Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 09.02.2022 (God’s creation’s special)
Share:

By Village Missionary Movement

Wednesday, 09-Feb-2022

ಧೈನಂದಿನ ಧ್ಯಾನ(Kannada) – 09.02.2022 (God’s creation’s special)

ಕೊಕ್ಕರಕ್ಕೋ

"ನೀವಾದರೋ, ನಿಮ್ಮಲ್ಲಿ ದೇವರ ಆತ್ಮನು ವಾಸವಾಗಿರುವದಾದರೆ ಶರೀರ ಭಾವಾಧೀನರಲ್ಲ, ದೇವರಾತ್ಮನಿಗೆ ಅಧೀನರಾಗಿದ್ದೀರಿ..." - ರೋಮಾ 8:9

ಸತ್ಯವೇದದಲ್ಲಿ ಮೊಟ್ಟ ಮೊದಲು ಉಲ್ಲೇಖಿಸಲ್ಪಟ್ಟ ಹಕ್ಕಿ ಎಂಬ ಹೆಮ್ಮೆ ನಮ್ಮ ಕೋಳಿ ಜನಾಂಗಕ್ಕೆ ಸೇರಿದ್ದು. ನನ್ನ ಜನಾಂಗವು ನಾಶವಾಗದೇ ಭೂಮಿಯಲ್ಲಿ ಉಳಿಸಲ್ಪಡುವಂತೆ ನಾವೆಯಲ್ಲಿ ಕೋಳಿ ಮತ್ತು ಆಯಾ ಪಕ್ಷಿಗಳಲ್ಲಿ ಏಳೇಳು ಜೋಡಿಗಳನ್ನು ತೆಗೆದುಕೋ ಎಂದು ಹೇಳಿದರು. ಜಗತ್ತೇ ಮಲಗಿರುವಾಗ,  "ನೀನು ಎದ್ದೇಳುವ ಸಮಯ ಬಂದಿದೆ, ಬೇಗ ಎದ್ದೇಳು" ಎಂದು ಶಬ್ಧ ಮಾಡಿ ಎಬ್ಬಿಸುವವನೂ ನಾನೇ. ನಾನು ಕೂಗುವುದಕ್ಕಿಂತ ಮೊದಲು ಶಿಷ್ಯನಾದ ಪೇತ್ರನು ಯೇಸುವನ್ನು ಅರಿಯೆನೆಂದು ಮೂರು ಬಾರಿ ನಿರಾಕರಿಸಿದ ವಿಷಯವೂ ಸತ್ಯವೇದದಲ್ಲಿದೆ.  ನಾವು ಮಾಂಸಾಹಾರವಾಗಿ ಉಪಯೋಗವಾಗುತ್ತಿದ್ದರೂ ನಮ್ಮಲ್ಲಿ ಕೆಲವರನ್ನು ಜಗಳವಾಡಲು ಸ್ಪರ್ಧೆಗಳಲ್ಲಿ ಬಳಸಲು ತರಬೇತಿ ಕೊಟ್ಟು ಉಪಯೋಗಿಸುತ್ತಿದ್ದಾರೆ.

ಹಾಸ್ಯಕ್ಕಾಗಿ ಒಂದು ಮಾತು ಹೇಳುತ್ತೇನೆ, ಕೇಳಿ. ಒಮ್ಮೆ ಕಾದಾಟದ ಹುಂಜವೊಂದು ಕಾದಾಟದ ಸಮಯದಲ್ಲಿ ಉಂಟಾದ ಅತಿಯಾದ ಗಾಯದಿಂದಾಗಿ ಸತತವಾಗಿ ಆ ಕಾದಾಟದ ಹುಂಜವನ್ನು ಕಾದಾಟಕ್ಕೆ ಬಳಸಲು ಸಾಧ್ಯವಾಗಲಿಲ್ಲ.  ಹಾಗಾಗಿ ಅದನ್ನು ಸಾಕಿದವರು ಅವರೇ ಅದನ್ನು ಹೊಡೆದು ತಿನ್ನಲು ಮನಸ್ಸಿಲ್ಲದೇ, ಹತ್ತಿರದ ಯೌವನಸ್ಥರಿಗೆ ಕೊಟ್ಟರು, ಅವರು ಆ ಕಾದಾಟದ ಹುಂಜದಿಂದ ಆಸೆಯಾಗಿ ಒಳ್ಳೆಯ ಒಂದು  ಔತಣವನ್ನು ಸಿದ್ಧಮಾಡಿ ತಿಂದು ಜಾಲಿಯಾಗಿ ಮಾತನಾಡಿಕೊಳ್ಳುತ್ತಿರುವಾಗ, ಅವರೊಳಗೆ ಏರ್ಪಟ್ಟ ಮಾತು ವಾಗ್ಧಾಳಿಯಾಗಿ, ಹೊಡೆದಾಟದಲ್ಲಿ ಮುಕ್ತಾಯಗೊಂಡಿತು. ಅಡುಗೆ ಮಾಡಿ ತಿಂದಿದ್ದು ಕಾದಾಟದ ಕೋಳಿಯಾದ್ದರಿಂದ  ಜೊತೆಗಿದ್ದವನನ್ನು ಶತ್ರುವಿನಂತೆ ನೋಡಿ ಅಟ್ಟಾಡಿಸಿ ಓಡಿಸಿದರೇ?  ಅದು ಕಾದಾಟದ ಹುಂಜದ ಸ್ವಭಾವವೇ ತಾನೇ!  “ನಿನ್ನ ಗೆಳೆಯ ಯಾರೆಂದು ಹೇಳು;  ನಂತರ ನೀನು ಯಾರೆಂದು ಹೇಳುತ್ತೇನೆ”  ಎಂದು ಹೇಳುತ್ತಾರೆ. ನೀವು ಯಾರೊಂದಿಗೆ ಹೆಚ್ಚು ಸ್ನೇಹ ಮತ್ತು ಏಕತೆಯನ್ನು ಹೊಂದಿರುತ್ತೀರೋ, ಅವರ ಗುಣ ಮತ್ತು ಸ್ವಭಾವಕ್ಕೆ ಆಕರ್ಷಿತರಾಗಿ, ನಿಮಗೆ ತಿಳಿಯದೆ ಅವರಂತೆ ನಿಮ್ಮನ್ನು ಮಾರ್ಪಡಿಸುತ್ತದೆ. ದೇವರೊಂದಿಗೆ ನೀವು ಐಕ್ಯವಾಗಿದ್ದರೆ, ನೀವು ಅವರಂತೆಯೇ ಇರುತ್ತೀರಿ.  ನಿಮ್ಮ ಸ್ವಭಾವವೂ ಪ್ರೀತಿಯಿಂದ ತುಂಬಿರುವಂತೆ ಕಾಣಿಸುತ್ತದೆ.  ಮಾಂಸದ ಕ್ರಿಯೆಗಳಾದ ಕೋಪಕ್ಕೂ, ಅಸಮಾಧಾನಕ್ಕೂ, ದ್ವೇಷಕ್ಕೂ ಅಸೂಯೆಗಳಿಗೂ ಅವಕಾಶವಿರುವುದಿಲ್ಲ.

ನಾವು ಮುಂಜಾನೆಯೇ ಎದ್ದು ದೇವರನ್ನು ಸ್ತುತಿಸಿ ಕುಟುಂಬದವರನ್ನೆಲ್ಲಾ ಎಬ್ಬಿಸಿ ಕುಟುಂಬ ಸಮೇತರಾಗಿ ದೇವರನ್ನು ಸ್ತುತಿಸಿದರೆ, ನೀವು ದಿನವಿಡೀ ಸಂತೋಷವಾಗಿರುತ್ತೀರಿ ಅಲ್ಲವೇ!  ಆಗ ಶಾರೀರಿಕ ಸ್ವಭಾವವಲ್ಲ;  ದೈವೀಕ ಸ್ವಭಾವವೇ ನಿಮ್ಮನ್ನು ಆಳ್ವಿಕೆ ಮಾಡುತ್ತದೆ.
-    Bro.  ಹನೀಶ್ ಸಾಮುವೇಲ್

ಪ್ರಾರ್ಥನಾ ಅಂಶ:
ಆಂಧ್ರ ರೇಖಾ ಪುನ್ನಿಯಗಿರಿ ದೇವಾಲಯದ ಕಟ್ಟಡದ ಕೆಲಸಗಳಲ್ಲಿ ದೇವರ ಹಸ್ತವು ಜೊತೆಯಿದ್ದು ನಡೆಸುವಂತೆ ಪ್ರಾರ್ಥಿಸಿರಿ.

Whatsapp
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು +91 94440 11864 ಈ ಸಂಖ್ಯೆಯನ್ನು ಸಂಪರ್ಕಿಸಿ.

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al Elexbet instagram unban service tiktok unban instagram unban x unban twitter unban palacebet