Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 12.12.2021 (Kids Special)
Share:

By Village Missionary Movement

Sunday, 12-Dec-2021

ಧೈನಂದಿನ ಧ್ಯಾನ(Kannada) – 12.12.2021 (Kids Special)

 

Daddy ಬರದಿದ್ದರೆ....

 

"ಭೂಮ್ಯಾಕಾಶಗಳನ್ನು ನಿರ್ಮಿಸಿದ ಯೆಹೋವನಿಂದಲೇ ನನ್ನ ಸಹಾಯವು ಬರುತ್ತದೆ." - ಕೀರ್ತನೆ 121: 2

 

ಮುದ್ದು ಪುಟಾಣಿಗಳೇ! X-mas ಅಂದರೇನೆ ಸಂತೋಷ ತಾನೇ. X-mas tree ಇದರ ಸೌಂದರ್ಯವೇ ಪ್ರತ್ಯೇಕವಾದದ್ದು. ನಿಮ್ಮ freinds ಮನೆಯಲ್ಲೆಲ್ಲಾ ಹೋಗಿ ‌ನೋಡಿ ಜಾಲಿಯಾಗಿದ್ದೀರ ತಾನೇ? ಆದರೆ ಯಾವುದೇ ಸೌಲಭ್ಯವಿಲ್ಲದೆ ಕಷ್ಟಪಡುವವರೂ ಇದ್ದಾರಲ್ಲಾ? ಅವರಿಗೂ ಮರೆಯದೆ ಸಹಾಯ ಮಾಡಬೇಕು Ok ನಾ. ಸರಿ, ಕಥೆ ಕೇಳೋಣ?

 

ಒಂದು ಸುಂದರವಾದ ಹಳ್ಳಿಯಲ್ಲಿ ಒಂದು ಕುಟುಂಬದಲ್ಲಿ ಸುಜಿ ಮತ್ತು ಚೆಲ್ಸಿ ಎಂಬ ಇಬ್ಬರು ಮಕ್ಕಳಿದ್ದರು. ಅಪ್ಪ ಮಿಲಿಟರಿಯಲ್ಲಿರುವುದರಿಂದ ಅವರನ್ನು ಹೆಚ್ಚಾಗಿ ನೋಡಲು ಆಗುವುದಿಲ್ಲ. ಅಪ್ಪ leave - ಗೆ ಮನೆಗೆ ಬಂದಾಗಲೆಲ್ಲಾ ಸುಜಿ ಮತ್ತು ಚೆಲ್ಸಿ ಕೂಡ Jolly - ಯಾಗಿ ಆಟವಾಡುತ್ತಾರೆ. ಬೇಕಾದದ್ದನ್ನೆಲ್ಲಾ ತೆಗೆದುಕೊಡುತ್ತಾರೆ. ಆದರೆ ಕೆಲವು ತಿಂಗಳುಗಳಿಂದ ಅಪ್ಪನಿಂದ phone, letter ಹಣ ಯಾವುದೂ ಬರದ ಕಾರಣ, ಅಮ್ಮ ಕೂಲಿ ಕೆಲಸಕ್ಕೆ ಹೋಗಿ ಸಂಸಾರ ನಡೆಸುತ್ತಿದ್ದರು. ಆ ಹಣವು X-mas ಗೆ dress ತೆಗೆದುಕೊಳ್ಳಲು, decorations ಮಾಡಲು ಸಾಕಾಗಲಿಲ್ಲ. ತುಂಬಾ ಕಷ್ಟಪಟ್ಟರು. ಅಪ್ಪನ ಯೋಚನೆಯಲ್ಲಿ ಚೆಲ್ಸಿಯಾಗೆ ಜ್ವರ ಬಂತು. ಔಷಧಿ ಕೊಳ್ಳಲೂ ಹಣವಿಲ್ಲದ ಕಾರಣ ಯಾರ ಸಹಾಯ ಕೇಳುವುದು ಎಂದು ಅಮ್ಮ ಯೋಚಿಸುತ್ತಿದ್ದರು. ತಕ್ಷಣ ಸುಜಿ, "ಅಮ್ಮ ಯೇಸಪ್ಪನ ಬಳಿ ಸಹಾಯ ಕೇಳಬಹುದಲ್ಲ!" ಎಂದಳು. ತಕ್ಷಣ ಎಲ್ಲರೂ ನಂಬಿಕೆಯಿಂದ ಪ್ರಾರ್ಥಿಸಲು ಆರಂಭಿಸಿದರು. ಆಶ್ಚರ್ಯ! ಚೆಲ್ಸಿ ಬೆಳಿಗ್ಗೆ ಎದ್ದು ಆಟವಾಡಲು ಪ್ರಾರಂಭಿಸಿದಳು. ಜ್ವರ ಕೂಡ ವಾಸಿಯಾಯಿತು. ಕ್ರಿಸ್‌ಮಸ್‌ಗೆ ಇನ್ನೆರಡು ದಿನಗಳು ಮಾತ್ರ ಉಳಿದಿವೆ. ಮಕ್ಕಳಿಗೆ ಹೊಸಬಟ್ಟೆ ಕೂಡ ತೆಗೆದುಕೊಡಲಿಲ್ಲವೇ ಎಂದುಕೊಂಡು ತಾಯಿ ದುಃಖಪಟ್ಟರು. "ಯೇಸಪ್ಪ ಖಂಡಿತವಾಗಿ ನಮ್ಮ ಅಗತ್ಯಗಳನ್ನೆಲ್ಲಾ ಪೂರೈಸುತ್ತಾರಮ್ಮ" ಎಂದು ಸುಜಿ ಹೇಳಿದಾಗ ಯೇಸಪ್ಪನೇ ಮಾತನಾಡಿದ ಹಾಗಿತ್ತು ಅಮ್ಮನಿಗೆ! ಅಂದು ರಾತ್ರಿ ಕುಟುಂಬ ಪ್ರಾರ್ಥನೆಯಲ್ಲಿ ಸುಜಿ ಪ್ರಾರ್ಥಿಸಿದಳು. ನೀವು ಕುಟುಂಬ ಪ್ರಾರ್ಥನೆಯನ್ನು ಮಾಡುತ್ತೀರಾ? Super. ಬೆಳಗ್ಗೆ ಎದ್ದೇಳುವಾಗ ಬಾಗಿಲು ತಟ್ಟುವ ಸದ್ದು ಕೇಳಿಸಿತು ಬಾಗಿಲು ತೆರೆದು ನೋಡಿದಾಗ ಅಪ್ಪ ನಿಂತಿದ್ದರು. ಅವರ ಕೈಯಲ್ಲಿ ಹೊಸಬಟ್ಟೆ ಮತ್ತು ಉಡುಗೊರೆ ವಸ್ತುಗಳಿದ್ದವು. ಮಕ್ಕಳ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ಅಮ್ಮ ತನ್ನ ಕಣ್ಣುಗಳನ್ನು ಮುಚ್ಚಿಕೊಂಡು, "ನನ್ನ ಅಗತ್ಯಗಳನ್ನು ಸರಿಯಾದ ಸಮಯದಲ್ಲಿ ಪೂರೈಸಿದ್ದಕ್ಕಾಗಿ ಧನ್ಯವಾದಗಳು" ಎಂದು ಪ್ರಾರ್ಥಿಸಿಬಿಟ್ಟು ಎಲ್ಲರೂ ನಿದ್ದೆ ಮಾಡಿಬಿಟ್ಟರು. ಯೇಸಪ್ಪನಿಗೆ ಕೃತಜ್ಞತೆ ಹೇಳಿದರು. ಕುಟುಂಬ ಸಮೇತವಾಗಿ ಆಲಯಕ್ಕೆ ಹೋಗಿ ಸಂತೋಷದಿಂದ ಕ್ರಿಸ್ ಮಸ್ ಆಚರಿಸಿದರು.

 

ಏನು ಪುಟ್ಟ ಬಂಗಾರಗಳೇ! ನೀವೂ ಕೂಡ ನನಗೆ ಡ್ರೆಸ್ ತಕ್ಕೊಟ್ಟಿಲ್ಲವೇ! ಅಪ್ಪನಿಗೆ ಕೆಲಸವಿಲ್ಲವೇ! ನನಗೆ ಸಹಾಯ ಮಾಡಲು ಯಾರೂ ಇಲ್ಲವೇ ಎಂದು ಚಿಂತೆ ಮಾಡುತ್ತಿದ್ದೀರಾ? ಚಿಂತಿಸಬೇಡಿರಿ! ನಮಗಾಗಿ ಈ ಭೂಮಿಗೆ ಬಂದ ಲೋಕ ರಕ್ಷಕನು ನಮ್ಮ ಅಗತ್ಯಗಳನ್ನು ಪೂರೈಸದೇ ಇರುತ್ತಾರ? ಖಂಡಿತವಾಗಿ ಪೂರೈಸುತ್ತಾರೆ. ನಿಮ್ಮ ಕಣ್ಣುಗಳು ಅವರನ್ನೇ ನೋಡಲಿ. Happy "X" mas.

- A. Beulah

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet güncel holiganbet giriş holiganbet sahabet onwin bets10 bets10 giriş bets10 güncel giriş betcio atlasbet casibom meritking casibom giriş perabet padişahbet padişahbet giriş holiganbet cashwin tambet grandpashabet bahiscasino amgbahis betbey amgbahis radissonbet betpuan cashwin matbet perabet perabet giriş instagram ban service pashagaming pashagaming giris gorabet gorabet giris grandpashabet çarkbet çarkbet giriş deneme bonusu casibom giriş casibom vaycasino vaycasino giriş casibom meritking casibom casibom giriş meritking meritking giriş holiganbet