Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 18.01.2022
Share:

By Village Missionary Movement

Tuesday, 18-Jan-2022

ಧೈನಂದಿನ ಧ್ಯಾನ(Kannada) – 18.01.2022

 

ದೇವರಿಂದ ಘನತೆ ಪಡೆಯಲು

 

 "...ನಿಮ್ಮ ಕೆಲಸವನ್ನೂ...ಆತನ ನಾಮದ ವಿಷಯವಾಗಿ ತೋರಿಸಿದ ಪ್ರೀತಿಯ ಪ್ರಯಾಸವನ್ನೂ ಮರೆಯು ವದಕ್ಕೆ ದೇವರು ಅನ್ಯಾಯಸ್ಥನಲ್ಲ" - ಇಬ್ರಿಯ 6:10

 

ಈ ಲೋಕದ ಜನರಿಂದ ಘನತೆ ಹೊಂದಿದವರ ಪಟ್ಟಿಯಲ್ಲಿ ರಾಜಕಾರಣಿಗಳು ಮತ್ತು ನಟರು ಮಾತ್ರವೇ ಸ್ಥಾನ ಪಡೆಯಬಹುದು. ಸರಳ ಕೆಲಸಗಾರರ ಹೆಸರುಗಳು ಆ ಪಟ್ಟಿಯಲ್ಲಿ ಇರಲು ಸಾಧ್ಯವೇ ಇಲ್ಲ. ಆದರೆ ಸರಳವಾದ ಕೆಲಸವನ್ನು ಮಾಡುವವರು ಸಹ ಕರ್ತನಿಗಾಗಿ ಕೆಲಸ ಮಾಡುವಾಗ, ರಾಜಾಧಿ ರಾಜನಾದ ದೇವರಿಂದ ಘನತೆಯನ್ನು ಹೊಂದುತ್ತಾರೆ. ಮೇಲ್ಕಂಡ ಸತ್ಯವೇದ ಭಾಗದಲ್ಲಿ ಬರುವ ನಾಮಾನನು ಸಿರಿಯಾ ರಾಜನ ಸೇನಾಪತಿಯಾಗಿದ್ದನು. ಆದರೆ ಅವನ ಜೀವನವನ್ನೇ ಹಾಳುಮಾಡುವಂತ ಕುಷ್ಠರೋಗವು ಅವನಿಗಿತ್ತು. ಅವನು ಕುಷ್ಠರೋಗದಿಂದ ಸ್ವಸ್ಥನಾಗಲು ಕಾರಣವೇನಂದರೆ ಇಸ್ರಾಯೇಲ್ ದೇಶದಿಂದ ಸೆರೆಹಿಡಿದು ಕರೆತರಲ್ಪಟ್ಟು, ಅವನ ಹೆಂಡತಿಗೆ ಕೆಲಸದವಳಾಗಿದ್ದ ಪುಟ್ಟ ಹುಡುಗಿಯೇ.

 

ಎಲೀಷ ಪ್ರವಾದಿ ಯೊರ್ದನ್ ಹೊಳೆಯಲ್ಲಿ ಏಳು ಬಾರಿ ಸ್ನಾನ ಮಾಡಲು ಸಲಹೆ ನೀಡಿದಾಗ ನಾಮಾನನು ಕೋಪಗೊಂಡನು. ಆಗ ಅವನ ಸೇವಕರು, ಎಲೀಷನ ಆಜ್ಞೆಯನ್ನು ಪಾಲಿಸುವಂತೆ ಅವನನ್ನು ಒತ್ತಾಯಿಸಿದರು. ಆತನು ಅವರಿಗೆ ಕಿವಿಗೊಟ್ಟು ಯೊರ್ದನ್ ಹೊಳೆಯಲ್ಲಿ ಸ್ನಾನ ಮಾಡಿದಾಗ ಸ್ವಸ್ಥನಾದನು. ಇಸ್ರಾಯೇಲ್ ರಾಜನೋ, ಎಲೀಷನೋ ಈ ಸಾಹಸವನ್ನು ಮಾಡಲಿಲ್ಲ. ಸರಳ ಸಲಹೆಯನ್ನು ನೀಡಿದ ಚಿಕ್ಕ ಹುಡುಗಿ ಮತ್ತು ನಾಮಾನನ ಸೇವಕರೇ ಈ ಅದ್ಭುತ ನಡೆಯಲು ಕಾರಣರಾಗಿದ್ದರು. ಸರಳ ಕೆಲಸ ಮಾಡಿದವರು ಕರ್ತನಿಗಾಗಿ ಕಾರ್ಯ ಮಾಡಿದ್ದರಿಂದ ಏನು ಸಂಪಾದಿಸಿದರು? “ಇಗೋ, ಇಸ್ರಾಯೇಲಿನಲ್ಲಿರುವ ದೇವರ ಹೊರತಾಗಿ ಭೂಮಿಯಲ್ಲೆ ಲ್ಲಿಯೂ ಬೇರೆ ದೇವರು ಇಲ್ಲವೆಂದು ನಾನು ಬಲ್ಲೆನು" ಎಂದು ನಾಮಾನನು ಅರಿಕೆ ಮಾಡಿದನು.

 

ದೇವರಿಂದ ಬೇರ್ಪಡಿಸಲ್ಪಟ್ಟವರೇ! ನೀವು ಬಹುಶಃ ವಿಶ್ವದ ಅತ್ಯಂತ ಸಾಮಾನ್ಯ ಕೆಲಸ ಮಾಡುವ ವ್ಯಕ್ತಿಯಾಗಿರಬಹುದು ಮತ್ತು ಹಣದ ಸ್ಥಾನಮಾನದ ವಿಷಯದಲ್ಲಿ ಅಭಿವೃದ್ಧಿ ಇಲ್ಲದವರಾಗಿರಬಹುದು. ನಿಮಗೆ ಶಿಕ್ಷಣ, ಜ್ಞಾನ ಮತ್ತು ಕೌಶಲ್ಯವಿಲ್ಲದೇ ಇರಬಹುದು ಚಿಂತಿಸಬೇಡಿರಿ. ನಿಮ್ಮನ್ನು ಇಟ್ಟಿರುವ ಕೆಲಸದ ಸ್ಥಳಗಳಲ್ಲಿ ದೇವರನ್ನು ಮಹಿಮೆಪಡಿಸುತ್ತಲೇ ಇರಿ. ದೇವರ ಬಗ್ಗೆ ಹೆಚ್ಚಳ ಪಡಿರಿ. ನಿಮ್ಮ ಕೆಲಸದ ಸ್ಥಳದಲ್ಲಿ ಕೆಲಸ ಮಾಡುವ ಎಲ್ಲರ ಯೋಗಕ್ಷೇಮ ಮತ್ತು ರಕ್ಷಣೆಗಾಗಿ ಪ್ರಾರ್ಥಿಸಿರಿ. ಅವರು ದೇವರನ್ನು ತಿಳಿದುಕೊಳ್ಳುವಂತೆ ಪ್ರಯತ್ನವನ್ನೂ ಮಾಡಿರಿ. ಹೀಗೆ ಮಾಡಿದರೆ ಪರಲೋಕದ ದೃಷ್ಟಿಯು ನಿಮ್ಮನ್ನೇ Hero ಹಾಗೆ ನೋಡುತ್ತದೆ. ನಿಮ್ಮಿಂದ ಪರಲೋಕವೂ ಸಂತೋಷಪಡುತ್ತದೆ. ಆಮೆನ್.

- Mrs. ಗೀತಾ ರಿಚರ್ಡ್

 

ಪ್ರಾರ್ಥನಾ ಅಂಶ:

ಬೈಬಲ್ ಕಾಲೇಜಿನ ವಿದ್ಯಾರ್ಥಿಗಳು ದೇವರ ಕೈಯಲ್ಲಿ ಅಂತ್ಯಕಾಲ ಉಜ್ಜೀವನದ ಸಾಧನಗಳಾಗಿ ಉಪಯೋಗವಾಗುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al deneme bonusu deneme bonusu veren siteler online casino online casino perabet perabet giriş perabet güncel giriş jojobet jojobet giriş jojobet güncel giriş Holiganbet Holiganbet Giriş Holiganbet Güncel Giriş Superbetin Superbetin Giriş Superbetin Güncel Giriş pashagaming pashagaming giriş pashagaming güncel giriş betcio Betcio Giriş betcio güncel giriş atlasbet atlasbet giriş atlasbet güncel giriş Piabet Piabet Giriş Ngsbahis Ngsbahis Giriş İnterbahis İnterbahis Giriş Klasbahis Klasbahis Giriş Coinbar Coinbar Giriş Limanbet Limanbet Giriş İmajbet İmajbet Giriş Restbet Restbet Giriş Matbet Matbet Giriş Jasminbet Jasminbet Giriş Belugabahis Belugabahis Giriş Online casino nz Best payout online casino nz jojobet jojobet giriş jojobet güncel giriş meritking meritking giriş meritking güncel giriş perabet perabet giriş perabet güncel giriş holiganbet holiganbet giriş holiganbet güncel giriş Meritking Perabet Holiganbet jojobet jojobet giriş jojobet güncel giriş bahsegel bahsegel bahsegel bahsegel bahsegel perabet perabet giriş perabet perabet giriş holiganbet holiganbet giriş holiganbet holiganbet giriş belugabahis matbet romabet