Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 16.01.2022 (Kids Special)
Share:

By Village Missionary Movement

Sunday, 16-Jan-2022

ಧೈನಂದಿನ ಧ್ಯಾನ(Kannada) – 16.01.2022 (Kids Special)

 

No Free

 

“ನಂಬಿಗಸ್ತನು ಆಶೀರ್ವಾದಪೂರ್ಣನಾಗುವನು;..." - ಜ್ಞಾನೋಕ್ತಿ 28:20

 

ಪ್ರಯಾಣಿಕ ಹಡಗೊಂದು ಯುರೋಪ್ ನಿಂದ ನ್ಯೂಯಾರ್ಕ್ ಗೆ ಪ್ರಯಾಣಿಸಿತು. 1500 ಪ್ರಯಾಣಿಕರಿದ್ದರು. Train ವಿಮಾನದಲ್ಲಿ ಹೇಗೆ First, Second, third class ಎಂದು ಇದೆಯೋ ಅದೇ ರೀತಿ ಹಡಗಿನಲ್ಲೂ ಇರುತ್ತದೆ. ಕಡಿಮೆ ಸೌಲಭ್ಯವಿರುವ ಕುಟುಂಬವೂ ಪ್ರಯಾಣಿಸುತ್ತಿತ್ತು. ಅಪ್ಪ-ಅಮ್ಮ, ಮೂವರು ಮಕ್ಕಳಿದ್ದರು. ಮೊದಲ ಮಗನಿಗೆ 10 ವರ್ಷ, ಚೆನ್ನಾಗಿ ವಿವರವುಳ್ಳ ಹುಡುಗನಾಗಿದ್ದನು. ಮೊದಲ ಬಾರಿಗೆ ಹಡಗಿನಲ್ಲಿ ಪ್ರಯಾಣ ಮಾಡುತ್ತಿದ್ದಾನೆ. ಪುಟಾಣಿಗಳೇ ನೀವು ಎಂದಾದರೂ ಹಡಗಿನಲ್ಲಿ ಪ್ರಯಾಣ ಮಾಡಿದ್ದೀರಾ? ಅದು ಸೂಪರ್ ಆಗಿರುತ್ತದೆ ಅಲ್ವಾ! ಆ ದೊಡ್ಡ ಹಡಗಿನಲ್ಲಿ ಹೋಟೆಲ್ ಮತ್ತು ಆಟದ ಆವರಣವು ಇತ್ತು. ಈ ಸ್ಥಳಕ್ಕೆ ಯಾರಾದರೂ ಹೋಗಬಹುದು, ಆದರೆ ಅಲ್ಲಿರುವ ವಸ್ತುಗಳನ್ನು ಖರೀದಿಸಲು ಹಣ ಪಾವತಿಸಬೇಕು. ಇವನಿಗೆ ದುಡ್ಡು ಕೊಡಲು ಸಾಧ್ಯವಾಗದ ಕಾರಣ ಸುತ್ತಿ ನೋಡಿಬಿಟ್ಟು ಬಂದುಬಿಡುತ್ತಿದ್ದನು.

 

ಒಂದು ದಿನ ಆ ಹೋಟೆಲ್ ನಲ್ಲಿ ನೋಡಿದ ಕೇಕ್ ಒಂದನ್ನು ತೆಗೆದುಕೊಳ್ಳಲು ಬಯಸಿದನು. ಆ ಕೇಕ್ ನ ಬೆಲೆ 4 ಡಾಲರ್. ವೇಗವಾಗಿ ಅಪ್ಪನ ಬಳಿ ಹೋಗಿ ಕೇಳಿದನು. ಅಪ್ಪ ಕೂಡ ಜೇಬಿನಲ್ಲಿ ಬ್ಯಾಗ್ ನಲ್ಲಿ ಇದ್ದ ಹಣವನ್ನೆಲ್ಲಾ ಸೇರಿಸಿ ಲೆಕ್ಕ ಹಾಕಿದರೆ ಕೇವಲ 3 ½ ಡಾಲರ್ ಮಾತ್ರವೇ ಇತ್ತು. ಅವನು ಕೇಕ್ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ದಿನವೂ ಆ ಕೇಕ್ ನೋಡಿಬಿಟ್ಟು ಬರುತ್ತಿದ್ದ. ಇದನ್ನೆಲ್ಲ ನೋಡುತ್ತಿದ್ದವರೊಬ್ಬರು ಕೇಕ್ ಒಂದನ್ನು ಅವನಿಗೆ ತೆಗೆದುಕೊಟ್ಟರು. ಅವನು ಬೇಡ ಎಂದು ಹೇಳಿಬಿಟ್ಟನು. ನಾನು ಹಣ ಕೊಟ್ಟೇ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದು ಅವರಿಗೆ ಆಶ್ಚರ್ಯವಾಗಿತ್ತು. ನಮಗೆ ಯಾರಾದರೂ ಕೇಕ್, ಚಾಕಲೇಟ್ ಕೊಟ್ಟರೆ ತಕ್ಷಣ ತೆಗೆದುಕೊಂಡು ತಿಂದುಬಿಡುತ್ತೇವಲ್ಲವೇ? ಅಪರಿಚಿತರು ನಿಮಗೆ ಏನು ಕೊಟ್ಟರೂ ತೆಗೆದುಕೊಳ್ಳಬಾರದು ಸರೀನಾ ಪುಟಾಣಿಗಳೇ. ಇವನನ್ನು ಗಮನಿಸುತ್ತಿದ್ದ ಆ ವ್ಯಕ್ತಿ ಹೇಳಿದರು, “ತಮ್ಮ ನೀನು ದಿನವೂ ಕೇಕ್ ಅನ್ನು ಆಸೆಯಿಂದ ನೋಡುತ್ತಾ ಹೋಗುತ್ತಿರುವುದು ನನಗೆ ಬೇಸರವಾಗುತ್ತಿದೆ. ನಾನೇ ಈ Hotel - ನ ಓನರ್, ಈ ಕೇಕ್ ತಕ್ಕೊಂಡು ತಿನ್ನು" ಎಂದು ಹೇಳಿದರು. ಅವನು ಕೇಕ್ ತೆಗೆದುಕೊಳ್ಳದೆ, “ನನಗೆ ಏನಾದರೂ ಕೆಲಸ ಕೊಡಿ ಸಾರ್. ಯಾವ ಕೆಲಸವಾದರೂ ಮಾಡಲು ಸಿದ್ಧ” ಎಂದು ಹೇಳಿ 2 ಗಂಟೆಗಳ ಕಾಲ ಕೆಲಸ ಮಾಡಿ10 ಡಾಲರ್ ಸಂಬಳ ತೆಗೆದುಕೊಂಡನು. ಡಬಲ್ ಕೇಕ್ ತೆಗೆದುಕೊಂಡು ತನ್ನ ಕೋಣೆಗೆ ಓಡಿದನು. ಆ ಓನರ್ ಹೇಳಿದರು, “ಖಂಡಿತವಾಗಿಯೂ ಈ ಹುಡುಗ ತನ್ನ ಜೀವನದಲ್ಲಿ ದೊಡ್ಡ ವ್ಯಕ್ತಿಯಾಗಲಿದ್ದಾನೆ. ನಂಬಿಗಸ್ತನಾದ ಕೆಲಸಗಾರನನ್ನು ಉನ್ನತಿ ಹುಡುಕಿ ಬರುತ್ತದೆ" ಎಂದು ಮೆಚ್ಚಿ ಕೊಂಡರು.

 

ಮುದ್ದು ಪುಟಾಣಿಗಳೇ! ನಾವು ಬಯಸಿದ ವಸ್ತು ಸುಲಭವಾಗಿ, ಉಚಿತವಾಗಿ ಸಿಕ್ಕಿಬಿಟ್ಟರೆ ಕೂಡಲೇ ತೆಗೆದುಕೊಳ್ಳುತ್ತೇವೆ ಅಲ್ವಾ! ಆದರೆ ಆ ಚಿಕ್ಕ ಹುಡುಗ ನಂಬಿಗಸ್ತನಾಗಿ ಕೆಲಸ ಮಾಡಿ ತೆಗೆದುಕೊಂಡನು. ನೀವು ಎಂದಿಗೂ ಸುಳ್ಳು ಹೇಳಬಾರದು, ಮೋಸ ಮಾಡಬಾರದು ಮತ್ತು ಹಣವನ್ನು ಕೊಡದೇ ತೆಗೆದುಕೊಳ್ಳಬಾರದು. Exam ನಲ್ಲಿ ಒಳ್ಳೆ ಅಂಕ ಗಳಿಸಲು ಬಿಟ್ ಹೊಡೆಯಬೇಡಿ, ನೋಡಿ ಬರೆಯಬೇಡಿ. ನೀವು ಕಷ್ಟಪಟ್ಟು ಕೆಲಸ ಮಾಡಿ, ಯಾವುದೇ ಕೆಲಸವನ್ನು ನಿಷ್ಠೆಯಿಂದ ಮಾಡಲು ಪ್ರಯತ್ನಿಸಿದಾಗ, ಸಂತೋಷ ಮತ್ತು ಉನ್ನತಿ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಸತ್ಯ ಎಂಬ ಏಣಿ ಮಾತ್ರವೇ ನಿಮ್ಮನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ. Ok ತಾನೇ.

- Mrs. ಜ್ಯೋತಿ ಆನಂದ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al deneme bonusu deneme bonusu veren siteler online casino online casino perabet perabet giriş perabet perabet giriş perabet perabet giriş perabet güncel giriş jojobet jojobet giriş jojobet güncel giriş Holiganbet Holiganbet Giriş Holiganbet Güncel Giriş Superbetin Superbetin Giriş Superbetin Güncel Giriş pashagaming pashagaming giriş pashagaming güncel giriş betcio Betcio Giriş betcio güncel giriş atlasbet atlasbet giriş atlasbet güncel giriş Piabet Piabet Giriş Ngsbahis Ngsbahis Giriş İnterbahis İnterbahis Giriş Klasbahis Klasbahis Giriş Coinbar Coinbar Giriş Limanbet Limanbet Giriş İmajbet İmajbet Giriş Restbet Restbet Giriş Matbet Matbet Giriş Jasminbet Jasminbet Giriş Belugabahis Belugabahis Giriş Online casino nz Best payout online casino nz matbet jojobet jojobet giriş jojobet güncel giriş bahsegel bahsegel bahsegel matbet romabet lunabet