Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 11.02.2022 (God’s creation’s special)
Share:

By Village Missionary Movement

Friday, 11-Feb-2022

ಧೈನಂದಿನ ಧ್ಯಾನ(Kannada) – 11.02.2022 (God’s creation’s special)

ಜೀವ ಕಾಪಾಡುವ ಪೆಟ್ಟಿಗೆ

"...ಜ್ಞಾನಿಯು ಆತ್ಮಗಳನ್ನು ಆಕರ್ಷಿಸುವನು” - ಜ್ಞಾನೋಕ್ತಿ 11:30

ನಿಮಗೆಲ್ಲರಿಗು ಮೋಶೆಯ ಬಗ್ಗೆ ಚೆನ್ನಾಗಿ ಗೊತ್ತು.  ಆ ಮೋಶೆಯ ಜೀವವನ್ನು ಉಳಿಸುವಲ್ಲಿ ನಾನು ಪ್ರಮುಖ ಪಾತ್ರ ವಹಿಸಿದ್ದೆ. ಅದೇ ರೀ ನಾನು ಆಪಿನ ಪೆಟ್ಟಿಗೆ ಮಾತನಾಡುತ್ತಿದ್ದೇನೆ.  ಲಕ್ಷಾಂತರ ಇಸ್ರಾಯೇಲ್ಯರನ್ನು ಮುನ್ನಡೆಸುವ ಒಬ್ಬ ನಾಯಕನನ್ನು ನಾನು ಸುರಕ್ಷಿತವಾಗಿ ಕೊಂಡೊಯ್ಯುತ್ತೇನೆ ಎಂದು ನನಗೆ ಗೊತ್ತಿರಲಿಲ್ಲ. ಎಷ್ಟೋ ಮಕ್ಕಳು ಸತ್ತು ಆ ನದಿಯಲ್ಲಿ ಕೊಚ್ಚಿಹೋದರು, ಫರೋಹನ ಮಗಳ ಕಣ್ಣಿಗೆ ನಾನು ಬಿದ್ದೆ.  ನಂತರ ಬರುವ ಸಂಭವಗಳು ನಿಮಗೇ ಗೊತ್ತು.

ನನಗೇನೋ, ನಾನು ಉತ್ಪತ್ತಿಯಾಗುವ ವಿಧಾನವು, ನಿಮ್ಮ ಆಧ್ಯಾತ್ಮಿಕ ಬೆಳವಣಿಗೆಯೂ ಸರಿಹೊಂದುವಂತೆ ತೋರುತ್ತಿದೆ.  ಅದನ್ನು ಹೇಳುತ್ತೇನೆ  ಕೇಳುತ್ತೀರಾ?  ದೊಡ್ಡ ಸಸ್ಯವಾಗಿ ಬೆಳೆದ ನನ್ನನ್ನು ಕಡಿದು ತೆಗೆಯುತ್ತಾರೆ.  ಅಂದರೆ ಕೆಸರಿನಿಂದ ಬೇರ್ಪಡಿಸುತ್ತಾರೆ.  ನಿಮ್ಮ ಜೀವನವೂ ಮೊದಲು ಪಾಪದ ಕೆಸರಿನಲ್ಲೂ ಮತ್ತು ಚರಂಡಿಯಲ್ಲಿತ್ತು.  ಅದರಿಂದ ಕಡಿದು ಮೇಲೆತ್ತಿ ಬೇರ್ಪಡಿಸಲ್ಪಟ್ಟ ಒಂದು ಜೀವನವನ್ನು ಜೀವಿಸಲು ಪ್ರಾರಂಭಿಸಬೇಕು.  ನಂತರ ನನ್ನನ್ನು ಸೂರ್ಯನ ಬಿಸಿಲಿನಲ್ಲಿ ಒಣಗಲು ಬಿಡುತ್ತಾರೆ.  ಅಂತೆಯೇ ನೀತಿ ಸೂರ್ಯನಾದ ಯೇಸು ಕ್ರಿಸ್ತನ ಬೆಳಕಿನಲ್ಲಿ ನಿಮ್ಮ ಎಲ್ಲಾ ಜನ್ಮ ಸ್ವಭಾವಗಳು ಬದಲಾಗಬೇಕು. ಹೀಗೆ ಒಣಗಿದ ನನ್ನಿಂದ ಒಂದು ಪೆಟ್ಟಿಗೆಯನ್ನು ಮಾಡಲು ಸಾಧ್ಯವಿಲ್ಲ.  ಕತ್ತು ಹಿಸುಕಿ ಮುರಿದು ಬೀಳುತ್ತೇನೆ.  ನನ್ನ ಮೇಲೆ ನೀರು ಚಿಮುಕಿಸಿ ಪಕ್ವಪಡಿಸಬೇಕು.  ಅದೇ ರೀತಿಯಲ್ಲಿ ನೀವು ಕೂಡ ಜೀವಜಲವಾದ ಆತ್ಮನ ಪೂರ್ಣತೆಯನ್ನು ಪಡೆದು, ದೇವರ ವಾಕ್ಯದಿಂದ ಪಕ್ವಗೊಳ್ಳಬೇಕು.  ನನ್ನಲ್ಲಿ ಸಣ್ಣ ಸಣ್ಣದಾಗಿದ್ದ ಅಂತರವನ್ನು ಅಂಟು ಮತ್ತು ರಾಳವನ್ನೂ ಹಚ್ಚಿ ಮುಚ್ಚಿದರು.  ಆದ್ದರಿಂದಲೇ ಒಂದು ಹನಿ ನೀರು ಕೂಡ ಒಳಸೇರದೆ ಮೋಶೆಯ ಪ್ರಾಣವನ್ನು ಕಾಪಾಡಿದೆ. ರಾಳ ಮತ್ತು ಅಂಟು ಪೆಟ್ಟಿಗೆ ತೇಲಲು ಎಷ್ಟು ಮುಖ್ಯವೋ, ಅದರಂತೆ ನೀವು ಕೂಡ ದೇವರೊಂದಿಗಿನ ಶಾಶ್ವತ ಪ್ರೀತಿಯಿಂದ ಮುಚ್ಚಲ್ಪಟ್ಟು, ಕೃಪೆಯಿಂದ ತುಂಬಿರಬೇಕಾದದ್ದು ತುಂಬಾ ಮುಖ್ಯ. ಆಗ ಮಾತ್ರವೇ ನಾವು ಸಂಧಿಸುವ ಆತ್ಮಗಳನ್ನು ಸುರಕ್ಷಿತವಾಗಿ ಪರಲೋಕದಲ್ಲಿ ಸೇರಿಸಲು ಸಾಧ್ಯ. ಸರಿ ತಾನೇ!

ಹೌದು, ಪ್ರಿಯರೇ!  ಆಪಿನ ಪೆಟ್ಟಿಗೆ ಹೇಳಿದ್ದು ಸರಿಯೇ. ನಾವು ಈ ಎಲ್ಲಾ ವಿಧಾನಗಳನ್ನು  ದಾಟಿ ಬಂದರೆ ಮಾತ್ರವೇ  ನಶಿಸಿಹೋಗುತ್ತಿರುವ ಆತ್ಮಗಳನ್ನು ಕಾಪಾಡಿ ಆತ್ಮ ಆದಾಯ ಮಾಡಬಹುದು. ಇಂದು ಅನೇಕರು ಅನಾರೋಗ್ಯದಿಂದ, ಘೋರ ವ್ಯಾಧಿಯಿಂದ,  ಆತ್ಮಹತ್ಯೆಯ ಕಾರಣದಿಂದ ದೇವರನ್ನು ತಿಳಿಯದೇನೆ ನರಕಕ್ಕೆ ನೇರವಾಗಿ ಹೋಗುತ್ತಿದ್ದಾರೆ.  ಈ ವರ್ಷ ಯೇಸುವನ್ನು ತಿಳಿಯದೆ ಪಾಪಕ್ಕೆ ದಾಸರಾಗಿರುವ ಜನರನ್ನು ದೇವರ ಬಳಿಗೆ ಕರೆದುಕೊಂಡು ಹೋಗಿ ಸೇರಿಸುವ ಆಪಿನ ಪೆಟ್ಟಿಗೆಯಾಗಿ  ಕಾರ್ಯನಿರ್ವಹಿಸಲು ನೀವು ನಿಮ್ಮನ್ನು ಒಪ್ಪಿಸಿ ಕೊಡುತ್ತೀರಾ?
-    Bro.  ಜಾನ್ ಜಯರಾಜ್
 
ಪ್ರಾರ್ಥನಾ ಅಂಶ:
ಕಚೇರಿಯಲ್ಲಿ ಬಳಸುವ ಕಂಪ್ಯೂಟರ್ ಮತ್ತು ಲ್ಯಾಪ್‌ಟಾಪ್, ಪ್ರಿಂಟರ್ ಯಾವುದೇ ತೊಂದರೆ ಇಲ್ಲದೆ ಕಾರ್ಯ ನಿರ್ವಹಿಸುವಂತೆ  ಪ್ರಾರ್ಥಿಸಿರಿ.

Whatsapp
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು +91 94440 11864 ಈ ಸಂಖ್ಯೆಯನ್ನು ಸಂಪರ್ಕಿಸಿ.

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking meritking giriş perabet perabet giriş casibom casibom giriş holiganbet holiganbet giriş galabet casibom casibom giriş grandpashabet perabet perabet giriş padişahbet padişahbet giriş meritking meritking giriş grandpashabet grandpashabet giriş kalitebet kalitebet giris betsmove betsmove giris gonebet gonebet giris betnano betnano giriş jojobet jojobet betplay jojobet esbet sonbahis tambet grandpashabet betgit mercurecasino