Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 12.02.2022 (God’s creation’s special)
Share:

By Village Missionary Movement

Saturday, 12-Feb-2022

ಧೈನಂದಿನ ಧ್ಯಾನ(Kannada) – 12.02.2022 (God’s creation’s special)

ಮೇಘಗಳ ಅನುಭವ

"ಆ ಮೇಘವು ಬಿಡದೆ ಇರುವಾಗ ಅದು ಬಿಡುವ ತನಕ ಪ್ರಯಾಣಮಾಡದೆ ಇರುವರು." - ವಿಮೋಚನಕಾಂಡ 40:37

ಅರಣ್ಯದಲ್ಲಿ ಮೇಘ: ಮೇಘವಾಗಿರುವ ನಾನು, ಇಸ್ರಾಯೇಲ್ ಜನರು ಐಗುಪ್ತದಿಂದ ಕಾನಾನ್‌ಗೆ ಪ್ರಯಾಣಿಸುವಾಗ 40 ವರ್ಷಗಳ ಕಾಲ ಅವರಿಗೆ ಹಗಲಿನಲ್ಲಿ ನೆರಳಾಗಿದ್ದು ಕಾಪಾಡುತ್ತಾ ಬಂದೆ.  ಅಷ್ಟುಮಾತ್ರವಲ್ಲ, ನಾನು ಯಾವ ಸ್ಥಳದಲ್ಲಿ ಮುಂದೆ ಹೋಗದೆ ನಿಲ್ಲುತ್ತೇನೋ ಅಲ್ಲಿ ಇಸ್ರಾಯೇಲ್ ಜನರ ಪಾಳೆಯವಾಗಿರುತ್ತದೆ;  ನಾನು ಯಾವಾಗ ಹೊರಡುತ್ತೇನೋ ಆಗ ಮಾತ್ರವೇ ಅವರು ಹೊರಡುತ್ತಾರೆ.  ನಾನು ಪವಿತ್ರಾತ್ಮನಿಗೆ ಗುರುತಾಗಿ ರುವುದರಿಂದ ನನ್ನ ಮಾರ್ಗದರ್ಶನದಂತೆಯೇ ಇಸ್ರಾಯೇಲ್ ಜನರು ಪ್ರಯಾಣ ಮಾಡಿದಂತೆ, ಈ ದಿನಗಳಲ್ಲಿ ನೀವು ಕೂಡ  ಸೇವೆ, ಮದುವೆ, ಅಧ್ಯಯನ, ಕೆಲಸ ಮತ್ತು ಮನೆ ನಿರ್ಮಾಣ ಸೇರಿದಂತೆ ಎಲ್ಲಾ ವಿಷಯಗಳಲ್ಲೂ ಪವಿತ್ರಾತ್ಮನು ನಡೆಸುವ ಪ್ರಕಾರವೇ ನಿಮ್ಮ ಜೀವನದಲ್ಲಿ ಕಾರ್ಯ ಮಾಡುವುದಾದರೆ ನೀವು ಸುರಕ್ಷಿತವಾಗಿ ಸುಭದ್ರವಾಗಿರುತ್ತೀರಿ.

ಬೆಳಕಿನ ಮೇಘ: ಮತ್ತಾಯ 17 ನೇ ಅಧ್ಯಾಯದಲ್ಲಿ ಯೇಸುಕ್ರಿಸ್ತನು ಎತ್ತರವಾದ ಬೆಟ್ಟದ ಮೇಲೆ ರೂಪಾಂತರವಾದಾಗ ಪೇತ್ರನು ಯೇಸುವಿನ ಬಳಿ, "ಮೂರು ಪರ್ಣಶಾಲೆಗಳನ್ನು ಕಟ್ಟುವೆನು; ನಿನಗೊಂದು, ಮೋಶೆಗೊಂದು, ಎಲೀಯನಿಗೊಂದು ಎಂದು 3 ಜನರನ್ನು ಸಮವಾಗಿ ಭಾವಿಸಿ ಮಾತನಾಡುವಾಗ, ಕಾಂತಿಯುಳ್ಳ ಮೋಡವಾಗಿರುವ ನನ್ನೊಳಗಿಂದ ಒಂದು ಶಬ್ದ ಹೊರಟು,  "ಈತನು ಪ್ರಿಯನಾಗಿರುವ ನನ್ನ ಮಗನು; ಈತನನ್ನು ನಾನು ಮೆಚ್ಚಿದ್ದೇನೆ; ಈತನ ಮಾತನ್ನು ಕೇಳಿರಿ" ಎಂದು ಮಾತನಾಡಿ ಯೇಸುವಿನ ಪ್ರತ್ಯೇಕತೆಯನ್ನು ಪೇತ್ರನಿಗೆ ಅರ್ಥವಾಗುವಂತೆ ಮಾಡಿತು. ನೀವು ಕೂಡ ಯೇಸು ಮಾತ್ರವೇ ಮಹಿಮೆಗೂ,  ಗೌರವಕ್ಕೂ  ಅರ್ಹರು ಎಂಬುದನ್ನು ಅರಿತುಕೊಳ್ಳಿರಿ.

ಅಪೊಸ್ತಲ.1:9 ರಲ್ಲಿ ಮೇಘವು  ಯೇಸುವನ್ನು ಮೇಲಕ್ಕೆತ್ತಿಕೊಂಡಿತು ಎಂದು ಓದುತ್ತೀರ. 1 ಥೆಸ.  4:17 ರಲ್ಲಿ "ಜೀವದಿಂದುಳಿದಿರುವ ನಾವು ಅಂತರಿಕ್ಷದಲ್ಲಿ ಕರ್ತನನ್ನು ಎದುರುಗೊಳ್ಳುವದಕ್ಕಾಗಿ ಅವರ ಸಂಗಡಲೇ ಮೇಘವಾಹನರಾಗಿ ಫಕ್ಕನೆ ಒಯ್ಯಲ್ಪಡುವೆವು; ಹೀಗಾಗಿ ನಾವು ಸದಾಕಾಲವೂ ಕರ್ತನ ಜೊತೆಯಲ್ಲಿರುವೆವು" ಎಂದು ಬರೆಯಲ್ಪಟ್ಟಿರುವುದೂ ನಿಮಗೆ ಗೊತ್ತು. ಹೀಗೆ ಮೇಘವಾದ ನನ್ನ ಮೇಲೆ ನೀವು ಎತ್ತಲ್ಪಟ್ಟು  ಶಾಶ್ವತವಾಗಿ ಕರ್ತನೊಂದಿಗೆ ಇರುವುದಕ್ಕಾಗಿ,  ಕರ್ತನ ಮುಂದೆ ನಿಮ್ಮ ಜೀವನವನ್ನು ಯಾವಾಗಲೂ ದೋಷವಿಲ್ಲದೆ ಕಳಂಕವಿಲ್ಲದೆ ಕಾಪಾಡಿಕೊಳ್ಳಿರಿ.  ಅವರ ಬರೋಣದಲ್ಲಿ ನಿಮ್ಮನ್ನು ಮುಖಾಮುಖಿಯಾಗಿ ಭೇಟಿಯಾಗುತ್ತೇನೆ.  ಅಲ್ಲಿಯವರೆಗೂ ದೇವರ ಪ್ರಸನ್ನತೆಯೂ ಮಾರ್ಗದರ್ಶನವೂ ನಿಮ್ಮೊಂದಿಗಿರಲಿ!
-    K.  ಬೆಂಜಮಿನ್

ಪ್ರಾರ್ಥನಾ ಅಂಶ:
ಪ್ರತಿಯೊಂದು ಕಛೇರಿಯ ಕೆಲಸಗಾರರನ್ನು ದೇವರು ವಿಶೇಷವಾದ ಆತ್ಮದಿಂದ ತುಂಬಿಸಿ ನಡೆಸುವಂತೆ ಪ್ರಾರ್ಥಿಸಿರಿ.

Whatsapp
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು +91 94440 11864 ಈ ಸಂಖ್ಯೆಯನ್ನು ಸಂಪರ್ಕಿಸಿ.

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet güncel holiganbet giriş holiganbet sahabet onwin bets10 bets10 giriş bets10 güncel giriş betcio atlasbet casibom meritking casibom giriş perabet padişahbet padişahbet giriş holiganbet matbet perabet perabet giriş instagram ban service pashagaming pashagaming giris gorabet gorabet giris grandpashabet çarkbet çarkbet giriş deneme bonusu casibom giriş casibom vaycasino vaycasino giriş casibom meritking casibom casibom giriş meritking meritking giriş holiganbet jojobet jojobet jojobet jojobet jojobet holiganbet holiganbet grandpashabet grandpashabet grandpashabet