಸಲ್ಪಟ್ಟವರಾಗಿ, ತನ್ನ ಹೃದಯದಲ್ಲಿ ಯೇಸು ಜನಿಸಿದ ಸಂತೋಷವನ್ನು ಅನುಭವಿಸಿದ ವ್ಯಕ್ತಿಯಾಗಿ ಬೇತ್ಲೆಹೇಮಿನ ದನದ ಕೊಟ್ಟಿಗೆಯನ್ನು ಧ್ಯಾನಿಸಿ ಮುಗಿಸಿದರು.

 

ಏನು ಪುಟಾಣಿಗಳೇ! ಯೇಸು ರಾಜನೊಂದಿಗೆ ಮಾತನಾಡಲು ಆಸೆಯೇ? ಮಾತಾಡಿ ನೋಡಿ. ಕ್ರಿಸ್‌ಮಸ್ ಆಚರಿಸುವುದಕ್ಕಿಂತ ಹೆಚ್ಚಾಗಿ, ನಿಮ್ಮ ಹೃದಯದಲ್ಲಿ ಜನಿಸಲು ಆಸೆ ಪಡುತ್ತಾರೆ. ಕೊಳೆಯ ಆತ್ಮವನ್ನು ದೇವರಿಗೆ ಕೊಟ್ಟು ನೋಡಿ. ನಿಜವಾದ ಕ್ರಿಸ್ಮಸ್ ಅನ್ನು ಉತ್ಸಾಹದಿಂದ ಆಚರಿಸುತ್ತೀರ. ಮಿತಿಯಿಲ್ಲದ ಸಂತೋಷದೊಂದಿಗೆ.... ಮುದ್ದು ಪುಟಾಣಿಗಳೇ! Ready ತಾನೇ!

 -Mrs. ಜೀವಾ ವಿಜಯ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking meritking giriş perabet perabet giriş casibom casibom giriş holiganbet holiganbet giriş galabet casibom casibom giriş grandpashabet perabet perabet giriş padişahbet padişahbet giriş meritking meritking giriş grandpashabet grandpashabet giriş kalitebet kalitebet giris betsmove betsmove giris gonebet gonebet giris betnano betnano giriş jojobet jojobet jojobet jojobet jojobet holiganbet holiganbet holiganbet grandpashabet grandpashabet