Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 13.02.2022 (Kid’s special)
Share:

By Village Missionary Movement

Sunday, 13-Feb-2022

ಧೈನಂದಿನ ಧ್ಯಾನ(Kannada) – 13.02.2022 (Kid’s special)

ಎರಡು ಗಿಳಿಗಳು

“ನಿಮ್ಮ ಬಾಯೊಳಗಿಂದ ಯಾವ ಕೆಟ್ಟ ಮಾತೂ ಹೊರಡಬಾರದು; ಭಕ್ತಿಯನ್ನು ವೃದ್ಧಿಮಾಡುವಂಥ ಕಾಲೋಚಿತವಾದ ಮಾತು ಇದ್ದರೆ ಕೇಳುವವರ ಹಿತಕ್ಕಾಗಿ ಅದನ್ನು ಆಡಿರಿ" - ಎಫೆಸದವರಿಗೆ 4:29

ಬೇಟೆಗಾರನೊಬ್ಬ ಒಂದು ಮರದ ಗೂಡಿನಲ್ಲಿ ಎರಡು ಗಿಳಿಮರಿಗಳನ್ನು ಕಂಡು ಅದನ್ನು ಎತ್ತಿಕೊಂಡನು.  ಒಂದನ್ನು ಆಶ್ರಮದಲ್ಲಿದ್ದ ಸಾಧುವಿಗೆ ಕೊಟ್ಟು ಬಿಟ್ಟು ಇನ್ನೊಂದನ್ನು ತನ್ನ ಮನೆಯಲ್ಲಿ ಸಾಕಿದನು.  ನೀವೂ ಗಿಳಿ ಸಾಕಿದ್ದೀರಾ?  ಮ್...ಮ್....ಅದು ಸುಂದರವಾಗಿ ಮಾತನಾಡುತ್ತದಲ್ವಾ?  ಹೌದು,  "ಹೇಳಿದ್ದನ್ನೇ ಹೇಳುತ್ತದಂತೆ ಗಿಳಿಮಗು" ಎಂಬ ನಾಣ್ಣುಡಿಯನ್ನೂ ಹೇಳುತ್ತಾರೆ ತಾನೇ!  ಏನು ಪುಟಾಣಿಗಳೇ ನಿಮಗೂ ಗಿಳಿ ಎಂದರೆ ತುಂಬಾ ಇಷ್ಟಾನಾ?  ನನಗೂ ತುಂಬಾ ಇಷ್ಟ ಸರಿ ಕಥೆ ಕೇಳೋಣ್ವಾ?

ಒಬ್ಬ ಮನುಷ್ಯ ಕಾಡಿನ ಮಾರ್ಗವಾಗಿ ಒಂಟಿ ಹಾದಿಯಲ್ಲಿ ನಡೆದು ಹೋಗುತ್ತಿದ್ದನು. ತುಂಬಾ ಆಯಾಸವಾಗುತ್ತಿದ್ದದರಿಂದ ಬೇಟೆಗಾರನ ಮನೆಯ ದಿಣ್ಣೆಯ ಮೇಲೆ ಮಲಗಿ ಸ್ವಲ್ಪ ಹೊತ್ತು ವಿಶ್ರಮಿಸಿಕೊಳ್ಳಲು ಯೋಚಿಸಿ ಹೋದನು.  ಕಿಟಕಿಯಿಂದ ಕೇಳುತ್ತಿದ್ದ ಕೆಟ್ಟ ಕೆಟ್ಟ ಮಾತುಗಳನ್ನು ಕೇಳಿಸಿಕೊಂಡು ಯಾರೆಂದು ನೋಡಲು ಎದ್ದು ಕುಳಿತನು.  ಮೂರ್ಖ, ಪೆದ್ದ, ನಿಷ್ಪ್ರಯೋಜಕ ಎಂದೆಲ್ಲಾ ಬೈಯ್ಯುತ್ತಿತ್ತು ಆ ಗಿಳಿ.  "ಛೀ ಇದು ಏನು ಗಿಳಿನೋ ಏನೋ!"  ಎಂದು ಬೇಸರದಿಂದ ಎದ್ದು ನಡೆಯಲು ಪ್ರಾರಂಭಿಸಿದ.  ಸ್ವಲ್ಪ ದೂರದಲ್ಲಿ ಸಾಧು ತಂಗಿದ್ದ ಆಶ್ರಮವಿತ್ತು.  ಸರಿ ಇಲ್ಲಿಯಾದರೂ ಹೋಗಿ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳೋಣ ಎಂದುಕೊಂಡು ಸಾಧುವಿನ ಮನೆಯ ಹೊಸ್ತಿಲಲ್ಲಿ ಕುಳಿತನು.  “ಬನ್ನಿ ಅಯ್ಯಾ!  ಚೆನ್ನಾಗಿದ್ದೀರಾ?  ಕುಳಿತುಕೊಳ್ಳಿ ಸ್ವಲ್ಪ ವಿಶ್ರಾಂತಿ ಪಡೆಯಿರಿ”  ಎಂದು ಆ ಗಿಳಿ ನಯವಾಗಿ, ಪ್ರೀತಿಯಿಂದ ಮತ್ತು ಮಧುರವಾಗಿ ಮಾತನಾಡುತ್ತಿತ್ತು.  ಈ ಮಾತುಗಳನ್ನು ಕೇಳಿದ ಈ ಮನುಷ್ಯನ ಹೃದಯವು ಸಂತೋಷದಿಂದ ತುಂಬಿತು. ನಂತರ ಉತ್ಸಾಹದಿಂದ ತನ್ನ ಪ್ರಯಾಣವನ್ನು ಪ್ರಾರಂಭಿಸಿದನು.

ಎರಡೂ ಗಿಳಿಗಳನ್ನು ಒಂದೇ ಸ್ಥಳದಿಂದ ತೆಗೆದುಕೊಳ್ಳಲಾಗಿದೆ.  ಆದರೆ ಬೇರೆ ಬೇರೆ ಸ್ಥಳಗಳಲ್ಲಿ ಬೆಳೆದರು.  ಬೇಟೆಗಾರನ ಮನೆಯಲ್ಲಿ ಬೆಳೆದ ಗಿಳಿ ಅವರು ಹೇಳಿದ ಕೆಟ್ಟ ಮಾತುಗಳನ್ನು ಕೇಳಿ ಅದನ್ನೇ ಹೇಳಿತು.  ಸಾಧುವಿನ ಮನೆಯಲ್ಲಿ ಬೆಳೆದ ಗಿಳಿ ಅವರು ಮಾತನಾಡುವ ಒಳ್ಳೆಯ ಮಾತುಗಳನ್ನು ಕೇಳಿ ಒಳ್ಳೆಯದನ್ನೇ ಮಾತಾಡಿತು.  ಹೀಗೆ ನಾವು ಯಾರೊಂದಿಗೆ ಸಹವಾಸ ಮಾಡುತ್ತೇವೋ, ಅವರ ಗುಣವೇ ನಮ್ಮನ್ನು ಅಂಟಿಕೊಳ್ಳುತ್ತದೆ.  ಉತ್ತಮ ಸ್ನೇಹಿತರೊಂದಿಗೆ ಸ್ನೇಹದಿಂದ ಐಕ್ಯವಾಗಿರಬೇಕು. ಅದೇ ಸಮಯದಲ್ಲಿ ಕೆಟ್ಟ ಸ್ನೇಹಿತರನ್ನು ದ್ವೇಷಿಸದೆ ಅವರ ಬಳಿ ಇರುವ ಕೆಟ್ಟ ಕಾರ್ಯಗಳನ್ನು ತ್ಯಜಿಸಲು  ಎಚ್ಚರವಾಗಿರಬೇಕು.

ಮುದ್ದು ಪುಟಾಣಿಗಳೇ!  ಒಳ್ಳೆಯ ಮಾತುಗಳನ್ನು ಮಾತನಾಡಿ, ಒಳ್ಳೆಯ ಸ್ನೇಹಿತರನ್ನು ಸಂಪಾದಿಸಿಕೊಳ್ಳಿ.  ಕೆಟ್ಟ ಮಾತುಗಳನ್ನಾಡಿ ಯೇಸಪ್ಪನನ್ನು ದುಃಖಪಡಿಸುವುದಿಲ್ಲ ಎಂಬ ನಿರ್ಧಾರ ತೆಗೆದುಕೊಳ್ಳಬೇಕು. ಏನು ಪುಟಾಣಿಗಳೇ ಮಾಡುತ್ತೀರ ತಾನೇ!
-    Mrs.  ಜೀವಾ ವಿಜಯ್

Whatsapp
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು +91 94440 11864 ಈ ಸಂಖ್ಯೆಯನ್ನು ಸಂಪರ್ಕಿಸಿ.

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al Elexbet instagram unban service tiktok unban instagram unban x unban twitter unban palacebet